ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಿರೇ ನಂದ ಕಂದನಾ ನೋಡಲು ಕಣ್ಣಿನ ಪಾರಣಿ ಮಾಡುವಾ ಪ ಸೂರಿಯಾ ನಿಳಿಯಲು ಅಪರದ ಜಾವಕ ಸಾರಿಸಿ ಗೋಧನ ತಿರುಗಿಸುತಾ ವಾರಿಗ ರೆಲ್ಲರು ವಂದಾಗಿ ಹರುಷದಿ ಧೀರನು ದಾರನು ಆಡೂತ ಬರುವಾ 1 ಚಂಡು ಬಗರಿ ಚಿಣಿ ಕೋಲು ಚಪ್ಪಳಿಕೈಯ್ಯಾ ಹಿಂಡ ನೆರೆದು ಹಂಬಲಿ ಹಾಕುತಾ ಮಂಡಳದೊಳಗುಳ್ಳ ಆಟವ ನಾಡುತ ಪಂಡರಿ ಕಾಕ್ಷನು ಲೀಲೆಯ ನಲುವಾ 2 ಗೋಧೂಳಿ ತುಂಬಿದ ಗುಂಗುರ ಗೂದಲು ಉದಿಸಿದ ಹಣೆಯಲಿ ಕಿರಿ ಬೆವರು ಬೆರಿಸಿ ಪರಿಪರಿ ಸ್ವರದಲ್ಲಿ ಕೊಳಲವ ನೂದುತ ಕುಣಿಯುತ ನಗೆವುತ ಬರುವಾ3 ಕುಂಡಲ ಹೊಳೆಯುತ ಕಣ್ಣಿನ ಚಲುವಿನ ಕಸ್ತೂರಿ ರೇಖೆಯಲಿ ನೌಲಗರಿಯ ವಾರಿ ದುರುಬವ ಕಟ್ಟಿಸಿ ಪುತ್ಥಳಿ ಬರುವಾ4 ಪೇಂದ್ಯ ಉದ್ದದ ಬಲರಾಯ ಸುಧಾಮರ ವೃಂದದಿ ಮಹಿಪತಿ ಸುತ ಪ್ರೀಯನು ಇಂದು ವದನೆಯರು ಆರುತಿ ಕೊಳುತಲಿ ವಂದದಿ ಮಧ್ಯ ನಾಯಕನಾಗಿ ಬರುವಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭೀಮ ಶೈನನೆ ಸತ್ಯಭಾಮಾ ಪ್ರಿಯನ ಪರಮ ಪ್ರೇಮ ಪಾತ್ರನೆ ಪಾಹಿಮಾಂ ಪ ಭೂಮಿಯೊಳು ಶೇವಿಸುವರಿಗೆ ಸುರ ಭೂಮಿರುಹ ವೆಂದೆನಿಸಿ ಪೊರೆಯಲು ಗ್ರಾಮ ಮೋತಂಪಲ್ಲಿ ಕ್ಷೇತ್ರ ಸುಧಾಮರಿಪುಕುಲ ಭೀಮನೆನಿಸಿದ ಅ.ಪ ರಾಮಕಾರ್ಯವನು ನಿಷ್ಕಾಮದಿ ಸಾಧಿಸಿ ಧಾಮ ಕಿಂಪುರುಷದಲ್ಲಿ ಭೂಮಿಜಾವಲ್ಲಭನ ಶುಭಗುಣ ಸ್ತೋಮಗಾನದಿ ರಮಿಸುತಿರೆ ಬಡ ಭೂಮಿದೇವನ ಪ್ರಾರ್ಥನದಿ ಬಂದೀ ಮಹಾ ಶಿಲೆ ಯೊಳಗೆ ನೆಲಸಿಹ 1 ರಾಜಕುಲಜ ಪಾಂಡುರಾಜ ನಾತ್ಮಜ ಧರ್ಮರಾಜನನುಜನೆನಿಸಿ ರಾಜ ಸೂಯಾಗವನೆ ಮಾಡಿಸಿ ಪೂಜಿಸಿದಿ ಸಿರಿಕೃಷ್ಣನಂಘ್ರಿಯ ರಾಜ ಕೌರವ ಬಲವ ಮದಿಸಿ ವಿರಾಜಿಸಿದ ಸುರರಾಜ ನಮೋ ನಮೋ 2 ಪುಟ್ಟಿಮೇದಿನಿ ಸುರಸದ್ಮದಿ ಗಜ ಪಂಚಾಸ್ಯನೆನಿಸಿಸು ಜನಕತಿ ಮೋದನೀಡಿದ 3 ಗಣಕೆ ಗಂಧವಾಹನನೆನಸಿ ಶೇಷ ಗಿರೀಂದ್ರಯಾತ್ರೆಗೆ ವೃಂದ ಸಲಹುವಿ 4 ಶೇರಿದವನೆ ಧನ್ಯನೋ ಭಜಿಸಿ ವಿಮುಕ್ತನಾದನು ಸುರಋಷಿಯ ಪದವನು 5 ಸುವಿಶಾಲ ಮಂಟಪ ಮಧ್ಯದಿ ಕೈಕೊಳುತ ಭಕುತರ ಗುರುವರ ಪಾಲಿಸೆನ್ನನು 6 ಬಂಗಾರದಾಭರಣಂಗಳಿಂದೊಪ್ಪುತ ಶೃಂಗಾರದಿಂ ಶೋಭಿತ ಸರ್ವೇಷ್ಟದಾಯಕ ಪ್ರಥಮಾಂಗನೆನಿಸಿದ 7
--------------
ಕಾರ್ಪರ ನರಹರಿದಾಸರು
ಗಂಗಾಪಿತ ವೆಂಕಟ ಪರ್ವತನಿಲಯಕೌಸಲ್ಯತನಯಾ |ಮಂಗಳವಲ್ಲಭಭವಕರಕರೆಯ ಪರಿಹರಿಪುದು ತ್ವರಿಯಾ |ಅಂಗಜಜನಕನೆ ಸಂಗರಹಿತ ಸತ್ಸಂಗ ಕೃಪಾಬ್ಧಿ ವಿಹಂಗವಾಹನನೇ ಪಸ್ವಾಮಿಲಾಲಿಸುಯನ್ನಯ ಮನದುಸರ ನೀನಲ್ಲದಿತರರ |ಭೂಮಿಯೊಳ್ಕಾಣೆನೋ ಉದ್ಧರಿಸುವರನವನೀತಚೋರ |ಸಾಮಜದ್ರೌಪದಿ ಆ ಮುಚುಕುಂದ ಸುಧಾಮರ ಪೊರೆದ ತ್ರಿಧಾಮ ಮಹಾತ್ಮ 1ವಾಸುಕೀ ಶಯನ ದಯಾ ಸಂಪನ್ನ ನಾರಾಯಣ ನಿನ್ನ |ದಾಸರೊಳಗಾಡಿಸೊ ಸದ್ಗುಣ ಪೂರ್ಣ ಸಾರ್ವರಿಗೆ ಪ್ರಸನ್ನ |ಈಸಲಾರೆ ಈ ಸಂಸಾರಶರಧಿಕೈ ಸೋತಿತೆಲೋ ಪರಾಶರ ತನಯ 2ನಿತ್ಯಾನಂದ ನಿಗಮೋದ್ಧಾರ ಪೂತನೀ ಸಂಹಾರ |ಮೃತ್ಯುಂಜಯಸಖರವಿದರ ಗದಾಧರ ಸುಖಪಾರಾವಾರ|ಭೃತ್ಯವತ್ಸಲ ಸುರೋತ್ತಮ ಪಾರ್ಥನ ತೊತ್ತಿಗನಾದಿ ಸುಸತ್ಯ ಸಂಕಲ್ಪ ಗಂಗಾ3ಮಂದರಾಚಲ ಧರಿಸಿದ ಗೋವಿಂದ ಶ್ರೀ ಯಶೋದಾನಂದ |ನಂದನ ಶ್ರೀ ಕೇಶವ ಮುಕುಂದ ವಾಮನ ಸುಖಸಾಂದ್ರ |ತಂದೆ ಸಲಹೊ ನಿನ್ನ ಬಂಧಕ ಶಕುತಿಯಲಿಂದ ದಣಿಸದೆ ಅರಿಂದಮ ಪ್ರಭುವೇ 4ಅಂತರಂಗವ ಬಲ್ಲ ಮಧುದ್ವೇಷಿ ಯನ್ನಯ ಮನದಾಸೀ |ಅಂತು ಪೂರ್ತಿಸಿ ದುಷ್ಕರ್ಮದ ರಾಶಿ ಉಳಿಸದೆ ಪರಿಹರಿಸಿ |ಸಂತತ ಹೃದಯದಿ ನಿಂತು ಪೊಳೆವುದೋ ಅನಂತ ಮುರಾಂತಕ ಚಿಂತಾರಹಿತನೆ 5ಶಕ್ರವರಪೂಜಿತ ಬಲವಂತ ರುಕ್ಮಣೀಪತಿ ದಂತ |ವಕ್ತ್ರಾರಿ ಬಾಧಿಸದಂತೆಕೃತಾಂತಮಾಳ್ಪುದು ಕೆಡದಂಥ |ಸುಕೃತಪೀಡಿಸೋ ತ್ರಿವಿಕ್ರಮ ಮೂರುತಿ ಶುಕ್ರ ಯುಕ್ತಿ ಹರ ಅಕ್ರೂರ ವರದ 6ಕಂಕಾನುಜ ಮಂದಿರ ಪ್ರಾಣೇಶ ವಿಠಲ ಗೋಕುಲ ಗೋಪಾಲ |ಪಂಕಜಾಸನ ಜನಕ ಶಕಟಕಾಲಜಾಂಬವತೀಲೋಲ|ಶಂಕರಾದ್ಯಮರರ ಕಳಂಕೆಣಿಸದ ಗರುಡಾಂಕಉರಗಪರ್ಯಂಕ ಸುಖಾತ್ಮ 7
--------------
ಪ್ರಾಣೇಶದಾಸರು