ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಂಗಿ ಕೇಳೆ ಅತಿಕೌತುಕ ಒಂದು ಸುದ್ಧಿಯ ಸಿಂಗನ ಮೋರೆ ಮಗುವು ಪುಟ್ಟಿ ಮಾಡಿದಾ ಚರ್ಯ ಪ. ತಂದೆ ತಾಯಿಗಳಿಲ್ಲಾದ್ಹಾಂಗೆ ಕಂದ ಪುಟ್ಟಿತು ಬಂಧು ಎತ್ತು ಕೊಂಬೇನೆಂದರೆ ಗುಡು ಗುಡುಗುಟ್ಟಿತೂ ಅಂದ ಛಂದವ ನೋಡೇನೆಂದರೆ ಘೊರಾಕೃತಿಯಾಯ್ತು ತಂದ ತೊಟ್ಟಿಲೊಳಿಟ್ಟೀನೆಂದರೆ ಹೊಸಲೊಳ್ ಕೂತೀತು 1 ತೊಡೆಯಲ್ಲಿಟ್ಟು ತಟ್ಟೀನೆಂದರೆ ಕಿಡಿ ಕಿಡಿ ಉಗುಳೀತು ಕಡುಪಾಪಿ ರಕ್ಕಸನ ತನ್ನ ತೊಡೆಯಲ್ಲಿಟ್ಟಿತೂ ಕಡು ಕೋಪದಿಂದಾಲಿ ಅವನ ಒಡಲ ಬಗೆದಿತು. ಎಡಬಲಕೊಬ್ಬರು ಬರದಂತೆ ಆರ್ಭಟಿಸುತಲಿದ್ದಿತು 2 ರುಧಿರ ಪಾನವ ಮಾಡಿತು ಮಾಲೆ ಹಾಕಿ ಮುದ್ದಿಪನೆನೆ ಕರುಳ್ಮಾಲೆ ಹಾಕೀತು ಮೇಲೆ ಕೇಶ ಕಟ್ಟೀನೆಂದರೆ ಕೆದರಿಕೊಂಡೀತೂ ಬಾಲಲೀಲೆ ನೋಡೇನೆಂದರೆ ಜಗವ ಬೆದರಿಸಿತು 3 ಸಿರಿಕಂಡೂ ಬೆರಗಾಗೆ ಮನವು ಕರಗದೆ ಕಲ್ಲಾಯ್ತು ತರಳನೊಬ್ಬನ ಕೂಡೆ ತಾನೂ ಆಟವನಾಡಿತು ಉರಿಮುಖ ಹುಬ್ಬೂ ಗಂಟೂ ಬಿಟ್ಟು ಕಿರುನಗೆ ನಕ್ಕೀತು 4 ಶ್ರೀಪತಿ ಎಂದು ತರಳನು ಪೊಗಳೇ ಸಿರಿಯ ಬೆರತೀತು ಆಪತ್ತನು ಪರಿಹರಿಪ ಲಕ್ಷ್ಮೀನರಹರಿ ಎನಿಸೀತು ದ್ವಾಪರದಲ್ಲಿ ಮತ್ತೆ ಪುಟ್ಟಿ ಮುದುವ ಬೇಡೀತು ಗೋಪಾಲಕೃಷ್ಣವಿಠ್ಠಲನೆನಿಸಿ ಗೋಪಿಯ ಮಗುವಾಯ್ತು 5
--------------
ಅಂಬಾಬಾಯಿ
ಸೇರದಾದವು ಅಶನವಸನಗಳಾರೊಡನೆ ನಾ ಪೇಳಲಿ ಪ ಸಾರಸಾಕ್ಷ ಮುರಾರಿ ಕೃಷ್ಣನ ಮೂರುತಿಯ ನಾ ಕಾಣದೆ ಅ.ಪ ಹಿಂದೆ ವನದಲಿ ಸುಂದರಾಂಗ ಮುಕುಂದ ಕೃಷ್ಣನ ಪರಿಪರಿ ಅಂದ ಲೀಲೆಗಳಿಂದ ಪೊಂದಿದ ನಂದಗಳ ನೆನೆ ನೆನೆದರೆ 1 ಮಾರಜನಕನು ಜಾರನೆಂಬ ವಿಚಾರವನು ನಾನರಿಯದೆ ಸೇರಿದೆನು ಮನಸಾರ ಮುದದಲಿ ಯಾರಿಗಳವೇ ಮರೆಯಲು 2 ಮೋಸಗಾರನ ಆ ಸೊಬಗುಗಳಿಗಾಸೆ ಪೊಂದಿದ ಪಸುಳೆಯ ಆಸೆಭಂಗದ ಕ್ಲೇಶವನು ಜಗದೀಶನೊಬ್ಬನೆ ಬಲ್ಲನು3 ತರುಲತೆಗಳು ಹರಿವ ಯಮುನಾ ಸರಿದೇನಾದರೂ ಬಲ್ಲವೆ ಸರಸದಲಿ ತಿರುತಿರುಗುತಿಹ ಮುರಹರನ ಸುದ್ಧಿಯ ಕೇಳಲೆ4 ಘನ್ನ ಮಹಿಮೆ ಪ್ರಸನ್ನ ಕೃಷ್ಣನು ತನ್ನ ಸಂತಸದಿಂದಲಿ ಎನ್ನ ಕರಗಳಿಗೊಮ್ಮೆ ಸಿಕ್ಕಲು ಇನ್ನು ಅವನನು ಬಿಡುವೆನೆ 5
--------------
ವಿದ್ಯಾಪ್ರಸನ್ನತೀರ್ಥರು