ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಂತಿಗಮನೆಯರು ಹರುಷದಲಿ ನೀಲಕುಂತಳೆಯ ರತಿರೂಪ ವಂತೆಯರು ಸೊಬಗು ಶ್ರೀ ಕುಂಕುಮವ ಸಂತವಾಡಿದರೂ ಪ ಕಳಹಂಸ ಗಿಳಿವಿಂಡುಗಳ ತಂಡ ಮಧುರದಿಂ ಕೆಲವ ಕೋಗಿಲೆಯ ವಿಹಗಾಳಿಗಳ್ ಪೊಳೆವ ಚೆಂದಳಿರ ವನದೊಳು ಮಂಟಪವ ರಚಿಸಿ ಲಲನೆಯರು ಚೆಲುವಿನಲಿ ಕೊಳವ ಸಿಂಗರಿಸಿ ಜಲಜ ನೈದಿಲೆಯ ಪೂವಲಿಯದೊಲ್ಘೇಂಕರಿಪ ಬಳಸಿನಲಿ ಕೊಳಗುತಿಪ್ಪಳಿಗಳಿಂ ಶೋಭಿಸುವ ಸಲಿಲದೊಳು ಮಲಯಜ ಸುಲಲಿತ ಕುಂಕುಮವೆರಸಿ ಸಲೆ ಪ್ರಹುಡೆ ಕೆಳನಲಿದು ಸಂತಸದೀ 1 ಮಂದಗಮನೆಯರು ಪೂರ್ಣೇಂದುವದನೆಯರು ಶುಭ್ರ ಕುಂದರದನೆಯರು ಅರವಿಂದ ನೇತ್ರೆಯರು ಗೋ ವಿಂದನೈತರಲು ಪೊನ್ನಂದಣದಲಿದಿರುಗೊಳ್ಳೆ ಕುಂದಣದ ರತ್ನಗಳಲಿ | ಬಂದಿಸಲು ದಂಡೆಗಳ ಚೆಂದದಿಂ ಪಿಡಿದು ಮಕರಂದಮಂ ಪೂರಯಿಸಿ ಕಂದರ್ಪಜನಕನನು ಸಂದಣಿಸಿ ತಮತಮಗೆ ಮುಂದುವರಿದು ಲೋವಿಡಿದು ಆನಂದದಿ ಸೂಸಿದರೂ 2 ಪದುಮಗಂಧಿಯರು ಸನ್ಮøದು ಕೀರವಾಣಿಯರು ಚದುರೆಯರ್ತೊಂಡೆವಣ್ಣಧರೆಯರು ಪೇರ್ಮೈಯ ಮದದ ಮದ್ದಾನೆಯರು ಸುದತಿಯರು ಸೌಂದರ್ಯ ಪದಪು ಗಾತಿಯರು ಬಂದೊದಗಿ ಮೂದಲಿಸಿ ಮಧುಸೂದನನ ಬಿಡದಿದಕೋ ಪಿಡಿಪಿ ಮೋಹ ನದ ಬಲೆಯನು ಬೀಸೆನುತ ಯುವತಿಯರುಗಳು ಮುದದಿಂದ ಬೆಂಗೊತ್ತಿ ಪ್ರಣಯ ಕದನದಿಂ ಸೋಲಿಸುತ ಎದೆಗೆಡಿಸಿ ನವಪರಿಮಳದಿ ಮುಸುಕಿದರೂ 3 ಅಡಿಗಡಿಗೆ ಬಟ್ಟ ಪೊಂಗೊಡ ಮೊಲೆಗಳಲುಗುತ್ತ ಕಾ ರಡಿಗಳಂ ಪೋಲ್ವ ಪೇರ್ಮುಡಿ ಸಡಿಲೆ ಹಾರಗಳ ಜಡೆಯಲೊಯ್ಯನೆ ಸಣ್ಣ ನಡು ಬಳುಕೆ ಲಾವಣ್ಯ ವೆಡೆಬಿಡದೆ ಕೋಮಲೆಯರೊಡನೆ ತವದಕಲೀ ಸಡಗರದಿ ಕುಸುಮಗಳ ಎಡೆಬಿಡದೆ ಬೀರೆ ಸೊಂ ಪಡರ್ದಂಗಲತೆಗಳಿಗೆ ತೊಡದ ಮನ್ಮಥಶರವ ಪತಿ ವಿಡಿದು ಮಡದಿಯರು ಅಲರ್ದೊಡೆಯದೊಡಿಸಿದರೂ 4 ತೊರೆದು ಮುಂಬರಿಯೆ ಯೌವನದ ಪೀತಾಂ ಬರದ ನೆರಿಗಳೋಸರಿಸೆ ಮುಂಜೆರಗನೆಳೆವುತ ವಾಮ ಕರದಂಗುಳಿಗಳಿಂದ ಕುರುಳ ನೇವರಿಸುತಾ ತುರದ ತರುಣಿಯರು ಶ್ರೀಹರಿಯ ತರುಬಿದರೂ ಸರಸಿ ಜಾಂಬಕನ ಪೇರುರವ ಕುಚಗಳ ಕೊನೆಯ ಲಿರಿದು ನಿಲ್ಲಿಸಿ ನಿಲ್ಲು ಹೋಗಬೇಡೆನುತ ಯುವತಿಯರು ಧರೆಯೊಳತ್ಯಧಿಕ ಸುರಪುರದ ಲಕ್ಷ್ಮೀಪತಿಯ ಸರಸನೆ ವವಿಡಿದು ಮೇಲ್ವರಿಯೆ ವೊಲಿಸಿದರೂ 5
--------------
ಕವಿ ಲಕ್ಷ್ಮೀಶ
ಧೀಂಧೀಂಧೀಂಧಿಂ ಧೀರು | ಮಜರೆ ಸಂಭ್ರಮದ | ಅಂದು ಶ್ರೀಕೃಷ್ಣ ರುಕ್ಮಿಣಿಯ ಪಾಣಿ | ಗ್ರಹಣ | ದಿಂದ ದ್ವಾರಕೆಯ ಹುಗುವ ಸಮಯದಲಿ ಪ ಚಪಳ ವಾಜಿಗಳು | ಬೆರೆಬೆರೆದು ಕುಣಿವಾಟಾದಿಂದಾ ಇಡಿಯೇ | ತೆರೆಹಿಲ್ಲ | ಸಿಂಧು ಗುರಿ ಪತಾಕೆಗಳ ಹೊಳೆವ | ರೂಪಿಯೇ | ಮೆರೆವ ತಮ್ಮಟ ಭೇರಿನಾದ ಕಹಳೆಗಳಿಂದ | ಹರಿಪದದಿ ಪ್ರತಿ ಶಬ್ದವು ನುಡಿಯೇ 1 ಭಟ್ಟರು ಗಾಯಕವಂದಿ ಬಿರುದು ಕೊಂಡಾಡು ತಲಿಹ | ನಟನೆ ದಿವ್ಯಾಂಗ-ನೆಯರಾ ಮುಂದ | ಘಟನೇ ಪುಟುವೆರಸೀ ಸ್ವಸ್ತಿ ವಚನಾದಿಂದ ನಟನುಗ್ರಶೇನ ತಾಯಿ | ತಂದಿ ದಂಪತಿಗಳ ಕುಟಿಲೀರ್ವ ಸಾಂಬ ಕೃತ ವವರ್ಮನಾ | ರ್ಭಟೆಯ ಬಲರಾಮ ನೋಡನೀ ವೃಂದ 2 ಹೃದಯ ಮಧ್ಯದ ಪದಕದಂತೆ ಬರಿತಿಹ ನಡುವೆ ವಧು ಇದಿರು ಗೊಂಬುವ ಸಂಭ್ರಮದ ಪಟ್ಟಣದಲಾರು ತುದಿ ಮೊದಲ ಬಣ್ಣಿಸುವಾ ಸಿರಿಯಾ | ವದಗಿ ಮುಂದಕ ಹೋಗಿ ಮಂಗಳಾರುತಿಗಳನು ಸುದತಿಯರು ತಂದೆ ತ್ತಲು ತ್ವರಿಯು | ಮುದದಿಂದ ಗೃಹ ಪ್ರವೇಶವ ಮಾಡಿದನು ಸರ್ವಾ | ವಿದಿತ ಮಹಿಪತಿ ನಂದನಾ ಧೂರೆಯು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಂಗಳಾಂಗ ಶ್ರೀಕೃಷ್ಣಗೆ ಸುದತಿಯರು ಮಂಗಳಾರತಿ ಎತ್ತಿರೆಪ ಭವ ಭಯ ಭಂಗ ಶುಭಗುಣಸಾಂದ್ರನಿಗೆ ಜಯ ಅ.ಪ ಕೂರ್ಮ ಕ್ರೋಡ ನೃಹರಿಗೆ ದಾನವ ಬೇಡಿದಗೆ ಮಾನದಿ ಭೃಗು ಶ್ರೀರಾಮ ಶ್ರೀಕೃಷ್ಣಗೆ ಬುದ್ಧ ಕಲ್ಕ್ಯನಿಗೆ ಜಯ 1 ಅನಿರುದ್ಧ ಮೂರುತಿಗೆ ಪಕ್ಷಿವಾಹನ ಹರಿಗೆ ಕುಕ್ಷಿಯೊಳೀರೇಳು ಜಗವನಿಂಬಿಟ್ಟಗೆ ಲಕ್ಷ್ಮೀನಾರಾಯಣ ಶ್ರೀ ಶ್ರೀಶನಿಗೆ ಜಯ 2 ಗೋಕುಲದೊಳು ಗೋಪಾಲಕರೊಡಗೂಡಿ ಗೋವ್ಗಳ ಕಾಯ್ದವಗೆ ಗೋವರ್ಧನಗಿರಿ ಎತ್ತಿದ ಧೀರಗೆ ಗೋಪಿದೇವಿಗೆ ಬಾಲಲೀಲೆಯ ತೋರ್ದಗೆ 3 ವೃಂದಾವನದಿ ಮೃತ್ತಿಕೆ ಮೆಲ್ಲುವೆನೆಂದು ವೃಂದಾರಕರು ನುಡಿಯೆ ನಂದ ಯಶೋದೆಯರು ಬಂದು ತೋರೆನಲು ಛಂದದಿಂದ ವಿಶ್ವರೂಪವ ತೋರ್ದಗೆ 4 ಕಾಳಾಹಿವೇಣಿಯರೊಡಗೂಡಿ ನಲಿವಗೆ ಕಾಳಿಂದಿ ರಮಣನಿಗೆ ಕಾಲಕರ್ಮಕೆ ಈಶನಾದ ಸ್ವಾಮಿಗೆ ಕಾಳಿಮರ್ದನ ಕಮಲನಾಭವಿಠ್ಠಲನಿಗೆ 5
--------------
ನಿಡಗುರುಕಿ ಜೀವೂಬಾಯಿ
ಶ್ರೀ ವಿಷ್ಣ್ವಾಷ್ಟಕ (ಪಾಲಯಾಚ್ಯುತ ಎಂಬತೆ) ಕಾವುದೋ ಹರಿ | ಕಾವುದೋ ಹರಿಕಾವುದೊ ಕರುಣಾರ್ಣವ ಪ ಜೀವರಂತರ ಬಾಹ್ಯ ನೆಲಸಿಹಶ್ರೀವರಾ ಶ್ರೀ ಭೂಧರಾ ಅ.ಪ. ನಿತ್ಯ ನೂತನ | ನಿರ್ವಿಕಾರನೆ | ಸತ್ಯನೆ ನೀ ನಿತ್ಯನೇಭೃತ್ಯ ವತ್ಸಲ | ಭವವನಾನಲ | ಕೃತ್ಯನೆ ದಯ ಪೂರ್ಣನೇ ||ಮೃತ್ಯು ವರ್ಜಿತ | ಪ್ರತ್ಯಗಾತ್ಮನೆ | ಕರ್ತನೇ ನಿರ್ಲಿಪ್ತನೇಸತ್ಯ ಕಾಮ ಶರಣ ಶಾಶ್ವತ | ಸ್ತುತ್ಯನೇ ಜಗ ವ್ಯಾಪ್ತನೇ 1 ಅಮಿತ ತೇಜನೆ | ಸರ್ವರನ ಸಲಹೂವನೇ ||ಸರ್ವ ಶಬ್ದ ಪ್ರವೃತಿ ಕಾರಣ | ಸರ್ವಗುಣ ಪರಿಪೂರ್ಣನೆಸರ್ವತೊಮುಖ ಬಾಹು ಚರಣನೆ | ಶರ್ವ ವಂದ್ಯ ಸುಮಹಿಮನೆ2 ವೀತಭಯ ವಿಶ್ವೇಶ ವಿಧಿಪಿತ | ಮಾತುಳಾಂತಕ ಪಾಲಕಾಭೂತ ಭಾವನನಂತ ಭಾಸ್ಕರ | ದ್ಯೋತಕ ಮಹಕೌತುಕ ||ಗೌತಮ ಪ್ರಿಯ ಮಡದಿ ಕಾಯ್ದಾ | ನಾಥ ರಕ್ಷಕ ಶಿಕ್ಷಕಾಖ್ಯಾತ ರಾವಣ ಕುಂಭಕರ್ಣನ | ಹಂತಕ ವಿಶ್ವಾಸಕ 3 ಮಣಿ ಭವ ಮೋಚಕಅಣು ಮಹದ್ಗತ ವ್ಯಾಪ್ಯವ್ಯಾಪಕ | ಸಾಧಕ ಖಲ ಬಾಧಕ |ತೃಣ ಮೊದಲು ಬ್ರಹ್ಮಾಂತ ಜೀವರ | ಪಾಲಕ ಪರಿಪೋಷಕ 4 ಮೀನ ಕಮಠನೆ ಕೋಲ ನರಹರಿ | ವಾಮನಾ ಸುಭಾಮನಾರೇಣುಕಾತ್ಮಜ ರಾವಣಾಂತಕ | ದಾಶರಥಿ ನರ ಸಾರಥೀ ||ಧೇನುಕಾಸುರ ಮಥನ ತ್ರಿಪುರವ | ಹಾನಿಗೈದನೆ ಬುದ್ಧನೆಮಾನುಷಾಕೃತಿಲ್ಹಯವನೇರಿದ | ಕಲ್ಕಿಯೇ ಕಲಹ ಪ್ರಿಯೆ 5 ಉದಿತ ಭಾಸ್ಕರನಂತ ತೇಜನೆ | ಉದರ ನಾಮಕ ಪಾಚಕಸುದತಿಯರು ಹದಿನಾರು ಸಾವಿರ | ವಾಳ್ದನೇ ಬ್ರಹ್ಮಚರ್ಯನೇ||ಮಧು ವಿರೋಧಿಯೆ ಮಧ್ವಮಾನಸ | ಮಂದಿರ ಬಹುಸುಂದರಹೃದಯದಲಿ ನೀ ಬದಿಗನೆನಿಸುತ | ಪೂಜಿತ ಸುರ ಪೂಜಿತ 6 ಸೃಷ್ಟಿ ಸ್ಥಿತಿ ಮೊದಲಾದ ಅಷ್ಟಕ | ಕರ್ತೃಕ ಪ್ರಾವರ್ತಕಅಷ್ಟದಳ ಸತ್ಕಮಲಧಿಷ್ಠಿತ | ಪ್ರಾಜ್ಞಾನೇ ವಿಶ್ವಜ್ಞನೇಜಿಷ್ಣು ಸಖ ಶ್ರೀಕೃಷ್ಣ ಕೃಷ್ಣೆಯ | ಭೀಷ್ಟದಾ ಶಿಷ್ಟೇಷ್ಟದಾಪುಷ್ಟ ಮಹಿಮಾ ಪ್ರವಿಷ್ಟ ರೂಪನ | ವಿಷ್ಟನೇ ನಿವಿಷ್ಟನೇ 7 ಗೋವಿದಾಂಪತಿ ಗೋವಪಾಲಕ | ಮಾವ ಮಾರಕ ಕಾರಕ ||ಭೂವರಾಹ ಸುಭಾವಜಾರಿಜ | ಷಣ್ಮುಖ ಪರಿಪಾಲಕ ||ಗೋವಿಂದ ಗುರು ಗೋವಿಂದವಿಠಲ | ಗೋವ್ಗಳ್ವರ್ಧನ ಗಿರಿಧರಪಾವಮಾನಿಯ ಪ್ರೀಯ ಸಿರಿಧರ | ಕಾವ ಶರಣರ ಭವಹರಾ 8|
--------------
ಗುರುಗೋವಿಂದವಿಠಲರು
ಸರಸಿಜನಾಭ ಶ್ರೀಹರಿಪಾದಕಾರತಿಯ ಬೆಳಗಿರೆ ಪ ವಸುದೇವ ಸುತನೆಂದೆನಿಸಿ ಅಸುರೆ ಪೂತನಿಯ ಸಂಹರಿಸಿ ಆನಂದ ಸುರಿಸಿ ಕಾಳಿಮಡುವ ಧುಮುಕಿ ಫಣಿಯ ಮೇಲೆ ನಾಟ್ಯವನಾಡಿದವಗೆ ಸನಕಾದಿ ನಾರದ ಮುನಿವಂದ್ಯಗೆ ಸುರ ರಮಣಿಯರು ಹರುಷದಿ 1 ಮಧುರೇಲಿ ಜನಿಸಿದವಗೆ ಮಾವಕಂಸನ ತರಿದವಗೆ ಮಧುವೈರಿಹರಿಗೆ ಮುರಳಿನಾದಗೈದು ಸ್ತ್ರೀಯರ ಮರುಳುಗೊಳಿಸಿ ಆಡಿದವಗೆ ಮುರವೈರಿ ಹರಿ ಮುಚುಕುಂದ ವರದನ ಪಾಡುತಲಿ ಮುದದಲಿ2 ಗೋಪಾಲರೊಡಗೂಡುತಲಿ ಗೋವರ್ಧನವೆತ್ತಿದವಗೆ ಗೋವಿಂದ ಹರಿಗೆ ಗೋಪಿಯರ ಮನೆಯ ಪೊಕ್ಕು ಬೇಕೆನ್ನುತ ಪಾಲ್ಬೆಣ್ಣೆ ಸವಿದ ಶ್ರೀಕಾಂತ ಕಮಲನಾಭ ವಿಠ್ಠಲನಿಗೆಸುದತಿಯರು ತ್ವರಿತದಿ 3
--------------
ನಿಡಗುರುಕಿ ಜೀವೂಬಾಯಿ