ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾಗಿಲು ತೆಗೆಯಲೆ ಭಾಮತಿ ರನ್ನಳೆ ಈಗ ನಾ ಬಂದೆನು ಇಂದುಮುಖಿ ಪ ನಾಗವೇಣಿಯೆ ನಿನ್ನೀಗಲೆ ನೋಡಲು ಬೇಗನೆ ಬಂದೆನು ತೆಗಿ ಕದವಾ ಅ.ಪ ಯಾರದು ಈ ಸಮರಾತ್ರಿಯ ವೇಳದಿ ಬಾಗಿಲು ತೆಗೆ ಎಂದೆನುತಿಹರು ತೋರದು ಎನಗೊಂದಾಲೋಚನೆ ನಿಮ್ಮ ನಾಮವು ಪೇಳಲು ತೆಗೆಯುವೆನು 1 ನೀಲವೇಣಿಯೆ ಕೇಳೆನ್ನ ಮಾತನು ಬಹಳ ಚಿಂತೆಯಾತಕೆ ಮನದಿ ನೀಲಕಂಠನೆಂದೆನ್ನನು ಕರೆವರು ಕೇಳು ಮನಸು ಚಂಚಲ ಬಿಟ್ಟು 2 ನೀಲಕಂಠನೆಂದರೆ ನೆನಪಾಯಿತು ನವಿಲಿನ ಮರಿ ಬಂದಿಹುದೆಂದು ನಾರಿಯರೆಲ್ಲರು ಹಾಸ್ಯವ ಮಾಳ್ಪರು ಸಾರುತ ವನಗಳ ಚರಿಸೆಂದು 3 ಬೆದರದೆ ತೆರೆ ಕದ ಸುದತಿಮಣಿಯೆ ನಾ ಬದಲೊಂದು ನಾಮವ ಪೇಳುವೆನು ಬುಧ ಜನರೆಲ್ಲರು ಭಕುತಿಲಿ ಸ್ಥಾಣು- ವೆನ್ನುತ ನಾಮವ ಕೊಂಡಾಡುವರು4 ಬೂಟಾಟಿಕೆ ಮಾತುಗಳನ್ನ ಏತಕೆ ಸಾಟಿಯಾರು ಜಗದೊಳಗಿನ್ನು ಮೋಟುಮರಕೆ ಸ್ಥಾಣುವೆನ್ನುತ ಕರೆವರು ಈ ಪೃಥ್ವಿಯ ಮೇಲಿನ ಜನರು 5 ಬಿಸುಜಮುಖಿಯೆ ಇನ್ನೊಂದು ಪೆಸರು ಕೇಳೆ ಪಶುಪತಿಯೆಂದು ಕರೆವರೆನ್ನ ವಸುಧೆಯ ಮೇಲಿನ ಪೆಸರುಗಳಿಗೆ ನೀ ಪ್ರತಿಯಾಗರ್ಥವ ಕಲ್ಪಿಸುವಿ 6 ವೃಷಭರಾಜ ನೀನಾದರೆ ಮುಂದಕೆ ಪಶುಗಳ ಮಂದೆಗೆ ತೆರಳುವದು ಕುಸುಮಗಂಧಿಯರ ಸದನದಿ ಕಾರ್ಯವು ವೃಷಭರಾಜಗಿಲ್ಲವು ಕೇಳೌ 7 ಶೀಲವಾಣಿಯೆ ಸುಶೀಲೆಯೆ ಎನ್ನಯ ವಾಣಿ ಕೇಳಿ ಕದವನು ತೆಗಿಯೆ ಪೇಳುವೆ ಮತ್ತೊಂದು ನಾಮವ ಎನ್ನನು ಶೂಲಿ ಎಂದು ಕರೆವರು ಜನರು 8 ಶೂಲಿಯಾದರೆ ನಿನ್ನ ಬಾಧೆಯ ಕಳೆಯಲು ಯಾರಿಗೆ ಸಾಧ್ಯವು ಜಗದೊಳಗೆ ನಾರಿಯರಿಗೆ ಹೇಳದೆ ಮುಂದಕೆ ನಡೆ ಶೂರರಾದ ವೈದ್ಯರ ಬಳಿಗೆ 9 ಕರಿಯ ಮುಖನ ಮಾತೆಯೆ ತಡಮಾಡದೆ ಕನಕಮಯದ ಕದ ತೆರೆ ಬೇಗ ಕಮಲನಾಭ ವಿಠ್ಠಲನನು ಪಾಡುತ ಶಿವನ ನಮಿಸಿ ತೆಗೆದಳು ಕದವ 10
--------------
ನಿಡಗುರುಕಿ ಜೀವೂಬಾಯಿ
ಶ್ರೀ ಮಹಾಲಕ್ಷ್ಮಿ ದೇವಿಯೆ ಪಾಲಿಸೆ ಎನ್ನಶಾಮನಯ್ಯನ ರಾಣಿಯೆ ಪಜಾಣೆ ನಿನಗೆ ಸರಿಗಾಣೆನೆ ಗುಣಮಣಿಮಾಲೆ ಸುಗುಣೆ ಅಹಿವೇಣಿಯೆಜನನಿಅ.ಪನಿಗಮವೇದ್ಯಳೆ ನಿನ್ನನು ಪೊಗಳುವೆ ನಾನುತ್ರಿಗುಣಾಭಿಮಾನಿ ಸ್ತುತಿಪೆನುಬಗೆಬಗೆ ಭಜಿಪೆ ನಿನ್ನನು ಬಂದೆನ್ನ ಮನದಿನಗಧರನ ತೋರೆಂಬೆನುಹಗಲು ಇರಳು ನಿನ್ನ ಬಗೆ ಬಗೆ ಸ್ತುತಿಪರಪಾದ-ಗಳಸೇವಿಪ ಪರಮಾನಂದದಮಿಗೆ ಸೌಭಾಗ್ಯವ ಕರುಣಿಸು ಬೇಗದಿಸುದತಿಮಣಿಯೆಹರಿಪಾದಯುಗ ತೋರೌ1ಭಕ್ತವತ್ಸಲನ ರಾಣಿಯೆ ಭಜಿಸುವೆ ನಿನ್ನಮತ್ತೆ ಮಾಧವನ ಪಾದವಭಕ್ತಿಂದ ಭಜಿಪ ಧ್ಯಾನವÀ ಕೊಟ್ಟು ಕಾಪಾಡೆಸತ್ಯ ಮೂರುತಿಯ ದೇವಿಯೆಉತ್ತಮ ಭಕ್ತರಿಗಿತ್ತ ವರಗಳನುಮತ್ತೆ ಕೇಳಿಮನ ತೃಪ್ತಿಯ ತಾಳುತಚಿತ್ತಜಪಿತನೊಳು ಭಕ್ತಿಮಾಡುವ ಬಗೆಇತ್ತು ಪಾಲಿಸು ಸರ್ವೋತ್ತಮನರಸಿಯೆ 2ಪದ್ಮಸಂಭವೆ ಪಾಲಿಸು ಪದ್ಮಾಕ್ಷಿ ನಿನ್ನಪದ್ಮನಾಭನ ತೋರಿಸುಪದ್ಮನೇತ್ರೆಯೇಲಾಲಿಸು ಪಾಪವಹರಿಸುಶುದ್ಧಮನವ ಮಾಡಿಸುಪದ್ಮ ಸರೋವರ ಮಧ್ಯದಿ ಜನಿಸಿದಪದ್ಮದೊಳುದಿಸಿದ ಪದ್ಮಾವತಿಯೆ ಹೃ-ತ್ಪದ್ಮದಿ ಕಮಲನಾಭ ವಿಠ್ಠಲನಪಾದತೋರಿಉದ್ಧರಿಸೆನ್ನ ಪ್ರಸಿದ್ಧಳೆಜನನಿ3
--------------
ನಿಡಗುರುಕಿ ಜೀವೂಬಾಯಿ