ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(1) ನಿಂದಾಸ್ತುತಿಗಳು ಏನುಂಟು ನಿನ್ನೊಳಗೆ ನಾ ಬೇಡಲು ಏನು ಕೊಡುವೆ ಎನಗೆ ಪ ಶ್ರೀನಿವಾಸನೇ ಬಲು ದೀನನೊಳವಲಕ್ಕಿ ಮಾನವ ನೋಡದೆಅ.ಪ ತಿರುಕನಾಗಿ ತಂದೆ ಧರೆಯ ಕಶ್ಯಪನೆಂಬ ತಿರುಕ ಹಾರುವನಿಗೆ ಗುರಿಮಾಡಿದೆ ಸಿರಿಯನು ರಜಕನ ಪರಿವಾರದಿ ಬಿಟ್ಟು ಗರಳ ಹಾಸಿನೊಳೊರಗಿದೆ ಕೃಷ್ಣ 1 ಧನಕನಕಂಗಳು ನಿನಗಿರೆ ಸತ್ರಾಜಿ ತನ ಮಣಿಯನು ನೀಗಣಿಸುವೆಯಾ ಅನುವಾದ ಮನೆಯಿರೆ ಮುನಿಮನವೇತಕೆ ಮನೆವಾರ್ತೆಯುಳ್ಳರೆ ವನವಾಸಬೇಕೆ 2 ಕಾಮಧೇನುವು ಕಲ್ಪನಾಮಕ ತರುವು ಚಿಂ ತಾಮಣಿಗಳನು ಸುತ್ರಾಮಗಿತ್ತು ಗೋಮಯರಸಗಳ ಕಾಮಿಸಿ ಕದ್ದು ನೀ ದಾಮೋದರನಾದೆ ತಾಮರಸಾಕ್ಷ 3 ಖ್ಯಾತಿ ನೋಡದೆ ರಣ ಭೀತಿಯೊಳೋಡಿದೆ ಜಾತಿ ನೋಡದೆ ಜಾಂಬವತಿಗೂಡಿದೆ ನೀತಿಯ ನೋಡದೆ ಕೋತಿಯೊಳಾಡಿದೆ ಮಾತು ನೋಡದೆ ಬರಿ ಮಾಯೆಯ ಪಿಡಿದೆ 4 ಗತಿಹೀನರಿಗೆ ವರ ಗತಿಯ ತೋರಿಪನಾಮ ಸ್ಮøತಿಯೊಂದಿತ್ತರೆ ಸಾಕೆನಗೆ ಅತಿಶಯವಿದು ಎನ್ನ ಮತಿಯೊಳು ನಿನ್ನಯ ರತಿಯನ್ನು ಪಾಲಿಸು ವರದವಿಠಲರಾಮ 5
--------------
ವೆಂಕಟವರದಾರ್ಯರು
ವಾಮನಾವತಾರ ವಾಮನನನು ನೆನೆ ಹೇ ಮನವೇ ವಟು ವಾಮನನನು ನೆನೆ ಹೇ ಮನವೇ ಕಾಮಪೂರಣ ಲಕ್ಷ್ಮೀಧಾಮನ ಮರೆಯದೆ ಪ. ಶ್ಯಾಮಸುಂದರ ಸುರ ಪ್ರೇಮದಿ ಕಶ್ಯಪ ಧಾಮವಾ ಬೆಳಗುತ ಬಂದ ಭೂಮಿಯನಳದ ಸುತ್ರಾಮಗಿತ್ತ ನಿ ಸ್ಸೀಮ ಸಾಹಸ ಗೋವಿಂದ ನೀ ಸಲಹೆಂದು 1 ಬಲಿಯ ದೃಢಕೆ ಮೆಚ್ಚಿ ಸಲಹುತ ಮುಂದಿನ ವಲಭಿದಾಗುವೀ ನೀನೆಂದ ಕಲುಷಾಪಹಪದಕಮಲವ ಶಿರದೊಳು ನಿಲಿಸಿ ಬಾಗಿಲೊಳು ನಿಂದವ ನೀನೆಂದು 2 ಶ್ರೀ ಭೂಮಿಯುತ ಮುಕ್ತಾಭರಣಾಶ್ರಿತ ಸೌಭಾಗ್ಯಕರ ಲೀಲಾ ಆಭೀರರ ಕನ್ನೆಯರೊಲಿಸಿದ ಪದ್ಮ- ನಾಭ ವೆಂಕಟಪತಿ ಪರಮ ಪುರುಷನೆಂದು 3
--------------
ತುಪಾಕಿ ವೆಂಕಟರಮಣಾಚಾರ್ಯ