ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಮಾಡಿದರೇನು ಹೀನಮಾನವನು ಧಿನದಯಾಸಿಂಧು ಹರಿ ನೀನೊಲಿಯದಿರಲು ಪ ಸ್ನಾನ ಮಾಡಿದರೇನು ನಾನಾತೀರ್ಥವ ತಿರುಗಿ ಮೌನ ಮಾಡಿದರೇನು ನಯನಗಳು ಮುಚ್ಚಿ ದಾನ ಮಾಡಿದರೇನು ಧ್ಯಾನ ಮಾಡಿದರೇನು ಧ್ಯಾನದಾಯಕ ನಿನ್ನ ದಯವಾಗದಿರಲು 1 ಜಪವ ಮಾಡಿದರೇನು ಅಪರೂಪ ಮಡಿಯುಟ್ಟು ತಪವ ಮಾಡಿದರೇನು ವಿಪಿನವನು ಸೇರಿ ಗುಪಿತಶಾಸ್ತ್ರವ ಕಲಿತು ನಿಪುಣನೆನಿಸಿದರೇನು ಸುಫಲದಾಯಕ ನಿನ್ನ ಕೃಪೆಯಾಗದಿರಲು 2 ತತ್ವವನು ವಿಂಗಡಿಸಿ ಅರ್ಥಮಾಡಿದರೇನು ಪೃಥ್ವಿಬಿಡದ್ಯಾವತ್ತು ಸುತ್ತುಗಟ್ಟಿದರೇನು ಕುತ್ತಿಗೆಯ ಕೊಯ್ದಿಟ್ಟು ಮತ್ತೆ ಕಲೆಸಿದರೇನು ಚಿತ್ತಜಪಿತ ನಿನ್ನ ಚಿತ್ತಕ್ಕೆ ಬರದಿರಲು 3 ಯೋಗವನು ಕಲಿತು ಬಲುಯೋಗ ಮಾಡಿದರೇನು ಭಾಗವತವೋದಿ ಬಲು ಯಾಗ ಮಾಡಿದರೇನು ಭೋಗವನ್ನು ತ್ಯಜಿಸಿ ಬಲು ಜಾಗರಣ ಮಾಡಲೇನು ನಾಗಶಯನನೆ ನಿನ್ನ ನಿಗ ಬೀಳದಿರಲು 4 ಒಪ್ಪಿಡಿ ಅವಲಕ್ಕಿಗೊಪ್ಪಿ ಸಂಪದ ಕೊಟ್ಟು ತಪ್ಪುಗಾರನ ಕ್ಷಮಿಸಿ ಅಪ್ಪಿ ಪದವಿತ್ತಿ ಒಪ್ಪುಗಾರನೆ ನೀನು ಒಪ್ಪಿದ ಬಳಿಕಾವ ತಿಪ್ಪುಳದ ಗೋಜಿಲ್ಲೆನ್ನಪ್ಪ ಶ್ರೀರಾಮ 5
--------------
ರಾಮದಾಸರು
ಬೆಳಗಾಯಿ ತೇಳಿರಯ್ಯಾ ಪ ಕರ ಪುಷ್ಕರದ ನೆಲೆಯ ಲೊಗದು | ಬಲಿದ ವೈರಾಗ್ಯ ವೈರಾಗ್ಯ ಮುಂಬೆಳಗ ಸುಖ ತಂಗಾಳಿ | ರವಿ ಉದಯಿಸಿದ 1 ನ್ಮತ್ತದುರ್ವಾದಿ ನಕ್ಷತ್ರದೆಡೆಗೆ | ಭವ ದ್ವಿಜ ರಿಂದ ಸುತ್ತುಗಟ್ಟಿ ಭಜಿಸುತಿದೆ 2 ನೆರೆಭಾವ ಭಕುತಿ ರಥ ಚಕ್ರನೆರೆಯೆ | ದುರಿತೌಘ ಮಂಜು ಮುಸುಕು ದೆರಿಯೇ | ಸಂಚಿತ ಮೊದಲ | ಹಂಸನು ಮೆರಿಯೆ 3 ಸಾಲ ಸ-ಚ್ಚಾಸ್ತ್ರಾ ದೇಳಿಗೆಗೆವಿದ್ವಜ್ಜ | ನಾಳಿ ಝೇಂಕರಿಸುತಲಿ ಮ್ಯಾಲನಲಿಯಿ | ಮೂಲ ರಘು ಪತಿಯ ದೇವಾಲಯದ ವಾದ್ಯಗಳು | ಘೇಳೆನಿಪ ನಿಜ ವೇದ ಘೋಷ ಕೇಳ ಬರುತಿದೆ ಜನಕೆ4 ಘನ ಪುಣ್ಯ ಪೂರ್ವಾದ್ರಿ ಕೊನಿಗೆ ಅರುಣಾಂಬರದಿ | ವಿನುತ ಜ್ಞಾನದ ಕಿರಣವನೆ ಪಸರಿಸಿ | ಜನದ ವಿದ್ಯದ ನಿದ್ರೆಯನೇ - ಜಾರಿಸಿ ಹೋದ | ಮಹಿಪತಿ ನಂದನ ನುಭಿವದಿ ಕೀರ್ತಿ ಪಾಡಿದನು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಂಗ ಬಾರನ್ಹ್ಯಾಗೆ ಮಾಡಲಂಬುಜಾಕ್ಷಿಯೆ ರಂಗ ಬಾರನ್ಹ್ಯಾಗೆ ಮಾಡಲೆ ಪ ತಾಪ ಹೋಗದು ಶೀತ ಕಳೆವೊ ಸೂರ್ಯನಂತೆ ದ್ವಾರಾವತಿಯ ನಿಲಯನಮ್ಮ 1 ಅಕ್ಕ ರುಕ್ಮಿಣಿಯಲ್ಲಿ ನಕ್ಷತ್ರಮಧ್ಯಚಂದ್ರನಂತೆ ಪೊಕ್ಕಳಿಂದಲಜನ ಪಡೆದ ಚಕ್ರಧಾರಿ ಅಕ್ಕರ ಪಡುವೊ 2 ಕರೆದುತಾಹೋರೊಬ್ಬರಿಲ್ಲ ಕರುಣಾನಿಧಿಯೆಂಬುವುದು ಸಲ್ಲ ತರುಣಿ ಸತ್ಯಭಾಮೆಗಧಿಕ ತಿಳಿದು ತನ್ನ ರುಕ್ಮಿಣಿಯಲ್ಲಿರುವ 3 ಉಂಗುರದ ಹರಳಿನಂತೆ ಹೊಂದಿಕೊಂಡು ರುಕ್ಮಿಣಿಯನ್ನು ಇಂದಿರೇಶ ಬಿಟ್ಟಿನ್ನೊಬ್ಬರ ಮಂದಿರಕ್ಕೆ ಬಂದಿಹನ್ಹ್ಯಾಗೆ 4 ಮಂದಮತಿಯು ಆದನೇನೆ ತಂದೆಯಾದ ಸತ್ರಾಜಿತನು ತಂದುಕೊಟ್ಟನೆನ್ನ ಈ ಸುಂದರಳಾದ ಸೌ(ಸವ?) ತಿ ಕೆಳಗೆ 5 ಅಕ್ರೂರಜಮಿಳಂಬರೀಷ ಚಿಕ್ಕಧ್ರುವ ಪ್ರಹ್ಲಾದ ಗಜನು ಭಕ್ತಿಯಿಂದ ಕರೆಯೆ ಕಣ್ಣೆತ್ತಿ ನೋಡನವರನೀಕಾಲಕ್ಕೆ 6 ಗಾಯನದಿ ಗಂಧರ್ವ ಬಂದು ನಾರದ ಸುದಾಮ ಬಂದು ಬೇಡಿಕೊಂಡು ಕರೆಯಲವರ ನೋಡಿ ಮುಂದಕೆ ಬರುವನಲ್ಲ 7 ಸೋಳ ಸಾವಿರ ಸತಿಯರೆಲ್ಲ ಭಾಳ ಚಿತ್ರಭೂಷಿತರಾಗಿ ಏಳು ಕೃಷ್ಣೇಳೆಂದು ನಾಲ್ಕು ತೋಳು ಪಿಡಿದು ಕರೆವೋಣೇನೆ 8 ನೀಲ ಜಾಂಬವಂತಿ ಹಚ್ಚಿದ್ಹಗಲು ಬತ್ತಿಯಂತೆ ಸುತ್ತುಗಟ್ಟಿ ಕರೆವೋಣೇನೇ 9 ಪುತ್ಥಳ್ಯಂತ ರುಕ್ಮಿಣಿ ತೊಡೆಯಲಿಟ್ಟು ಕುಳಿತನಿಂದಿರೇಶ ಬಿಟ್ಟರಾಕೆ ನಮ್ಮನು ಕಣ್ಣೆತ್ತಿ ನೋಡೋದಷ್ಟೆ ಹೊರತು 10 ಗೊಲ್ಲ ಸತಿಯರೆಲ್ಲ ತಮ್ಮಲ್ಲಿ ದಧಿಬೆಣ್ಣೆಗಳ ತಂದು ಮೆಲ್ಲು ಕೃಷ್ಣಯೆಂದು ಕರೆಯೆ ಫುಲ್ಲನೇತ್ರ ತೆಗೆದುಕೊಂಡ11 ಕುಬ್ಜೆ ಕರದಿ ಗಂಧ ಹಚ್ಚೇನೆಂದು ಕರೆಯೆ ಬೆನ್ಹತ್ತಿ ಬರುವನೇನೆ ಕೃಷ್ಣ 12 ಸಾಸಿರ್ಹೆಡೆಯ ಮಂಚವಿಳಿದು ಸರಸವಾದ ವಚನದಿಂದ ಭೀಷ್ಮೆ ಭಿಡಿಯವೇನೆ ಭೀಮೇಶಕೃಷ್ಣನ ಕರೆವೋದಕ್ಕೆ13
--------------
ಹರಪನಹಳ್ಳಿಭೀಮವ್ವ