ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಪಣ ಶ್ರೀಪಾದಾರ್ಚನೆಯನಿತ್ತು ಪ ಅಪಾರ ಜನುಮದ ಪಾಪೌಘ ಬೆನ್ನಟ್ಟಿ ತಾಪಗೊಳಿಸುತ್ತಿದೆ ಈ ಪರಿಭವದೊಳು ಅ.ಪ. ಪತಿತ ನಾನಾದರೂ ಪತಿತ ಪಾವನ ನೀನು ಪಶುಪತಿ ಪಾಪಹರ ಗತಿಹೀನರಿಗೆ ನೀನೆ ಗತಿದರ್ಶಕನೆಂದು ತುತಿಸುತ್ತಿಹುದು ವೇದತತಿ ಸಮ್ಮತವಾಗಿ 1 ಭವಭವದಲಿ ಬಂದು ಬವಣೆಗಳಲಿ ಬೆಂದು ಬಳಲಿದೆ ಭಕ್ತ ಬಂಧು ಭವಹರ ನೀನೆಂಬುದನು ಭವಿಗಳಿಂ ನಿತ್ಯ ಶ್ರವಣದಿ ಕೇಳಿ ನಿನ್ನವರವನೆನಿಸಿದೆ 2 ಗೌರಿ ಮನೋಹರ ಗೌರಾಂಗ ಭಕ್ತರು ದ್ಧಾರಿಯೆ ಶೂಲಧರ ಸಾರಿದೆ ನಿನ್ನಂಘ್ರಿವಾರಿಜಯುಗಳವ ಕಾರುಣ್ಯದಲಿ ನೋಡು ಅಭಯವ ನೀಡು 3 ಮುಪ್ಪುರಹರ ಮುಕ್ಕಣ್ಣ ಗಂಗಾಧರ ಮೃತ್ಯು ಮೃತ್ಯುವೆ ಶಂಕರಾ ಸರ್ಪಭೂಷಣ ಅಪಮೃತ್ಯು ನಿವಾರಣ ಕಪ್ಪುಗೊರಳ ಕೃತ್ತಿವಾಸ ಸುರೇಶ 4 ಅಜ ಸಂತನಧ್ವರ ಭಜನೆಯ ಕೆಡಿಸಿದ ವಿಜಯ ವಿಗ್ರಹ ಶರೀರ ಸುಜನರ ಹೃದಯಾಂಬುಜದಲ್ಲಿ ಮಿನುಗುವ ರಜದೂರ ಶ್ರೀಕಾಂತ ನಿಜಭಕ್ತ ಗುರುವರ 5
--------------
ಲಕ್ಷ್ಮೀನಾರಯಣರಾಯರು
ಗುರು ಸಾರ್ವ _ ಭೌಮಾ ದೊರಕಿಸುತ ಹರಿಕರುಣ ಪೊರೆ ರಾಘವೇಂದ್ರಾ ಪ ಅಂದು ಹರಿ ತವಶರದಿ ಕರ ಪೊರೆದಂತೆ ನಂದಿ ಸುತ ದುರಿತೌಘ ಇಂದೆನಗೆ _ ಮೈದೊರು ಗುರುವೇ ಕುಂದು ಮಯ ಕಲಿಯೊಳಗೆ ಕಂದುತಿಹ ಕಂದರನು ತಂದೆ ಗುರು ಕಾಯದಿರೆ ಮುಂದು ಬರೆ ಆಗುವದೆ ಸ್ವಾಮೀ 1 ಕತ್ತಲೆಯು ಸುತ್ತಿಹುದು ಮುತ್ತಿಹವು ಕುತ್ತುಗಳು ಬತ್ತಿಹವು ಶಕ್ತಿಗಳು ಹತ್ತವೈ ಚಿತ್ತದೊಳು ಏನೂ ಎತ್ತುಗಳ ತೆರದಂತೆ ಸುತ್ತುತಲಿ ಭವದಲ್ಲಿ ಭಕ್ತಿಯನು ಕಾಣದಲೆ ಮೃತ್ಯುವಿಗೆ ತುತ್ತಾಹೆ ನಲ್ಲೋ 2 ಪರಿಪರಿಯ ಹರಕೆಗಳ ಪೂರೈಸಿ ಭಕುತರಿಗೆ ನಿರುತದಲಿ ಪೊರೆವವಗೆ ಭಾರವೇ ನಾ ನೊಬ್ಬ ಧೊರೆಯೇ ಗುರು ಸೇವೆ ಮಾಡರಿಯೆ ಬರಿ ಮೂಢ ಕಡು ಪಾಪಿ ಶಿರವಿಡುವೆ ಚರಣದಲಿ ಕರುಣಾಳು ಭರವಸೆಯೆ ನನಗೇ 3 ಪ್ರಹ್ಲಾದ ಬಲಿತಾತ ಬಾಹ್ಲೀಕ ಕುರುಪೋಷ ಶ್ರೀ ಹರಿಯು ಗುರುಭಕ್ತಿ ವಾಹಿನಿಯ ಹರಿಸೈಯ ಸತ್ಯಸಂಧಾ ದೇಹದಲಿ ಬಲವಿಲ್ಲ ಈಹಗಳು ಬಿಡದಲ್ಲ ಬಾಹಿರನು ನಿನಗಲ್ಲ ತ್ರಾಹಿ ಗುರು ನೀ ಬಲ್ಲೆ ಎಲ್ಲಾ4 ಶ್ರೀ ಮಧ್ವ ಗುರು ಚೇಲ ತಾಮಸರ ನಿರ್ಮೂಲ ಶ್ರೀಮಂತ ಗುಣಮಾಲ ಶ್ರೀ ಮನೋಹರ ಕೃಷ್ಣವಿಠಲ ಯಜಕಾ ಕಾಮಿತಾ ಫಲದಾತ ನೇಮದಲಿ ಹರಿನಾಮ ನುಡಿಸೆಂಬೆ ಸತತಾ 5
--------------
ಕೃಷ್ಣವಿಠಲದಾಸರು
ರುದ್ರದೇವರು ಪರಿ ವೈರಾಗ್ಯವು ವೀರ ವೈಷ್ಣವ ಭಕ್ತಾಗ್ರಣಿಯೆ ಪ ಮಾರಹರನೆ ಮನ್ಮಥನ ವೈರಿಯೆ ಮನ- ಸಾರ ಶ್ರೀರಾಮ ನಾಮವ ಜಪಿಸುವದಿದು ಅ,ಪ ಮುತ್ತು ಮಾಣಿಕ್ಯದ ಕಿರೀಟವು ಧರಿಸದೆ ನೆತ್ತಿಲಿ ಕೆಂಜೆಡೆ ಸುತ್ತಿಹುದು ಹಸ್ತದಿ ಶಂಖು ಚಕ್ರಗದೆ ಪದುಮವು ಬಿಟ್ಟು ಉತ್ತಮ ಡಮರು ತ್ರಿಶೂಲ ಪಿಡಿವುದಿದು 1 ನೊಸಲಲಿ ಕಸ್ತೂರಿ ತಿಲಕವನಿಡದಲೆ ಭಸುಮವ ಲೇಪಿಸುವುದು ತರವೆ ಕುಸುಮಲೋಚನೆ ಪ್ರಿಯ ಸಖನಾಗಿರುತಿರೆ ಎಸೆವ ಕಪಾಲ ಪಿಡಿದು ಬೇಡುವದಿದು 2 ದುಂಡು ಮುತ್ತಿನ ಹಾರ ಪದಕಗಳಿರುತಿರೆ ರುಂಡಮಾಲೆಯ ಕೊರಳೊಳು ತರವೆ ತಂಡ ತಂಡ ಪರಮಾನ್ನ ಭಕ್ಷಗಳಿರೆ ಉಂಡು ತೇಗದೇ ವಿಷಪಾನ ಮಾಡುವದಿದು3 ಭರ್ಜರಿ ಪೀತಾಂಬರ ಉಡುವುದು ಬಿಟ್ಟು ಕರಿಯ ಚರ್ಮನುಡುವುದು ತರವೆ ಪರಿ ರತ್ನಾಭರಣಗಳಿರುತಿರೆ ಉರಗಗಳಿಂದಲಂಕೃತನಾಗಿರುವದು 4 ಭೃತ್ಯರು ಸೇವೆಗೆ ಬೇಕಾದವರಿರೆ ಮತ್ತೆ ಪಿಶಾಚ ಗಣಗಳೇತಕೆ ಹಸ್ತಿ ತುರಗ ಪಲ್ಲಕ್ಕಿ ಪುಷ್ಪಕವಿರೆ ಎತ್ತನೇರಿ ಚರಿಸುವುದುಚಿತವೆ ಶಂಭೊ 5 ಸಿರದಲಿ ಗಂಗೆಯು ಸ್ಥಿರವಾಗಿರುತಿರೆ ಪರ್ವತರಾಜಕುವರಿಯೇತಕೆ ಅರಮನೆ ವಾಸಕೆ ಯೋಗ್ಯವಾಗಿರುತಿರೆ ಗಿರಿ ಕೈಲಾಸ ಪರ್ವತದಿ ವಾಸಿಸುವದು 6 ಭಕ್ತರು ಭಕುತಿಲಿ ಪಾಡಿ ಕೊಂಡಾಡಲು ನೃತ್ಯವ ಮಾಡುತ ಹರುಷದಲಿ ಕರ್ತೃ ಶ್ರೀ ಕಮಲನಾಭ ವಿಠ್ಠಲನೆಂದು ಪತ್ನಿಗೆ ಉಪದೇಶ ಮಾಡುವದಿದು 7
--------------
ನಿಡಗುರುಕಿ ಜೀವೂಬಾಯಿ
ಸ್ತ್ರೀಯ ತ್ಯಜಿಸಲು ಬೇಕು ಶಿವಧ್ಯಾನಕೆಬಯ್ಯಬೇಡಿರಿ ಬುದ್ಧಿ ಎಂದೆನ್ನಿರಯ್ಯಪಮಹಿಳೆಯ ಮೋಹದಲಿ ಮಗನು ತನ್ನವನೆಂಬೆಮಹಿಳೆಯು ತೆರಳೆ ಮಗನಿಗಾರೋಇಹುದು ಪ್ರಪಂಚವೆಲ್ಲ ಎಲ್ಲ ಸತಿಯಿಂದಲಿಮಹಾದೇವ ಚಿಂತನೆಗೆ ಮರೆವೆ ಸ್ತ್ರೀಯಯ್ಯಾ1ಮಗನು ಶಿಶುವಾಗಿರಲು ಮಾನಿನಿಯ ಬಡಿವನುಮಗ ಬಲಿಯೆ ಮುರಿವನು ನಿನ್ನೆಲುಬನುಮಗನು ಯಾರವ ಹೇಳು ಮನೆಯು ಯಾರದು ಹೇಳುನಗುವು ಅಲ್ಲದೆ ನನ್ನದೆಂತೆನಲಿಕಯ್ಯಾ2ಪತ್ನಿಯನು ಬಯ್ಯೆ ಮಗ ಬಡಿವನು ಎಂಬಹೆತ್ತಾಕೆ ಬಯ್ಯೆ ಹೇವಿಲ್ಲದಿಹನುತೊತ್ತಿನ ಮಗನಾಗಿ ನಿನ್ನ ತಳ್ಳುವನುಮಿತ್ರನಾಗಿಹನವನು ತಾಯಿಗಯ್ಯಾ3ಮನೆಯು ಸವತಿಯವಳದು ಮಕ್ಕಳೆಲ್ಲ ಸವತಿಯದುಎನಿತೆನಿತು ಭಾಗ್ಯ ಸೊದೆ ಎಲ್ಲ ಸವತಿಯಳದುಮನಕೆ ಹೇಸಿಗೆ ಹುಟ್ಟಿ ಮಹಾತ್ಮನಾಗಲುತನ್ನ ಹಿಂದೆ ತಿರುಗುವರೆ ತಿಳಿದು ನೋಡಯ್ಯ4ಸಂಗತಿಯ ಮೂಲದಲಿ ಸುತ್ತಿಹುದು ಪ್ರಪಂಚಕಂಗಳೊಳು ಕಸ ಚೆಲ್ಲಿದಂತೆ ಇಹುದುಮಂಗಳ ಚಿದಾನಂದಮುಕ್ತತಾನಾಗುವುದಕೆಅಂಗನೆಯ ಬಿಡಬೇಕು ಚಿಂತೆ ಯಾಕಯ್ಯಾ5
--------------
ಚಿದಾನಂದ ಅವಧೂತರು