ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮಯನ್ನಮ:ಎನ್ನೋ ರಾಮಾಯನ್ನಮ: ನಾಮವರಿತದ್ದೇ ರಾಮಾಯನ್ನಮ: ಪ ಬಂದದ್ದು ಬಾರದ್ದು ರಾಮಾಯನ್ನಮ: ತಂದದ್ದು ತಾರದ್ದು ರಾಮಾಯನ್ನಮ: ಅಂದದ್ದು ಆಡದ್ದು ರಾಮಾಯನ್ನಮ: ಮಿಂದದ್ದು ಮೀಯದ್ದು ರಾಮಾಯನ್ನಮ: 1 ಉಂಡದ್ದು ಉಟ್ಟದ್ದು ರಾಮಾಯನ್ನಮ: ಕೊಂಡದ್ದು ಕೊಟ್ಟದ್ದು ರಾಮಾಯನ್ನಮ: ಕಂಡದ್ದು ಕಾಣದ್ದು ರಾಮಾಯನ್ನಮ: ಬಂಡಾದದ್ದಾಗದ್ದು ರಾಮಾಯನ್ನಮ: 2 ಇದ್ದದ್ದು ಇಲ್ಲದ್ದು ರಾಮಾಯನ್ನಮ: ಮೆದ್ದದ್ದು ಮೆಲ್ಲದ್ದು ರಾಮಾಯನ್ನಮ: ಬಿದ್ದದ್ದು ಬೀಳದ್ದು ರಾಮಾಯನ್ನಮ: ಕದ್ದದ್ದು ಕದಿಯದ್ದು ರಾಮಾಯನ್ನಮ: 3 ಬಿತ್ತಿದ್ದು ಬೆಳೆದದ್ದು ರಾಮಾಯನ್ನಮ: ಎತ್ತಿದ್ದು ಎತ್ತದ್ದು ರಾಮಾಯನ್ನಮ: ಸುತ್ತಿದ್ದು ಮುತ್ತಿದ್ದು ರಾಮಾಯನ್ನಮ: ಅತ್ತದ್ದು ಹೊತ್ತದ್ದು ರಾಮಾಯನ್ನಮ: 4 ಭಕ್ತಿ ಭಾವನೆಯೆಲ್ಲ ರಾಮಾಯನ್ನಮ: ಯುಕ್ತಿ ಯೋಚನೆಯೆಲ್ಲ ರಾಮಾಯನ್ನಮ: ಯುಕ್ತಾಯುಕ್ತವು ರಾಮಾಯನ್ನಮ: ಮುಕ್ತಿ ಸಾಧ್ಯ ಶ್ರೀ ರಾಮಾಯನ್ನಮ: 5
--------------
ರಾಮದಾಸರು
ಹರಿಹರಾ | ಪಾಲಿಸೊ ಎನ್ನ | ಭವಹರಾ ಪ ಸುರರು ಭೂಸುರರೆಲ್ಲಕರವ ಮುಗಿದು ನಿನ್ನ ವರಗಳ ಬೇಡೋರು ಅ.ಪ. ಸಿರಿ | ಪತಿಯು ಮತ್ತೆ ಪಶುಪತಿಯಿಂದಲೂ ತಾನೂ | ಹತನಾಗದವನಂತೆ 1 ಪರ | ಮೇಷ್ಠಿ ಪಿತನೆ ನಮ್ಮಕಷ್ಟವ ಕಳೆದು ಸಂ | ತುಷ್ಟಿಯ ಪಡಿಸಯ್ಯ 2 ಸುರರ ಭೂಸುರರ ಜಂಗಳಿಯ | ನೋಡಿಪೊರೆವೆನೆಂದವರಿಗೆ ಅಭಯ | ವಿತ್ತುಹರಿಯು ತಾನೇ ರೂಪದ್ವಯ | ದಿಂದಹರಿಹರಾಭಿಧತಾನೆ ಖರೆಯ | ಆಹಸುರರು ರೂಪವ ನೋಡಿ | ಉರುತರದಾಶ್ಚರ್ಯಭರವಾ ಮೈಮರೆಯುತ | ಕರವನೆ ಮುಗಿದರು 3 ಕಾಲ ನಿರೀಕ್ಷಿಸುತ್ತಿದ್ದು | ಬಲ್ಕರಾಳ ರೂಪನ ತಾನು ಗೆದ್ದು | ತಲೆಕಾಲಿನೊಳಗೆ ಮೆಟ್ಟುತಿದ್ದೂ | ಪಾ-ತಾಳಕ್ಕವನ ತಾನು ಒದ್ದು | ಆಹಕಾಲಮೀರುವ ಮುನ್ನ | ಕೇಳಲೊ ವರವನ್ನೆಫಾಲಾಕ್ಷ ಹರಿಯನ್ನು | ಕೇಳಿದನೀಪರಿ 4 ಮಲ್ಲಮರ್ದನ ಗುರು | ಗೋವಿಂದ ವಿಠಲನು ಸಲ್ಲೀಸೂವ ಭಕ್ತ | ರೆಲ್ಲರಭೀಷ್ಟವ 5
--------------
ಗುರುಗೋವಿಂದವಿಠಲರು
ಪಿಂಡಾಂಡದೊಳಗಿನ ಗಂಡನ ಕಾಣದೆ |ಮುಂಡೆಯರಾದರು ಪಂಡಿತರೆಲ್ಲ ........... ಪ.ಆಧಾರ ಮೊದಲಾದ ಆರು ಚಕ್ರಮೀರಿ |ನಾದಬಿಂದು ಕಳೆಯಳಿದ ಬಳಿಕ ||ಶೋಧಿಸಿ ಸುಧೆಯ ಪ್ರಸಾದವನುಣ್ಣದೆ |ಓದುತ ಮನದೊಳು ಒಂದನು ತಿಳಿಯದೆ 1ನಾದದೊಳಗೆ ಸುನಾದ ಓಂಕಾರದಿ |ಪದವ ಬಿತ್ತಿ ಪರಿಣಾಮಿಯಾಗದೆ ||ವೇದಾಂತರೂಪ ತದ್ರೂಪ ನಾಲಗೆಯಲಿ |ವಾದಿಸಿ ಮನದೊಳು ಒಂದನು ಅರಿಯದೆ............. 2ನವನಾಳ ಮಧ್ಯದಿ ಪವನ ಸುತ್ತಿದ್ದು ಪಣಿ |ಶಿವನ ತ್ರಿಪುಟ ಸ್ಥಿತಿ ಸ್ಥಿರವಾಗದೆ ||ಭವರೋಗ ವೈದ್ಯನ ಧ್ಯಾನವ ಮಾಡದೆ |ಶವುರಿ ಶ್ರೀಪುರಂದರ ವಿಠಲನ ಸ್ಮರಿಸದೆ3
--------------
ಪುರಂದರದಾಸರು