ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ಚಂದ್ರಕೋಟಿ ತೇಜ ಚಕ್ರಧರನ ಭೃತ್ಯಾ ಪ ತ್ರಿದಶ ದೈತ್ಯರು ಕೂಡಿ ತೀವ್ರದಿಂದಲಿ ತಾವು ಮಂದರ ಶೈಲ ತವಕದಿ ತಂದಾಗ ಉದಧಿಯೊಳಿಟ್ಟು ಸರ್ಪವನೆ ಸುತ್ತಿದರು ಪಿಡಿದು ಮುದದಿಂದ ಕಟಿಯಲು ಮುನಿದು ಮಹರೋಷದಿ ಅದು ನೋಡಿ ಮದನಾರಿ ಕಂಗೆಡಲು ಅಂಜದೆ ನೀನು ಸುರರು ಸುಖಬಡಲು 1 ವಾತನ ಸುತನಾಗಿ ವಾಲಿಯ ತಮ್ಮನ ಕೂಡಿ ಭೂತಳಾಧಿಪ ರಾಮಚಂದ್ರನ ಪದವಾರಿ ಜಾತಕ್ಕೊಂದನೆ ಮಾಡಿ ವೃತ್ತಾಂತವನು ಪೇಳಿ ಆತುರದಲಿ ಪುರಹೂತನಂದನ ನಿ ರ್ಭೀತನ ಕೊಲ್ಲಿಸಿ ಶರಧಿಯನು ಹಾರಿ ಸೀತೆಗುಂಗುರ ಕೊಟ್ಟು ಬೆಳೆದ ಚಲ್ವ- ವಾತಹತಮಾಡಿ ಲಂಕಾಪುರವ ಸುಟ್ಟ 2 ಪಾಂಡುಚಕ್ರವರ್ತಿ ಕುಂತಿಯಲಿ ಜನಿಸಿ ಮಂಡಲದೊಳು ಮಹಾಶೂರನೆನಿಸಿ ವಿಷ ಉಂಡು ದಕ್ಕಿಸಿಕೊಂಡು ಉರಗಲೋಕದಲ್ಲಿದ್ದು ತಾಂಡ ಭಾದಿಯ ಗೆದ್ದು ಹಿಡಿದು ಹಿಡಂಬನ ಹಿಂಡಿ ಬಕಾಸುರನ ಖಂಡರಿಸಿ ಕೀಚಕನ ಮಂಡಲದೊಳಗೆ ನಿಂದೆ ವಿರಾಟನ್ನ ದಿಂಡುಗೆಡುಹಿ ಕದನದಲಿ ವೇಗ ಕೊಂದೆ 3 ಬುದ್ಧಿಹೀನರಾಗಿ ಬಾಳಿದ ಮನುಷ್ಯರ ಶುದ್ಧಾತ್ಮರನ ಮಾಡಿ ಶುಭವೇಗದಲಿ ಶ್ರೀ ಮುದ್ರೆಧಾರಣ ಕೊಟ್ಟು ಜ್ಞಾನಾಂಬುಧಿಯೊಳಿಟ್ಟು ಅದ್ವೈತ ಮತ ಕಾಲಿಲೊದ್ದು ಪರವಾದಿ ಎದ್ದೋಡಿ ಬಂದು ತಿರುಗಿ ನಿಮ್ಮ ಉದ್ಧರಿಸಿ ಅವರವರ ದೋಷ ಹೋಯಿತು ಕರಗಿ4 ಭೂವ್ಯೊಮ ಪಾತಾಳದೊಳಗೆ ಎದುರುಗಾಣೆ ವಾಯು ಹನುಮ ಭೀಮ ಮಧ್ವನೆಂದಿನಿಸಿದೆ ಕಾಯಜ ಜನಕನ ಪದವ ಪೂಜಿಸಿ ಅಂಬು ಜೆಯನ ಪದವಿ ಪಡೆದು ಹರ ಇಂದ್ರಾದಿಗಳಿಗೆ ನಾಯಕನೆನಿಸಿದೆ ನಾನಾ ದುರಿತವಾಗಿ ಮಾಯಿಗಳೆಲ್ಲ ತರಿದೆ ಸುಭಕುತರ ಆಯತದಿಂದ ಪೊರೆದೆ ವಿಜಯವಿಠ್ಠಲರಾಯ ವೆಂಕಟನ ಒಲಿಮೆಯಿಂದಲಿ ಮೆರೆದೆ5
--------------
ವಿಜಯದಾಸ
ಹನುಮ-ಭೀಮ-ಮಧ್ವರು ಅಸುರರನು ಅಳಿಯ ಬಂದೆನು ನಾನು ನಿನ್ನ ವೈರಿದಶರಥರಾಮನಾಳೆಂದ ಪ. ಹೊಸಕಪಿಯೆ ನೀನು ಬಂದುದೇನುಕಾರಣವೆನಲುದಿ[ಶೆÀ]ಗೆ ಬಲ್ಲಿದ ಹನುಮ ನಾ ಕೇಳೊ ನಿ-ನ್ನಸುರ ಪಡೆಯ ಮಡುಹಬಂದೆ ನಿನ್ನಎಸೆವ ಪಾದದಲೊದೆಯ ಬಂದೆ ವನದಸಸಿಯ ಕಿತ್ತೀಡ್ಯಾಡಿ ನಿಂದೆ ನಿನ್ನದಶಶಿರವ ಕತ್ತರಿಸಿ ಎಸೆವ ರಾಮರ ಮಡದಿಹಸುಳೆ ಸೀತೆಯ ಅರಸಲು ಬಂದೆ 1 ಎನ್ನ ವೈರಿಗಳು ಇನ್ಯಾರೆಂದು ರಾವಣನುಹೊನ್ನಕುಂಡಲದ ಹನುಮನೆ ಕೇಳೊಮುನ್ನವರ ಸಾಹಸವಯೇನೆಂಬೆ ಅವರಪರ್ಣಶಾಲೆಯ ಹೊಕ್ಕು ಬಂದೆ ರಾಮ-ಕನ್ಯೆ ಸೀತಾಂಗನೆಯ ತಂದೆತನ್ನ ಬಿಲ್ಲ ತಾ ಹೊತ್ತು ತಿರುಗುವುದ ಕಂಡೆ 2 ಇನ್ನು ಹೆಮ್ಮೆಮಾತ್ಯಾತಕೊ ಕಪಿಯೆಕಚ್ಚಿ ಕೀಳಲೋ ಕಣ್ಣು ಹತ್ತುತಲೆಯನೆ ಹಿಡಿದುನುಚ್ಚುನುರಿ ಮಾಡಿ ಕೊ[ಲ್ಲಲೊ]ನಿನ್ನ ಇಷ್ಟುಹೆಚ್ಚಿನ ಮಾತ್ಯಾಕೊ ನಿನಗೆ ಬಹಳಕಿಚ್ಚು ತುಂಬಿತು ಕೇಳೋ ಎನಗೆ ಒಂದುಮೆಚ್ಚು ಹೇಳುವೆನೊ ರಾಮರಿಗೆಅಚ್ಚುತನ ಬಣಕೆ ಮೀಸಲಾಗಿರು ನೀನು 3 ವಿಧಿ ಕಾಲಮ[ಣೆ]ಯಾಗಿಬೆನ್ನಬಿಡದಿಹ ಪರಿಯ ನೋಡೊ 4 ಎನ್ನ ಸೋದರಮಾವ ವಾಲಿಯನು ಕೊಂದೀಗತಮ್ಮ ಸುಗ್ರೀವಗೊಲಿದು ವರವಿತ್ತುನಿನ್ನ ಕೊಂಡೊ[ಯ್ದ]ನೆಂಬುವರೊ ನಿನ್ನಚಿನ್ನನ ತೊಟ್ಟಿಲಿಗೆ ಕಟ್ಟುವರೊ ನಿನ್ನಹೊನ್ನತುಂಬೆಂದು ಆಡ್ಸುವರೊನಿನ್ನ ಶಿರವರಿದು ವಿಭೀಷಣಗೆÀ ಪುರವ ಕೊಡಬೇಕೆನುತಎನ್ನೊಡೆಯ ಬರುತಾನೆ ತಾಳೊ ಎಂದ 5 ಎತ್ತಿಹಿಡಿವ ಕೈಪಂಜು ಲೆಕ್ಕವಿಲ್ಲ ನಾ ಹಿಡಿದವಕತ್ತಿ ಇಪ್ಪÀತ್ತು ಕಾಣೋ ಕಪಿಯೆಎತ್ತಿ ಕಡಿವೆನು ಬಾಹುದಂಡ ಬೆ-ನ್ನ್ಹ್ಹತ್ತಿ ಬಡಿಯದೆ ಬಿಡೆನು ಕಂಡ್ಯಾ ನಿನ್ನಚಿತ್ತದಲಿ ತಿಳಿದುಕೊಳ್ಳೆಂದಮತ್ತೆ ನಾ ತಾಳಿ ಕೈಗಾಯಿದೆನಲ್ಲದೆ ಬಾಯಬತ್ತಿಸದೆ ಬಿಡುವೆನೇನೋ ಕಪಿಯೆ 6 ಮತ್ತ ರಾವಣ ನೀನು ಹೊತ್ತಿದ ಭೂಮಿ ಹಣತಿಸುತ್ತಣ ಸಮುದ್ರವೆ ತೈಲಎತ್ತಿ ಹಿಡಿವಳು ಸೀತೆ ದೀಪ ನಮ್ಮಚಿತ್ತದೊಲ್ಲಭನ ಪ್ರತಾಪ ನಿನ್ನಲಂಕಪಟ್ಟಣವು ಸುಡುವಂತೆ ಶಾಪಹತ್ತು ತಲೆ ಹುಳ ಹಾರಿಬಂದು ಬ್ಯಾಗಸುತ್ತಿ ಬೀಳುವುದು ದೀಪದೊಳಗೆ7 ಹೆಚ್ಚಿನ ಮಾತಿಷ್ಟು ಇವಗ್ಯಾಕೆ ಹಿಡಿತಂದುಕಿಚ್ಚು ಹಚ್ಚಿರೊ ಬಾಲಕೆ ಎಂದ ಆಗಪೊಚ್ಚಸೀರೆಗಳ ಸುತ್ತಿದರು ತ್ವರಿತಅಚ್ಚ ಎಣ್ಣೆಯಲಿ ತೋಯಿಸಿದರು ಬಾಲಹೆಚ್ಚಿಸಲು ಕಂಡು ಬೆದರಿದರುಕಿಚ್ಚು ಹಚ್ಚಲು ರಕ್ಕಸರ ಗಡ್ಡಮೀಸೆ ಸಹಎಚ್ಚರಿಸಿ ಸುಟ್ಟ ಲಂಕಾಪುರವ8 ಮುಖ್ಯಪ್ರಾಣ ವರದ ಮೆರದ 9
--------------
ವಾದಿರಾಜ
ಹರಿನಾಮ ಜಪಕಿನ್ನು ಸರಿಯಾದುದಿಲ್ಲ ಸರಸಿಜಾಸನಿದರ ಸಾರವನು ಬಲ್ಲ ಪ. ಬಡವಾಗ್ನಿ ಸುತ್ತಿದರು ಕೊಡುವದನುಪಮ ತಂಪ ನಡುನೀರೊಳಗೆ ಮುಳುಗಲುಡುಪವಹದು ಕಡುಭಯದ ಕಾಡಲ್ಲಿ ಮಿಡುಕುತಿಹ ಸಮಯದಲಿ ಒಡೆಯನನು ನೆನೆದವನ ಕಡೆಹಾಯಿಸುವ ನಮ್ಮ 1 ಘೋರ ರಿಪು ರಾಜಾಗ್ನಿ ಘೋರಾಹಿ ಪಕ್ಷಿ ಮೃಗ ಮಾರಿ ಮೊದಲಾದಭಯಕಾರಿಗಳನು ದೂರ ಓಡಿಸಿ ದಡವ ಸೇರೆ ಸಲಹುವ ನಮ್ಮ ಕಾರುಣ್ಯ ನಿಧಿಯನ್ನು ಸಾರಿಸಾರಿಗೆ ನೆನೆವ 2 ಆವ ಕಾಲಕು ಸುಖವನೀವ ಶೇಷ ಗಿರೀಶ ಶ್ರೀವರನ ಸರ್ವತ್ರ ಸ್ಮರಿಸಿರೆಂದು ದೇವಋಷಿಯೆಂದುದನು ದಿಟವೆನುತ ನಂಬುವರ ಕಾವನನುಭವ ಸಿದ್ಧ ಕಮಲಾಕ್ಷ ಗತಿಯೆಂಬ 3
--------------
ತುಪಾಕಿ ವೆಂಕಟರಮಣಾಚಾರ್ಯ