ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸೊ ಗುರು ಎನಗೆ ಅರಘಳಿಗಿ ನೀ ಎನ್ನ ಹೃದಯದಿಂದಲಗದ್ಹಾಂಗೆ ಧ್ರುವ ಕಣ್ಣಿನೊಳಗ ನಿನ್ನ ಕಾಣದಿದ್ದರೆ ಪೂರ್ಣ ಪ್ರಾಣನಿಲ್ಲದೊ ನಿಮಿಷಾರ್ಧದಲಿ ಕ್ಷಣಕ್ಷಣಕ್ಕೊದಗಿ ನೀ ಖೂನದೋರದಿದ್ದರೆ ತನು ವಿಕಳಿತವಾಗಿ ಕ್ಷೀಣಹೊಂದುವದೊ 1 ಬೇಡುವದೊಂದೆ ನಾ ಬಿಡದೆ ನಿಜರೂಪ ಪೊಡವಿಯೊಳಗೆ ದೃಢ ನಿಶ್ಚಯಲಿ ಎಡಬಲವು ನೋಡದೆ ಒಡಲ ಹೊಕ್ಕಿದೆ ನಿನ್ನ ಕಡೆಗಾಣಿಸುವದೆನ್ನೊಡೆಯನೆ ಪಿಡಿದು ಕೈಯ 2 ಸುತ್ತಸೂಸುತಲಿನ್ನು ಚಿತ್ತದಿಂದಗಲದೆ ನಿತ್ಯವಾಗಿರೊ ನೀ ಹೃತ್ಕಮಲದಲಿ ಹೆತ್ತ ತಾಯಿಯೋಪಾದಿ ತುತ್ತುತುತ್ತಿಗೆ ಒಮ್ಮೆ ಹತ್ತಿಲಿದ್ದು ಸಂತತ ಸಲಹೊ ಮಹಿಪತಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಾಳಲಾರೆನಮ್ಮಾ ಬಾಲಕನಟ್ಟುಳಿ ಗೋಪೀಘನವಮ್ಮ ಕೇಳಿದುಳವಿಲ್ಲಾ ಕೇಳಿದುಳವಿಲ್ಲಾ ಕಾಲಕಾಲದಲಿಟ್ಟ ಬೆಣ್ಣೆ ಮೂಲವಿರಲಿಕ್ಕಿಲ್ಲಾ ಪ ಅತ್ತನೋಡ ಲಿಹಾ ಇತ್ತ ನೋಡಲಿಹಾ ಸುತ್ತಸೂಸುತ ಬಾಲೆಯರಾ ಚಿತ್ತಮೋಹಿಸುತಿಹಾ1 ಹಿಡಿದೇನೆಂದರೆ ಸಿಕ್ಕಾ ತುಡುಗ ಬಲುದಕ್ಕಾ ಹಿಡಿದು ನಿಲ್ಲಿಸುವರಿಲ್ಲಾ ಪೊಡವಿಲಿವನ ತುಕ್ಕಾ2 ಆರಿಗೇ ವಿಚಾರಾ ಸಾರಬೇಕು ದೂರಾ ಸೂರೆಹೋಗುತಿದೆ ಸಂಸಾರಾ ಸುಖಸಾರ 3 ತಂದೆಮಹಿಪತಿ ನಂದನ ಸಾರಥಿ ಇಂದು ನಮ್ಮ ಕಾಡಿದರ ಮುಂದಾರುಗತಿ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು