ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತುಂಗಭದ್ರೆ ಸುತರಂಗಿಣಿ ತೀರಗನ್ಯಾರೇ ಪೇಳಮ್ಮಯ್ಯ ಪ ಮಂಗಳ ಮಹಿಮ ಶುಭಾಂಗ ಮೂರುತಿ | ಶ್ರೀ ಹರಿಹರ ಇವ ಕಾಣಮ್ಮ ಅ.ಪ. ಬಹು ಕಂಟಕಿ ಆ ಗುಹನ ತಪಸಿಗೆ | ಮೆಚ್ಚಿದ ಹರ ನೋಡಮ್ಮಮ್ಮ |ಅಹಿ ಭೂಷಣ ತಾ ವರವನು ಕೊಟ್ಟನು | ಬಹು ಬೇಗನೆ ನೋಡಮ್ಮಮ್ಮ|ವಿಹಗವಾಹ ಹರಿ ಮತ್ತೆ ರುದ್ರನಿಂ | ಇವನ ಜೇಯ ನೋಡಮ್ಮಮ್ಮ |ಮಹಿಯೊಳು ಸುರರಾಹವ ಕೆಡಸುತ | ಬಹು ಹಿಂಸಕ ನೋಡಮ್ಮಮ್ಮ 1 ಸುರಲೋಕಕು ಈ ಅಸುರನ ಬಾಧೆಯು | ತಟ್ಟಿತು ನೋಡಮ್ಮಮ್ಮ |ಸುರ ಭೂಸುರರೆಲ್ಲರು ಮೊರೆಯಿಟ್ಟರು | ಹರಿಯಲಿ ನೋಡಮ್ಮಮ್ಮ |ಸಿರಿಯರಸನು ತಾನಭಯವನಿತ್ತವರನು | ಕಳುಹಿದ ನೋಡಮ್ಮಮ್ಮ | ಕರುಣಾಕರ ತಾ ಹರಿಹರ ರೂಪದಿ | ದುರುಳನ ತರೆದ ನೋಡಮ್ಮಮ್ಮ 2 ಕೃತ್ತಿವಾಸ ತಾ ನಿತ್ತ ವರವ ಹರಿ | ಪಾಲಿಸಿದನು ನೋಡಮ್ಮಮ್ಮ | ದಿತಿಸುತನಾಯುವು ದಶಶತಕಳೆಯಲು | ವತ್ತಿದ ಕೆಳಗವನಮ್ಮಮ್ಮ |ಹಿತದಿಂದಲಿ ತಾ ಭಕುತರ ಪೊರೆಯುವ | ಹರಿಹರನ ನೋಡಮ್ಮಮ್ಮ | ದೈತ್ಯನ ಪೆಸರಿಲಿ ಪಾವನವಾಯಿತು | ಈ ಕ್ಷೇತ್ರವು ಕಾಣಮ್ಮಮ್ಮ 3 ದಕ್ಷಿಣ ಪಾಶ್ರ್ವದಿ ಅಭಯ ಹಸ್ತ | ತ್ರಿಶೂಲ ಧರನ ನೋಡಮ್ಮಮ್ಮ | ಅಕ್ಷಿಯ ಮಾನಿಯು ದಕ್ಷಿಣ ಶಿರದಲಿ | ಮೆರೆಯುವನು ನೋಡಮ್ಮಮ್ಮ | ದಕ್ಷಸುತೆಯು ತಾ ವಿರೂಪಾಕ್ಷನ | ಸೇವಿಪಳೂ ನೋಡಮ್ಮಮ್ಮ |ಪಕ್ಷಿವಾಹಗೆ ತಾನರ ಮೈಯ್ಯಾದನು | ತ್ರ್ಯಕ್ಷನು ಕಾಣಮ್ಮಮ್ಮ 4 ಕಂಬು | ಧರನಾ ನೋಡಮ್ಮಮ್ಮ ಲಕ್ಷ್ಮೀವನಿತೆಯು ಕಾಮನ ಜನಕನ | ಸೇವಿಪಳೂ ನೋಡಮ್ಮಮ್ಮ ಶುಮಲಾಂಗ ವನಮಾಲೆಗಳನು | ಧರಿಸಿಹ ನೋಡಮ್ಮಮ್ಮ |ಸಾಮಸನ್ಮುತ ಗುಣಧಾಮನ ಲೀಲೆ | ಇದೆಲ್ಲವು ಕಾಣಮ್ಮಮ್ಮ 5 ಕ್ರೋಶ ಪಂಚ ನಾಲ್ಕಾರದಿ ಮೀಸಲು | ಸುಕ್ಷೇತ್ರವ ನೋಡಮ್ಮಮ್ಮ | ಭಾಸಿಸುವವು ಇಲ್ಲೆಕಾದಶ ವರ | ತೀರ್ಥಂಗಳು ನೋಡಮ್ಮಮ್ಮ | ಈ ಸುಕ್ಷೇತ್ರವು ಆ ಮಹಕಾಶಿಗೆ | ಸಮವೆನಿಸಿದೆ ನೋಡಮ್ಮಮ್ಮ |ಅಸಮ ಮಹಿಮ ಹರಿ ಅಸುರಗೆ ಕೊಟ್ಟನು | ಈ ಪರಿವರ ಕಾಣಮ್ಮಮ |6| ಕೃತಿ ವಿಧಿ ಜನಕನಿಗೂ | ಭೇದವೆ ಸರಿ ಕೇಳಮ್ಮಮ್ಮ ಮೋದಮಯ ಗುರು ಗೋವಿಂದ ವಿಠಲನ | ಲೀಲೆಗಳಿವು ಕಾಣಮ್ಮಮ್ಮ 7
--------------
ಗುರುಗೋವಿಂದವಿಠಲರು
ಪ್ರಸನ್ನ ಶ್ರೀನಿವಾಸ ಕಲ್ಯಾಣ ಜಯ ಜಯ ಜಯ ಶ್ರೀನಿವಾಸ ಕೃತಿ ಮಾಯಾ ಶ್ರೀಶ ಭಯಬಂಧಮೋಚಕ ಜೀಯ ಆಹ ಸುಂದರ ಚಿನ್ಮಯಾನಂದ ಜ್ಞಾನಾತ್ಮನೆ ಮಂದಜಭವ ಸುರವೃಂದ ಸಂಸೇವ್ಯ ಜಯ ಪ ಸುರಸರಿತ ತೀರದಿಂದ ಸುರಮುನಿ ಭೃಗು ಬಂದು ನಿನ್ನ ಪರಸಮರಹಿತನೆಂದರಿತ ಆಹ ಸಿರಿಯು ನಿನ ಭಾವವನುಸರಿಸಿ ಬೇಗ ಕರವೀರ ಪುರ ಪೋಗೆ ಗಿರಿಪುತ್ತ ಪೊಕ್ಕೆಯೊ 1 ಮೇರುಸುತನೆ ಹಾಟಕಾದ್ರಿ ವೀರ ಭಕುತ ವೃಷಭಾದ್ರಿ ಸರೀಸೃಪಾವರಿಸಿದ ಸೌರಭ್ಯಗಿರಿಯಿದು ಪರವೇಂಕಟಾದ್ರಿಯು ಹರಿತು ವಿಪ್ರನ ಪಾಪ 2 ನೀನಿದ್ದ ಸ್ಥಳವೇ ವೈಕುಂಠ ನಿನಗಾರು ಸಮರುಂಟೆ ಶ್ರೀಶ ದೀನ ಸುಜನರಿಗೆ ನಂಟ ಆಹ ಧೇನು ಪಾಲ್ಗರೆಯಲು ಪಾಲಕ ಹೊಡೆಯಲು ದೀನರಕ್ಷಕ ನೀನು ಶಿರಸಿತ್ತು ಪೊರೆದೆಯೊ 3 ಏಳು 2ತಾಳದ ಉದ್ದ ರಕ್ತ ತಾಳಲಾರದೆ ಬಿದ್ದ ಗೋಪ ಚೋಳರಾಯಗೆ ಕೊಟ್ಟೆ ಶಾಪ ಆಹ ಪೇಳಬಲ್ಲೆನೆ ನಿನ್ನ ಅತಿಶಯ ಲೀಲೆಯ ಶೀಲ ಸುರರ ಗುರು ಚಿಕಿತ್ಸೆಯನೈದಿದೆ 4 ಸ್ವಗತ ಭೇದವಿಲ್ಲದಂಥ ಸ್ವಚ್ಛ ಚಿತ್ಸುಖಮಯನಂತ ಸ್ವಾನಿರ್ವಾಹಕ ವಿಶೇಷ ಆಹ ಶ್ವೇತವರಾಹನ ಸಂವಾದದಿಂದಲಿ ಸ್ವೀಕರಿಸಿದೀ ಸ್ಥಳ ಮೊದಲು ಪೂಜೆಯ ಕೊಟ್ಟು 5 ಸರಸ್ವತೀ ಸ್ವಾಮಿ ಪುಷ್ಕರಣಿ ಸುರಮುನಿನರರಿಗೆ ಸ್ನಾನ ಪರಸುಖಮಾರ್ಗ ಸೋಪಾನ ಆಹ ಸುರತಟಿನ್ಯಾದಿ ಸುತೀರ್ಥಗಳೆಲ್ಲವು ಸರಿತವಾಗಿರುತವೆ ಈ ಸ್ವಾಮಿ ತೀರ್ಥದಿ 6 ಆದಿಕಾರಣ ನಿನ್ನ 3ಲೀಲಾ ಮೋದಸಂಭ್ರಮವನ್ನು ನೋಡೆ ಕಾದುಕೊಂಡಿಹರು ಕೋವಿದರು ಆಹ ಸಾಧು ಸಂಭಾವಿತ ಬಕುಳಾದೇವಿಯುಗೈದ ನಿತ್ಯ ಸಂತೃಪ್ತ 7 ಮಂಗಳ ಚಿನ್ಮಯ ರಂಗಾ - ನಂಗನಯ್ಯನೆ ಮೋಹನಾಂಗ ತುಂಗ ಮಹಿಮನೆ ಶುಭಾಂಗ ಆಹ ಬಂಗಾರ ಕುದುರೆ ಮೇಲಂಗನೇರಲಿ 4ಬಂದ ಶೃಂಗಾರವೇನೆಂಬೆ ಎಂದಿಗೂ ಸ್ವರಮಣ8 ತೋಂಡಮಾನ ರಾಯನಣ್ಣ ಚಂಡಭೂಪನು ಆಕಾಶ ಕಂಡನು ಕಮಲದೊಳ್ ಶಿಶುವ ಆಹ ಅಖಿಳ ಕೋಟಿ ಅಸಮ ಈ ಶಿಶುವನ್ನು ಹೆಂಡತಿ ಧರಣಿಯು ಕೊಂಡಳು ಮಗಳಾಗಿ 9 ಮೂಲೇಶ ನಿನ್ನಯ ರಾಣಿ ಮೂಲಪ್ರಕೃತಿ ಗುಣಮಾನಿ ಭವ ತಾಯಿ ಆಹ ಶೀಲ ಭೂಪಾಲನ ಸುತೆ ಪದ್ಮಾವತಿಯೆಂದು 5 ಬಾಲೇರ ಸಹ ಪುಷ್ಪವನಕೆ ಬಂದಿಹಳೊ 10 ಮಹಿದೇವಿ ಕಮಲವಾಸಿನಿಯು ಬಹಿನೋಟಕ್ಕೆ ರಾಜಸುತೆಯು ಬಹು ಚಿತ್ರ ಪುಷ್ಪವ ಕೊಯ್ಯೆ ಆಹ ಮಹತಿಪಾಣಿಯು ಬಹು ವಯೋರೂಪದಲಿ ಬಂದು ಅಹಿತಲ್ಪ ಶ್ರೀಶನೆ ಪತಿಯೆಂದು ನುಡಿದ 11 ಹಾಟಕಗಿರಿಯಿಂದ ನೀನು ಬೇಟೆಯಾಡುವ ರೂಪ ತಾಳಿ ಘೋಟಕವೇರಿ ಸಂಭ್ರಮದಿ ಆಹ ಆಟವಾಡುವ ಬಾಲೆ ಬಳಿಯಲ್ಲಿ ಬಂದು ನೀ ನಾಟಕವಾಡಿದ್ದು ಪಾಡಲರಿಯೆನೊ 12 ನಿತ್ಯನಿರ್ಮಲ ಅವಿಕಾರ ಮತ್ರ್ಯರವೋಲು ನೀ 1ನಟಿಸೋ ಕೃತ್ಯಗಳರಿವರು ಯಾರೋ ಆಹ ಭೃತ್ಯವತ್ಸಲ ನೀನು ಬಕುಳೆಯ ಬಳಿ ಪೇಳಿ ಸಂತ್ಯಸಂಕಲ್ಪ ನಿನ ಸಂದೇಶ ಕಳುಹಿದೆ 13 ಪೊಂದಿದೆ ಫುಲ್ಕಸೀ ರೂಪ ಮಂಧಜಭವ ಶಿಶುವಾಗೆ ನಂದಿನಿಧರ ಯಷ್ಟಿಯಾದ ಆಹ ಮಂದಜಭವಾಂಡ ಗುಣಗುಲ್ಮ ಮಾಡಿ ನೀ ಕಂಧರದಲಿ ಗುಂಜ ಕಂಬುಸರವ ತೊಟ್ಟೆ 14 ನಾರಾಯಣಪುರಿಯಲ್ಲಿ ಮಾರನಯ್ಯನೆ ನಿನ್ನ ಸುಗುಣ ವಾರಿಧಿ ಪೊಕ್ಕಳು ಪದುಮೆ ಆಹ ಪುರಿಪ ಧರಣೀದೇವೀ ಪುತ್ರಿಗೆ ಜ್ವರವೆಂದು ಪರಿಪರಿ ಪರಿಹಾರ ಪರದು ನೋಡಿದರಾಗ 15 ಶುದ್ಧ ಸುಂದರ ಸುಖಕಾಯ ವೃದ್ಧ ಫುಲ್ಕಸೀ ವೇಷಧಾರಿ ಬದ್ಧ ಶೋಕರ ಬಳಿ ಪೋದೆ ಆಹ ಇದ್ದ ಸುದ್ದಿಯ ಅಬದ್ಧವಿಲ್ಲದೆ ಪೇಳಿ ಮುದ್ದು ಪದ್ಮೆಗೆ ಅನಿರುದ್ಧನೆ ಪತಿಯೆಂದೆ 16 ವಹಿಸಿ ನಿನ ಶಾಸನ ಬಕುಳ ಮಹದೇವನಾಲಯದಿಂದ ಮಹಿಳೆಯರ ಸಹ ಕೂಡಿ ಆಹ ಮಹಿದೇವಿಯಲಿ ಪೋಗಿ ವಿಹಿತ ಮಾತುಗಳಾಡಿ ಬಹು ಶುಭವಾರ್ತೆಯ ತಂದು ಪೇಳಿದಳೊ 17 ಶುಕಮುನಿ ಕರಪ್ರದವಾದ ಆಕಾಶ ನೃಪ ಲಗ್ನಪತ್ರ ಸ್ವೀಕರಿಸಿದೆ ಬಹು ಹಿತದಿ ಆಹ ವಾಗೀಶ ಶಶಿಧರ ನಾಗೇಶ ಸೌಪರ್ಣ ನಾಕೀಶ ಮೊದಲಾದ ಸುರರನು ಕರೆದೆ 18 ಶಿಷ್ಟ ಸನ್ಮುನಿಜನ ಕೂಟ ತುಷ್ಟ ಸುಮನಸ ಸಮೂಹ ಶ್ರೇಷ್ಠಸುಗಂಧಿ ಆಗಮನ ಆಹ ಸೃಷ್ಟ್ಯಾದಿಕರ್ತೆ ನಿನ ಸುಮಹೋತ್ಸವ ನೋಡಿ ಇಷ್ಟಾರ್ಥ ಪಡೆವರು ಎಷ್ಟೆಂಬೆ ವಿಭುವೆ 19 ಮಾಯ ಜಯೇಶ ಶ್ರೀವತ್ಸ ಛಾಯೇಶಗುಪಾಯ ಪೇಳಿ ತೋಯಜೆಯನು ಕರೆತಂದೆ ಆಹ ಸಿರಿ ಕೃತಿ ಕಾಂತಿ ನಿನ್ನಿಂದ ವಿಯೋಗರಹಿತರು ಎಂದೂ ಎಲ್ಲೆಲ್ಲೂ 20 ಬೃಹದಣುವಿಗೆ ಸತ್ತಾಪ್ರದನೆ ಸುಹೃದ ಸಂತೃಪ್ತ ಮುಖಾಬ್ಧೇ ದೃಢವ್ರತ ಶುಕಮುನಿಗೊಲಿದೆ ಆಹ ಬೃಹತೀ ಫಲಾನ್ನವನುಂಡು ಫೂತ್ಕಾರದಿ ಗೃಹ ಬಹಿರದಿ ಇದ್ದ ಜನರ ತೃಪ್ತಿಸಿದೆ 21 ಸುಜನರಿಗಾನಂದ ದಾತ ದ್ವಿಜರೂಢ ಜಗದೀಶ ನೀನು ಅಜಸುರರೊಡಗೂಡಿ ಬರೆ ಆಹ ಅಜಿತ ಚಿನ್ಮಯ ನಿನ್ನ ಆಕಾರ ನೃಪ ನೋಡಿ ನಿಜವಾಗಿ ಕೃತಕೃತ್ಯ ಧನ್ಯ ತಾನೆಂದ 22 ಅಜರ ಮಂದಿರ ಪೋಲ್ವ ಮನೆಯು ಪ್ರಜುವಲಿಸುವ ದಿವ್ಯ ಸಭೆಯು ನಿಜಭಕ್ತ ಪುರುಜನ ಗುಂಪು ಆಹ ದ್ವಿಜರ ವೇದಗಾನ ವಾದ್ಯ ಘೋಷಿಸಲಾಗ ನಿಜಸತಿ ಪದ್ಮೆಗೆ ಮಾಂಗಲ್ಯ ಧರಿಸಿದೆ 23 ಸುರಮುನಿಜನ ಮೂರು ವಿಧಕೆ ತರತಮ ಯೋಗ್ಯತೆ ಆರಿತು ಪರಿಪರಿ ಸಾಧನವಿತ್ತೆ ಆಹ ನೀರರುಹಜಾಂಡವು ನಿನ್ನಾಧೀನವು ಸಿರಿಭೂದೊರೆಯೇ ಶ್ರೀನಿವಾಸ ದಯಾನಿಧೆ 24 ನೀ ನಿಂತು ನುಡಿಸಿದೀ ನುಡಿಯು ನಿನ್ನಡಿಗಳಿಗೆ ಅರ್ಪಣೆಯು ಚನ್ನಮಾರುತ ಮನೋಗತನೆ ಆಹ ವನರುಜಹಾಸನ ತಾತ ಪ್ರಸನ್ನ ಶ್ರೀನಿವಾಸ ನಿನಗೆ ಪ್ರೀತಿಯಾಗಲೊ ಸುಹೃದ ಸಂತೃಪ್ತ 25
--------------
ಪ್ರಸನ್ನ ಶ್ರೀನಿವಾಸದಾಸರು
ರಮಣನಾ ವಿಭವವನು ಅಮಮ ವಿವರಿಪೆ ನಾನು ಕಮಲಾಕ್ಷಿ ಕೇಳ್ನೀನು ಕ್ರಮದೊಳಿದನು ತನಯರೊಳು ಜಡನೊರ್ವನನಂಗನೆ ಮತ್ತೊರ್ವ ವನಿತೆ ಚಂಚಲೆಯಚಲೆಯೆನಿಪರವರು ವಕ್ರಗಮನೆಯೆ ಸುತೆಯು ಚಕ್ರವೆ ನಿಜಾಯುಧವು ಪಕ್ಷಿಯೇ ವಾಹನವು ದಕ್ಷನಿವನು ಶರಧಿಯೇ ಮಂದಿರವು ಉರಗವೇ ಹಾಸಿಗೆಯು ಇರವನರಿಯರದಾರು ಭುವಿಯ ಜನರು ಬರಿಯ ಮಾತಿಗೆ ಮನವು ಕರಗಿದುದಕೆ ಅರಿಯದಾನೈತಂದು ನೆರೆದೆನೇಕೆ ಪರಿಕಿಸಲ್ ಮತಿಭ್ರಮೆಯಿದುವೆ ಸಾಕೆ
--------------
ನಂಜನಗೂಡು ತಿರುಮಲಾಂಬಾ
ಸತ್ಯ ಜಗತಿದು ಪಂಚಭೇದವು,ನಿತ್ಯ ಶ್ರೀ ಗೋವಿಂದನ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಕೃತ್ಯ ತಿಳಿದು ತಾರತಮ್ಯದಿ ಕೃಷ್ಣನಧಿಕೆಂದು ಸಾರಿರೈ ಪ.ಜೀವ ಈಶಗೆ ಭೇದ ಸರ್ವತ್ರ ಜೀವ ಜೀವಕೆ ಭೇದವು |ಜೀವ ಜಡರೊಳು ಭೇದ ಜಡರೊಳು ಭೇದಜಡ ಪರಮಾತ್ಮಗೆ 1ಮಾನುಷೋತ್ತಮರಧಿಕ ಕ್ಷಿತಿಪರು ಮನುಜ ದೇವ ಗಂಧರ್ವರು |ಜಾನಪಿತರಜಾನ ಕರ್ಮಜರ್ದಾನವಾರಿ ತತ್ತ್ವೇಶರು 2ಗಣಪ ಮಿತ್ರರು ಸಪ್ತಋಷಿಗಳುವಹ್ನಿ - ನಾರದ ವರುಣನು |ಇನಜಗೆ ಸಮ ಚಂದ್ರ - ಸೂರ್ಯರು ಮನುಸುತೆಯು ಹೆಚ್ಚು ಪ್ರವಹನು 3ದಕ್ಷಸಮ ಅನಿರುದ್ಧಗುರು ಶಚಿರತಿ ಸ್ವಾಯಂಭುವರಾರ್ವರುಕಕ್ಷಪ್ರಾಣನಿಗಿಂತ ಕಾಮನು ಕಿಂಚಿದಧಿಕನು ಇಂದ್ರನು 4ದೇವ ಇಂದ್ರನಿಗಧಿಕ ಮಹರುದ್ರ ದೇವರಿಗೆ ಸಮ ಗರುಡನು |ಕೇವಲವು ಈಶೇಷ- ರುದ್ರರು ದೇವಿ ಹೆಚ್ಚು ಸರಸ್ವತೀ5ವಾಯುವಿಗೆ ಸಮರಿಲ್ಲ ಜಗದೊಳು ವಾಯುದೇವರೆ ಬ್ರಹ್ಮರು |ವಾಯುಮುಕ್ತಗೆ ಕೋಟಿಗುಣದಿಂದಧಿಕ ಶಕ್ತಳು ಶ್ರೀ ರಮಾ 6ಅನಂತ ಗುಣದಿಂ ಲಕುಮಿಗಧಿಕನು ಶ್ರೀ ಪುರಂದರವಿಠಲನು |ಘನರು ಸಮರೂ ಇಲ್ಲ ಜಗದೊಳು ಹನುಮಹೃತ್ಪದ್ಮವಾಸಗೆ 7
--------------
ಪುರಂದರದಾಸರು
ಸತ್ಯಜಗತಿದು ಪಂಚಭೇದವುನಿತ್ಯಶ್ರೀಗೋವಿಂದನಕೃತ್ಯ ತಿಳಿದು ತಾರತಮ್ಯದಿ ಕೃಷ್ಣನಧಿಕೆಂದು ಸಾರಿರೈ ಪಜೀವ ಈಶಗೆ ಭೇದ ಸರ್ವತ್ರ ಜೀವಜೀವಕೆ ಭೋದವುಜೀವ ಜಡರೊಳು ಭೇದ ಜಡರೊಳು ಭೇದ ಜಡಪರಮಾತ್ಮಗೆ 1ಮಾನುಷೋತ್ತಮರಧಿಕ ಕ್ಷಿತಿಪರು ಮನುಜ ದೇವಗಂಧರ್ವರುಜಾನ ಪಿತರsಜಾನ ಕರ್ಮಜರ್ದಾನವಾರಿ ತತ್ಪೇಶರು 2ಗಣಪಮಿತ್ರರು ಸಪ್ತ ಖಷಿಗಳು ಮಹ್ನಿ ನಾರರವರುಣನುಇನಜಗೆ ಸಮಚಂದ್ರ ಸೂರ್ಯರುಮನುಸುತೆಯು ಹೆಚ್ಚುಪ್ರವಹನು 3ದಕÕಸಮ ಅನಿರುದ್ಧ ಗುರುಶಚಿರತಿಸ್ವಾಯಂಭುವರಾರ್ವರುಕಕ್ಷಪ್ರಾಣನಿಗಿಂತ ಕಾಮನು ಕಿಂಚದಧಿಕನು ಇಂದ್ರನು 4ದೇವ ಇಂದ್ರನಿಗಧಿಕ ಮಹರುದ್ರ ದೇವರಿಗೆ ಸಮ ಗರುಡನುಕೇವಲವು ಈಶೇಷರುದ್ರರು ದೇವಿ ಹೆಚ್ಚು ಸರಸ್ವತೀ5ವಾಯುವಿಗೆ ಸಮರಿಲ್ಲ ಜಗದೊಳು ವಾಯುದೇವರೆ ಬ್ರಹ್ಮರುವಾಯು ಮುಕ್ತಗೆ ಕೋಟಿಗುಣದಿಂದಧಿಕ ಶಕ್ತಳು ಶ್ರೀರಮಾ 6ಅನಂತ ಗುಣದಿಂ ಲಕುಮಿಗಧಿಕನು ಶ್ರೀಪುರಂದರವಿಠಲನುಘನರು ಸಮರೂ ಇಲ್ಲ ಜಗದೊಳು ಹನುಮಹೃತ್ವದ್ಮವಾಸಗೆ 7
--------------
ಪುರಂದರದಾಸರು