ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

* ಶಿಲೆಯಲ್ಲಿ ಮಮತೆಯೇ ಸಿದ್ಧ ಪುರುಷ ಇಳೆಮೂರು ವ್ಯಾಪಕಗೆ ಈ ಮುನಿಯ ಬಳಿಯಾ ಪ. ದಶರಥಾತ್ಮಜ ಸೇತು ಬಂಧನವ ಗೈಯಲೂ ಅಸಮ ಸಾಹಸದಿ ಗಿರಿಗಳನೆ ತಂದೇ ಹಸನಾದ ಶಿಲೆಯೊಂದರಲಿ ರೂಪ ಮೂಡುವಡೆ ವಸುಧಿ ಸುತೆಪತಿ ಬೇಡವೆನುತಿರ್ದನೇನೈ 1 ನಡುಗೆ ಹುಲಿ ಘರ್ಜನೆಗೆ ಪಡೆದವಳ ಕೈ ಜಾರೆ ವಡೆದು ಶತವಾಗಲಾ ಗಿರಿಯಲ್ಲಿ ಮಮತೇ ವಡಮೂಡದವಗೆ ಈ ವಡೆದ ಪ್ರತೀಕದಲಿ ಇಡುತ ಅಭಿಮಾನವನು ಕಡು ಪೂಜೆಗೊಂಬೇ 2 ಧರೆಯಲ್ಲಿ ಚರಿಸಿ ಸದ್ಭಕ್ತರ ಜ್ಞಾನವನು ಹರಿಸಿ ಸಧ್ಗ್ರಂಥ ಕನ್ನಡಿಯ ತೋರಿ ಗಿರಿ ಏರುವಾಗ ಬೇಕೆನಲು ಶಿಲೆ ಇರಲಿಲ್ಲೆ ಬಿರುಕಾದ ಕಲ್ಲಿನಲ್ಲಿ ನೆಲಸಿರುವದೇನೈ 3 ಶಿಲೆಯೆ ನೀನೆನ್ನಲು ಅಜ್ಞಾನಿ ನುಡಿಯಹುದು ಶಿಲೆಯಲ್ಲಿ ನೀನೆಲು ಮತ್ತೊಂದು ಶಿಗದೇ ಬಲು ಛಿದ್ರ ತಂತಿಯಲಿ ಬಿಗಿಸಿ ಪೂಜೆಯಗೊಂಬ ಬಲವಂತದಾ ಮಹಿಮೆ ತಿಳಿಯಲಳವಲ್ಲಾ 4 ತಾಪಸರ ಪೂಜೆ ಸತ್ವವ ತೋರ್ವ ವೈಭವವೋ ಆಪನ್ನರನೆ ಕಾಯ್ವ ಆನಂದವೋ ಶ್ರೀ ಪರಮಹಂಸ ಪ್ರದ್ಯುಮ್ನತೀರ್ಥರಿಗೊಲಿದೆ ಗೋಪಾಲಕೃಷ್ಣವಿಠ್ಠಲನ ನಿಜದಾಸ 5
--------------
ಅಂಬಾಬಾಯಿ
ಪರಿಭವ ತಾಪಹರಣ ಪ ದಯದಿ ಯುವತಿಯಕುಲ ಉದ್ಧಾರಣ ಜವದಿ ಕರಿಧ್ರುವಬಂಧಮೋಚನ ಯುವತಿಗಕ್ಷಯವಿತ್ತು ಒಲಿದು ಹಯವ ಪಿಡಿದು ರಥವ ನಡೆಸಿದ ಭುವನ ಬ್ರಹ್ಮಾಂಡ ಸೂತ್ರಧಾರಕ ಶಿವಸುರಾರ್ಚಿತ ಪೊರೆ ಸುಹೃದಯ ಅ.ಪ ಪತಿತಪಾವನ ಶ್ರೀಶಕೇಶವ ಸಹಸ್ರಾಕ್ಷಶಯನ ಮಾಧವ ಭೋಗ ಗರುಡಗಮನ ಪತಿತಪಾವನೆ ಇಂದಿರೆಂiÀi ಜೀವ ಜಗದಾದಿದೇವ ಯತಿತತಿನುತ ಪವಿತ್ರನಾಮ ಕ್ಷಿತಿಸುತೆಪತಿ ಪವಿತ್ರ ಮಹಿಮ ಸತಿಯರವ್ರತಹರ ಜಿತಮಹಮುಪ್ಪುರ ಕೃತ್ರಿಮ ಮುರಹರ ಮಥನಸಾಗರ ನುತಿಪರ್ಹಿತಕರ ಸುಪಥರಾಧಾರ ಹಿತದಿ ಪೊರೆಯೆನ್ನ ಕರುಣಾನಿಕರ 1 ನಿರುತ ಜನರ ಕಲ್ಪತರು ನೀನು ಭಯಭಕ್ತಿಯಿಂದ ಸ್ಮರಿಸಿ ಬೇಡ್ವರ ಪರಮಸುರಧೇನು ಸುರಗಂಗಾಜನಕ ಶರಣು ಸಜ್ಜನರಮಿತ ದಯಾ ಪರನು ವಿಶ್ವರಕ್ಷಕನು ಮರಣರಹಿತ ಮದನತಾತ ಶುಭ ಸಚ್ಚರಿತ ದುರುಳ ಸಂಹರ ಶರಣುಮಂದಾರ ಸುಗುಣರೋದ್ಧಾರ ಶರಣಭಜಕರ ವರಸುಖಕರ ಕರಣಿಸಭವನೆ ತ್ವರಿತ ಸುವರ 2 ಕುಸುಮನಯನ ಸ್ವತಂತ್ರ ಮಹಲೀಲ ದಿವಕೋಟಿ ಪ್ರಭಾಕರ ಕುಸುಮಗಾತ್ರ ಮಹತಂತ್ರ ಮಾಯಜಾಲ ಗೋವರ್ಧನೋದ್ಧಾರ ಕುಸುಮಧರ ಕುರುಕುಜನಕುಲಕಾಲ ಗೋಪಾಲಬಾಲ ಕುಸುಮನಾಭ ಕೌಸ್ತುಭಾಂಬರ ಅಸಮ ತುಲಸಿಮಾಲಾಲಂಕಾರ ಒಸೆದು ದಾಸನ ಪುಸಿಯೆಂದೆನಿಸದೆ ಹಸನುಮತಿಯಿತ್ತು ಪೋಷಿಸನುದಿನ ಎಸೆವ ತವಪಾದ ನಂಬಿ ಮರೆಬಿದ್ದ ಅಸಮದಯಾನಿಧಿ ಮಮ ಶ್ರೀರಾಮ 3
--------------
ರಾಮದಾಸರು
ಪಾಲಿಸು ಮರೆಯದೆನ್ನ ಪಾಲ ತ್ರಿಜಗಮೋಹ ಮಾಲಕೌಸ್ತುಭ ಸತ್ಯಭಾಮಾ ಲೋಲ ಭಕ್ತಜನರ ಪ್ರೇಮ ಕಾಲಕಾಲದಿ ನಿಮ್ಮ ಭಜನಲೋಲಜನರೊಳಿರಿಸಿ ಎನ್ನ ಬಾಲನೆಂದು ಕರುಣದಾಳು ಕಾಳರಕ್ಕಸಕುಲಸಂಹಾರ ಪ ವಾರಿಧಿಯೊಳು ಮುಳುಗಿದ ವೇದಗಳ ತಂದು ವಾರಿಜಾಸನಗೊಪ್ಪಿಸಿದಿ ಸಾಧುಗಳ ಬಂಧು ವಾರಿಧಿಯೊಳು ವಾರಿಧಿಯ ಕಡೆದಿ ವಾರಿಧಿಯೊಳು ವಾಸನಾದಿ ವಾರಿಧಿಸುತೆಪತಿ ನೀನಾದಿ ವಾರಿಧಿಯನು ಬಂಧಿಸಿ ಮತ್ತೆ ವಾರಿಧಿಯ ಮಧ್ಯದ ಪುರವ ಸೂರೆಗೈದಾಪಾರಮಹಿಮ ಘೋರತಾಪದಿ ಬಿಡದೆ ದೇವ1 ಮಾಯಾಜಗವ ತುಂಬಿದಿ ಮಹರಮಣ ಹರಿಯೆ ಮಾಯದ ಮರುಣುಣಿಸಿದಿ ವೈಕುಂಠಪತಿಯೆ ಮಾಯೆಗೆ ಮಾಯೆಯೆನಿಸಿದಿ ಮಾಯೆಹರನಾದಿ ಮಾಯದಿಂ ಬಲಿಯನ್ನು ತುಳಿದಿ ಕಶ್ಯಪನ ಅಳಿದಿ ಮಾಯದ್ಹಿರಣ್ಯಕನ ಸೀಳಿದಿ ಮಾಯದಿಂ ಮಾಯೆಮೂಗು ಕುಯ್ಸಿದಿ ಮಾಯಮೃಗವನು ಮಾಯದಿಂ ಕೊಂದಿ ಮಾಯದೆನ್ನ ನೂಕದೆ ದೇವ 2 ಕಪಟಕೋಟಿಗಳನ್ನಳಿದಿ ಚಪಲಸುರಪನ ಕಪಟಗರುವವ ಮುರಿದಿ ಲಕುಮಿರಮಣ ಕಪಟನಾಟಕ ನೆನಿಸಿದಿ ಕಪಟಹರನಾದಿ ಕಪಟ ಅಸುವ ಸೆಳೆದಿ ಕಪಟ ಕಂಸನ ಶಿರವಮೆಟ್ಟಿದಿ ಕಪಟಿಗಳ ಮಹ ಕಪಟದಿಂ ಕೊಂದಿ ಶ್ರೀರಾಮ3
--------------
ರಾಮದಾಸರು