ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂದಕುಮಾರಾ ಮುಕುಂದಾ ಜನಾರ್ದನ ಮಂದರಧರ ಗೋವಿಂದ ಹರೇ ಪ ಸುಂದರ ಗೋಪಿ ಮಾಧವ ಕೇಶವಪತೇ ನಮೋ ಸಾಮಜಪಾಲನ ನಾಮಾ ನಮೋ ಭೂಮಿ ಸುತಾನ್ವಿತ ರಾಮಾ ನಮೋ ನಮೋ ಕಾಮಿತದಾತಾ ಪರೇಶಾ ನಮೋ ನಮೋ 1 ಅಕ್ಷಯಾತ್ಮ ಸುರಪಕ್ಷಾ ನಮೋ ನಮೋ ಪಕ್ಷಿಗಮನ ಪದುಮಾಕ್ಷಾ ನಮೋ ನಮೋ ಲಕ್ಷರೂಪ ಖಳಶಿಕ್ಷಾ ನಮೋ ನಮೋ [ರಕ್ಷಕ ಪಾಂಡವ ಪಕ್ಷ ನಮೋ] 2 ತುಂಗ ಕೃಪಾಂಬಕ ರಾಮಾ ನಮೋ ನಮೋ [ಮಂಗಳದಾಯಕ ಕೃಷ್ಣನಮೋ] ಅಂಗಜಾತ ಪಿತ ರಂಗ ನಮೋ ನಮೋ ಮಾಂಗಿರಿವಾಸ ಕೃಪಾಂಗಾ ನಮೋ ನಮೋ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕಾಮಿತವನು ಪಡಿಯೋ ಪ ಈ ಮಹಿಯೊಳು ರಘುವೀರ ತೀರ್ಥರ ಕರ- ತಾಮರಸೋದ್ಭವರೆನಿಸಿ ಮೆರೆದ ಗುರು ಅ.ಪ ಧರೆಸುತ ಮಂಡಿತ ಸುರಪುರದಲಿ ದ್ವಿಜ ವರ ಕುಲದಲಿ ಜನಿಸಿಯಳಿಮೇ- ಲಾರ್ಯರ ಬಳಿಯಲಿ ಶಬ್ದಾವಳಿ ಶಾಸ್ತ್ರವ ಪಠಿಸಿ ಇಳಿಸುರನುತ ಕರ ಜಲಜೋದ್ಭವ ರೆನಿಸಿ ಕಲಿತು ಗುರುಮುಖದಿ ಮರುತ ಶಾಸ್ತ್ರವನು ತಿಳಿಸುತ ಬುಧಜನ ರೊಲಿಸಿದಂಥ ಗುರು 1 ಹೇಮಮಂಟಪದಿ ಭೂಮಿ ಸುತಾನ್ವಿತ ರಾಮನ ಪೂಜಿಸು ತಾ ಶ್ರೀಮನ್ಮಧ್ವಕ ರಾಬ್ಜಾದಾಗತ ಸೌಮಿತ್ರಿಯ ಸಹಿತ ಸಾಮವ ಪಠಿಸುವ ಭೂಮಿಸುರಜನ ಸ್ತೋಮದಿ ಶೋಭಿಸುತ ಧೀಮಜನರಿಗೆ ಪ್ರೇಮದಿಂದ ಮೃಷ್ಟಾನ್ನದಾನ ಸನ್ಮಾನ ಮಾಡುತಿಹ 2 ಭೂತಳದಲಿ ಸುಕ್ಷೇತ್ರ ಬಹು ಆರ್ಥ ಯಾತ್ರಿಗಳಾ ಚರಿಸಿ ಭೂತಬಾಧೆ ರೋಗಾತುರ ಜನಗಳ ಭೀತಿಯ ಪರಿಹರಿಸಿ ಶಾಸ್ತ್ರಸುಧಾರಸ ಸತ್ಯಮೋದ ಯತಿ- ನಾಥರಿಂದ ಗ್ರಹಿಸಿ ಖ್ಯಾತ ಕಾರ್ಪರ ಕ್ಷೇತ್ರದಿ ನರಮೃಗನಾಥನ ಪ್ರೀತಿಗೆಪಾತ್ರರೆನಿಸಿರುವ 3
--------------
ಕಾರ್ಪರ ನರಹರಿದಾಸರು
ದಿನಮಣಿ ಕುಲಜಾತಾ ಪ್ರತಾಪ ಪ ಜನಕಸುತಾನ್ವಿತ ಮುನಿಕುಲಸನ್ನುತ ಶರಣಾಗತ ವರದಾತಾ ವಿನೀತಾ ಅ.ಪ ದುರುಳ ಖರಾರಿ | ಪಾವನ ಶೌರೀ | ದಶಕಂ ದರ ಮದಹಾರಿ | ಉದಾರೀ 1 ಜಗದಭಿರಾಮಾ ರಘುಕುಲ ಸೋಮಾ ಮರುತಾತ್ಮಜಮನಧಾಮ ಸುನಾಮ2 ಮಾಂಗಿರಿಮಂದಿರ ದೀನ ಕೃಪಾಕರ ಪೀತಾಂಬರಧರ ಮಾರಶರೀರಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸನ್ನುತ ನಮೋಸ್ತು ಜಗದಾಧಾರಾ ಪ ನಮೋಸ್ತು ಮೀನ ಶರೀರಾ ಅ.ಪ ನಮೋಸ್ತು ಕೌಸ್ತುಭಧರಾ ಕೂರ್ಮ ಶರೀರಾ 1 ಮೃಗೇಂದ್ರ ಸದ್ಯುಶಾ ಶ್ರೀಪತೇ ವರಾಹ ರೂಪ ನಮೋಸ್ತುತೇ 2 ತಲ್ಪ ವಿರಾಜಿತೇ ಸನ್ನುತ ನೃಸಿಂಹರೂಪ ನಮೋಸ್ತುತೇ 3 ಪುರಂದರ ಫಲಪ್ರದಾ ಸಕಲೇಷ್ಟದಾ ನಮೋಸ್ತು ವಾಮನ ಶ್ರೀಕರಾ4 ರಮಾಮನೋಹರ ಶ್ರೀಹರೇ ಭಂಜನ ನಮೋಸ್ತು ಪರಶುಧರಾಹರೇ 5 ಪ್ರದೀಪ ಹನುಮತ್ಸೇವಿತ ಭವ ವಿನಾಶ ಭೂಮಿಸುತಾನ್ವಿತಾ 6 ಕೃಪಾಕರಾ ಪಶುಪಾಲಕಾ ಪ್ರವೀಣ ಗೋಪಬಾಲಕಾ 7 ಪಿತಾಯ ವ್ರತ ನಿರ್ಮೂಲತೇ ಬುದ್ಧ ಶರೀರತೇ 8 ಧರ್ಮೋದ್ಧರಾಯ ತುರಂಗ ವಿರಾಜತೇ ಗಮನ ಸುರೇಶ ಕಲ್ಕಿ ಮಹಾತ್ಮತೇ 9 ಪರ್ವತಧರ ಧರಾಯ ನೃಸಿಂಹತೇ ಪ್ರಬುದ್ಧಕಲ್ಕಿ ದಿಶಾಕಲತೇ 10 ಶುಭಾಂಗ ಗರುಡ ತುರಂಗತೇ ನಾರಾಯಣಾಯ ಭಕ್ತೋದ್ಧಾರತೇ 11
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್