ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವಬಂಧುಗಳೆಲೋ ಜೀವ ವಿಚಾರಿಸೋ ಕಾವ ಸಮರ್ಥದೇವ ಹರಿಯಲ್ಲದೆ ಪ ಮಾಯಮೋಹವ ನೀಗಿ ಕಾಯಶುದ್ಧಲಿ ಮನ ಪಾದ ದಿವ್ಯಭಕ್ತಿಲಿ ಭಜಿಸೊ ಅ.ಪ ಜನನಿ ಬಂದಹಳೆಂಬೆ ಜನನಿರ್ದಳಾಧ್ರುವಗೆ ಜನಕನ ತೊಡೆಯಿಂದ ಕನಿಕರಿಲ್ಲದೆ ಮಲ- ಜನನಿ ನೂಕಲು ಕಂದ ವನಕ್ಹೊರಟು ಪೋಗಲು ಜನನಿ ಸಲಹಿದಳೆನೋ ವನಜಾಕ್ಷನಲ್ಲದೆ 1 ಸತಿಹಿತದವಳೆನುವೆ ಸತಿಯಿರ್ದು ಸುಗ್ರೀವ ಖತಿಪಟ್ಟಾಗ್ರಜನಿಂ ವ್ಯಥೆಯಿಂದುಸುರ ಬಿಡಲು ಸತಿಬಂದು ಪತಿಯನ್ನು ಹಿತದಿ ಕರೆದೊಯ್ದಳೆ ಹಿತದ ಬಂಧುಗಳಿವರೇ ಕ್ಷಿತಿಪತಿಯಲ್ಲದೆ 2 ಸುತರ ಬಲವಿಹುದೆನುವೆ ಸುತರತಿ ಬಲಾನ್ವಿತರು ಜಿತಮಾರನಿಗಿರೆ ಉರಿಹಸ್ತ ವರವಿತ್ತು ಗತಿದೋರದಿರುತಿರೆ ಸುತರು ನೆರವಾದರೆ ಗತಿ ರಮಾಪತಿಯೆನೆ ಹಿತದಿಂ ಮೊರೆಕಾಯ್ದ 3 ಬಂಧುಗಳತಿಶಯದ ವೃಂದನೆರೆದು ಇರ ಲಂದು ಕರಿಮಕರಿಕೆಯಿಂದ ಬಂಧನ ಪಡಲ ವಂದು ಬೆಂಬಲಗೊಟ್ಟು ಬಂಧನವ ಬಿಡಿಸಿದುವೆ ತಂದೆಯಾ ಶ್ರಿ ಮುಕ್ಕುಂದನಲ್ಲದಲೆ 4 ಹರಿಯೆ ಪರದೈವವೋ ಹರಿಯೆ ಪರಲೋಕವು ಹರಿಯೇ ಸ್ಥಿರಸುಖವು ಹರಿಯೆ ವರ ಮುಕ್ತಿಯೋ ಹರಿಯೆಂದು ಅಜಮಿಳ ನರಕಯಾತನೆ ಗೆದ್ದ ಪಾದ 5
--------------
ರಾಮದಾಸರು
ಬರುವುದೆಲ್ಲ ಬರಲಿ ಸಿರಿಹರಿಯ ಕರುಣವಿರಲಿ ಪ. ಗುರುಗಳ ಚರಣಸರೋರುಹ ಮಧುರಸ ತರತರ ತಪದಿ ಮೈಮರೆತಿರಲಿ ಅ.ಪ. ಸತಿಯ ಮತಿಯು ಕೆಡಲಿ ಸುತರತಿಪತಿತರಾಗಿ ಬರಲಿಜೊತೆಯೊಳಿದ್ದ ಹಿತ ಪ್ರತಿಕೂಲನಾಗಲಿವತನ ಕೆಡುವ ಪ್ರಯತ್ನವು ಬರಲಿ 1 ಸತಿ ಭಾರ ಸಮರ್ಪಿಸಲಿವಿರಸಮಾಡಿ ಮನೆ ಮುರಿಸುತ ಬರಲಿ 2 ಮಾನಮಾಡದಿರಲಿ ಜನರಪಮಾನ ಮಾಡಿ ನಗಲಿಜ್ಞಾನಹೀನನೆಂದೆನುತ ನಿಂದಿಸಲಿಶ್ರೀನಿಧಿ ಗೋಪಾಲವಿಠಲ ಬೆರಿಲಿ 3
--------------
ಗೋಪಾಲದಾಸರು
ಮೊಚ್ಚೆ ಮೊಚ್ಚೆಲಿ ಹೊಡೆಯಿರಿ ಇವನ | ನೆಚ್ಚಿದೆತನುವಿದನೆಂಬುವನ || ಹುಚ್ಚ ನಾಯಿಯೋಲ್‍ಎಚ್ಚರವಿಲ್ಲದೆ | ಅರ್ಚಕ ಜನರನು ಬೊಗಳುವನ ಪ ಪರ ಉಪಕಾರಿಲ್ಲದ | ಮಾನುಷನಾಗಿಬಾಳುವನ || ತಾ ಅಜ್ಞಾನ ಮಾರ್ಗದಿ ನಡೆದು |ಜ್ಞಾನವ ಪರರಿಗೆ ಹೇಳುವನ 1 ಸತಿಸುತರತಿಶಯ ಹಿತವರು ಎನುತಲಿ | ಸತತವು ಅವರೊಳುಮರಗುವನ | ಮಿತಿಯಿಲ್ಲದೆ ಧನಧಾನ್ಯವ ಬೇಡುತ |ಕ್ಷಿತಿಯ ಮೇಲೆ ತಿರುಗುವನ2 ಕರುಣವ ಪಡೆಯದೆ ಭವತಾರಕನ | ನರ ತನುಗಳನುಸ್ತುತಿಸುವನ | ಪರಿಪರಿ ಸಂಸಾರದ ವಿಷಯದಲಿ |ನಿರುತದಿ ಮನವನು ಮಥಿಸುವನ 3
--------------
ಭಾವತರಕರು
ಮೊರೆ ಕೇಳು ನೀನೆನ್ನ ಕರುಣದಿ ತವಪಾದ ಪರಮಭಕ್ತಗಗೊಲಿಸದಿರು ದೇವ ಚರಣದಾಸರ ಕಾವ ಸಿರಿಯ ಸಖಜೀವ ಪ ಕ್ಷಿತಿಯೊಳು ಸತಿಸುತರತಿ ಮೋಹರತಿಯೊಳು ಮತಿಶೂನ್ಯನೆನಿಸಧೋಗತಿಗೆಳೆಸದೆ ಪತಿತಪಾವನ ನಿಮ್ಮ ಶ್ರುತಿಭೋದ್ವ್ಯಾಕ್ಯದಭಿ ರತಿಯನೆನ್ನೊಡಲೊಳು ನೆಲೆಸೀಶಾ ಹತಕಂಸ ಸುರತೋಷಾದ್ವಿತಿ ಪಂಚಶಿರ ನಾಶ 1 ವಿಷಯ ವಾಸನದೇಳಸ್ವಿಷಮ ಸಂಸಾರವೆಂಬ ಮುಸುಕಿದ ಮಡುವಿನೊಳ್ಮುಳುಗಿಸಿದೆ ವಸುಧೆಯೊಳಸೆವ ಆ ಅಸಮಹಿಮನ ಪಾದ ದಾಸರ ಸಂಗ ನೀಡ್ವಿಮಲಾಂಗ ಭಂಗ ಕುಸುಮಾಕ್ಷ ಕೃಪಾಂಗ 2 ಮದನಕದನದಿ ಮುದಸುಖವಿಧಿಸಗ ಲ್ಹೋದ ಸುದತಿಯಳ ನೆನೆವಂತೆ ಪಾದ ಸದುಭಕ್ತಿ ಹಂಬಲ ಅಗ ಲದಿರಿಸು ರಘುಕುಲಸೋಮ ಸದುಭಕ್ತರ ಪ್ರೇಮ ಸುದಯನೆ ಶ್ರೀರಾಮ3
--------------
ರಾಮದಾಸರು