ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಮಂಗಳಂ ಮಹಾ ಶುಭಮಂಗಳಂ ಶ್ರೀಯಕರಾನಂದ ಘನಚಿನ್ಮೂರ್ತಿಗೆ ಪ ಅನಿಮಿಷಾಕ್ಷಗ ಧರಮಹೀಗ ಸಂಭೋದ್ಬವಗ ಮುನಿಪಟು ಕ್ಷತ್ರಿ ಕುಲಸಂಹಾರಗ ಇನಕುಲೋದ್ಭವ ವಾಸುದೇವಶ್ರೀ ಬೌದ್ಧಗ ಘನತರದ ತುರಗ ಹರರಾವುತಂಗೆ 1 ಮರಮತ್ಸ್ಯ ಶ್ರೀಕಮಠ ಹಿರಣ್ಯಕ್ಷಮರ್ಧನಗೆ ಕೊರಳೊನಮೂಲಿ ವಾಮನದೇವಗೆ ಧರಿ ಭೂಸುರಗಿತ್ತು ಧಾಶರಥಿ ಶ್ರೀ ಹರಿಗೆ ಸಿರಿದಿಂಗಬರ ಕಲ್ಕಿ ಯವತಾರಗೆ 2 ಕೂರ್ಮ ವರಾಹನರಸಿಂಹಗೆ ಅಗವೈರಿಯನುಜ ಪರಶುರಾಮಗ ರುಘುನಾಥ ಕೃಷ್ಣ ಬೌದ್ದೇಶಕಲಿನಾಶಗ ಜಗದ್ಗುರು ಮಹಿಪತಿ ಸುತಪ್ರಿಯಗೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದೋರನು ಬ್ರಹ್ಮಾದಿಕರಿಗೆ ಪ ದುಷ್ಟತನವ ಮಾಡಲು ಮನಿಮನಿ ಪೊಕ್ಕು| ಸಿಟ್ಟಿಲೆ ಕಣ್ಣಿಲೆ ಚರಣವನು| ಕಟ್ಟಲು ಒರಳನೆಳೆದುಕೊಂಡು ಹೋಗಿ| ನೆಟ್ಟನೆರಡಮರಕೆಡಹಿದ ಕೃಷ್ಣಾ 1 ಮಣ್ಣವನುಂಗಲು ಮುಳಿಯಲು ಗೋಪಿ| ಚಿಣ್ಣರ ಕೇಳೆ ನಾನಿಲ್ಲೆನುತ| ಸಣ್ಣ ಚೆಲುವಾ ಬಾಯಾ ನೋಡೆಂದು ತೆರೆದು ತಾ| ಉನ್ನಂತ ಬ್ರಹ್ಮಾಂಡ ದೋರಿದಾ ಕೃಷ್ಣಾ2 ನೋಡು ಬಾಲಕ ರೂಪ ತಾನಾಗಿಹಾ| ಪ್ರೌಢತನದಿ ಕೊಳಲನೂದಿ| ರೂಢಿಲಿ ಗೋಪಿಕ ಮನಸೆಳೆದು ನಲಿ| ದಾಡುವ ಮಹಿಪತಿ ಸುತಪ್ರಿಯ ಕೃಷ್ಣಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮನವೇ ಕೊಬ್ಬ ಬ್ಯಾಡ ಉಬ್ಬ ಬ್ಯಾಡಾ ಪ ನೆನುವಿನೊಳಿಟ್ಟು ಮಾನುಭಾವರ ಚರಣ ಕಮಲವನು ಜನುಮ ಸಾರ್ಥಕವನು ಮಾಡು ಕಂಡ್ಯಾ ಅ.ಪ ವಿದ್ಯೆ ವಶವಾದರೆ ನೀ ತಿದ್ದಿ ಕಲಿಸು ಆರ್ತರಿಗೆ | ಬುದ್ಧಿವಂತರ ಕೂಡಾ ತರ್ಕಸ್ಯಾಡ ಬೇಡಾ ನೋಡಬ್ಯಾಡಾ | ಉಧೃತ ಶಕ್ತಿಯ ಬಲದಿಂದ ಸಂತ ಸೇವೆ ಮಾಡು | ಗುದ್ದಿ ಹೆಟ್ಟಿ ಪರರ ಪೀಡಿ ಕುಡಬ್ಯಾಡಾ ಮಾಡಬ್ಯಾಡಾ | ಮುದ್ದಿ ಘನವಾದರ ಸತ್ಪಾತ್ರಕ ನಿವೇದಿಸು | ಮದ್ದು ತಿಂದು ನುಡಿವವನಂತ ಪರರ ದೋಷ ಗುಣಾ | ಬದ್ಧವಚನವ ನುಚ್ಚರಿಸದಿರು 1 ರಾಜಮುದ್ರಿಯ ನೆವದಿ ಉದರ ತುಂಬಲಾಗಿ ನೀತಿ ಬಿಟ್ಟು | ಈ ಜನರನಾ ದಂಡಿಸುವದಲ್ಲಾ ಇದುಸಲ್ಲಾ | ಆ ಜನ ಹೊಟ್ಟೆ ಹಾಕಿ ಬರೆಗೈಯ್ಯ ಹೋಗುವಂತೆ | ನೀ ಜಯಿಸಿ ಬಂದದಲ್ಲಾ ಸಂದದಲ್ಲಾ | ತ್ಯಾಜದಿಂದ ದೊಡ್ಡವ ನೀನೆಂದು ಸೆಜ್ಜಿ ತೆನೆಯಂತೆ | ಸುಜನರೊಳಗ ಗರ್ವ ಹಿಡಿಯದಿರು ಪಡೆಯದಿರು | ವಾಜಿಯಲಿ ನವಣಿ ತೆನೆಯಂತ ಬಾಗಿ ನಡೆದರೆ| ಶ್ರಿ ಜನಾರ್ಧನ ರಕ್ಷೀಸುಚ ಕಂಡ್ಯಾ 2 ಜರಿದು ಕೈಯಲ್ಲಿಂದ ಸಬಕಾರ ನೀರೊಳಗ ಬಿದ್ದ | ತೆರದಿಂದ ತಿರುಗಿ ತಿರುಗಿ ಯಾತಿಗಳನು | ಭರದಿಂದ ಕಡಿಯಲಿ ಪುಣ್ಯ ಫಲ ವಶದಿಂದ| ನರದೇಹವನು ತಾಳಿ ಬಂದಿ ನೀನು ತಿಂದಿ ನೀನು | ತ್ವರಿತ ಸುತಪ್ರಿಯ ಗುರು ಮಹಿಪತಿ ಚರಣಕ | ಮೊರೆ ಹೊಕ್ಕು ಗತಿ ಪಡೆ ಭಾವದಿಂದ ಜೀವದಿಂದ | ಧರೆಯೊಳು ಗಾಳಿಯೊಳಗಿನ ದೀಪ ತೋರುವಂತೆ | ಸ್ಥಿರವಲ್ಲಾ ಆಗಲ್ಹೋ ಈಗಲಿದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮೂರ್ತಿ ಶ್ರೀಗಣರಾಯಗೆ ಪ ಶರ್ವಾಣಿಸುತ ಚತುರ್ದಶ ವಿದ್ಯದಾಗರ | ಸರ್ವಗುಣಾಂಬುಧಿ ಗಜಮುಖಗೆ | ಊರ್ವಿಯೊಳಗೆ ತನ್ನ ಚರಣವ ನೆನೆವರ | ನಿರ್ವಿಘ್ನದಲಿ ಕಾವ ದಯಾನಿಧಿಗೆ 1 ರನ್ನ ಮುಕುಟ ದಿವ್ಯ ಕುಂಡಲಧಾರಿಗೆ | ಪನ್ನಗ ಭೂಷಣ ಚತುರ್ಭುಜಗೆ | ಸನ್ನುತ ಪರಶಾಂಕುಶವನು ಪಿಡಿದಗೆ | ಮೂಷಕ ವಾಹನಗೆ 2 ಸಮಚರಣಾಂಬುಜ ಸುರವರವಂದ್ಯಗೆ | ಕಮಲಸಕನ ತೇಜ ಗೆದ್ದವಗೆ | ವಿಮಲ ಮತಿಯ ನೀವ ಸಿದ್ದಿಧೀರೇಶಗೆ | ನಮೋಎಂಬೆ ಮಹೀಪತಿ ಸುತಪ್ರಿಯಗೆ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು