ಒಟ್ಟು 11 ಕಡೆಗಳಲ್ಲಿ , 1 ದಾಸರು , 11 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದ್ದರಿರಬೇಕು ಅನುದಿನಾ | ಒಳ್ಳೆವರ ಸಹವಾಸಾ ಪ ಅಂಗಸಂಗಗಳಿಂದ | ಮಂಗಳೋತ್ಸಾಹವಾಗಿ | ಕಂಗಳಿಗಿದಿರಿಡುವದು ಉಲ್ಹಾಸಾ1 ಸಾರಿ ಬೀರಿ ಬೋಧವಾ | ದಾರಿದೋರಿ ಭಕ್ತಿಯಾ | ದೂರ ಮಾಡುವರು | ಭವಭಯ ಕ್ಲೇಶಾ 2 ಗುರುವರ ಮಹಿಪತಿಸುತಪ್ರಭು ಸ್ಮರಣೆಯಾ | ಮರಹು ಮರೆಸುವರದರುದ್ದೇಶಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏಳುತಲಿ ಎದ್ದು ಎಚ್ಚರಿಸುತ ನೀ ನೆನೆಯೊ | ಪಾಲಿಸುವ ಮೂಲೋಕ ಪರಮಾತ್ಮನಾ ಪ ಮೂರೊಂದು ಪದರದ ಚೀಲದೊಳು ಥಳಥಳಸಿ ದೋರುತಿಹ ರತ್ನ ಪರಿಚಿದ್ರೂಪನಾ | ಅರಿಗಳ ವಡೆದ ಘನ ತ್ರಿವೇಣಿ ತೀರದಲಿಹ | ಧೀರಯೋಗಿಯ ಕಂಗಳಾನಂದನ 1 ಬೇರು ಮೇಲಾಗಿ ಕೊಂಬುಗಳು ಕೆಳಗಾದ ಸಂ | ಸಾರ ವೃಕ್ಷವ ತ್ರಿಗುಣಮಯದಿಂದಲಿ || ವಾರಿಜಭವಾಂಡ ಪಿಂಡಾಂಡಗಳ ಪರಿಪರಿಯ | ತೋರಿ ತೋರದಲಿಪ್ಪ ನಿರ್ಲಿಪ್ತನಾ2 ನೋಡಿಸುವ ಕೇಳಿಸುವ ವಾಸಿಸುವ ಪರಿಮಳವ | ಆಡಿಸುವ ಕರಚರಣ ನುಡಿನುಡಿಸುವ | ರೂಢಿಯೊಳು ಸೂತ್ರಧಾರಕನಾಗಿ ಅಷ್ಟದಳದ | ಲಾಡುತಿಹ ಮಹೀಪತಿ ಸುತಪ್ರಭು ಭಕುತಿಯಲಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಒಳ್ಳಾದು ಬರುತಾದೆ ಒಳ್ಳಾದು ಬರುತಾದೆ | ಒಳ್ಳಾದು ಬರುತಾದೆ ಕೈಯ್ಯದೋರೆ | ಗೋಪೆಮ್ಮ ಕೈಯ ನೋಡೇನು ಪ ಹೆತ್ತವಸರ ಬುಟ್ಟಿ ಹೊತ್ತದಿವ್ಯಂಬರ ಕೊರವಿ | ಉತ್ತಮದಾ ನುಡಿಗಳನು ಸತ್ಯಾಪುರದಿ ಹೇಳಬಂದೆ | ಕೈಯ್ಯದೋರೆ 1 ಮಥುರಾನಗರದಲ್ಲಿ ಮದನಮೋಹನಾ ಜನಿಸಿ | ಸದೆದು ಕಂಸಾದ್ಯರೆಲ್ಲಾ | ವದಗಿ ಹರಿವಾ ಕರಿಯಾ ನಿಮ್ಮ | ಕೈಯ್ಯದೋರೆ 2 ವರ ಉಗ್ರಶೇನನಿಗೆ ಅರಸು ತನವಾ ಕೊಟ್ಟು | ಪರಿ ಕರುಣೆಯಿಂದಾ | ಶರಣರನು ಹೊರೆವ ನಮ್ಮಾ ಕೈಯ್ಯದೋರೆ 3 ಮೌನಾಕಾ ವಲಿಗೆ ಹಾಕಿ | ತಾನು ಗೋಕುಲದಿ ಬೆಳೆದು ನಾನಾ ಉಪಾಯದಿ ಬಂದಾ | ದಾನವರ ಗೆದ್ದಾ ನಮ್ಮ | ಕೈಯ್ಯದೋರೆ 4 ಭಾರ ನಿಳುಹಲಾಗಿ | ಮಹಿಪತಿ ಸುತಪ್ರಭು | ಮಹಿಮೆ ದೋರ ಬಂದಾನಮ್ಮ | ಕೈಯ್ಯದೋರೆ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯದೇವ ಜಯದೇವ ಜಯಗುರು ಮಹೇಶಾ ಭಯವನಿವಾರಿಸಿ ಶ್ರಯಕುಡು ನೋಡದೆ ಗುಣದೋಷಾ ಪ ಶಿವಶಿವಶಿವಶಿವಯೆಂದು ನೆನಿಯಲು ದೃಡವಾಗಿ ಅವನಿಲಿಹಿಂಗುದು ಪೂರ್ವದ ದುಷ್ಕøತಗತವಾಗಿ ಭವಭವ ಭವಭವಯನಲಾಮ್ಯಾಲನಿಶ್ಚಲನಾಗಿ ಜವದಲಿ ಹರಿವುದುದುರ್ಧರ ಭವಭಯಭಯಾಗಿ 1 ಅನನ್ಯ ಭಾವದಿಹೊಕ್ಕು ಶರಣವ ನಿಮ್ಮಡಿಗೆ ತನುಮನಧನವನು ಅರ್ಪಿಸಿ ವಂಚನೆ ನಿಲದ್ಹಾಗೆ ಅನುದಿನ ಮಾಡಿಲು ಧ್ಯಾನಾಸ್ವರೂಪಹೃದಯದೊಳಗೆ ಘನ ತರದಿಹನಿಜಸ್ಥಾನವು ಸುಲಬಾಗುವದೀಗೆ2 ನಿನ್ನಾ ಮಹಿಮೆಯುತಿಳಿಯದು ನಿಗಮಕ ಶ್ರೀಗುರವೇ ಇನ್ನು ಅಂತಿಂತೆಂಬುದು ನರಗುರಿಗಳಿಗಳವೇ ಎನ್ನಾನಯನದಿನೋಡಿ ಸುಮ್ಮನು ಸುರದಿರುವೇ ಭಿನ್ನವಿಲ್ಲದೆ ಸಲಹು ಮಹಿಪತಿ ಸುತಪ್ರಭುವೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀರೆ ತೋರೆಲೆ ಜಗಪಾಲ ಮುಕುಂದನಾ| ಶೂಲಧರನ ಮಿತ್ರನಾ ಪ ಪಾಂಡವರಕ್ಷಕನಾ|ಪುಂಡಲೀಕಾಕ್ಷನಾ| ಚಂಡಕೋಟಿ ಪ್ರಕಾಶನಾ|| ಕುಂಡಲ ವಿಭೂಷಿತ ಗಂಡಸತ್ಕಪೋಲನಾ| ಪುಂಡಲೀಕಗತಿವರದನ ನಂದಕಿಶೋರನ1 ಪರಮ ವರಪುರಾಣ ಪುರುಷೋತ್ತಮನಾ| ಕಂಸಾಸುರ ಮರ್ದನ ಗೋಪಾಲನಾ|| ಉರಗಾರಿ ಗಮನನಾ ನಿರುಪಮ ಚರಿತನಾ| ವಾಸುದೇವ ಮುಕುಂದನಾ2 ಸನಕ ಸನಂದನಮುನಿ ಮಾನಸ ಹಂಸನಾ| ಅನುಪಮ್ಯನಂತ ಮಹಿಮಾ|| ವನರುಹ ಯೋನಿವಂದ್ಯನ ಮಧು ಸೂಧನ| ಘನಗುರು ಮಹಿಪತಿ ಸುತಪ್ರಭು ಶ್ರೀ ಕೃಷ್ಣನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನುಡಿ ಎನ್ನಪ್ರಿಯನಾ ನೀತಂದು ತೋರೆ ಸುಜ್ಞಾನೇ ಪ ಕನಸಿನೊಳಗ ಕಂಡ ಪರಿಯಾ ರೂಪವ ದೋರಿ| ನೆನವಿನೊಳಗಿಟ್ಟು ಮಯವಾದನೇ 1 ಅಂಗಯ್ಯ ಲಿಂಗದಂತೆ ಸುಲಭವಾಗಿ ನಮ್ಮ| ಸಂಗ ಸುಖವ ಬೀರಿದನೇನೇ 2 ಗುರುಮಹೀಪತಿ ಸುತಪ್ರಭು ಕರುಣಾಮೂರ್ತಿ| ತರಳೆಯ ತಪ್ಪ ನೋಡಬಹುದೇನೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮದನ ಜನಕ ಪುರು| ಷೋತ್ತಮ ಪರತರ ಶೇಷಗಿರಿವಾಸಾ| ಪ ಕರುಣ ನೋಟದಿ ಸರ್ವಜೀವನುಳಹಿ ಕೊಂಡು| ಅಮೃತ ನುಣಿಸಿದನು| ಧರಣಿಯ ಮೋಹಿಸಿ ಬಿಗಿದಪ್ಪಿ ತರಳನು| ಹರಣಗಾಯ್ವ ದೇವ ಶರಣೆಂದೆನಲ್ಲದೆ| ತೆರೆಗಣ್ಣಿನವನೇಂದೆನೇ ಉಬ್ಬಿಗೊಂಡ| ಬಿರುಸು ಮೈಯ್ಯವನೆಂದನೇ ದಾಡಿಲಿಂದ| ಸುರಿವ ಜೊಲ್ಲುವನೆಂದನೇ ಬ್ರಹ್ಮಾದಿಗ| ಳರಸ ಉಗ್ರಾವ ತಾರೀ ಬಾಯೆಂದೆನಲ್ಲದೆ1 ಚಿಕ್ಕಮಾಟದಿ ಬಹು ಚಲುವ ಭೂಸುರರುಗೆ ಪುಕ್ಕಟೆ ಅರಸು ತನವ ಕೊಟ್ಟನು| ಸಿಕ್ಕಿದ ದೇವರ ಸೆರೆಬಿಡಿಸಿದ ಕುಂತೀ| ಸಾರಥಿ ಶರಣೆಂದೆನಲ್ಲದೇ| ಕಕ್ಕು ಲಾತೆವನೆಂದೆನೇ ಕೊಡಲಿಹೊತ್ತ| ನಿಕ್ಕರುಣಿಕನೆಂದನೇ ವಾನರ ಕೂಡಾ| ಹೊಕ್ಕವನನೆಂದೆನೇ ಕೌರವರ| ಸೊಕ್ಕು ಮುರಿದ ಸ್ವಾಮಿ ಬಾಯೆಂದೆನಲ್ಲದೆ2 ನೊಸಲಗಣ್ಣಿನವನ ಸಾಹ್ಯಕ ಶರವಾಗಿ| ಯಶೆವ ಮುಪ್ಪುರವನು ಧರೆಗಿಳುಹೀ| ವಸುಧಿಲಿ ಕಲಿಮಲ ಬಿಡಿಸಿ ಸಜ್ಜನರಪಾ| ಲಿಸಿದ ಮಹಿಪತಿ ಸುತಪ್ರಭು ಎಂದೆನಲ್ಲದೆ ಹುಸಿನುಡಿಯುವ ನೆಂದನೇ ಯವನರ| ದೆಸಿಗೆಡಿಸಿದ ನೆಂದನೇ ಆರಿಗೆ ನೆಲೆ| ತುಸುಗುಡದವ ನೆಂದನೇ ಜಗದೊಳು| ದಶ ಅವತಾರನೇ ನಮೋ ಎಂದೆ ನಲ್ಲದೆ.3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯಾಕ ವದಗಲೊಲ್ಲೆಯನ್ನಯ ಬಿನ್ನಹಕ ಲೋಕ ರಕ್ಷಕ ಬಂದು ಯನ್ನ ನುದ್ದರಿಸಯ್ಯಾ ಪ ಅರಿಯದ ಶಿಶು ಮಹಾನದಿ ಜಲದೊಳು ಪೋಕ್ಕು ತರಿಸಲರಿಯದಸು ದೊರೆಯುತಿದೆ ಇರಲು ತಾರಕದಡಿಯಲಿ ಸುಮ್ಮನೇದಯಾ ಜರಿದು ನೆಲಿಯಾ ನೋಡುತಹುದೇನಯ್ಯಾ 1 ಅರಿಗಳು ಪಟಳದಿಂದೋರ್ವ ಮನುಜಾ ಅರತು ನೃಪರಬೆನ್ನಬೀಳಲು ಭರದಿಂದಾ ಪಡಿತಂದವರಾಕೈಯ್ಯಲಿಕುಡೆ ಧರೆಯೊಳುಸಕಲ ಜನರು ಏನೆಂಬು ವರೈಯ್ಯಾ 2 ಪತಿತರ ಪಾವನ ಮಾಡುವಾಧೊರಿಯೆಂದು ಶೃತಿ ನಾಲ್ಕರಲಿ ಕೊಂಡಾಡುತಿರೆ ಮತಿಹೀನ ನೆಂದು ಕೈಯ್ಯಾ ಬಿಡದಿರೋ ಮಹೀ | ಮತಿ ಸುತಪ್ರಭು ಪರಿಚರೆನಿಸುವ ಬಳಿಕಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವ್ಯರ್ತವಾಯಿತು ಜನುಮಾ | ಹರಿಭಕ್ತಿ | ಅರ್ಥಿಯ ನೆಲೆಗೊಳ್ಳದೇ ಪ ನೊಣ ಮಧು ಬಿಂದುದಲೀ ಕುಳಿತಂತೆ | ವಣ ವಿಷಯದ ಸುಖಕ | ಹೆಣಗುತ ನಿಶಿದಿನದೀ | ತಾಪತ್ರಯ | ಕುಣಿಯೊಳು ಹೊರಳುತಲೀ 1 ಅವನಿಲಿ ಸಂಸಾರದೀ ಸಂಟರ್ಘಾಳಿ | ರವದಿಯಾ ತೆರೆ ಶಿಲುಕೀ | ವಿಧಿ ಬರ | ಹ್ಯಾವ ತಿಳಿಯದೆ ಮರುಗೀ 2 ಭೋಗಿನಾ ತ್ಯಾಗಿಯಾಗಿ ಆಯುಷ್ಯ | ನೀಗಿ ಯಚ್ಚರವಿಲ್ಲದೇ | ಶ್ರೀ ಗುರುಮಹಿಪತಿ ಸುತಪ್ರಭು | ಭಾಗವತರ ಕೂಡದೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶರಣೆಂಬೆ ಗುರುರಾಯಾ ಶರಣ ಜನರಾಶ್ರಯಾ ಶರಣು ಸಮೀರ ಕುಮಾರ ಉದಾರನೆ ಶರಣು ಪಾವನ ಕಾಯಾ ಪ ಹರಿ ಪೂರ್ಣಾಂಶದಿ ಜನಿಸಿ ಹರಿ ಕುಲೋದ್ಬವ ನೆನಿಸಿ ಹರಿಯತುಡಕಿ ಬಂದು ಹರಿತೇಜದಿ ನಿಂದು ಹರಿಸೆ ಧನುಜ ಮೃಗವಾ ಹರಿರೂಪದಲಿ ನಿಂದೆಹರಿಮಂದಿರದಲಿನಲಿದೆ ಹರಿಬರಲು ನಮಿಸಿ ಹರಿದಶ್ವಜ ಗೊಲಿಸಿ ಹರಿಹಯಜಗ ಮುನಿದೇ 1 ಗೋಪೆಂದ್ರ ನಾಜÉ್ಞಯಲಿ ಗೋಪದಾಂಬುಧಿ ಪರಿಲಿ ಗೋಪನಲಂಘಿಸಿ ಗೋಪುತ್ರಿಯ ಕಂಡು ಗೋಪೀಡಕರ ಮುರಿದೇ ಗೋಪಾಲಗಿದಿರಾಗಿ ಗೋಪಾಸ್ತ್ರವಶವಾಗಿ ಗೋಪುರವ ನುರುಹಿ ಗೋಪಾನ್ವಯ ಗುರುಹಿ ಗೋಪದವಿಯ ಪಡೆದೆ 2 ಮಹಿದರಾನೇಕವತಂದು ಮಹೋದಧಿಯನೆ ಜಿಗಿದು ಅಹಿ ಮಹಿರಾವಣಾನ್ವಯ ಮಹಿರುಹದಲಿ ತರಿದೇ ಮಹಿಯೋಳು ಮೂರವತಾರಿ ಮಹಿಮಾನೆಕವಬೀರಿ ಮಹಿಪತಿ ಸುತಪ್ರಭು ಮಹಿಜಳ ಕೂಡಿಸಿ ಮಹದಾ ಗ್ರಣಿಯಾದೆ ||
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸತ್ಸಂಗವಿನಾ ಏನಸಾಧಿಸುವದೇನರದು ಪ ರಾಜಸೂಯಾಶ್ವಮೇಧಾ | ಮುಖ್ಯಯಾಗಗಳಿಂದಾ | ತ್ಯಾಜ್ಯಾ ಲೋಕಂಗಳ ಪಡೆಯಬಹುದು 1 ಮೆರೆವ ರಾಜಯೋಗದಿ | ಹಲವುಯೋಗಗಳಿಂದಾ | ಪರಿಪರಿ ಸಿದ್ಧಿಯಾ ಪಡಿಯಬಹುದು 2 ಗುರು ಮಹಿಪತಿ ಸುತಪ್ರಭು | ಮಾರ್ಗವರಿಯದೇ ನಿರರ್ಥಕ ಸಾಯಾಸವಾ ಬಡುವುದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು