ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ನಿನ್ನಯ ಪಾದಾ ವಂದಿಸುವೆ ನಾನು ಛಂದದಿಂದಾ ಪ. ಮಂದಾರೊದ್ಧರನ ಪಾದಾ ಸೇವಕರೆಂದೆನಿಸಿದಿ ದುರ್ಮಾಯವಾದಿಗಳನು ಜಯಸಿದಿ ಬ್ರಹ್ಮರಾಯನೆಂದೆನಿಸೀದಿ ಅ.ಪ. ಅಂಜನಿಸುತನೆಂದೆನಿಸಿದೆ ಸಂಜೀವನವ ತಂದಿ ಕಂಜಾಕ್ಷಿಮುಖಿಗೆ ಉಂಗುರವನ್ನಿತ್ತಿ ವನವ ಕಿತ್ತಿ ಸಂಜೀವರಾಯನೆ ದುರುಳ ರಾವಣನ ಸಂಹರಿಸಿದಿ ವಿಭೀಷಣನಿಗೆ ರಾಜ್ಯಭಾರದಲ್ಲಿ ನಿಲ್ಲಿಸಿದಿ ಅಯೋಧ್ಯನಗರಿಗೆ ತೆರಳಿದಿ 1 ಕುಂತಿಯಾ ಕಂದಾ ಕೌರವಾದಿಗಳ ಕೊಂದ ಯುದ್ಧದಲ್ಲಿ ಪ್ರಚಂಡಾ ಭಾರತಿಗೆ ಗಂಡಾ ಲಂಡದುಷ್ಯಾಸನನ ತುಂಡು ತುಂಡುಮಾಡಿ ಸೀಳಿದ ವಿರಾಟ ನಗರದಿ ಸಂಚರಿಸಿದಾ ಕೀಚಕಾದಿಗಳ ಸಂಹರಿಸಿದಾ ಪಾಂಚಾಲಿಗೆ ಸೌಗಂಧೀಕುಸುಮವನೆ ತಂದಾ ಆನಂದಾ 2 ಮಧ್ಯಗೇಹನಲ್ಲಿ ಉದ್ಭವಿಸಿದೆಯೋ ನೀ ಇಲ್ಲಿ ಅದ್ವೈತ ಮತವೆಲ್ಲಾ ಕಾಲಿಲೆ ವದ್ಯೋ ಗೆದ್ಯೋ ಮಧ್ವಮತವೆಲ್ಲ ಉದ್ಧಾರ ಮಾಡಿದಾ ಬದರಿಕಾಶ್ರಮಕೆ ಪುನರಪಿ ಪೋದಾ ವ್ಯಾಸಮುನಿ ಪಾದಕೆ ಅಭಿವಂದಿಸಿದಾ ಉಡುಪಿಯೊಳು ಕಾಳಿಮರ್ಧನಕೃಷ್ಣನು ನಿಲ್ಲಿಸಿದಾ 3
--------------
ಕಳಸದ ಸುಂದರಮ್ಮ
ಪಾದುಕೆಗಳ ದಯಪಾಲಿಸು ಪರಮ ಪಾವನ ಮಹಿಮ ಸುದೇವ ಲಲಾಮ ಪ ನೀ ದಯದಿಂ ತವಪಾದ ಪಯೋಜಗ ಳಾದರದಲಿ ಕೊಡು ಹೇ ದಯಧಾಮ ಅ.ಪ. ಅಜನವ್ಯಯನಪ್ರಾಕೃತ ಮಹಿಮನು ಅಜನಪಿತನು ತನ್ನಿಚ್ಛೆಯೊಳು ಅಜಸುತ ದಶರಥ ಸುತನೆಂದೆನಿಸಿದ ತ್ರಿಜಗ ನೋಡೆ ಆಶ್ಚರ್ಯದೊಳು 1 ತುಂಗಮಹಿಮ ತವ ಮಂಗಳಕರ ಚರ ಣಂಗಳು ಈ ತ್ರಿಜಗಂಗಳ ಪಾಲಿಪುವು ಅಂಗಜಕೋಟಿ ಶುಭಾಂಗನೆ ತವಪದ ಭೃಂಗನೆನಿಸಿ ಕೃಪಾಪಾಂಗದಿ ಈಕ್ಷಿಸೊ ಮಂಗಳಕರ ರಘುಪುಂಗವ ಕರಿಗಿರಿ ರಂಗ ನೃಸಿಂಹ ಸೀತಾಂಗನೆಯರಸ 2
--------------
ವರಾವಾಣಿರಾಮರಾಯದಾಸರು
ಭಾಗೀರಥೀ ಜನಕಗೆ ಭಾಗವತಪ್ರಿಯಗೆ ಆಗ ನೀರೆರೆದರವಿಂದಲೋಚನನಿಗೆ ಗೋಪಿ 1 ಸಾಗರಶಯನನ ತೂಗಿ ತೊಟ್ಟಿಲೊಳಿಟ್ಟು ನಾಗಮುರಿಗೆ ವಂಕಿ ನಂದಗೋಪನ ಸುತಗೆ ಬೆರಳಿಗುಂಗುರ ಕೋಟಿಭಾಸ್ಕರತೇಜಗೆ ಹೊಳೆವೊ ಬಿಂದಲಿ ಗುಂಡು ಭುಜಕೀರ್ತಿ ಭೂಷಣ 2 ಮಲಕು ಮುತ್ತಿನ ಹಾರ ಪದಕ ಪಚ್ಚೆಯ ಕಾಂತಿ ಕೌಸ್ತುಭ ರತ್ನ ಥಳಥಳಿಸುವ ಕರ್ಣದಲ್ಲಿ ಬಾವುಲಿ ಚೌಕುಳಿ ಚಳತುಂಬು ಮುತ್ತಿನಬಟ್ಟು ಮುಂದಲೆಗೆ 3 ಹೊಸ ವಜ್ರದರಳೆಲೆ ಹುಲಿಯುಗುರು ತಾಯಿತ ಕುಸುಮನಾಭಗೆ ಕಿರುಗೆಜ್ಜೆ ಕಾಲಲಂದಿಗೆ ಮಿಸುಣಿ ಮಾಣಿಕ್ಯದುಡಿದಾರದಡ್ಡಿಕೆ ಕಟ್ಟಿ ಗೋಪಿ 4 ಕಂಜನಯ್ಯನ ನೋಡೆ ಕಂಗಳಿನ್ನೆರಡಿಲ್ಲ ಜಿಹ್ವೆ ಒಂದೆ ಸಾಲದೆನಗೆಂದು ಅಂಗಿಟೊಪ್ಪಿಗೆ ಹಾಕ್ಯಾಲಿಂಗನೆ ಮಾಡುತ ಸತಿ ತಾನಂದಾನಂದಭರಿತಳಾಗಿ5 ತನ್ನ ಮಗನ ಮುದ್ದು ತಾ ನೋಡಿ ಸಾಲದೆ ಹೊನ್ನ ಪುತ್ಥಳಿಯಂತೆ ಹೊಳೆವೊ ಕೂಸನು ಎತ್ತಿ ನಿನ್ನ ಮಗನ ಆಟ ನೀ ನೋಡೆಂದೆನುತಲಿ ತನ್ನ ಪತಿಯ ತೊಡೆಯಲ್ಲಿಟ್ಟು ನಲಿಯುತ 6 ಹೊನ್ನ ಪುತ್ಥಳಿಗೊಂಬೆ ಹೊಸ ಚಿನ್ನದರಗಿಳಿಯೆ ಹೊನ್ನು ತಾ ಗುಬ್ಬಿತಾರಮ್ಮಯ್ಯ ಎನುತಲಿ ಬಣ್ಣ ಬಣ್ಣದ ಆಟ ವರ್ಣಿಸುತಲಿ ನೀಲ- ವರ್ಣನ ತನ್ನ ತೋಳಿಂದಪ್ಪಿ ನಲಿಯುತ 7 ಸೃಷ್ಟಿಮಾಡುವರಿಲ್ಲೀ ಶಿವ ಬ್ರಹ್ಮರೊಡೆಯನ ಸೃಷ್ಟಿಕರ್ತನಾದನನ್ಹುಟ್ಟಿಸಿದ ನಾಭಿಯಿಂದಿವನು ಹೊಟ್ಟೆಲೀರೇಳು ಜಗವಿಟ್ಟು ಸಲಹುವ ಎಷ್ಟು ಸರ್ವೋತ್ತಮ ಈಗಿಲ್ಲ್ಯವತರಿಸಿದ 8 ಚತುರವದನಗೆ ವೇದ ತಂದಿಟ್ಟು ಸಾಗರ ಮಥಿಸಿ ಮಂದರವನು ಪೊತ್ತು ಅಮೃತವ ಹೀರಿ ಪೃಥಿವಿಯನು ತಂದ ಕೋರೆಯಲಂದ್ಹಿರಣ್ಯಾಕ್ಷನ ಹತವ ಮಾಡಿದ ತಾ ಭೂಪತಿ ಎಂದೆನಿಸಿದಿವನು 9 ಪರಮಭಕ್ತನು ಕರೆಯೆ ಬಿರುದು ಕಂಬದಿ ಬಂದು ಕರುಳ ಬಗೆದ ಪುಟ್ಟ ತÀರÀಳ ರೂಪವ ನೋಡಿ ಮರುಳಾಗಿ ಬಲಿ ಮೂರು ಚರಣ ದಾನ ನೀಡೆ ಬೆಳೆದು ಬ್ರಹ್ಮಾಂಡಕ್ಕೆ ಭುವನ ವ್ಯಾಪಿಸಿಕೊಂಡ10 ಕ್ಷತ್ರ ಸಂಹಾರಿ ತಾ ಎತ್ತಿ ಧನುವ ಸೀತಾ ಸೌ- ಮಿತ್ರಿಸಹಿತ್ವನದಲ್ಲಿ ಇರುತಿರಲಾಗ ಪತ್ನಿ ಒಯ್ಯಲು ಅಸುರನ್ಹತ್ತು ಶಿರಗಳ ತರಿದ ದುಷ್ಟ- ರಂತಕನೆ ನಿರ್ದುಷ್ಟ ಸಜ್ಜನಪ್ರಿಯ 11 ದೇವಾಧಿದೇವ ದೇವಕ್ಕಿ ಜಠರದಿ ಬಂದು ಮಾಯಾ- ಪೂತಣಿಯನ್ನು ಕೊಂದು ವಿಷಮೊಲೆನುಂಡು ಕಾಲಲಿ ಶಕಟನ ಕೆಡವಿದ ಯದುವೀರ ತಾ- ಗೋಪಾಲಕ ಗೋಪೀಸುತನೆಂದೆನಿಸಿಕೊಂಡ12 ವಿಪರೀತ ಮಾಯದಿ ತ್ರಿಪುರದ ಜನರಿಗೆ ದುರ್ಮತವ ಬೋಧಿಸಿ ಅಸುರಾರಿ ಮೋಹಕ ತೋರಿ ಚಪಲ ಚೆನ್ನಿಗ ಖಡ್ಗಪಿಡಿದು ತೇಜಿಯ- ನೇರಿ ಕಪಟನಾಟಕ ಕಲಿಮರ್ದನ ಕರಿಗ್ವರವಿತ್ತ13 ಜನ್ಮಕರ್ಮವು ಜರಾಮರಣಗಳಿವಗಿಲ್ಲ ಜಗದೋ- ಪರಬ್ರಹ್ಮನ ಪಾದಾಂಘ್ರಿಸ್ಮರಣಿ (ಣೆಯಿ?)ರೆ ಪರಮಾ- ದರದಿ ಕರೆದೊಯ್ವ ತನ್ನ (ಬಳಿಯ)ಲ್ಲೆ 14 ಏಸುಜನ್ಮದ ಫಲವಿನ್ನೆಷ್ಟು ಜನ್ಮದ ಸುಕೃತ ಈ ಸಮಯದಿ ಫಲಿಸಿತೀತ ಇಲ್ಲುದಿಸಿರಲು ದೋಷವರ್ಜಿತನೆ ಸಂತೋಷಭರಿತನಿವ ಭೀ- ಮೇಶಕೃಷ್ಣ ಯಶೋದೆ ಕೂಸೆಂದೆನಿಸಿಕೊಂಡ15
--------------
ಹರಪನಹಳ್ಳಿಭೀಮವ್ವ
ಯತಿವರ್ಯ | ಯತಿವರ್ಯ ಪ ಯತಿ ಸುಧೀಂದ್ರಕರ | ಸುತನೆಂದೆನಿಸಿದ ಅ.ಪ. ಪರ | ಮಾರ್ಥವ ಯಾಚಿಪೆ 1 ಪಾದ್ಯ ಹರಿ | ಗುಣ ಸಂಪೂರ್ಣನಗುಣವರ್ಣನ ಸು | ಜ್ಞಾನವ ನೀಯೋ 2 ಪರಿಮಳಾರ್ಯ ತವ | ಚರಣಾರಾಧನೆಕರುಣಿಸಿ ಸುಧೆರಸ | ಎರೆವುದೆನಗೆ ಗುರು 3 ಅನ್ಯನಲ್ಲ ನಾ | ನಿನ್ನವರವನೈಘನ್ನ ಮಹಿಮ ಸಂ | ಪನ್ನ ಪೊರೆಯೊ ಗುರು 4 ಯೋಗಿವರ್ಯ ತವ | ಅಘಹರನಾಮಕೆಮಿಗಿಲಿಲ್ಲವೊ ಗುರು | ಬಾಗಿ ಭಜಿಪೆ ನಿನ 5 ಪರಿ | ಕಾಮ ಫಲಪ್ರದಪಾಮರ ಮನುಜನ | ನೀ ಮಾಣದೆ ಪೊರೆ 6 ಭೂಮಾರ್ಣವ ಗುರು | ಗೋವಿಂದ ವಿಠಲನಕಾಮಿಪೆ ಮೆನ್ಮನ | ಸೀಮೆಯಲಿರಿಸೋ 7
--------------
ಗುರುಗೋವಿಂದವಿಠಲರು
ಸರಸಿಜನಾಭ ಶ್ರೀಹರಿಪಾದಕಾರತಿಯ ಬೆಳಗಿರೆ ಪ ವಸುದೇವ ಸುತನೆಂದೆನಿಸಿ ಅಸುರೆ ಪೂತನಿಯ ಸಂಹರಿಸಿ ಆನಂದ ಸುರಿಸಿ ಕಾಳಿಮಡುವ ಧುಮುಕಿ ಫಣಿಯ ಮೇಲೆ ನಾಟ್ಯವನಾಡಿದವಗೆ ಸನಕಾದಿ ನಾರದ ಮುನಿವಂದ್ಯಗೆ ಸುರ ರಮಣಿಯರು ಹರುಷದಿ 1 ಮಧುರೇಲಿ ಜನಿಸಿದವಗೆ ಮಾವಕಂಸನ ತರಿದವಗೆ ಮಧುವೈರಿಹರಿಗೆ ಮುರಳಿನಾದಗೈದು ಸ್ತ್ರೀಯರ ಮರುಳುಗೊಳಿಸಿ ಆಡಿದವಗೆ ಮುರವೈರಿ ಹರಿ ಮುಚುಕುಂದ ವರದನ ಪಾಡುತಲಿ ಮುದದಲಿ2 ಗೋಪಾಲರೊಡಗೂಡುತಲಿ ಗೋವರ್ಧನವೆತ್ತಿದವಗೆ ಗೋವಿಂದ ಹರಿಗೆ ಗೋಪಿಯರ ಮನೆಯ ಪೊಕ್ಕು ಬೇಕೆನ್ನುತ ಪಾಲ್ಬೆಣ್ಣೆ ಸವಿದ ಶ್ರೀಕಾಂತ ಕಮಲನಾಭ ವಿಠ್ಠಲನಿಗೆಸುದತಿಯರು ತ್ವರಿತದಿ 3
--------------
ನಿಡಗುರುಕಿ ಜೀವೂಬಾಯಿ