ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳಾರತಿಯ ಪಾಡಿರೆ ಮಾನಿನಿಯರು ಪ ಅಂಧಕನನುಜನ ಕಂದನ ತಂದೆಯಕೊಂದನ ಶಿರದಲಿ ನಿಂದವನಚಂದದಿ ಪಡೆದವನ ನಂದನೆಯಳ ನಲವಿಂದ ಧರಿಸಿದ ಮುಕುಂದನಿಗೆ 1 ರಥವನಡರಿ ಸುರ ಪಥದಲಿ ತಿರುಗುವನಸುತನಿಗೆ ಶಾಪವನಿತ್ತವನಖತಿಯನು ತಡೆದನ ಸತಿಯ ಜನನಿ ಸುತನಸತಿಯರನಾಳಿದ ಚತುರನಿಗೆ 2 ಹರಿಯ ಮಗನ ಶಿರ ತರಿದನ ತಂದೆಯಹಿರಿಯ ಮಗನ ತಂದೆಯ ಪಿತನಭರದಿ ಭುಜಿಸಿದವನ ಶಿರದಲಿ ನಟಿಸಿದವರ ಕಾಗಿನೆಲೆಯಾದಿಕೇಶವಗೆ 3
--------------
ಕನಕದಾಸ
ಸರಸ್ವತಿ ತಾಯಿ ಬಿಡದೆನ್ನ ಕಾಯಿ || ಮೂರ್ತಿ ಹರಿಯ ಸುತನಸತಿ || ಪ ಕಡಗ ಕಂಕಣ ಗೆಜ್ಜೆ ಕಾಲು ಪೆಂಡಿಗಿಯಿಂದ || ಸಡಗರದಲಿ ಹೊಳೆವ ನಡುವಿನೊಡ್ಯಾಣವು || ಪೊಡವಿಯೊಳಗೆ ನಿಮ್ಮ ವಡಸತಿಯರೊಳು || ಕಡುಸುಂದರಿ ಜಗದಂಬೆ ಕನಕದ ಗೊಂಬೆ 1 ಕೊರಳಿಗೆ ವೈರನ(?) ಪೊಲುವ ಮುಖದಲ್ಲಿ ಹೊರಳೆಲಿಯಂದದಿ(?)ಫಣಿಯಲ್ಲಿ ತಿಲಕ | ಎರಳೆ ಕಂಗಳೆ ನಿನ್ನ ಹೆರಳಿನ ಸೊಬಗು ಉರಗನ ಪೋಲ್ವದು ಬಾಲೆ ಸುಲೀಲೆ 2 ಧರೆಯೊಳಧಿಕ ` ಹೆನ್ನೆಪುರ ಹೆನ್ನೆವಿಠಲನ’ ಚರಣ ಕಮಲದಲಿ ದೇವ ಭಜಿಸುವ ಪರಮ ಭಕುತಿಯಿಂದ ಪಾಲಿಸೆ ಮಣೀಯುವೆ | ಸ್ಥಿರ ನಿನ್ನ ನಂಬಿದ ಜನರನು ಕಾಯುವೀ 3
--------------
ಹೆನ್ನೆರಂಗದಾಸರು
ಭಾವೆತೋರೆಲೆ ಶ್ರೀನಿವಾಸನ ಜಗದಜೀವಗಳಿಗೆ ಭಿನ್ನನಾದ ವಾವೆಯಿಲ್ಲದ ಶ್ರೀನಿವಾಸನ ಪ.ಮಾವನ ಅಣುಗನನುಜೆಯಳಿಗೆ ಮಾವನೆನಿಸಿದ ತನ್ನ ಮಗಳಮಾವನ ಸೊಸೆಯ ಬಸಿರಲುದಿಸಿ ಮರಮೆಳೆಯನು ಸೇರಿ ಮತ್ತೆಮಾವನ ಸುತರಿಗಜ್ಜನೆನಿಸಿದ ಮಗುಳೆಮಾವನ ಮಾವನ ಮಗಳಿಗಣ್ಣನೆನಿಸಿದ ಒಮ್ಮೆ[ಬಾವನ] ಭವನವೆಣ್ಗಳ ಬಿಡಿಸಿ ರಮಿಸಿದ 1ಸತಿಯ ಸುತೆಗೆ ಅರಸನಾದ ಸತಿಯಳಿಗೆ ಸಹೋದರನಾದಸತಿಯಳನುಜ ಕುಲದಿ ಜನಿಸಿಸತಿಹಲವರ ಕೂಡಿ ಸುಖಿಸಿಸತಿಸಖಿಯರ ಬಂಧುವೆನಿಸಿದ ಮತ್ತೆ ಸುತನಸತಿಯ ಮಗನ ಮೊಮ್ಮನೆನಿಸಿದ ಓರ್ವ ಮೊಮ್ಮನಸತಿಗೆ ನೋಡಿದಳಿಯನೆನಿಸಿದ 2ಅಣ್ಣಗೆ ಜನಕನಾಗಿ ಮಗನ ಅಣ್ಣನೆನಿಸಿದ ಜಗವರಿಯಲುಅಣ್ಣನೆ ತಮ್ಮ್ಮಗೆ ತಮ್ಮನಾದ ಹುಟ್ಟಿದ ತಾಣವಜರಿದುಬೆಳೆದುಅಣ್ಣಗೆ ಭಾವನಾಗಿರುವ ಚೆಲುವನೆ ತನ್ನ ಬಾವನಅಣ್ಣನಯ್ಯಂಗೆ ಪುತ್ರನಾದವನೆ ಪ್ರಸನ್ನವೆಂಕಟತನ್ನವಳಿಗಾಪ್ತನಾಗಿ ಹೊರೆವನೆ 3
--------------
ಪ್ರಸನ್ನವೆಂಕಟದಾಸರು