ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳೈಯ್ಯಾ ಆತ್ಮರಾಮಾ | ಯತಿ ಮುನಿಜನ ಪ್ರೇಮಾ | ಏಳೆಯ್ಯ ಘನಶಾಮಾ | ಎನ್ನಪಾಲಿಸೈ ಗುಣಧಾಮಾ ಪ ಬೋಧ ಸುರ್ಯನು ಬರಲಿ | ಮರವಿನ ಕತ್ತಲೆ ತೆರಳಿ | ಬೆಳಗಾಯಿತು ಮನದಲ್ಲಿ 1 ವಾದತಾರೆಗಳಡಗಿ | ವಿಕಸಿತ ಹೃತ್ಕಮಲಾಗಿ | ಸಾಧನ ಪಕ್ಷಿಗಳೊದಗಿ | ಕಲಕಲಿಸುತಿವೇ ಬಹುವಾಗಿ 2 ವಿವೇಕಾದ ಭರತಾ || ವೈರಾಗ್ಯ ಶತೃಘ್ನ ತಾ | ಸಾವಧ ಲಕ್ಷ್ಮಣ ನಿರುತಾ ಪದಸೇವೆಗೆ ನಿಂತರು ತ್ವರಿತಾ 3 ಶಮದಮವೇ ನಿಸ್ಸೀಮಾ | ವಿಭೀಷಣ ಸುಗ್ರೀವ ನೇಮಾ | ಜಾಂಬವ ಹನುಮಾ4 ಶಾಂತಿ ಸೀತೆಯು ವಲಿದು ನಿಂತಿಹಳೈ ಕೈಮುಗಿದು | ಚಿಂತಿತಾರ್ಥವನೇ ಕೊಡು | ಮಹಿಪತಿ ಸುತಗೊಲಿದು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಮೋ ನಮೋ ನಾರದವಂದ್ಯ ನಮೋ ನಮೋ ನಿಗಮನಿಕರವೇದ್ಯ ಪ ಭವಭಯರೋಗವೈದ್ಯ ಅ.ಪ ಹರಿಚರನಾಗಿ ವೇದವ ತಂದೆ ಹರಿಪತಿಯನು ಮೇಲಾಂತು ನಿಂದೆ ಹರಿವಂಶಜರನೆಲ್ಲರ ತರಿದೆ ಹರಿವಾಹಿನಿಯ ನೀನಾಳ್ದೆ ಹರಿಸುತಗೊಲಿದು ಹೆಂಗಳ ವ್ರತಕೆಡಿಸಿದೆ ಹರಿವಾಹನ ಜಯತು 1 ಶಿವವಾಹನ ಧ್ವಜರೂಪ ಶಿವಧರನೆನಿಪ ಯುಗ ಪ್ರತಾಪ ಶಿವಭಕ್ತನ ಕೊಂದೆ ಶಿವನ ರೂಪಾದೆ ನೀಂ ಪದಕಡಿಯನಿಟ್ಟೆ ಶಿವವೈರಿಯ ರಿಪುವೆನಿಸಿದೆ ಶಿವನ ಬಿಲ್ಲನು ಬಾಗಿಸಿ ಮುರಿದೆ ಶಿವನ ತುಳಿದೆ ನೀ ಶಿವನಿಗೆ ಸಖನಾದೆ ಶಿವವಾಹನ ಜಯತು2 ಸುರಜ್ಯೇಷ್ಠನಿಗೆ ಶ್ರುತಿಯನಿತ್ತೆ ಸುರರಿಗೆ ಸುಧೆಯನು ಕರೆದೆರೆದೆ ಸುರನಗವರ್ಣ ಹಿರಣ್ಯಾಕ್ಷನ ಕೊಂದೆ ಸುರಸಿಂಧುವಪಡೆದೆ ಸುರಭಿಯ ನೆವದಿ ಭೂಪರನೆಲ್ಲ ತರಿದೆ ಸುರರಿಪು ದಶವದನನ ತರಿದೆ ಸುರನಗವರ್ಣ ಸರ್ವಜ್ಞ ಹಯಾರೂಢ ಸುರಪುರ ಲಕ್ಷ್ಮೀಶ 3
--------------
ಕವಿ ಲಕ್ಷ್ಮೀಶ
ನಿಲ್ಲದೋ ನಿಲ್ಲದೋ ಮನವಿದು ಸಲ್ಲದೋ ಸಲ್ಲದೋ ಪ ಸ್ನಾನ ಸಂಧ್ಯಾದಿ ಮೌನ ವಿಡದು ಅನು | ಷ್ಠಾನ ಜಪವ ಮಾಡಲಿ ಕುಳಿತರೆ | ತಾನಾಗ ಹೊರಡುತಲಿ ತಿರಗÀುತ | ನಾನಾ ದುರ್ವಿಷಯದಲಿ ತಂದು ಮಹಾನಿದ್ರೆ ಒಡ್ಡುತಲಿ1 ಘಾಸಿ ಬಡುವರೆಂಬ | ದೀ ಶಾಸ್ತ್ರಗಳ ಬಲ್ಲದು ಸದ್ಗುಣ | ಧ್ಯಾಸ ವೆಂದಿಗು ಮಾಡದು ದುವ್ರ್ಯತ್ತಿ | ಹೇಸದಾ ಚರಿಸುವದು2 ಆವಗತಿಯೋ ಯೆನಗಾವ ಜನುಮವೋ | ಆವಬವಣೆಯಂಬುದು ತಿಳಿಯದು | ದೇವನೇ ಸಲಹುವದು ಮನ | ವಿವೇಕದಿ ತಿದ್ದುವದು | ಗುರು ಮಹಿಪತಿ ಸುತಗೊಲಿದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಮೋ ನಮೋ ರಾಮ ಕಳುಹಿಸಿದನಮ್ಮಾ |ಮಮ ಸ್ವಾಮಿ ಬದುಕಿಹನೆ ಪೇಳೋ ತಮ್ಮ ಪವಾಸುದೇವನು ಜಗದ ಸೃಜಿಸುವನು ಕೆಡಿಸುವನು |ನಾಶವೆಲ್ಲಿಹದು ರಘುವರ್ಯಗಮ್ಮಾ ||ವಾಸವಾಗಿರೆ ವನದಿಮೃಗತರಲು ಪೋಗಿ ಜಗ- |ದೀಶ ನುಡಿದನು ಕಡೆಯ ಮಾತು ತಮ್ಮ 1ಖಳಮಾಯೆಯಲಿ ಬರಲು ರಾಘವನು ಸಂಹರಿಸೆ |ನೆಲಕುರುಳಿ ಕೂಗಿದನು ಅವನೇ ಅಮ್ಮಾ ||ಬಲುವಿಂದ ಲಕ್ಷ್ಮಣನ ಬೈದು ಅಟ್ಟಿದೆ ನಾನು |ಜಲಜಾಕ್ಷನೋರ್ವನಿಹನೇನೋ ತಮ್ಮ 2ಅನುಜಯುಕ್ತದಿ ದೇವ ಕಪಿದಂಡು ನೆರಹಿಹನು |ಹನುಮಂತ ನಾ ರಾಮದೂತನಮ್ಮಾ ||ಇನಿತು ಸತ್ಯವೊ ಅನೃತವೊ ನಂಬಿಗ್ಯಾಗದು |ಮನದ ಅನುಮಾನ ಬಿಡುವಂತೆ ಮಾಡೋ ತಮ್ಮ 3ಸಿರಿಕಾಂತ ಶ್ರೀಮಂತ ಕರುಣದಲಿ ಕೊಟ್ಟಿಹನು |ಗುರುತಿನುಂಗುರವನಿದು ನೋಡಿರಮ್ಮಾ ||ಪರಮಾತ್ಮನಿಗೆ ದೂತನಹುದುಶುಭವಾರ್ತೆಗಳೆ |ಇರುವನೆಲ್ಲೆದು ವಿಸ್ತರಿಸೆಲೊ ತಮ್ಮಾ 4ಕಾನನದೆ ಚರಿಸುತ ರವಿಸುತಗೊಲಿದು ಶುಕ್ರಜನ |ಹಾನಿ ಮಾಡಿದನಲ್ಲೇ ಇರುವನಮ್ಮಾ ||ಜಾನಕಿಯೆಂದೆನ್ನನು ನಿತ್ಯದಲಿ ನೆನೆಸಿ |ಏನು ಮಾಡುವನೊ ಪೇಳುವದೋ ತಮ್ಮ 5ನಿನ್ನಗಲಿ ವ್ಯಾಕುಲದಿ ನರರಂತೆ ಕೇಶವನು |ಅನ್ನ ಉದಕವನೆಲ್ಲಾ ಜರಿದನಮ್ಮಾ ||ಪನ್ನಗಾರಿ ಧ್ವಜನು ದನುಜರ ಗೆಲಿದು |ಯನ್ನ ಕೂಡುವದು ನಾ ಕಾಣೆ ತಮ್ಮ 6ತಾಯೆ ರಾವಣನಳಿದು ನಾನೊಯ್ವೆ ನಿನ್ನೀಗ |ನೋಯಿಸದೆ ಹರಿಗೀಡು ಆವನಮ್ಮಾ ||ನಾಯಕನು ನೀಂ ಭೃತ್ಯರೊಳು ತ್ವರಿತ ಬಹುದೆಂದು |ಕಾಯಜಪಿತನಿಗೆ ಬಿನ್ನೈಸೊ ತಮ್ಮ 7ಪೋಗಿ ಬರುವೆನು ನಿಮ್ಮ ಗುರುತು ಏನಿದೆ ಕೊಟ್ಟು |ಬೇಗನಪ್ಪಣೆಯೆನಗೆ ಈವದಮ್ಮಾ ||ನಾಗಶಯನಗೆ ರಾಗಟೆಯನಿತ್ತು ಪದಕೆ ತಲೆ |ಬಾಗಿರುವಳೇಳದಲೆಯೆನ್ನೋ ತಮ್ಮ 8ನಳಿನಮುಖಿಯೆ ನಮೋ ನಮೋ ದಯೆಯಿರಲಿ ಸ್ವಲ್ಪ ದಿನ |ದೊಳಗೆ ಬರುವೆವು ಚಿಂತೆ ಬೇಡವಮ್ಮ ||ಭಳಿ ಭಳಿರೆ ಪ್ರಾಣೇಶ ವಿಠ್ಠಲನ ಪೂರ್ಣ ದಯೆ |ಗಳಿಸಿ ಅಜಪಟ್ಟವನು ಆಳೋ ತಮ್ಮ 9
--------------
ಪ್ರಾಣೇಶದಾಸರು
ಮಂದರಧರ ದೇವ ಮೊರೆಹೊಕ್ಕವರ ಕಾಯ್ವಪಮಂದಾಕಿನಿಯ ಪಿತ ಮಾವ ಕಂಸನ ಹೃತ |ಸುಂದರ ಶಶಿವದನ ರಂಗಯ್ಯ ಅ.ಪಕಣ್ಣು ನೋಟದಿ ಚೆಲುವ, ಕಮಠರೂಪದಿ ನಲಿವ |ಹೆಣ್ಣ ಮೊರೆಯಕೇಳಿ ಹಿರಣ್ಯನುದರ ಸೀಳಿ ||ಮಣ್ಣು ಬೇಡಿ ಬೆಳೆದೆ - ಕೃಷ್ಣಯ್ಯ ||ಹೊನ್ನ ಕೊಡಲಿಯ ಪಿಡಿದು ಹತ್ತು ಗ್ರೀವನ ಕಡಿದು |ಚಿಣ್ಣರ ಒಡಗೂಡಿ ಚಪಲೆಯರ ವ್ರತಗೆಡಿಸಿ |ಚೆನ್ನರಾವುತನಾದೆಯೊ - ರಂಗಯ್ಯ 1ಗೋಚರನಂದದಲಿ - ಗಿರಿಯ ತಾಳಿದೆ ಬೆನ್ನಿನಲಿ |ಭೂಚೋರನ ಕೊಂದು ಬಾಲ ಕರೆಯಲು ಬಂದು |ಯಾಚಕ ನೀನಾದೆ - ರಂಗಯ್ಯ ||ಸೂಚತನ ಸುತಗೊಲಿದು ಶರಧಿಯಕಟ್ಟಿ ಮೆರೆದೆ |ಕೀಚಕಹತಪೋಷ ಖೇಚರಪುರವಾಸ |ನೀಚಜನರ ತರಿದೆ - ರಂಗಯ್ಯ 2ವನವನಲೆದು ಬಂದ - ವನಿತೆರತ್ನವ ತಂದ |ಘನಕಂಭದಿಂದ ಬಂದುಗರುವ ಮುರಿದು ಬಲಿಯ |ಜನನಿಯ ಶಿರವರಿದೆ - ರಂಗಯ್ಯ ||ಹನುಮವಂದಿತಪಾದ ಹರುಷ ಪಾಂಡುವವರದ |ಮನಸಿಜ ವೈರಿಗೊಲಿದು ಮಹಾಕಲಿಕಿಯಾದೆ |ಘನಪುರಂದರ ವಿಠಲ - ರಂಗಯ್ಯ 3
--------------
ಪುರಂದರದಾಸರು