ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(2) ರಾಮಾನುಜರು ಬೇಡಿಕೊಂಬುವೆನು ನಿಮ್ಮ ರಾಮಾನುಜರೆ ಬೇಡಿಕೊಂಬುವೆನು ನಿಮ್ಮಾ ಪ ಪಾಡಿ ಹಿಗ್ಗುವ ಸುಖವ ಸಂತತ ಕಮಲ ಮಧ್ಯದೊ ಳಾಡುತೆನ್ನನು ರಕ್ಷಿಸೆನುತಲಿ ಅ.ಪ ಚರಮ ಶ್ಲೋಕವ ಬೋಧಿಸಿ ಅಷ್ಟಾಕ್ಷರಿಯೊ ಳಿರುವ ಗೋಪ್ಯವ ತೋರಿಸಿ ಗೈವುತ ಪ್ರಣವ ಶಬ್ದದಿ ಬೆರಸಿ ನಿನ್ನನೆ ಭಜಿಸಿ ಸ್ಮರಿಸುತ ಪರಮನಾಗುವ ಮತಿಯ ತ್ವರಿತದಿ 1 ಅಷ್ಟಮದಗಳು ಎನ್ನನೂ ಬಂಧಿಸಿ ಮಾಯಾ ಅಷ್ಟಪಾಶದಿ ನೊಂದೆನೊ ದುಷ್ಟಕಾಮಾದಿಗಳ ಭ್ರಾಂತಿಯು ಕಟ್ಟ ನರಕದಿ ಕೆಡಹಿ ಸುಡುತಿದೆ ಭ್ರಷ್ಟಗುಣಗಳ ದೂರಸೇರಿಸಿ ಶ್ರೇಷ್ಠಮುಕ್ತಿಯ ಪಡೆವ ವಿರತಿಯ 2 ಜ್ಯೋತಿ ಜ್ಯೋತಿಯ ನಿಲ್ಲಿಸಿ ಹೂಬಳ್ಳಿಯೊಳ್ ಜ್ಯೋತಿನೋಡು ಪೂಜಿಸಿ ಮಾತೆ ಮಾತುಳ ಪಾಲಕಾನುಜ- ಸತಿ ಸುತ ಬಂಧು ಮಿತ್ರ ವ್ರಾತ ಸಂಗಡಬಂಧಬಿಟ್ಟು ಪು ನೀತನಾಗಲಿಬೇಕು ಎನುತಲಿ 3 ಯಾದವಾದ್ರಿಯ ವಾಸನೆ ಭಕ್ತರನೆಲ್ಲ- ಮೋದದಿಂದಲಿಯಾಳ್ವನೇ ಮೇದಿನೀಮಹದೇವಪುರವರ ನಾದಶ್ರೀಗುರುರಂಗ ನಿನ್ನ ಸು- ಪಾದನಂಬಿದ ರಂಗದಾಸನ ಪರಮಯೋಗಿಯು ಎನ್ನಿಸೆನುತಲಿ 4 ಅಷ್ಟಾಕ್ಷರದ್ವಯದರ್ಥದಿ ನಿಷ್ಠಾಪರನಾಗಿ ಮನದಿ ನಿರುತಂ ಜಪಿಸಲ್ ಇಷ್ಟಾರ್ಥವು ಸಿದ್ಧಿಸುತಂ ಅಷ್ಟಮನೋಳ್ಬೆರದುನಿಲ್ವನಿದು ಸಿದ್ಧಾಂತಂ ಕಂದ
--------------
ರಂಗದಾಸರು
ಮಗುವಿನ ಮರುಳಿದು ಬಿಡದಲ್ಲ - ಈ ಪ ಜಗದೊಳು ಪಂಡಿತರಿದ ಬಿಡಿಸಿ ಅ ನೀರನು ಕಂಡರೆ ಮುಳುಗುತಿದೆ - ತನ್ನಮೋರೆಯ ತೋರದೆ ಆಡುತಿದೆಧಾರಿಣಿ ಹಲ್ಲಲಿ ಎಳೆಯುತಿದೆ - ದೊಡ್ಡಭೈರವಾಕಾರದಿ ಕೂಗುತಿದೆ 1 ಪೊಡವಿಯ ಕೊಟ್ಟಗೆ ಅಳೆಯುತಿದೆ - ತನ್ನಕೊಡಲಿಯೊಳು ಭೂಪರ ಕಡಿಯುತಿದೆಅಡವಿ ಕೋತಿಗಳ ಕೂಡುತಿದೆ - ಚೆಲ್ವಮಡದಿಯರನು ಹಿಡಿದೆಳೆಯುತಿದೆ 2 ಉಟ್ಟಿದ್ದ ವಸ್ತ್ರವ ಬಿಸುಡುತಿದೆ - ತನ್ನದಿಟ್ಟ ತೇಜಿಯನೇರಿ ನಲಿಯುತಿದೆಸೃಷ್ಟಿಯೊಳು ಭೂಸುರರ ಪೊರೆದ ಜಗಜಟ್ಟಿಯಾದಿಕೇಶವ ರಾಯನಂತೆ 3
--------------
ಕನಕದಾಸ
ಸೈಯವ್ವ ಇದು ಸೈಯೆ, ಗೋಪಿ, ಸೈಯವ್ವ ಇದು ಸೈಯೆ ಪ ಸೈಯೆ ಗೋಪಿ, ನಿನ್ನ ಮಗರಾಮನಿಗೆ ಒಳ್ಳೆ ಬುದ್ಧಿ ಕಲಿಸಿದ್ದೀಯೆ ಅ ಸಂಜೆಯ ವೇಳೆಗೆ ಬಂದು - ಸಟೆಯಲ್ಲ - ಮನೆಯ ಒಳಗಡೆ ನಿಂದುಕುಂಜರಗಮನೆ ಬಾರೆಂದು ಎನ್ನ ಮುಂಗುರುಳ ತಿದ್ದಿದಗಂಜಿ ಶಲ್ಯವ ಎನಗೆ ಮುಸುಕಿಟ್ಟು ಮುದ್ದಾಡಿ ಕಡೆಗೆಕಂಜಲೋಚನೆ ಕುಚದ ಗಂಟು ಬಿಚ್ಚೆಂದ ನೋಡು 1 ಬಿಟ್ಟ ಮಂಡೆಯಲಿ ಗಂಡ ಮೈಮರೆತು ಮಲಗಿಹುದ ಕಂಡುಜುಟ್ಟನ್ನು ಬಿಚ್ಚಿ ಮಂಚದ ನುಲಿಗೆ ಬಿಗಿದು ಕಟ್ಟಿದಕೊಟ್ಟಿಗೆ ಸುಡುತಿದೆ ಏಳೆಂದು ಬೊಬ್ಬೆಯಿಟ್ಟುದ ಕೇಳಿಥಟ್ಟನೇಳಲು ಗಂಡ, ಜುಟ್ಟು ಕಿತ್ತು ಹೋಯಿತಮ್ಮ2 ಅಡವಿ ಜಟ್ಟಿಂಗನ ಮಾಡಲಿಕೆ ಒಳ್ಳೆ ಸಡಗರ ಸಂಭ್ರಮದಿಂದಹೆಡಗೆ ತುಂಬ ಹೋಳಿಗೆ ಮಾಡಿ ಕೊಡ ನೀರು ತರಲು ಹೋದೆನೆಕಡೆಗೊಂದು ಹೋಳಿಗೆ ಬಿಡದೆ ಕೊಡದುಪ್ಪ ಹಾಲ್ಮೊಸರು ಪಾಯಸಕಡು ಫಟಿಂಗ ತುಡುಗು ತಿಂದು ಮೀಸಲಳಿದು ಎಡೆಗೆಡಿಸಿ ಹೋದನೆ 3 ಊರೊಳಿಂತಾಯ್ತೆಂದು ಸಾರಿದೆವೆ ನಾರೇರುಅಡವಿಯಲಿ ಕೂಡಿದೆವೆ ಹಲವಾರು ಹೆಂಗಸರುನೂರಾರು ಗೆಳತೇರು ಉಳಿದ ಹಾಲನು ಮಾರಿದಾರಿ ಹಿಡಿದು ಬರುವಾಗೊಂದು ಕೊಳವ ಕಂಡೆವೆ ನೊಡು 4 ಓರಗೆ ಹೆಂಗಳು ನಾವು ನೀರಾಟವಾಡಲಿಕೆಸೀರೆ ಕುಬಸವ ದಡದೊಳಿಟ್ಟು ಕೊಳಕೆ ಧುಮುಕಿದೆವೆಚೋರ ನಿನ್ನ ಮಗ ಸೀರೆಕುಬಸವನೆಲ್ಲ ತಕ್ಕೊಂಡು ಹೋಗಿತೋರದುಂಚ ಕಡಹದ ಮರನೇರಿ ನೋಡುತ ಕುಂತನೆ 5 ನೆಟ್ಟನೆ ನೀರಾಟವಾಡಿ ನಾಲ್ಕೂ ದಿಕ್ಕಿನಲಿ ನಾವು ಅಡರಿದೆವೆಇಟ್ಟಲ್ಲಿ ಸೀರೆಕುಬಸಗಳಿಲ್ಲ ಕೆಟ್ಟೆವಯ್ಯಯ್ಯೋಕಿಟ್ಟನ ಕೈಚಳಕವೆಂದು ನಾವಷ್ಟದಿಕ್ಕುಗಳ ನೋಡಿದೆವೆತುಟ್ಟತುದಿ ಕೊಂಬೆಯಲಿ ಕುಂತಿರುವ ಪುಟ್ಟನ್ನ ಕಂಡೆವೆ 6 ಮುಂದೆ ಹಸ್ತದಿ ಮುಚ್ಚಿಗೊಂಡು ಕೃಷ್ಣನಿಗೆ ಗೋಗರೆದು ಕೇಳಲುವಂದನೆ ಮಾಡಿದರೆ ನಿಮಗೆ ಸೀರೆ ಕುಬಸವ ಕೊಡುವೆನೆಂದಒಂದು ಕರದಿ ಮುಗಿವೆವೆಂದರೆ ಎರಡು ಕರದಿ ಮುಗಿಯಿರೆಂದಬಂಧನಕ್ಕೊಳಗಾದೆವೆಂದು ವಿಧಿಯಿಲ್ಲದೆ ಮುಗಿದೆವೆ 7 ಪುಷ್ಪಗಂಧಿಯರೆ ಒಪ್ಪಿತವಾಗಲಿಲ್ಲ ನನ್ನ ಮನಕೆಚಪ್ಪಾಳೆ ಇಕ್ಕುತ ಮರದ ಸುತ್ತ ತಿರುಗಿರೆಂದತಪ್ಪದು ಎಷ್ಟೊತ್ತಾದರು ಬಿಡನೆಂದು ಜಯಜಯವೆನುತಚಪ್ಪಾಳೆ ಇಕ್ಕುತ ಮರದ ಸುತ್ತಲೂ ತಿರುಗಿದೆವೆ8 ಪಗಡೆಕಾಯಿ ಕುಚದ ದಗಡಿಯರೆ ಪುಗಡಿ ಹಾಕಿರಿ ಎನ್ನೆದುರುತೆಗೆದು ಕೊಡುವೆ ನಿಮ್ಮ ವಸ್ತ್ರಗಳ ಬಗೆಬಗೆಯಿಂದಜಗದೊಳು ನಗೆಗೇಡಾದೆವು ಇನ್ನು ನುಡಿದು ಫಲವಿಲ್ಲೆಂದುಪುಗಡಿ ಹಾಕಿದೆವೆ ನಾವು ಛೀ ಛೀ ಎನ್ನುತಲಿ 9 ಕಡೆಯಾಟ ಕಮಲನೇತ್ರೆಯರೆ ಎಡೆಯಾಗಿ ಹೋಗಿ ನಿಲ್ಲಿರಿಓಡಿಬಂದರೊಂಟಿಯಾಗಿ ಹಿಡಿದು ನೋಡಿ ಕೊಡುವೆ ಎಂದಕೋಡಗ ಕೊರವಂಗೆ ಸಿಕ್ಕಿ ಆಡಿದಂತೆ ನಾವಾಡಿದೆವೆಓಡಿ ಬಂದೊಬ್ಬೊಬ್ಬರಿಗೂ ಹಿಡಿದು ಸವರಿ ವಸ್ತ್ರವನಿತ್ತನೆ 10 ತಂಡತಂಡದ ನಮಗೆ ಬಣ್ಣಬಣ್ಣದ ಬಳೆಯನಿಟ್ಟುಮಂಡೆ ಬಾಚಿ ಕುರುಳ ತಿದ್ದಿ ಕುಂಕುಮವಿಟ್ಟನೆಪುಂಡ ನಿನ್ನಣುಗ ನೆಲೆಯಾದಿಕೇಶವರಾಯಬಂಡು ಮಾಡಿ ಬಳಲಿಸಿ ಕೊನೆಗೆ ರಮಿಸಿ ಕಳಿಸಿಕೊಟ್ಟನೆ 11
--------------
ಕನಕದಾಸ