ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವ ತ್ರಾಣವು ಎನ್ನೊಳಿನಿತಿಲ್ಲವಯ್ಯ ಭಾವಜಪಿತ ನೀನೆ ದಯಮಾಡಬೇಕೊ ಪ ಗುಡಿಯ ಕಟ್ಟಿಸಲೆ ನಾ ಒಡುಕುಕವಡೆನಗಿಲ್ಲ ಬಡವರಿಗೆ ಅನ್ನಿಟ್ಟಿಲೆ ಹಿಡಿಧಾನ್ಯವಿಲ್ಲ ಕೊಡುವೆನೆನೆ ಧರ್ಮವ ಪಡೆದು ನಾ ಬಂದಿಲ್ಲ ಬಿಡುವೆನೇ ದು:ಸ್ಸಂಗ ಅಡರಿಹ್ಯರು ರಿಣವು 1 ದೃಢಧ್ಯಾತ್ಮಗೈವೆನೆನೆ ನಡೆವ ಶಕ್ತ್ಯೆನಗಿಲ್ಲ ಮಡಿಮಾಡ್ವೆನೆನೆ ಮನವು ತಡೆವಶಕ್ತಿಲ್ಲ ಸುಡಲೆ ಕಾಮಾದಿಗಳು ತೊಡರಿಹ್ಯದು ಸಂಸಾರ ನುಡಿಯಲೆ ಸತ್ಯ ಸದಾ ಬಡವನಾಗಿಹೆನು 2 ಒಡೆಯ ಶ್ರೀರಾಮ ನಿನ್ನಡಿಯ ಗುರುತರಿಯೆ ಕಡುಮೂರ್ಖ ಜನ್ಮವನು ಪಡೆದಿಹೆನು ಜಗದಿ ಒಡೆಯ ಸರ್ವಕೆ ನೀನೆ ಜಡಮತಿಯು ಗಡ ಕಡಿದು ದೃಢಭಕ್ತಿ ಸುಖವಿತ್ತು ಪಿಡಿದು ಸಲಹಯ್ಯ 3
--------------
ರಾಮದಾಸರು
ಕೆಡಬೇಡವೋ ಎಲೆ ಕರ್ಮಿ ಮನುಜ ನೀಕೆಡದಿಹ ಪಥವ ಕೇಳಿನ್ನು ಪ ಹಿಂಡು ಹಿಂಡು ಸಂದಳಿಯ ಬಿಡು ಇನ್ನು 1 ಬಹುಗೃಹ ಕಟ್ಟಿದೆ ದಿಕ್ಕಿಲ್ಲವೆಂಬೆ ಬಹು ಗೃಹವನು ಸುಡಲೆನ್ನುಇಹುದಿದು ದ್ರವ್ಯವು ಇದಕೇನೆಂಬೆಯ ಇಹುದನು ಧರ್ಮವ ಮಾಡಿನ್ನುದಾಹದಿ ಗಳಿಸಿದೆ ಆಸ್ತಿಯನೆಂಬೆಯ ಸಜ್ಜನರಿಗೆ ಕೊಳ್ಳೆನ್ನುಇಹೆ ನಾಲಕು ದಿನ ಎಂಬ ಭ್ರಮೆಯನು ಇಡು ಪಾದರಕ್ಷೆಯೊಳಿನ್ನು 2 ಮತಿವಂತರು ಆರಿಲ್ಲವೆಂಬೆಯ ಮತಿಗೆ ಶಿವ ತಾನಿಹೆನೆನ್ನುಗತಿಯೇನಿನ್ನು ಈ ಕುಟುಂಬಕೆಂಬೆಯ ಗತಿಯಿದ್ದಾಗುವುದೆನ್ನುಅತಿ ಋಣ ಭಾರವು ಆಗಿಹುದೆಂಬೆಯ ಆರಿಗೆ ಋಣ ಎಂದೆನ್ನುಸುತರಿಲ್ಲ ತನಗೆ ಗತಿಯಿಲ್ಲವೆಂಬೆಯ ಸುತರಿಂದ ಗತಿಯು ಸಾಕಿನ್ನು 3 ಪರ ಬ್ರಹ್ಮವ ನೋಡುತ ಸುಖದಲಿ ಆನಂದದಿ ಮಲಗಿನ್ನು4 ನಿರಂಜನ ನಿರವಯ ನಿತ್ಯನು ಬೇರಿಲ್ಲೆನ್ನುಪ್ರತ್ಯಗಾತ್ಮ ಪರಾತ್ಪರ ಪರತರ ಪ್ರತ್ಯಗೆ ತಾನಹುದೆನ್ನುಚಿತ್ತಿನ ಪ್ರಭೆಯದು ಢಾಳಿಸುತಿರುತಿರೆ ಚಿತ್ತವಲಯ ಮಾಡಿನ್ನುಪ್ರತ್ಯಗಾತ್ಮ ಚಿದಾನಂದನ ನೆನೆಯುತ ಪ್ರಾಣವ ಕಳೆಯಿನ್ನು 5
--------------
ಚಿದಾನಂದ ಅವಧೂತರು