ಒಟ್ಟು 9 ಕಡೆಗಳಲ್ಲಿ , 8 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ದಾಸರ ದಾಸ ನಾನಯ್ಯ-ಹರಿ- ಯನ್ನನುಪೇಕ್ಷಿಪರೇನಯ್ಯ ಪ ಕಾಮಕ್ರೋಧಗಳಿನ್ನೂ ಬಿಡಲಿಲ್ಲ-ನಿನ್ನ- ಪ್ರೇಮವೆನ್ನೊಳುಕಾಲಿಡಲಿಲ್ಲ ತಾಮಸಬೀಜವ ಸುಡಲಿಲ್ಲ1 ಆಚಾರದಲಿ ಕಾಲಗತಿಯಿಲ್ಲ-ಬಲು-ನೀಚರ ಸಂಗಕೆ ಮಿತಿಯಿಲ್ಲ ಪ್ರಾಚೀನ ಕರ್ಮಕ್ಕೆ ಚ್ಯುತಿಯಿಲ್ಲ-ಇದ- ಗೋಚರಪಡಿಸುವ ಮತಿಯಿಲ್ಲ 2 ದೇಹದಿ ಬಲವಿಲ್ಲವಾದರೂ-ವ್ಯಾ- ಮೋಹವು ಬಿಡದಲ್ಪವಾದರೂ ಗೇಹದಿ ಸುಖವಿಲ್ಲದಿದ್ದರು-ಈ ಸೋಹಮೆಂಬುದಕಿಲ್ಲ ಬೆಸರು 3 ದಾಸರ ಸಂಗದೊಳಾಡಿಸು-ಹರಿ-ವಾಸರವ್ರತದೊಳು ಕೂಡಿಸು ವಾಸುದೇವನೆ ನಿನ್ನ ಪಾಡಿಸು-ಸಿರಿವಾಸನಾಮದ ಸವಿ ಯಾಡಿಸು4 ಶರಣವತ್ಸಲನಹುದಾದರೆ-ಘನ-ಕರುಣಾರಸನಿನಗುಳ್ಳರೆ ವಿಠಲ ನೀನೆ ನಮ್ಮದೊರೆ 5
--------------
ಸರಗೂರು ವೆಂಕಟವರದಾರ್ಯರು
ನಿನ್ನ ದಾಸರದಾಸ ನಾನಯ್ಯ ಹರಿ ಎನ್ನನುಪೇಕ್ಷಿಪರೇನಯ್ಯ ಪ ಪ್ರೇಮವೆನ್ನೊಳು ಕಾಲಿಡಲಿಲ್ಲ ಭವ ತಾಮಸ ಬೀಜವ ಸುಡಲಿಲ್ಲ 1 ನೀಚರ ಸಂಗಕೆ ಮಿತಿಯಿಲ್ಲ ಗೋಚರಪಡಿಸುವ ಮತಿಯಿಲ್ಲ 2 ದೇಹದಿ ಬಲವಿಲ್ಲವಾದರೂ ವ್ಯಾ ಮೋಹವು ಬಿಡದಲ್ಪವಾದರೂ ಸೋಹಮೆಂಬುದಕಿಲ್ಲ ಬೇಸರು3 ದಾಸರ ಸಂಗದೊಳಾಡಿಸು ಹರಿ ವಾಸರವ್ರತದೊಳು ಕೂಡಿಸು ಸಿರಿ ವಾಸನಾಮದ ಸವಿಯೂಡಿಸು 4 ಕರುಣಾರಸನಿನಗುಳ್ಳರೆ ಸಿರಿವರದವಿಠಲ ನೀನೆ ನಮ್ಮ ದೊರೆ 5
--------------
ವೆಂಕಟವರದಾರ್ಯರು
ಬೇಡಿ ಕಡದೀತು ಎನ್ನ ಬೇಡಿ ಕಡದೀತು ಪ ಮೂಢ ಜನರ ಸಂಗ ತ್ಯಜಿಸಿ ಗೂಢವಾದ ಸಾಧುವೆನಿಸಿ ಅ.ಪ. ಘೋರ ಸಂಸಾರ ಬೇಡಿ ಆರು ಅಹಿತರೆನ್ನ ಕಾಡಿ ಗಾರು ಮಾಡಿ ಜಡಿಯ ಕೂಡಿ ಪಾರ ಮಾಡಿದೆನ್ನ ನೋಡಿ1 ಮೋಹಪಾಶದೊಂದು ಕಟ್ಟು ದೇಹವೆಲ್ಲ ತೊಡರಿ ಬಿಟ್ಟು ಗೇಹ ತೊಲಗದಂದ ಬಿಟ್ಟ ನೇಹ ತವಿಸೆ ಕರುಣವಿಟ್ಟು 2 ಭವ ಮೋಹ ಸುಡಲಿ ಉರಿವ ಕ್ಲೇಶಗಳು ಸಿಡೀಲಿ ಕೊರೆವ ಸಂಸ್ಕøತಿ ಜಾಲಕ ತೇಲಿ ನರಸಿಂಹವಿಠಲಾ ಕೊಡಲಿ 3
--------------
ನರಸಿಂಹವಿಠಲರು
ಮಗನೇ ಅವನೀಗ ತಾನೇಕೆ ಸುಡಲಿ ಮಾತೃವ ಬಳಲಿಪಮಗನೇ ಅವನೀಗ ತಾನೇಕೆ ಸುಡಲಿಮಗನಿಗೆಂತೆಂದು ಹೇಳಿಯೆ ಕೊಂಬ ಮ-ಲಗುವಳ ಮರಳೆಗೆ ನಾನೇನೆಂಬೆ ಪ ಮಡದಿಯ ಎತ್ತರಕೇರಿಸಿಹ ಹಡದ ತಾಯಿಗೆಝಡಿವ ಗಂಟುಗಳನೇ ಹೊರಿಸಿಹ ಹುಡುಗರ ಕೊಟ್ಟಿಹತುಡುಗ ರಂಡೆಮಗಳೋಡೋಡಿ ಬಾಯೆಂದುಬಿಡು ಮಾತುಗಳಿಂದ ಬೈಯುತಲಿ 1 ಒಳ್ಳೆಯದನು ತಾನುಣುತಲಂದು ನುಚ್ಚನು ನುರಿಯನುಕಲ್ಲಗಡಿಗೆಯೊಳು ಕುದಿಸಿಕೋ ಎಂದು ಕೆಕ್ಕರಿಸು-ತಲಂದು ಹಲ್ಲ ಕಿಸುವಳಿಗೆ ಜರಿಯ ಸೀರೆಯನುಡಿಸಿಝಲಕ ಬಟ್ಟೆಯ ಹಚ್ಚಿಕೋ ಎಂಬ 2 ಪಾತಕಿ ನಿನಗೆಂತೊಲಿವನು 3
--------------
ಚಿದಾನಂದ ಅವಧೂತರು
ಸಾರಿದ ಡಂಗುರ ಯಮನು ಪ ಅಘ ನಾರೇರ ಎಳತಂದು ನರಕದಲ್ಲಿಡಿರೆಂದು ಅ.ಪ. ಹೊತ್ತಾರೆ ಎದ್ದು ಪತಿಗೆ ಎರಗದವಳ ಮೃತ್ತಿಕೆ ಶೌಚ ಮಾಡದೆ ಇಪ್ಪಳಾ ಬೆತ್ತಲೆ ಕುಳಿತು ಮೈದೊಳೆವಳ ನಾದಿನಿ ಅತ್ತೆ ಮಾವನ ಬೈವವಳೆಳೆದು ತನ್ನೀರೆಂದು 1 ತಿಲಕಾಯುಧವ ಬಿಟ್ಟು ಕುಂಕುಮವಿಡುವಳ ಬೆಳಗಾದ ಕಾಲಕ್ಕೂ ಮಲಗಿಪ್ಪಳ ಮಲಿನ ವಸ್ತ್ರದಲಿ ಪತಿಯ ಬಳಿಗೆ ಪೋಗುವಳ ಕಲಹಕಾರಿಯ ಹಿಡಿದೆಳೆದು ತನ್ನಿರಿಯೆಂದು 2 ಉತ್ತಮ ಗುರುಹಿರಿಯರನು ನಿಂದಿಸುವಳ ಪೆತ್ತ ಮಕ್ಕಳ ಮಾರಿ ಬದುಕುವಳ ಪ್ರತ್ಯೇಕ ಶಯ್ಯದಿ ಮಲಗಿ ಇಪ್ಪಳ ಪಿಡಿ ದೆತ್ತ ಎಳೆದು ತಂದು ನರಕದಲ್ಲಿಡಿರೆಂದು 3 ಜಲ ಜಕ್ಕಿ ಸಾಳಿ ಕಂಬಳಿ ಬೋಳಿ ಬಕ್ಕಿ ಗೊಂ ಡಳಿ ಮೊದಲಾದವು ದೈವವೆಂದು ತಿಳಿದು ಪಿಶಾಚಿ ಎಂಜಲ ಉಂಡು ಹಿಗ್ಗುವ ಲಲನೇರಾ ಸೆಳೆದು ತನ್ನಿರೋ ಎಂದು 4 ನಾಗೇಂದ್ರ ಶಯನನ ದಿನದುಪವಾಸದ ಜಾಗರ ಮಾಡದೆ ಮಲಗಿಪ್ಪಳಾ ಭಾಗವತ ಸಚ್ಛಾಸ್ತ್ರ ಕೇಳದೆ ಉನ್ಮತ್ತ ಳಾಗಿರುವಳ ಎಳೆದು ತನ್ನಿರೆಂದು 5 ಗಂಡ ನಿರ್ಧನಿಕನೆಂದಪಮಾನ ಮಾಳ್ಪಳ ಉಂಡ ಶೇಷಾನ್ನುವನುಣಿಸುವಳಾ ಕೊಂಡೆ ಮಾತುಗಳಾಡಿ ಕಳವಳಗೊಳಿಪಳ ಮಂಡೆಗೊದಲು ಹಿಡಿದು ಎಳೆದು ತನ್ನಿರಿ ಎಂದು6 ಉಡಲಿಲ್ಲ ಉಣಲಿಲ್ಲ ಇಡಲಿಲ್ಲ ತೊಡಲಿಲ್ಲ ಸುಡಲಿಗಂಡನ ಒಗೆತನವೆನ್ನುತಾ ಹಡೆದವರನು ನುಡಿನುಡಿಗೆ ಬಯ್ಯುತಿಪ್ಪಂಥ ಕಡು ಪಾಪಿಗಳ ಹೆಡ ಮುಡಿಗಟ್ಟಿ ತನ್ನಿರಿ ಎಂದು7 ಸಾಲೆಡೆಯಲಿ ಭೇದ ಮಾಡಿ ಬಡಿಸುವಳ ನೀಲಾಂಬರವನುಟ್ಟು ಮಡಿಯೆಂಬಳ ಬಾಲಕರ ಬಡಿದಳಿಸುತಿಪ್ಪಳ ಹಿಂ ಗಾಲ ತೊಳೆಯದವಳ ಎಳೆದು ತನ್ನಿರೋ ಎಂದು8 ಪತಿಗೆ ಬೇಕಾದವರ ಅಪಮಾನ ಮಾಳ್ಪಳ ಮೃತವತ್ಸ ಗೋವಿನ ಪಾಲುಂಬಳಾ ಹುತವಾದ ಅಗ್ನಿ ತೊಳೆದು ನಂದಿಸುವಳ ಮತಿಗೇಡಿಯ ಬಿಡದೆಳೆದು ತನ್ನಿರೋ ಎಂದು 9 ಒಲಿವ ಔಷಧ ಮಾಡಿ ಪತಿಯ ಬಳಲಿಸುವಳ ಮಲಮಕ್ಕಳೊಳು ಮತ್ಸರಿಸುತಿಪ್ಪಳಾ ಕಳವಿಲಿ ಕಾಂತನ ಧನವ ವಂಚಿಸುವಳ ಗಳಕೆ ಪಾಶವ ಕಟ್ಟ ಎಳೆದು ತನ್ನಿರೋ ಎಂದು 10 ಮಿಥ್ಯಾವಾದಿಯ ಕೂಡ ಸ್ನೇಹ ಮಾಳ್ಪಳಾ ವೃತ್ತಿಲಿ ಬದುಕುವಳೆಳೆದು ತನ್ನಿರೋ ಎಂದು 11 ಲಶನು ವೃಂತಕಾದಿಗಳನು ಭಕ್ಷಿಸುವಳಾ ಸೊಸೆಯರೊಡನೆ ಮತ್ಸರಿಸುತಿಪ್ಪಳಾ ಹಸಿದು ಬಂದವರಿಗೆ ಅಶನವಿಲ್ಲೆಂಬಳಾ ಉಸಿರು ಬಿಡದಂತೆ ಎಳೆದು ತನ್ನಿರೊ ಎಂದು 12 ತುಲಸಿ ವೃಂದಾವನಕಭಿನಮಿಸದವಳ ಜಲವ ಸೋಸದೆ ಪಾನವ ಮಾಳ್ಪಳಾ ಫಲ ಧಾನ್ಯಾದಿಗಳ ನೋಡದೆ ಪಾಕ ಮಾಳ್ಪಳ ಮಳೆ ಗಾಳಿ ನಿಂದಿಪಳ ಎಳೆದು ತನ್ನಿರೋ ಎಂದ 13 ಮೀಸಲು ಮಡಿ ಎನ್ನದೆ ಭಕ್ಷಿಸುವಳ ಕೇಶಿಯೊಡನೆ ಗೆಳೆತನ ಮಾಳ್ಪಳ ದಾಸೆರಿಂದಲಿ ಪಾಕ ಪಾತ್ರೆ ಮುಟ್ಟಿಸುವಳ ನಾಸಿಕ ಬಂಧಿಸಿ ಎಳೆ ತನ್ನಿರೋ 14 ಬಾಲಕರನು ತೊಟ್ಟ್ಟಿಲೊಳಿಟ್ಟು ತೂಗುತ ಪಾಲೆರೆವುತ ಬೀಸುತ ಕಟ್ಟುತಾ ಆಲಯದೊಳು ಕೆಲಸಗಳ ಮಾಡುತ ಲಕ್ಷ್ಮೀ ಲೋಲನ ಗುಣವ ಪಾಡುವರ ಮುಟ್ಟದಿರೆಂದು15 ಅರಿಷಣ ಕುಂಕುಮ ಪುಷ್ಟಾಂಜನ ವಸ್ತ್ರಾ ಸರಸವಾಡುತ ಸುಖ ಹರಿಗೆ ಅರ್ಪಿತವೆಂಬ ಹರಿದ್ದೇರಿದೆಡೆಗೆ ಕೈಮುಗಿದು ಬನ್ನಿರಿ ಎಂದು16 ಅಗಣಿತ ಮಹಿಮ ಶ್ರೀ ಜಗನ್ನಾಥ ವಿಠಲನ್ನ ಬಗೆಬಗೆಯಿಂದ ಪಾಡುತಲೀ ಹೊಗಳುವ ದಾಸರ ಬಗೆಯ ನೇಮಿಸಿ ಕಾಯ್ವ ಸುಗುಣೇರಿದ್ದೆಡೆಗೆ ಕೈಮುಗಿದು ಬನ್ನಿರೆಂದು 17
--------------
ಜಗನ್ನಾಥದಾಸರು
ಹಿಡಿಹಿಡಿಕೈಯ್ಯ ಬಿಡಲೇತಕೆ ಕೇಳೊ ಜೀಯಾ ಪ ಒಡೆಯನಲ್ಲವೆ ನಿನ್ನ ಅಡಿಗಳೆರಡಕ್ಕೆನ್ನ ಮುಡಿಯನಿಡುವೆನೆಲ್ಲೊ ಸುಡಲಿ ಜನ್ಮವು ಬಿಡದೆ 1 ಶ್ರೀಧರ ನಾರಾಯಣನೆ ಬೋಧಿಸಬೇಕೋ ಬಿಡದೆ 2 ವಾಸವಾನುತ ಹರಿದಾಸ ತುಲಸಿರಾಮ ದೇಶಿಕನಾದ ಪರಮಾತ್ಮನೆನಾ ಕೈ ಬಿಡದೆ 3
--------------
ಚನ್ನಪಟ್ಟಣದ ಅಹೋಬಲದಾಸರು
ಹೀಂಗ್ಯಾಕ ಪ್ರಾಣಿ | ಹೀನ ಗುಣಗಳನೆಬಿಡಲಿಲ್ಲ | ಶ್ರೀ ಗುರುವಿನಾಶೆಯ ಮಾಡಲಿಲ್ಲ ಪ ವಿವೇಕವ ತೊಡಲಿಲ್ಲ ಅ-ವಿವೇಕವ ಸುಡಲಿಲ್ಲ |ಸಾವಧಾನದಿ ಮನವಿಡಲಿಲ್ಲ 1 ಆಚಾರವ ಕೊಳಲಿಲ್ಲಮತ್ಸರವ ಮರೆಯಲಿಲ್ಲಸಚ್ಚಿದಾನಂದ ಸುಖ ಉಣಲಿಲ್ಲ 2 ಈ ನಡತೀ ತರಹವಜಾಣನಾದವನೇ ಬಲ್ಲ |ಜ್ಞಾನಬೋಧನು ಸಾರಿದ ಸೊಲ್ಲ 3
--------------
ಜ್ಞಾನಬೋದಕರು
ಮಡಿ ಮಡಿದ ಮಡಿಯೆಂದು ಮುಮ್ಮಾರು ಹಾರುತಿ |ಮಡಿಯೆಲ್ಲಿ ಬಂದಿತೊ ಬಿಕನಾಶಿ ಪ.ಮಡಿಯು ನೀನೆ - ಮೈಲಿಗೆ ನೀನೆ - |ಸುಡಲಿ ನಿನ್ನ ಮಡಿ ಬಿಕನಾಶಿ ಅಪಎಲವು - ಚರ್ಮ - ಮಲ - ಮೂತ್ರ ಗುಂಡಿಯಲಿ |ನಲಿಯುತ ನಿಂತೆಯಾ ಬಿಕನಾಶಿ ||ನೆಲೆಗೊಂಡ ನವದ್ವಾರದ ಹೊಲೆಯೊಳು |ಅಳಲುತ ನೀ ಬಿದ್ದೆ ಬಿಕನಾಶಿ 1ಹುಟ್ಟಲುಸೂತಕ ಸಾಯಲುಸೂತಕ |ನಟ್ಟುನಡುವೆ ಬಂತೆ ಬಿಕನಾಶಿ ||ಬಿಟ್ಟು ಬಿಡದೆ ಕಾವೇರಿಯ ಮುಳುಗಲು |ಮುಟ್ಟು ಹೋಹುದೆ ಬಿಕನಾಶಿ 2ಚರ್ಮವು ತೊಳದರೆ ಕರ್ಮವು ಹೋಹುದೆ |ಮರ್ಮವ ತಿಳಿಯದೆ ಬಿಕನಾಶಿ ||ಬೊಮ್ಮನಯ್ಯ ಪುರಂದರವಿಠಲನ ಪಾಡಿ |ನಿರ್ಮಲದಿ ಬಾಳೆಲೊ ಬಿಕನಾಶಿ 3
--------------
ಪುರಂದರದಾಸರು