ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾರಿ ಹೇಳಿದೆ ಮೂರು ಬಾರಿ ಮನ ಬಾರದಿದ್ದವರು ದೂರಿದರೆನ್ನ ದೂರಿಪ ನರದೇಹವಿದು ನಂಬಬೇಡಿ ಭವ ಶರಧಿಯ ದಾಟಲುಪಾಯವ ಮಾಡಿ ಎರವಿನ ತನುವನು ನೋಡಿ ಶ್ರೀ ಗುರುವಿನ ಚರಣಕ್ಕೆ ಶೆರಗೊಡ್ಡಿ ಬೇಡಿ 1 ಗುರುವಿನಿಂದಧಿಕ ದೈವವಿಲ್ಲಾ ಇದ ನರಿಯದೆ ಕೆಡುವರು ಪ್ರಾಣಿಗಳೆಲ್ಲಾ ಅರಿತ ಸುಜ್ಞಾನಿಯೆ ಬಲ್ಲಾ ಉಪ ಕರಿಸಿ ಪೇಳುವೆನು ಕೇಳಿರೋ ಎನ್ನ ಸೊಲ್ಲಾ 2 ಸರಸಿಜೋದ್ಭವನ ಕೈಮಾಟಾ ಚೆಲ್ವ ಗಿರಿಜಾರಮಣನ ಸೂತ್ರದ ಗೊಂಬೆಯಾಟಾ ಬರಿದೆ ವಿಷ್ಣು ಮಾಯಾಕಾಟಾ ಶ್ರೀ ಗುರುವಿಮಲಾನಂದ ಹೇಳಿದ ಪಾಠಾ 3
--------------
ಭಟಕಳ ಅಪ್ಪಯ್ಯ
ಭಾರತಿಭಕುತಿಯನು ಕೊಡೆನಗೆಮಾರುತಿಸತಿನೀನು ಪ.ಮೂರು ಲೋಕದೊಳು ಯಾರು ನಿನಗೆಸರಿ ಮಾರಾರಿಗಳಿಂದಾರಾಧಿತಳೆ ಅ.ಪ.ಸುಂದರಿ ಶುಭಕಾರಿ ಸುಮನಸ-ವೃಂದಶೋಭಿತಕಬರಿಮಂದಹಾಸ ಮುಖದಿಂದಲಿ ನೋಡಿ ನಿನ್ನಕಂದನೆಂದು ಎನ್ನ ಮುಂದಕೆ ಕರೆಯೆ 1ವಾಣಿ ಎನ್ನ ವದನದಲ್ಲಿಡುಮಾಣದೆಹರಿಸ್ತವನವೀಣಾಧೃತ ಸುಜ್ಞಾನಿಯೆ ಪಂಕಜ-ಪಾಣಿಯೆ ಕೋಕಿಲವಾಣಿಯೆ ಎನ್ನಯ 2ಮಂಗಳಾಂಗಿಯೆ ಎನ್ನಅಂತರಂಗದಲ್ಲಿ ಮುನ್ನತುಂಗವಿಕ್ರಮ ಗೋಪಾಲವಿಠಲನ್ನಹಿಂಗದೆ ನೆನೆವ ಸುಖಂಗಳನು ಕೊಡೆ 3
--------------
ಗೋಪಾಲದಾಸರು