ಒಟ್ಟು 8 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಜ್ಞಾನಿ ಜೀವನಿಗೆ ಅಭಿಮಾನ ಬಹಳ ಸುಜ್ಞಾನಿಯಾ ನುಡಿಯ ಲಕ್ಷಿಸನು ಕೇಳಾ ಪ ಬುದ್ಧಿ ಮನದೇಹಗಳು ತಾನೆಂದು ತಿಳಿಯುತಲಿ ಇದ್ದುದನು ಮರೆತು ತಾ ಜಾಣನೆನಿಸುವನು ಒದ್ದಾಡುತಿದ್ದರೂ ಅಭಿಮಾನವನೆ ಹÉೂತ್ತು ಗುದ್ದಾಡುತಲಿ ತಾನು ಸುಖವ ಹುಡುಕುವನು 1 ಸಟಿಯಾದ ಸಂಸಾರ ದಿಟವೆಂದು ನಂಬುತಲಿ ಸೆಟೆದಾಡುತಿರುವೆಯೋ ತಿಳಿದು ನೋಡಾ ಹಟವ ಹಿಡಿಯಲು ಬೇಡ ತೋರ್ಪುದೇ ದಿಟವೆಂದು ನಟನೆಯಾ ಮಾತಲ್ಲವೆನೆ ಕೇಳನವನು 2 ಅರಿ ನೀನು ನಿನ್ನ ಅರಿವಿನಾ ಹೊರತು ನೀ ಸುಖ ಪೊಂದಲಾರೆ ಆರು ಸುಖಪಡೆದಿಲ್ಲ ಅಜ್ಞಾನದಿಂದೆನಲು ಇರಲಿ ಹೋಗೆಂದೆನುತ ಮೋರೆ ಹೊರಳಿಸುವಾ 3 ಬಾಳುವೆಯು ನಿಜವೆಂದು ನಂಬಲಿವನಾ ಗೋಳು ಗಾಳಿಯನೆ ಗುದ್ದಿ ಮೈ ನೊಯ್ಸಿಕೊಂಡಂತೆ ಕೇಳು ಚಿತ್ರದೊಳಿರುವ ಬೆಂಕಿ ತಾ ದಿಟವೆಂದು ಮೇಲೆ ನೀರೆರೆದಂತೆ ಎನೆ ಕೇಳನವನು 4 ಗೊಡ್ಡು ಮಾತೆಂದು ತಾ ಜ್ಞಾನಕೆರವಾಗುತಲಿ ದಡ್ಡತನವನೆ ತೋರಿ ದುಃಖಿಯಾಗುವನು ಶುದ್ಧಜ್ಞಾನವನಂಬಿ ತನ್ನ ತಾ ತಿಳಿಯದಲೆಬುದ್ಧ ಶಂಕರನುಕ್ತಿಗೆರವಾಗುತಿಹನು 5
--------------
ಶಂಕರಭಟ್ಟ ಅಗ್ನಿಹೋತ್ರಿ
ತೆರಳಿ ಪೋದರು ದಿವ್ಯ ನರಹರಿಯ ಪುರಕೆ ಶ್ರೀ ವರತಂದೆ ಮುದ್ದುಮೋಹನರೂ ಪ. ಕರಿಗಿರಿ ಕ್ಷೇತ್ರದಲಿ ತೊರದು ಭೌತಿಕ ದೇಹ ಪರಮ ಉಲ್ಲಾಸದಿಂದಾ ನಂದಾ ಅ. ಪರಿಪರೀ ಪೂಜಿಸಿದ ಪರಮ ಭಕ್ತರಿಗೆ ತಾವ್ ತೆರಳುವೋಪರಿ ತಿಳಿಸದೇ ಪರಮ ಕರುಣಾಳು ಹೆಂಗರುಳಿನಾ ಖಣಿ ಎಂಬ ತೆರವೆಲ್ಲರಿಗೆ ಮರೆಸದೇ ಪರಮಸುಜ್ಞಾನಿಯಾದಂಥ ಶಿಷ್ಯರಾ ಕರೆಸಿ ಅಗಲಿಸಿಕೊಳ್ಳದೇ ಪರಮ ಸಾಧ್ವೀಪತ್ನಿ ವರ ಪುತ್ರರಿರುತಿರಲು ಕಿರಿಶಿಷ್ಯನೊಬ್ಬನೆದುರೊಳ್ | ಜವದೊಳ್ 1 ಎಂಭತ್ತು ಮೇಲೆರಡು ವತ್ಸರವು ಧರಣಿಯೊಳು ಸಂಭ್ರಮದಿ ಧೃಡ ಕಾಯದೀ ತುಂಬಿ ತತ್ವಾಮೃತವು ಸುಜನರಾ ಹೃದಯದಲಿ ಕುಂಭಿಣಿಯೋಳ್ ದಾಸತ್ವದೀ ನಂಬಿಕೆಗಳಿತ್ತು ಸುಜ್ಞಾನಿಗಳಿಗಂಕಿತವು ಅಂಬುಜಾಕ್ಷನ ನಾಮದೀ ಒಂಭತ್ತು ವರ್ಷದಿಂ ಬೆಂಬಿಡದೆ ಕಾಯ್ದೆನ್ನ ಕುಂಭಿನಿಯ ತೊರೆದು ಈಗಾ | ಬೇಗಾ 2 ಶಾಲಿಶಕ ಸಾಹಸ್ರ ಅಷ್ಟ ಶತ ಅರವತ್ತು ಮೇಲೆರಡು ವಿಕ್ರಮದಲೀ ಕಾಲ ಮಧ್ಯಾಹ್ನ ಚೈತ್ರದ ಶುದ್ಧ ಶ್ರೀ ರಾಮ ನವಮಿ ಭೌಮವಾಸರದಲಿ ಆಲಿಸುತ ದಿವ್ಯ ಮಂತ್ರ ಶ್ರವಣ ಕೀರ್ತನವ ಶೀಲ ಶ್ರೀ ಗೋಪಾಲಕೃಷ್ಣವಿಠಲನ ಪುರಕೆ ಆಯಾಸಗೊಳದೆ ಮುದದೀ ತ್ವರದೀ 3
--------------
ಅಂಬಾಬಾಯಿ
ವಂದನೆ ಗೈವೆನು ಗುರುವೆ ಚರಣಾರವಿಂದದ್ವಯಕೆ ಮಣಿವೆ ನೀನೇ ಕಾಯೋ ಎನ್ನ ಸದ್ಗುರುವೆ ಪ ಬಂದು ಸೇರಿದೆ ನಾನು ಕರುಣ ಸಿಂಧುವೆ ಪಾಲಿಸುನೀನು ಮಂದಮತಿಯು ಜಡಜೀವನು ನಾನು ವಸುಂ ಧರೆಯೊಳಗೆ ಸುಜ್ಞಾನಿಯು ನೀನು 1 ಕಾರಗತ್ತಲೆಯೊಳಗೆ ಏನೆಂದು ತೋರದೆ ತೊಳಲಿದ ಹಾಗೆ ದಾರಿ ಕಾಣದೆ ಕಂಗಾಣದವಗೆ ಕೃಪೆ ದೋರಿ ಸುಜ್ಞಾನ ದೀಪವ ತೋರೋ ಗುರುವೆ 2 ಸೊಕ್ಕಿನ ಮದದಿಂದ ಕಾಲವ ಪುಕ್ಕಟೆಕಳೆದೆ ಯೋಗೀಂದ್ರ ದುಃಖವೆನಿಪ ಸಂಸಾರ ಶರಧಿಯೊಳು ಸಿಕ್ಕಿದೆ ಕಾಯೋ ಸದ್ಗುರು ದಿಗಂಬರನೇ 3
--------------
ಕವಿ ಪರಮದೇವದಾಸರು
ಸಾರಿ ಹೇಳಿದೆ ಮೂರು ಬಾರಿ ಮನ ಬಾರದಿದ್ದವರು ದೂರಿದರೆನ್ನ ದೂರಿಪ ನರದೇಹವಿದು ನಂಬಬೇಡಿ ಭವ ಶರಧಿಯ ದಾಟಲುಪಾಯವ ಮಾಡಿ ಎರವಿನ ತನುವನು ನೋಡಿ ಶ್ರೀ ಗುರುವಿನ ಚರಣಕ್ಕೆ ಶೆರಗೊಡ್ಡಿ ಬೇಡಿ 1 ಗುರುವಿನಿಂದಧಿಕ ದೈವವಿಲ್ಲಾ ಇದ ನರಿಯದೆ ಕೆಡುವರು ಪ್ರಾಣಿಗಳೆಲ್ಲಾ ಅರಿತ ಸುಜ್ಞಾನಿಯೆ ಬಲ್ಲಾ ಉಪ ಕರಿಸಿ ಪೇಳುವೆನು ಕೇಳಿರೋ ಎನ್ನ ಸೊಲ್ಲಾ 2 ಸರಸಿಜೋದ್ಭವನ ಕೈಮಾಟಾ ಚೆಲ್ವ ಗಿರಿಜಾರಮಣನ ಸೂತ್ರದ ಗೊಂಬೆಯಾಟಾ ಬರಿದೆ ವಿಷ್ಣು ಮಾಯಾಕಾಟಾ ಶ್ರೀ ಗುರುವಿಮಲಾನಂದ ಹೇಳಿದ ಪಾಠಾ 3
--------------
ಭಟಕಳ ಅಪ್ಪಯ್ಯ
ಸುಜ್ಞಾನಿ ನಡೆ ಬೇರೆ ಅಜ್ಞಾನಿ ನಡೆ ಬೇರೆ ಜ್ಞಾನದಿಂದ ಪ್ರಮಾಣಿಸಿ ನೋಡಲು ಪ ಸುಜ್ಞಾನಿ ನುಡಿಯದರ ಕಡೆತನಕ ಅಜ್ಞಾನಿ ನುಡಿ ಸದಕ ಸುಜ್ಞಾನಿಯನುಡಿ ಒಂದೆ ನಿರ್ಧಾರ ಅಜ್ಞಾನಿಯ ನುಡಿ ಪದರುದರ 1 ಸುಜ್ಞಾನಿ ಬಾಳು ಭವಲೂಟಿ ಕಡೆತನ ಅಜ್ಞಾನಿ ಬಾಳು ಸುಳ್ಳು ಮುಷ್ಟಿ ಸುಜ್ಞಾನಿಯ ವರ್ತನೇ ವಜ್ರದಗಟ್ಟಿ ಅಜ್ಞಾನಿವರ್ತನೆ ಗಾಳಿಯ ಮೊಟ್ಟೆಮೊಟ್ಟೆ 2 ಸುಜ್ಞಾನಿಗೆ ಮುಕ್ತಿಪಟ್ಟ ಕಡೆತನ ಅಜ್ಞಾನಿಗೆ ಮೃತ್ಯುಕಾಟ ಅಜ್ಞಾನಿಕಾಣುವ ಯಮನಗೂಟ ಸುಜ್ಞಾನಿ ಕಾಣುವ ಶ್ರೀರಾಮನಾಟ ಆಟ 3
--------------
ರಾಮದಾಸರು
ಹಂಸವಾಹನ ಜಾಯೆ ಕಾಯೆ ಪ ವಿಪಾಂಸಗನ ಪದಪಾಂಸು ಧರಿಸುವಳೆ ಮನ ಸಂಶಯವ ಕಳೆ ಅ.ಪ. ಸತಿ | ಅ-ಜ್ಞಾನ ನೀಗಿ ಸುಜ್ಞಾನ ವೀಯುತ |ಜ್ಞಾನ ಪೂರ್ಣ ಪ್ರಜ್ಞಾನ ಘನಗುಣಗಾನ ಮಾಳ್ಪ ವಿಜ್ಞಾನ ವೀವುದು 1 ಭಕ್ತಿರೂಪಿ - ಸುವ್ಯಕ್ತಿಗೈ ಹರಿಸಭಕ್ತಿಯನು ಗುರುಭಕ್ತಿಯೆನ್ನಲ್ಲಿ |ಶಕ್ತಿ ಕೊಟ್ಟಾಸಕ್ತಿಯಲಿ ವೇ-ದೋಕ್ತದಲಿ ಎನ ಯುಕ್ತ ನೆನಿಸಮ್ಮ 2 ವಾಣಿಯೇ ಬ್ರಹ್ಮಾಣಿಯೇ ವೇ-ದಾಣಿಯೇ ಸುಜ್ಞಾನಿಯೇ ಪೊರೆವೀಣೆ ಧರಿಸಿಹ ಪಾಣಿಯೇ ಸು-ಶ್ರೋಣಿಯೇ ಚತು | ರಾನನ ಪ್ರಿಯೆ 3 ನೆಲಸಿ ರಸನದಿ | ವಿಲಸಿತಾಮಲಲಲಿತ ಹರಿಗುಣ | ಫಲಿಸಿ ಕೀರ್ತಿಸುಅಲವ ಭೋದರ | ಲಲಿತ ಉಕ್ತಿಲಿಪುಳಕ ಪುಳಕದಿ | ನಿಲಿಸು ಮನ್ಮನವಾ 4 ಸನ್ನುತ ಕ | ಟಾಕ್ಷ ತೋರಿಸು 5
--------------
ಗುರುಗೋವಿಂದವಿಠಲರು
ಭಾರತಿಭಕುತಿಯನು ಕೊಡೆನಗೆಮಾರುತಿಸತಿನೀನು ಪ.ಮೂರು ಲೋಕದೊಳು ಯಾರು ನಿನಗೆಸರಿ ಮಾರಾರಿಗಳಿಂದಾರಾಧಿತಳೆ ಅ.ಪ.ಸುಂದರಿ ಶುಭಕಾರಿ ಸುಮನಸ-ವೃಂದಶೋಭಿತಕಬರಿಮಂದಹಾಸ ಮುಖದಿಂದಲಿ ನೋಡಿ ನಿನ್ನಕಂದನೆಂದು ಎನ್ನ ಮುಂದಕೆ ಕರೆಯೆ 1ವಾಣಿ ಎನ್ನ ವದನದಲ್ಲಿಡುಮಾಣದೆಹರಿಸ್ತವನವೀಣಾಧೃತ ಸುಜ್ಞಾನಿಯೆ ಪಂಕಜ-ಪಾಣಿಯೆ ಕೋಕಿಲವಾಣಿಯೆ ಎನ್ನಯ 2ಮಂಗಳಾಂಗಿಯೆ ಎನ್ನಅಂತರಂಗದಲ್ಲಿ ಮುನ್ನತುಂಗವಿಕ್ರಮ ಗೋಪಾಲವಿಠಲನ್ನಹಿಂಗದೆ ನೆನೆವ ಸುಖಂಗಳನು ಕೊಡೆ 3
--------------
ಗೋಪಾಲದಾಸರು