ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೊಂದು ಬಂದೆನೊ ಕಾಂತೇಶ | ಕೈಯನೆ ಪಿಡಿಯೊ ಮಂದಭಾಗ್ಯಳ ಜೀವೇಶ ಪ. ಅಂದು ಶ್ರೀ ರಾಮರ ಸಂದೇಶವನ್ನೆ ಭೂ- ನಿಂದನೆಗೆ ಅರುಹುತಲಿ ಬಹು ಆನಂದಪಡಿಸಿದ ವಾನರೇಶ ಅ.ಪ. ಶೌರಿ | ಭಕ್ತರ ಕಾಯ್ವ ದುರಿತದೂರನೆ ಉದಾರಿ ಚರಣಕ್ಕೆ ನಮಿಸುವೆ ಹರಿಗೆ ಪರಮಾಪ್ತನೆ ದುರಿತ ತರಿಯುತ ಪೊರೆಯೊ ಗುರುವರ ರಾಮಕಿಂಕರ 1 ಗುರುಕರುಣದ ಬಲದಿ | ಅರಿತೆನೊ ನಿನ್ನ ಚರಣ ನಂಬಿದೆ ಮನದಿ ಪರಿ ಭವಕ್ಲೇಶ ಪರಿಯ ಬಣ್ಣಿಸಲಾರೆ ಹರಿವರನೆ ದಯಮಾಡು ಶ್ರೀ ಹರಿ ದರುಶನವನನವರವಿತ್ತು 2 ಕಾಂತನ ಅಗಲಿರಲು | ಚಿಂತೆಯಲಿ ಭೂ ಕಾಂತೆ ವನದೊಳಗಿರಲು ಸಂತೋಷದಿಂ ರಾಮನಂತರಂಗವನರುಹಿ ಸಂತಸವಪಡಿಸುತಲವನಿಸುತೆಯ ನಿಂತೆ ರಾಮರಿಗ್ಹರುಷ ತೋರಿ 3 ದ್ರುಪದ ಸುತೆಯಳ ಕೀಚಕ | ದುರ್ಮನದಲಿ ಅಪಮಾನಪಡಿಸೆ ದುಃಖ ತಪಿಸಿ ನಿನ್ನನು ಬೇಡೆ ಆ ಪತಿವ್ರತೆ ಸತಿ ಕುಪಿತದಿಂದಲಿ ಖಳನ ಕೊಂದೆ ಅಪರಿಮಿತ ಬಲಭೀಮ ಪ್ರೇಮ 4 ಮಿಥ್ಯಾವಾದದ ಭಾಷ್ಯಕೆ | ಸುಜ್ಞಾನಿಗಳ್ ಅತ್ಯಂತ ತಪಿಸುತಿರೆ ವಾತಜನಕನಾಜ್ಞೆ ಪ್ರೀತಿಯಿಂದಲಿ ತಾಳಿ ಘಾತುಕರ ಮತ ಮುರಿದ ಮಧ್ವನೆ ಖ್ಯಾತಿ ಪಡೆದೆÀ ಸಿದ್ಧಾಂತ ಸ್ಥಾಪಿಸಿ 5 ಪ್ರಾಣಪಾನವ್ಯಾನ | ಉದಾನ ಸ ಮಾನ ಭಾರತಿ ಕಾಂತನೆ ಜ್ಞಾನಿಗಳಿಗೆ ಪ್ರೀತ ಜ್ಞಾನ ಭಕ್ತಿಪ್ರದಾತ ದೀನಜನ ಮಂದಾರ ಕಾಯೊ ದೀನಳಾಗಿಹೆ ಕೈಯ ಮುಗಿವೆ 6 ನೋಯಲಾರೆನೊ ಭವದಿ | ಬೇಗನೆ ತೋರೊ ಧ್ಯೇಯ ವಸ್ತುವ ದಯದಿ ವಾಯುನಂದನ ನಿನ್ನ ಪ್ರಿಯದಿಂ ನಂಬಿದೆ ಕಮಲ ದ- ಳಾಯತಾಕ್ಷನ ಮನದಿ ತೋರಿ7 ಹರಣ ನಿನಗೊಪ್ಪಿಸಿದೆ | ಸುರವಂದಿತ ಕರೆದು ಮನ್ನಿಸಿ ಕಾಪಾಡೊ ಸಿರಿವರನನು ಹೃತ್ಸರಸಿಜದಲಿ ತೋರೊ ಧರೆಯ ವಸ್ತುಗಳ್ ಮಮತೆ ತೊರೆಸು ಹರಿಯ ನಾಮಾಮೃತವನುಣಿಸು 8 ಈ ಪರಿಬಂದೆ ಅನಿಲ | ನಿನ್ನೊಳು ವಾಸ ಗೋಪಾಲಕೃಷ್ಣವಿಠ್ಠಲ ಶ್ರೀಪತಿ ಕೃಪೆಯಿಂದ ನೀ ಪ್ರೀತನಾಗುತ ಕೈಪಿಡಿದು ಸಂತೈಸು ಕರುಣದಿ ಭಾಪುರೇ ಕದರುಂಡಲೀಶ 9
--------------
ಅಂಬಾಬಾಯಿ
ಈ ಕಾರಣ ಹರಿನಾಮವ ನೆನೆಯಲಿಬೇಕಾಲಸ್ಯವಿಲ್ಲದಲೆಭೀಕರ ಯಮಭಟರಂತ್ಯದಿ ಕವಿಯಲಿನೂಕುವುದೀ ಅಸ್ತ್ತ್ರದಲಿ ಪ.ಷೋಡಶ ಉಪಚಾರದ ಪೂಜಾವಿಧಿಮಾಡುವ ಪಕ್ವಗೆ ಸಾಧ್ಯ ತಾಮಾಡೇನೆಂದರಗಾಧಮಾತಾಡಿದರೇನದಸಾಧ್ಯರೂಢಿಲಿ ಶ್ರೀಹರಿಗುಣ ಸಂಕೀರ್ತನೆಪಾಡಿದರತಿ ಆಹ್ಲಾದ 1ಸುಜ್ಞಾನಿಗಳ್ಹರಿ ಮೆಚ್ಚಿಸಿದರೆ ಅನಭಿಜÕರಿಗೆಲ್ಲಿಯ ಜ್ಞಾನಭವಸುಗ್ಗಿಯೊಳೆಲ್ಲಿ ಧ್ಯಾನ ವೈರಾಗ್ಯದ ನಡೆಯು ಕಠಿಣ ಅನಘ್ರ್ಯದ ಭೋಜನ ದೊರೆತಿದೆ ಹರಿನಾಮಂಗಳೆ ಅಮೃತದ ಪಾನ 2ಈ ಜನುಮವು ಜಗುಳುವ ಮುನ್ನಖಗರಾಜಗಮನ ರಂಗನ್ನ ಸರ್ವದಾ ಜಪಿಸುವನೆ ಧನ್ಯ ಸುಖಬೀಜವಿದೆನ್ನಿತ್ರಿಜಗತ್ಪತಿ ಪ್ರಸನ್ವೆಂಕಟರಾಯನಸೋಜಿಗನಾಮಂಗಳಣ್ಣ3
--------------
ಪ್ರಸನ್ನವೆಂಕಟದಾಸರು