ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನುಮನಧವನೆಲ್ಲ ನಿನಗರ್ಪಿಸಿದೆನಿನ್ನು ಎನಗಾವುದಾಧೀನವಿನಿತಿಲ್ಲ ದೇವ ಪ ಜನಕ ನಾನು ಕ್ಷಣಕೆ ಕ್ಷಣಕೆ ಉಣವುದೆಲ್ಲವು ನಿನ್ನ ಪ್ರಸಾದ ಕನಸುಮನಸಿನೊಳಗೆ ನಾನು ಮಣಿವುದೆಲ್ಲವು ನಿನ್ನ ಚರಣ ಅ.ಪ ಮಡದಿಯಿಂ ಮಮತದಿ ಸಡಗರದಾಡ್ಯಾಡಿ ಕಡು ಆನಂದಿಪುದೆಲ್ಲ ಒಡೆಯ ನಿನ್ನಾಟ ಎಡೆಬಿಡದೆ ಅಡಿಗಡಿಗೆ ಕಡುಸಿರಿವಡೆದು ನಾ ಪೊಡವಿಯೋಳ್ಜೀವಿಪುದು ಕಡು ನಿಮ್ಮ ಪ್ರೇಮ ನುಡಿವುದೆಲ್ಲ ನಿನ್ನ ಮಂತ್ರವು ಕೊಡುವುದೆಲ್ಲವು ನಿನ್ನ ಅಧಿಕಾರ ನಡೆವುದೆಲ್ಲವು ನಾ ನಿನ್ನ ಯಾತ್ರೆಯು ಇಡುವತೊಡುವುದು ನಿನ್ನ ಬಿರುದು 1 ಗಳಿಸುವುದೆಲ್ಲ ನಾ ಚಲಿಸದ ತವಪಾದ ನಳಿನದಾಸರಸಂಗೀ ಇಳೆಯೊಳು ಪ್ರಭುವೇ ಬಳಸುವುದೆಲ್ಲ ನಾ ಅಳಕದ ತವಚರಿತ ಕಲಿಯುವುದೆಲ್ಲ ನಿಮ್ಮ ವಿಲಸಿತನಾಮಧ್ಯಾನ ಮಲಗುವುದೇ ನಿಮ್ಮ ಧ್ಯಾನ ಆನಂದ ನಲಿವುದಖಿಲ ನಿಮ್ಮ ಭಜನೆಯು ಅಳಿವುದೆಲ್ಲನುಭವದ ಗುಣಗಳು ತಿಳಿವುದೆಲ್ಲವು ನಿಮ್ಮ ಮಹಿಮೆ 2 ಅಮಿತ ತವಪ್ರೇಮವು ಗಮಿಸುವುದೆಲ್ಲ ನಾ ಸುಮನರ ಸಭೆಯು ಕ್ರಮದಿ ನಾ ಬೇಡುವುದು ವಿಮಲ ಸುಜ್ಞಾನವು ದಮೆ ದಯ ಭಕ್ತಿ ತವ ನಿರ್ಮಲಂಘ್ರಿಯ ಅರಿವು ನೇಮದಿಂ ನಾ ಬರುವುದೆಲ್ಲ ಸ್ವಾಮಿ ನಿಮ್ಮಯ ಮಹಿಮೆ ಖ್ಯಾತಿಯು ಕ್ಷೇಮನಿಧಿ ಶ್ರೀರಾಮ ನಿಮ್ಮೊಳು ಕಾಮಿಸುವುದೇ ನಾ ಮುಕ್ತಿಪದವು 3
--------------
ರಾಮದಾಸರು
ಶ್ರೀಧವನ ದೂತರಿಗೆ ಭೇದವುಂಟೆ ಕ್ರೋಧ ಜಯಿಸಿದ ನರಗೆ ಕಲಹಗಳುಂಟೆ ಪ ಗರುಡನಾಲಯದಿ ಉರಗಗಳ ಭಯವುಂಟೆ ಕರಿಯ ಬೆದರಿಕೆಗೆ ಮೃಗವರಗೆ ಉಂಟೆ ಹರಿದಿನದಲುಂಬುವಗೆ ದುರೀತ ತಪ್ಪುವದುಂಟೆ ಗುರು ಕರುಣ ಪಡೆಯದವಗೆ ಪರಗತಿ ಉಂಟೆ 1 ಅದ್ರಿಗಳ ಭಯವುಂಟೆ ಸುರಪನ ವಜ್ರಕೆ ಯುದ್ಧದ ಭಯವುಂಟೆ ವೀರನಿಗೆ ಶುದ್ಧ ಮನದಲಿ ನಮ್ಮ ಮಧ್ವಮತ ಸೇರಿದವ ಗುದ್ಧಾರವಲ್ಲದೆ ನರಕುಪದ್ರಗಳುಂಟೆ 2 ಕಂದರ್ಪ ನಂಜಿಕೆಯು ಶಿಂಧುರಾನನ ಕುಂಟೆ ನಿಂದಿಸುವ ಜನಕೆ ಸುಜ್ಞಾನವುಂಟೆ ಮಂದರೋದ್ಧಾರ ಶಾಮಸುಂದರನ ಪದಯುಗವ ಪೊಂದಿರ್ಪ ಸುಗುಣರಿಗೆ ಆವ ಕುಂದುಗಳಯ್ಯ 3
--------------
ಶಾಮಸುಂದರ ವಿಠಲ