ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಟ್ಟಿದಳು ಕಂಕಣವ ನಾರಿ ಲಕುಮಿವಿಷ್ಣು ಮೂರುತಿ ಕರಕೆ ವೈಕುಂಠರಾಣಿ ಪ.ಅವಿಯೋಗಿಯಾದ ಶ್ರೀ ಸತಿಯ ಸೇವೆಗೆ ಒಲಿದುಪವಮಾನನೊಡೆಯ ವರ ಬೇಡೆನ್ನಲುಭುವನೇಶ ನಿನ್ನ ಕೃಪೆ ಪೂರ್ಣಳಾನೆಂದೆನುತಹವಣೆಯಿಂ ಕೇಳ್ದಳೆರಡೊರವ ಲೋಕೋದ್ಧಾರಿ 1 ಶರಣಾಗತ ರಕ್ಷಕನು ಎಂಬ ಬಿರುದೊಂದುಶರಣಾಗತ ವತ್ಸಲನು ಎಂಬುದೊಂದುಧರಿಸು ಈ ಬಿರುದು ಹರಿ ವರವು ಅದೆ ಎನಗೆನಲುಕಿರುನಗೆಯ ನಗುತ ಒಲಿದನು ಸತಿಯ ನುಡಿಗೆ 2 ನಾರಿರನ್ನಳೆ ನಿನ್ನ ಕೋರಿಕೆಯ ತೆರನಂತೆಆರಾಧನೆಯ ಮಾಳ್ಪ ಶರಣರಿಗೆ ಒಲಿವೆತೋರಲೀ ಬಿರುದುಗಳು ನಿನ್ನ ಕರಗಳಲೆಂದುಶ್ರೀ ರಮೆಯ ಕರಕೆ ಕಂಕಣಗಳನೆ ತೊಡಿಸಿದನು 3 ನಾರಿ ಈ ಕಂಕಣವ ನಿನಗ್ಯಾಕೆ ಅರ್ಪಿಸಲುತೋರದೆನ್ನುತ ನಟನೆಗೈವನಿತರೊಳ್‍ಕ್ಷೀರಸಾಗರ ಮಥನ ಕಾಲದಲಿ ಜನಿಸುತಲಿಶ್ರೀ ರಮೇಶಗೆ ಒಲಿದು ಮಾಲೆ ಹಾಕಿದಳು 4 ಭಕ್ತಿ ಪ್ರೇಮಕೆ ಒಲಿದು ಭಕ್ತವತ್ಸಲ ಅಭಯಹಸ್ತವನು ಶಿರದಲ್ಲಿ ಇಡಲು ನಾರಿಚಿತ್ತದಲಿ ಆನಂದಪುಳಕಾಂಕುರಿತಳಾಗಿಚಿತ್ತದೊಲ್ಲಭನ ಮುಖಕಮಲ ವೀಕ್ಷಿಸುತ 5ಈಕ್ಷಿಸಲು ಶ್ರೀ ಹರಿಯ ಕರಕಮಲ ಲಕ್ಷಣವಲಕ್ಷ್ಮಿ ಬೆರಗಾಗಿ ಮುನ್ನಿನಕಿಂತ ಅಧಿಕಅಕ್ಷಯದ ಸಾಮುದ್ರಿ ಲಕ್ಷಣವ ಕಾಣುತಲಿಪಕ್ಷಿವಾಹನನ ಮೊಗ ಈಕ್ಷಿಸುತ ನಗುತ 6 ನೀನಿತ್ತ ವರದಾನ ಕಂಕಣದ ಬಂಧನವನಿನಗರ್ಪಿಸುತ ಧನ್ಯಳಾಗ್ವೆನೆಂದುಆನಂದದಲಿ ಮಾಡಿ ಕಂಕಣವ ಕಟ್ಟಿದಳು 7 ಜಗವನಾಡಿಸುವಂಥ ಸೂತ್ರವನೆ ಹದಿನಾರುಬಗೆ ಕಲೆಗಳೆಂಬ ಎಳೆ ಮಾಡಿ ಹಳದಿಮಿಗೆ ಕಾಂತಿ ಬಣ್ಣದಲಿ ಮಂಗಳಾಕಾರದಜಗಕೆ ವಿೂರಿಸಿದಂಥ ಕಂಕಣವ ಕಟ್ಟಿದಳು 8 ಕರಿ ಕೆಂಪು ಬಿಳುಪು ವರ್ಣವು ಪ್ರಳಯ ಕಾಲದಲಿಇರಲಾರದೆಂದು ತ್ಯಜಿಸುತ ಹಳದಿಯವರಕಾಂತಿ ಬಣ್ಣವನು ಪೂಸಿ ಮಂಗಳವದನೆಸರದಿಂ ಮೂರು ಗ್ರಂಥಿಯ ಬಿಗಿದಳಾಗ 9 ಪರಿ ಏನು ಪೇಳೆಂದು ಸರಸದಲಿ ಹರಿ ಕೇಳೆ ಹರಿಣಾಕ್ಷಿಯು ಪರಮ ಪುರುಷನೆ ನೀನು ಅರಿಯದಿನ್ನುಂಟೆ ಕೇಳ್ ಸರಸವಾಣಿಯಲಿ ಪೇಳ್ಪೆನು ದೇವ ದೇವ 10 ಒಂದು ಮುಕ್ತಿಯ ಗ್ರಂಥಿ ಒಂದು ಕರ್ಮದ ಗ್ರಂಥಿ ಒಂದು ಅಜ್ಞಾನ ನಿನ್ನ ಬಂಧಕರ ಗ್ರಂಥಿ ಇಂದಿರೇಶನೆ ಇದರ ಗುಟ್ಟು ಅರುಹುವÉ ಕೇಳು ಒಂದೊಂದು ವಿವರಗಳ ವಂದ್ಯ ಬ್ರಹ್ಮಾದಿ 11 ಕರ್ಮಗ್ರಂಥಿಯು ಬ್ರಾಹ್ಮಣರ ಯಜ್ಞದುಪವೀತ ಕರ್ಮ ಬಿಡುಗಡೆ ಇದು ಯತಿರತ್ನಗಳಿಗೆ ನಿಮ್ಮ ಬಂಧಕರ ಗ್ರಂಥಿ ಅಜ್ಞಾನಿ ಹೃದಯಕ್ಕೆ ನಿಮ್ಮ ಕೃಪೆಯಿಂದ ಬಿಡುಗಡೆ ಕೇಳು ಜೀವರಿಗೆ 12 ಮುಕ್ತರಿಗೆ ಸಂಸಾರ ಮತ್ತೆ ಬರದಂದದಲಿ ಕತ್ತರಿಸಿ ಲಿಂಗವನು ಕಾಯ್ದು ನಾನು ಚಿತ್ತಜಾಪಿತನೆ ನಿನ್ನಸ್ತಕೊಪ್ಪಿಸಿ ಬಿಗಿದು ಸುತ್ತಿ ಕಗ್ಗಂಟು ಹಾಕಿರುವೆ ನೀ ಗ್ರಂಥಿ 13 ಬಿಚ್ಚಲಾರೆಯೊ ನೀನು ಬಿಚ್ಚಲಾರೆನೊ ನಾನು ಬಿಚ್ಚಿಕೊಳಲಾರರೊ ಮುಕ್ತ ಜನರು ಅಚ್ಯುತನೆ ಇದೆ ನಿನಗೆ ಹೆಚ್ಚಿನಾ ಬಿರುದು ನಾ ಮೆಚ್ಚಿ ಕಟ್ಟಿರುವೆ ನೀ ಗ್ರಂಥಿ ಕಂಕಣವ 14 ಎರಡು ಗ್ರಂಥಿಯ ತೊಡಕು ಹರಿದು ಭಕ್ತರ ಕಾಯ್ದು ಪರಮ ಆನಂದ ಮುಕ್ತರಿಗೆ ಶರೆ ಮಾಡಿ ಮೆರೆಯೊ ಶರಣಾಗತರ ರಕ್ಷಕನೆ ಎಂದೆನುತ ಸಿರಿ ಮುತ್ತಿನಾರತಿಯನೆತ್ತಿದಳು 15 ಸಿರಿಹರಿಯ ಏಕಾಂತ ಸರಸ ವಚನಗಳಿದನು ಅರಿತವರು ಯಾರೆಂಬ ಅನುಮಾನ ಬೇಡಿ ಹರಿಶಯನನಾದವನು ಅರಿತು ಧೈರ್ಯದಿ ಜಗದಿ ಹರಹಿದುದ ಸಜ್ಜನರು ಅರಿತು ಆನಂದಿಸಲಿ 16 ಸಿರಿ ಒಲಿಯೆ ಶ್ರೀಹರಿಯು ತ್ವರಿತದಲಿ ಒಲಿಯುವನು ಮರುತ ಒಲಿಯಲು ಸಿರಿಯು ತಾ ಒಲಿವಳು ಗುರುವು ಒಲಿಯಲು ಮರುತ ಮರುಕ್ಷಣದಿ ಒಲಿಯುವನು ಅರಿವುದಿದರಿಂ ಗುರುವ ಒಲಿಮೆ ಅಧಿಕೆಂದು 17 ಪರಮ ಸುಜ್ಞಾನದಿಂದರಿತು ತತ್ವಾರ್ಥಗಳ ಶರಣ ನಾ ನಿನಗೆನಲು ವಾತ್ಸಲ್ಯದಿ ಸಿರಿಯರಸ ತನ್ನಭಯ ಹಸ್ತ ಶಿರದಲಿಟ್ಟು ಶರಣರನು ಪಾಲಿಸುವ ಮುಕ್ತಿ ಪದವಿಯನಿತ್ತು 18 ಹರಿಸಿರಿಯ ಲೀಲೆಗಳ ಗುರುಕರುಣ ಬಲದಿಂದ ಅರುಹಿದ ಮಹಿಮೆ ಧರೆಯಲ್ಲಿ ಮೆರೆದು ಪರಮ ಮಂಗಳ ಕೊಡಲಿ ನಿರುತ ಸದ್ಭಕ್ತರಿಗೆ ಕರುಣಾಳು ಗೋಪಾಲಕೃಷ್ಣವಿಠ್ಠಲನ ದಯದಿ 19
--------------
ಅಂಬಾಬಾಯಿ
ನೀನೇ ನಿನ್ನ ಮರೆದಿಹುದೇನು ಮನವೇ | ಸುಜ್ಞಾನದಿಂದ ನಿಜವನೀ ನರಿಯಲಿಲ್ಲವೇ ಪ ಶ್ವಾನ ಸೂಕರಾದಿ ಅತಿ ಹೀನ ಯೋನಿಯಲಿ ಸುಖದೊಳು | ನಾನಾ ಪರಿಯಲಿ ಬಾಹುದೇನು ಅನುವೇ 1 ಹರಿವ ಮೃಗಜಲಕ ಬೆಂಬತ್ತಿ ಪೋಪಾ ಹರಿಣನಂತೆ | ಹರಿದು ವಿಷಯ ಕೂಡಾ ಕೆಡುದೇನು ಗುಣವೇ 2 ನಿನ್ನ ಬಯಕೆಯಂತಾದಡೆ ಮನ್ನಿಸುವ ಅಲ್ಲದಡೆ | ಘನ್ನ ಚಿಂತೆಯೊಳು ಬೀಳುತಿಹುದೇನು ಸುಖವೇ 4 ನೆನೆದು ತರಿಸು ಮಹಿಪತಿ ಚರಣಾ ಚಿನ್ನ ಕೃಷ್ಣ ನಾ | ತನುವಿನೊಳಗಾಡುತಿಹ ನಿಜ ಮನವೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯಾಯಾ ವಾರವ ನೀಡಿ ಪ್ರೀಯದಿಂದಲಿ ಜನರು ಸ್ತ್ರೀಯರು ಮುದದಿಂದ ಪ ಸಾರುತ ಹರಿದಾಸ ಕೇರಿಯೊಳಗೆ ಬರಲು ಚೋರತನವ ಮಾಡಿ ಚುದಗು ಬುದ್ಧಿಯಲಿಂದ ದ್ವಾರವನಿಡದಿರಿ 1 ಬಂದಾ ಹರಿದಾಸನ ವಂದಿಸಿ ನಿಮ್ಮಯ ಮಂದಿರದೊಳು ಕರೆದು ತಂದಿಗಳೆಂದು ನಲು ವಿಂದಲಿ ಉಪಚರಿಸಿ 2 ಪರಲೋಕ ಬಂಧುಗಳೆ ಕರುಣವ ಮಾಡಿದಿರಿ ಕರ್ಮ ಪರಿಹರವೆಂದು ನಾ ಸಿರ ಬಗೆ ಕೊಂಡಾಡುತಾ 3 ಪತಿಮತೈಕ್ಯವಾಗಿ ಅತಿಶಯ ಭಕುತಿಯಲಿ ಗತಿಗೆ ಸಾಧನವೆಂದು ತಿಳಿದು ಈ ಧರ್ಮಕ್ಕೆ ಪ್ರತಿಕೂಲವಾಗದಲೆ 4 ವಕ್ಕಡತಿ ತಂಡುಲವ ಚಕ್ಕನೆ ನೀಡಲು ಮಕ್ಕಳು ಮರಿಗಳು ಸಹಿತ ನಿತ್ಯಾ ಸುಖವಕ್ಕು ಸಟಿಯಲ್ಲಾ 5 ಇಲ್ಲವೆಂದು ನುಡಿದರೆ ಪುಲ್ಲಲೋಚನವಪ್ಪಾ ಎಲ್ಲ ಕಾಲದಲಿ ನಿಮ್ಮಂಗಣದೊಳು ಇಲ್ಲವೆ ನಿಂತಿಪ್ಪದು 6 ಹಸ್ತು ಹರಿದಾಸ ಬಂದು ಹೊಸ್ತಿಲಿಂದಲೆ ತಿರಿಗಿ ವಿಸ್ತರಿಸುವೆ ಕೇಳು ಹರಿ ತೊಲಗುವಾ ದ್ವಿ ಮಸ್ತಕ ಭುಂಜಿಸುವಾ 7 ಒಂದೊಂದು ಕಾಳಿಗೆ ಒಂದೊಂದು ಕುಲಗೋತ್ರ ಮುಂದೆ ಉತ್ತಮ ದೇಹದಲಿ ಬಂದು ಸುಜ್ಞಾನದಿಂದಲೆ ಲೋಲಾಡುವರು 8 ಹಲವು ಪೇಳುವದೇನು ಸುಲಭಾವೆನ್ನು ಧರ್ಮ ಅಳಿದು ಹೋಗುವದಲ್ಲ್ಲ ಇದನು ವಿಜಯವಿಠ್ಠಲ ಬಲ್ಲ ಮಹಾಫಲವ9
--------------
ವಿಜಯದಾಸ
ರಾಮನಾಮವೆನ್ನು ಮನವೆ ನಿನ್ನ ಪಾಮರಪಾತಕನಾಶನವೆ ಬರಿನೇಮವ್ರತಗಳು ನಿಷ್ಫಲವೆ ಪರಂಧಾಮ ಭಜನೆ ಮೋಕ್ಷಪ್ರದವೆ ¥ಶೀಲತನವುನೀಬಿಡಬೇಡಾ ನಾನ್ ಶೀಲನೆಂದುನೀಹೇಳಬೇಡಾ ಶ್ರೀ ಲೋಲನಸ್ಮರಣವ ಮರಿಬೇಡಾ ಇಹ ಜಾಲಿಮನಸಿನಲಿ ತರಬೇಡಾ 1ಕಾಲದೇಶವನನುಸರಿಸಿ ನೀನು ಲೀಲೆಯಾಗಿ ಕ್ರಮದಲಿ ನಡಸಿ ಶ್ರೀಫಾಲಯನಸ್ತುತ ಘನತೆನಿಸೀ ಏವೇಳೆಯು ಶ್ರೀರಾಮನ ಜಪಿಸಿ 2ಕುಲಧನಯೌವನ ಬಲದಿಂದಾ ನಿಜ ತಿಳಿಯದೆಸುಮ್ಮನೆ ಮದಬಂದದಲಿಸಿಲುಕದೆ ಸುಜ್ಞಾನದಿಂದಾ ಗುರಿ ತಿಳಿದುಭಯಭೇದಸ್ಥಿತಿ ಚಂದಾ 3'ಮಲತುಲಸಿರಾಮನೆನ್ನುವದು ರಂಗಸ್ವಾ'ುದಾಸನಿಗೆ ಪ್ರಾಪ್ತವದುಸಮರಸ ಸದ್ಗುಣ ಲಭಿಸುವದು ಸರ್ವ ಶೇಷೈಕ್ಯವು ಒಂದಾಗುವದು 4
--------------
ಮಳಿಗೆ ರಂಗಸ್ವಾಮಿದಾಸರು
ಶ್ರೀರಮಾಧವಾಶ್ರೀತಜನಪಾಲಿತ ಮಾರಕೋಟಿರೂಪ ವಾರಿಧಿಶಯನ ಮುರಾರಿ ಕೇಶವ ಶ್ರೀಮ- ನ್ನಾರಾಯಣ ನೀರಜದಳಲೋಚನಪ. ಮಾನುಷತ್ವವಾಂತ ಸಮಯದಿ ಹೀನ ಭೋಗದ ಚಿಂತೆ ನಾನು ನೀನೆಂಬಾಭಿಮಾನದಿ ಮನಸು ನಿ- ಧಾನವಿಲ್ಲದೆ ಅನುಮಾನದಿಂದಿಹುದೈ ಏನು ಕಾರಣ ಹೃದಯನಳಿದೊಳು ನೀನೆ ನೆಲಸಿಕೊಂಡೀ ನರಯೋನಿಗೆ ನೀನೆ ಬರಿಸಿಯವಮಾನ ಬಡಿಸುವದು ಊನವಲ್ಲವೆ ಪದದಾಣೆ ಸತ್ಯವಿದು1 ಬಾಲಕತನದೊಳಗೆ ಕಾವ್ಯದ ಶೀಲವಿತ್ತೆಯೆನಗೆ ಕೀಳುಮಾಡದೆ ಯೆನ್ನ ಬಾಲಭೂಷಿತಂಗಳ ಕೇಳೈ ಶ್ರೀಲಕ್ಷ್ಮೀಲೋಲ ವೆಂಕಟರಾಯ ಕಾಲಕಾಲಪ್ರಿಯ ಪಾಲಿಸೊಲಿದು ಕರು- ಣಾಲವಾಲ ನತಪಾಲಶೀಲ ಮುನಿ ಜಾಲವಂದ್ಯ ವನಮಾಲದಾರಿ ಜಗ ಮೂಲಸ್ವರೂಪ ವಿಶಾಲ ಗುಣಾರ್ಣವ2 ಹಿಂದಾದುದನರಿಯೆ ಇದರಿಂ ಮುಂದಾಗುವುದು ತಿಳಿಯೆ ಹಿಂದು ಮುಂದಿಲ್ಲದೆ ಬಂಧನದೊಳು ಬಲು ನೊಂದೆನೈ ನಿನಗಿದು ಚಂದವೆ ಶ್ರೀಹರಿ ತಂದೆ ತಾಯಿ ಬಂದು ಬಾಂಧವ ಬಳಗ ನೀ ನೆಂದು ನಿನ್ನಯ ಪದದ್ವಂದ್ವವ ಭಜಿಪಾ ನಂದಸುಜ್ಞಾನದಿಂದೆಂದಿಗೂ ಸುಖ ದಿಂದಿರುವಂದದಿ ತಂದೆ ನೀ ಪಾಲಿಸು3 ಧಾರಿಣಿಗಧಿಕವಾದ ಮೆರೆವ ಕು ಮಾರಧಾರೆಯ ತಟದ ಚಾರುನೇತ್ರಾವತಿ ತೀರ ಪಶ್ಚಿಮ ಭಾಗ ಸಾರಿ ತೋರುವ ವಟಪುರದೊಳು ನೆಲಸಿಹ ವೀರ ವೆಂಕಟಪತಿ ವಾರಿಜನಾಭ ಖ- ರಾರಿ ತ್ರಿದಶಗಣವಾರವಂದ್ಯ ಭಾ- ಗೀರಥೀಪಿತ ದುರಿತಾರಿ ದೈತ್ಯಸಂ- ಹಾರಿ ಶ್ರೀಲಕ್ಷ್ಮೀನಾರಾಯಣ ಹರಿ4
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀರಮಾಧವಾಶ್ರೀತಜನಪಾಲಿತಮಾರಕೋಟಿರೂಪ ವಾರಿಧಿಶಯನಮುರಾರಿ ಕೇಶವ ಶ್ರೀಮ-ನ್ನಾರಾಯಣ ನೀರಜದಳಲೋಚನ ಪ.ಮಾನುಷತ್ವವಾಂತ ಸಮಯದಿಹೀನ ಭೋಗದ ಚಿಂತೆ ನಾನುನೀನೆಂಬಾಭಿಮಾನದಿ ಮನಸು ನಿ-ಧಾನವಿಲ್ಲದೆ ಅನುಮಾನದಿಂದಿಹುದೈಏನು ಕಾರಣ ಹೃದಯನಳಿದೊಳುನೀನೆ ನೆಲಸಿಕೊಂಡೀ ನರಯೋನಿಗೆನೀನೆ ಬರಿಸಿಯವಮಾನ ಬಡಿಸುವದುಊನವಲ್ಲವೆ ಪದದಾಣೆ ಸತ್ಯವಿದು 1ಬಾಲಕತನದೊಳಗೆ ಕಾವ್ಯದಶೀಲವಿತ್ತೆಯೆನಗೆ ಕೀಳುಮಾಡದೆ ಯೆನ್ನಬಾಲಭೂಷಿತಂಗಳ ಕೇಳೈಶ್ರೀಲಕ್ಷ್ಮೀಲೋಲ ವೆಂಕಟರಾಯಕಾಲಕಾಲಪ್ರಿಯ ಪಾಲಿಸೊಲಿದು ಕರು-ಣಾಲವಾಲ ನತಪಾಲಶೀಲ ಮುನಿಜಾಲವಂದ್ಯ ವನಮಾಲದಾರಿ ಜಗಮೂಲಸ್ವರೂಪ ವಿಶಾಲ ಗುಣಾರ್ಣವ 2ಹಿಂದಾದುದನರಿಯೆ ಇದರಿಂಮುಂದಾಗುವುದು ತಿಳಿಯೆ ಹಿಂದುಮುಂದಿಲ್ಲದೆ ಬಂಧನದೊಳು ಬಲುನೊಂದೆನೈ ನಿನಗಿದು ಚಂದವೆ ಶ್ರೀಹರಿತಂದೆ ತಾಯಿ ಬಂದು ಬಾಂಧವ ಬಳಗ ನೀನೆಂದು ನಿನ್ನಯ ಪದದ್ವಂದ್ವವ ಭಜಿಪಾನಂದಸುಜ್ಞಾನದಿಂದೆಂದಿಗೂ ಸುಖದಿಂದಿರುವಂದದಿ ತಂದೆ ನೀ ಪಾಲಿಸು 3ಧಾರಿಣಿಗಧಿಕವಾದ ಮೆರೆವ ಕುಮಾರಧಾರೆಯ ತಟದ ಚಾರುನೇತ್ರಾವತಿತೀರ ಪಶ್ಚಿಮ ಭಾಗ ಸಾರಿತೋರುವ ವಟಪುರದೊಳು ನೆಲಸಿಹವೀರ ವೆಂಕಟಪತಿವಾರಿಜನಾಭಖ-ರಾರಿ ತ್ರಿದಶಗಣವಾರವಂದ್ಯ ಭಾ-ಗೀರಥೀಪಿತ ದುರಿತಾರಿ ದೈತ್ಯಸಂ-ಹಾರಿ ಶ್ರೀಲಕ್ಷ್ಮೀನಾರಾಯಣಹರಿ4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ