ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದ ಚಂದಿರನೇ ದಾಸನನೇಕಿಂತು ಮರೆವೇ ಪ ದೀನ ದಯಾಪರ ನೀನು ಮನುಜಾಧಮ ನರ ನಾನು ಅ.ಪ ತ್ರಿಜಗಾಧಿಪ ಸುಪೂಜ್ಯನೇ | ಗಜರಾಜ ನತ ಪಾದನೇ ಅಜಸನ್ನುತ ವೈಭವನೇ | ಸುಜನಾವಳಿ ಸನ್ನುತನೇ 1 ಕರುಣಾಮಯ ಸಾಗರನೇ | ಪುರುಷೋತ್ತಮ ಮಾಧವನೇ ಉರಗಾಧಿಪ ಭೂಷಿತನೇ | ಗರುಡಧ್ವಜ ಕೇಶವನೇ2 ಕಡಲವಾಸ ದುರಿತನಾಶ | ಒಡಲ ಬೇಗೆ ಮನದ ಕ್ಲೇಶ ದಡಕೆಸೆಳೆದ ಬಂಧುನಾಶ | ಬಿಡಿಸಿ ಕಾವವ ಮಾಂಗಿರೀಶ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಅ ಸಾಗಿ ಬಾರೋ ಗುರುರಾಘವೇಂದ್ರರಾಯ | ವರ ಸತ್ಕಲುಗೇಯ ಪ ಕೂಗುತ ಕರೆಯುವ ಭಾಗವತರ ಮೊರೆಯ ಲಾಲಿಸೋ ಮುನಿವರ್ಯ ಅ.ಪ ಪಾವನಘನ ವೃಂದಾವನ ಮಂದಿರನೆ ಸದ್ಗುಣ ಬಂಧುರನೇ ಪಾವಮಾನಿಮತಶರಧಿ ಚಂದಿರನೇ ಧರಸಮ ಕಂದರನೇ ಛಾವಣಿಪುರ ಸುಜನಾವಳಿ ಕೋರಿಕೆಯ ಗರೆಯಲು ಶುಭಕಾಯ 1 ಶರಣಜನರು ಮೈಮರೆದು ಕರೆಯಲಾಗಿ ನಿಲ್ಲದೆ ವರಯೋಗಿ | ಭರದಿ ಬಂದು ಕರಪಿಡಿಯುವ ಧೊರೆ ನೀನು ಎಂದರೀತೆವು ಸುರಧೇನು ಗತಿದಾಯಕ ನೀನೆಂದು ಭಜಿಪೆವು ದಯಾಸಿಂಧು 2 ಶಾಮಸುಂದರನ ಪ್ರೇಮವ ಪಡೆದಾತ ಜಗದೊಳು ಪ್ರಖ್ಯಾತ ನೇಮದಿ ಭಜಿಪರ ಕಾಮಿತ ಕೊಡುವಾತ ದೈಶಿಕ ಕುಲನಾಥ ಹೇಮಶಯ್ಯ ಸುಕುಮಾರ ಮಮತೆಯಿಂದ ಮಂತ್ರಾಲಯದಿಂದ 3
--------------
ಶಾಮಸುಂದರ ವಿಠಲ
ಎನ್ನ ಪಾಲಿಸೋ ಕರುಣಾಕರಾ| ಪನ್ನಗಶಯನ ಗದಾಧರಾ ಪ ವಸುದೇವ ನಂದನ ಹರಿಮಧುಸೂದನ| ಅಸುರಾಂತಕ ಮುರಲೀಧರ, ಬಿಸರುಹನಾಭ ಸರ್ವೇಶನೆ ಮುನಿ|ಮಾ ನಸ ಸಂಚಾರ ರಮಾಧವಾ 1 ಪರಮ ಪುರುಷ ಉರಗಾಸನ ವಾಹನಾ| ಕರುಣಾರ್ಣವ ವಡವಾನಳಾ|| ಸರಸಿಜಭವ ಗಿರಿಜಾವಲ್ಲಭನುತ| ವರಸುಜನಾವಳಿ ಪಾಲನಾ 2 ಕಾವನ ಪಿತ ಮುಚಕುಂದ ವರದ ರಾ| ಜೀವ ನಯನ ನಾರಾಯಣಾ| ಶ್ರೀವತ್ಸಲಾಂಛನ ಗುರುಮಹೀಪತಿ ಸುತ ಜೀವನ ಸಖ ಶ್ರೀ ಕೃಷ್ಣನೆ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಾಮಾನಾಮಾಮೃತಪಾನಸುಖಧಾಮನು ಮುಖ್ಯಪ್ರಾಣ ಸೋಮಶೇಖರಮುಖ್ಯಾಮರಸಂಕುಲಸ್ವಾಮಿ ಮಹಾಸುತ್ರಾಣ 1 ಯಾವತ್ಕಾಲ ಕಳೇವರದೊಳನಿಲ ತಾವದ್ಧರಿಸನ್ನಿಧಾನ ದೇವಬ್ರಹ್ಮ ಸುಜನಾವಳಿಸುಖದ ಮಹಾಪ್ರಭು ಪವಮಾನ 2 ಲಕ್ಷ್ಮಣಪ್ರಾಣದಾತಾರ ನಿಭೃತಮೋಕ್ಷಹೃದಯ ಪರಿಪೂರ್ಣ ಲಕ್ಷ್ಮೀನಾರಾಯಣಾಂಘ್ರಿಭಕ್ತಿದಕ್ಷ ಲೋಕೈಕಧುರೀಣ 3
--------------
ತುಪಾಕಿ ವೆಂಕಟರಮಣಾಚಾರ್ಯ
ಲಕ್ಷ್ಮೀದೇವಿ 13 ಭಾಗ್ಯವ ಕೊಡು ತಾಯೆ ಪ ಭಾರ್ಗವಿ ನಿನ್ನಯ| ಪದಯುಗಕೆರಗುವೆ| ಭಾಗ್ಯದ ಲಕ್ಷ್ಮೀ ಸೌ| ಭಾಗ್ಯದ ನಿಧಿಯೇ ಅ. ಪ ಸಾಗರಸಂಜಾತೆ| ದೇವಿ| ನಾಗವರದಪ್ರೀತೆ || ಯೋಗಿಜನಾವಳಿ| ಮಾನಸಪೂಜಿತೆ | ಅಗಣಿತಗುಣಮಣಿ| ತ್ರಿಜಗದ್ವಂದಿತೆ 1 ಸುರುಚಿರಸುಮಗಾತ್ರೆ | ದೇವಿ| ಹಿಮಕರನಿಭವಕ್ತ್ರೆ || ಕಿನ್ನರ | ಸುರಮುನಿ ಪೂಜಿತೆ | ಕಾಮಿತವೀಯುವ || ಕರುಣಾಕರೆಯೆ 2 ಜನನಿಯೆ ನಿರತವು ನೀ | ಪ್ರೇಮವ | ನಿರಿಸುತಲೆನ್ನೊಳು ನೀ | ಕನಕದ ವೃಷ್ಟಿಯ | ಕರೆಯುತಲನುದಿನ | ಮನ್ಮನದಿಷ್ಟವು | ಸಿದ್ಧಿಸುವಂದದ 3 ಅಹಿಪತಿ ಶಯನನಿಗೆ | ಮೋಹದ | ಮಹಿಷಿಯು ನೀನಾಗೆ || ಮಹಿಮಾಕರೆ ನೀ | ಮಹಿಯೊಳಗನಿಶವು | ಇಹಪರ ಸುಖವನು | ಭವಿಸುವ ತೆರದಾ 4 ಅಜಭವಸುರವಿನುತೆ | ದೇವಿ | ಸುಜನಾವಳಿಪ್ರೀತೆ || ಗಜವಾಹಿನಿ ವರ | ಮದಗಜಗಮನೆಯೆ | ವಿಜಯವಿಠಲಪ್ರಿಯೆ ಶ್ರೀ ಗಜಲಕ್ಷ್ಮಿಯೆ 5 ಶುಭ | ಮಂಗಳೆ ಸುಪವಿತ್ರೆ || ಮಂಗಳಾಂಗಿ ನರ | ಸಿಂಗನ ರಮಣಿಯೆ | ಮಂಗಳಕಾರ್ಯಗ | ಳನುದಿನವೆಸಗುವ 6 ಪಂಕಜದಳನೇತ್ರೆ | ದೇವಿ | ಕಿಂಕರನುತಿಪಾತ್ರೆ || ಶಂಖಚಕ್ರಾಂಕಿತ | ಶ್ರೀ ವೈಕುಂಠನ |ಅಂಕದಿ ಮೆರೆವಖಿ | ಳಾಂಕ ಮಹಿಮಳೇ 7
--------------
ವೆಂಕಟ್‍ರಾವ್
ಕೊಂಡಾಡಲಳವೆ ಕರುಣಾನಿಧಿ ಕಾವನದಂಡ ಸಂಜಿತ ಗುರುಸತ್ಯನಾಥರ ಕೀರ್ತಿ ಪ.ಶ್ರೀ ವಾಸುದೇದ ತಾ ಭಾವಿಸಿ ಚಿತ್ತದಿಭೂವಲಯಕೆ ಸುಜನಾವಳಿಗಾಶ್ರಯವೀವೆನೆನುತ ಶುಭದೇವವೃಕ್ಷವನಟ್ಟೆಈವರ ಪರಮಹಂಸಾವಲಂಬನ ತಾಳ್ದುಶ್ರೀ ವಾಯುಮತದಿ ತತ್ವವೆ ಲಕ್ಷಿಸುವ ಪ್ರೇಕ್ಷಾವಂತರಾಗಿಹ ಜೀವಕೋಟಿಗಳ ಕೃಪಾವಲೋಕನದೊಳಿಟ್ಟ ಅಪೇಕ್ಷಿತಭಾವಾರ್ಥಗಳನೆ ಕೊಟ್ಟು ನಂಬಿದಸೇವಕರ್ಗಭಯವಿಟ್ಟ ಗುರುರಾಯನ 1ಭಾನುತೋರುವ ಮುನ್ನೆ ಸ್ನಾನವ ಮಾಡಿ ಸುಮ್ಮಾನದಿಂದಲಿ ನೇಮ ಮೌನದೊಳಿದ್ದು ಶ್ರೀಮಾನಾಥನಂಘ್ರಿಯ ಮಾನಸದಲಿ ದೃಢಧ್ಯಾನದಿಂ ಬಲಿದುಗೀರ್ವಾಣಭಾಷ್ಯಾಮೃತಪಾನವ ಜನರಿಗೆ ಸಾನುರಾಗದಲಿತ್ತುನಾನಾ ತತ್ವಾರ್ಥ ವ್ಯಾಖ್ಯಾನವ ಜನರಿಗೆತಾನಂದು ಬೋಧಿಸಿದತಾಮಸಜ್ಞಾನವನೋಡಿಸಿದ ಆ ಕಾಮಧೇನುವೆನಿಸಿ ಎಸೆದ ಗುರುರಾಯನ 2ಭೇದವರ್ಜಿತ ಮತ್ತವಾದ ಕುಂಭಿಯಕುಂಭಭೇದಕಸಿಂಗಹಲಾಧಾರಿಹರಿಸಗುಣೋದರ ಸಾಕಾರಮಾಧವಹರನುತಪಾದನೆನುತಸೂತ್ರವೇದ ಪುರಾಣದಿಸಾಧಿಸಿ ಕುತ್ಸಿತವಾದಿಗಳಪಾದಾಕ್ರಾಂತರ ಮಾಡಿ ಮೇದಿನಿಯೊಳು ಜಯನಾದಭೇರಿಯ ಹೊಯಿಸಿದ ಮುಕ್ತಿಯಸಾಧನ ತೋರಿಸಿದ ಭ್ರಷ್ಟಂಕುರೋದಯ ಮಾಣಿಸಿದ ಗುರುರಾಯನ 3ಕಾಲಕಾಲಕೆ ಧರ್ಮ ಪಾಲಿಸಿ ಯಾಚಕಜಾಲಕೆ ಮನ್ನಿಸಿ ಮೂಲ ಮಂತ್ರೋಪದೇಶಪೇಳಿ ಪೂತರ ಮಾಡಿ ಹಾಲು ಸಕ್ಕರೆ ತುಪ್ಪಹೋಳಿಗ್ಯನ್ನವನಿಕ್ಕಿ ಮೇಲೆ ದ್ರವ್ಯವನಿತ್ತುಪಾಲಿಸಿ ತಾಯಿತಂದೆಗಳ ಹಂಬಲ ಬಿಡಿಸಿ ಲೋಕದವರಿಗಭಿಲಾಷಾ ಪೂರ್ಣಾನುಕೂಲಚಿಂತಾಮಣಿಯ ಯತಿಕುಲಮೌಳಿಮಕುಟಮಣಿಯ ವಿರತಿಭಾಗ್ಯಶಾಲಿ ಸುಗುಣಖಣಿಯ ಗುರುರಾಯನ 4ಮಣ್ಣು ವನಿತೆಸತಿಹೊನ್ನಿನ ಬಯಕೆಯಘನ್ನತೆಜರಿದುಪಾವನ್ನಮಹಿಮನಾದಚೆನ್ನ ಸತ್ಯನಿಧಿ ತೀರಥನ್ನ ಕರೋದ್ಭವತನ್ನಾಕಷೆಂಬುವಭಿನ್ನವಚಂದ್ರಿಕೆಯನ್ನು ಪ್ರಕಾಶಿಸಿ ಪೂರ್ಣಚಂದ್ರಮನಂತೆಉನ್ನತ ಕಳೆಯುತ ಚಿನ್ಮಯ ವರದ ಪ್ರಸನ್ನ ವೆಂಕಟಾಧಿಪನ ಭಜಿಸಿನಿತ್ಯಧನ್ಯನೆನಿಸುತಿಪ್ಪನ ಸತ್ಯಾಭಿನವರನ್ನನ ಪೊರೆದÀಪ್ಪನ ಗುರುರಾಯನ 5
--------------
ಪ್ರಸನ್ನವೆಂಕಟದಾಸರು
ರಾಮಾನಾಮಾಮೃತಪಾನಸುಖಧಾಮನುಮುಖ್ಯಪ್ರಾಣಸೋಮಶೇಖರಮುಖ್ಯಾಮರಸಂಕುಲಸ್ವಾಮಿ ಮಹಾಸುತ್ರಾಣ 1ಯಾವತ್ಕಾಲ ಕಳೇವರದೊಳನಿಲ ತಾವದ್ಧರಿಸನ್ನಿಧಾನದೇವಬ್ರಹ್ಮ ಸುಜನಾವಳಿಸುಖದ ಮಹಾಪ್ರಭು ಪವಮಾನ 2ಲಕ್ಷ್ಮಣಪ್ರಾಣದಾತಾರ ನಿಭೃತಮೋಕ್ಷಹೃದಯ ಪರಿಪೂರ್ಣಲಕ್ಷ್ಮೀನಾರಾಯಣಾಂಘ್ರಿಭಕ್ತಿದಕ್ಷ ಲೋಕೈಕಧುರೀಣ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ