ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವದೇವತಾಸ್ತುತಿ ಅಜಸುರಸನ್ನುತ ಸುಜನವಂದಿತ ಹರೇ ಭುಜಗ ಭೂಷಣ ಪ್ರಿಯ ಪ ಅತಿಶಯ ಕಾಮದಿ ಸತಿಯನಪಹರಿಸಿದ ಪತಿತ ರಾವಣನನು ಖತಿಯಲಿ ಕೊಂದೆ ನೀಂ 1 ಪರಿ ಪರಿಸಲು ವಾಲಿಯ ತರಿದೆಯೊ ಶರದಿಂದ 2 ದಶರಥನುದರದಿ ದಶರಥನಾಗಿಯು ಪಶುಪತಿ ಮಿತ್ರನೆ ಜನಿಸಿದೆ ಕರುಣದಿ 3 ಮಾನವ ಜಿತಾಸುರ ಮಾನವ ರೂಪನೆ ಪೊರೆ 4 ಧೇನುನಗರಪತಿ ದಾನವಖಂಡನ ಧ್ಯಾನ ಸ್ವರೂಪನೆ ಜ್ಞಾನವ ಪಾಲಿಸು 5
--------------
ಬೇಟೆರಾಯ ದೀಕ್ಷಿತರು
ನಿನ್ನ ನೋಡಲಿ ಬಂದೆ ಘನ್ನ ಮಹಿಮನೆ ಕೃಷ್ಣಾ ಮನ್ನಿಸಿ ಕೃಪೆಯ ಮಾಡೊ ಪ. ನಿನ್ನ ದರುಶನವಿತ್ತು ಎನ್ನ ಪಾಪವ ಕಳೆದು ನಿನ್ನ ಪಾದವನೆ ತೊರೋ ಸ್ವಾಮಿ ಅ.ಪ. ರಜತಪೀಠಾಪುರದಿ ರಮ್ಯ ಮಂದಿರದಲ್ಲಿ ರಾಜಿಸುತ್ತಿಹ ದೇವನೆ ಕುಜನಮರ್ಧನ ಎನ್ನ ರಜ ತಮೋಗುಣ ಕಳದು ನಿಜಭಕ್ತರೊಡನಾಡಿಸಿ ಸುಜನವಂದಿತ ನಿನ್ನ ಭಜನೆಯಿಂದಲಿ ನಲಿದು ನಿಜರೂಪ ನೋಡುವಂತೆ ವಿಜಯಸಾರಥಿಯೆ ನೀ ಈ ತೆರದಿ ಪೊರೆಯದಿರೆ ಭಜಿಸಲ್ಯಾತಕೆ ನಿನ್ನನು ದೇವ 1 ಶ್ರೀ ತಂದೆ ಮುದ್ದುಮೋಹನದಾಸರೆಂತೆಂಬ ನೀತ ಗುರುದ್ವಾರದಿಂದ ನಾ ತಿಳಿದು ಬಂದೆ ನಿನ್ನಯ ಮಹಿಮೆ ಜಾಲಗಳ ಪ್ರೀತನಾಗಿ ಕಾಯೋ ನೀತಿಯಲ್ಲವು ನಿನಗೆ ಮಹಿಮೆ ತೋರದೆ ಎನ್ನ ಘಾತಿಗೊಳಿಸುವರೆ ಹೀಗೆ ನಾಥ ನಿನ್ನಗಲಿ ನಾನರಘಳಿಗೆ ಇರಲಾರೆ ಸೋತು ಬಂದಿಹೆನೊ ಭವದಿ ಮನದಿ 2 ಸತ್ಯಸಂಕಲ್ಪ ನೀನಾದಡೆ ಎನಗಿನ್ನು ಅತ್ಯಧಿಕ ರೂಪ ತೋರೊ ಮೃತ್ಯು ಬೆನ್ಹತ್ತಿ ಆಯುಷ್ಯವ ಪರಿಹರಿಸುವುದು ಎತ್ತ ಪೋದರು ಬಿಡದೆಲೊ ಭೃತ್ಯತನವನೆ ವಹಿಸಿ ನಿನ್ನ ತೋರೆಂದೆನಲು ಮತ್ತೆ ಕರುಣವಿಲ್ಲವೆ ಚಿತ್ತಜಾಪಿತ ನಿನ್ನ ಒಲುಮೆ ಮಾರ್ಗವನರಿಯೆ ಚಿತ್ತಕ್ಕೆ ತಂದು ಕಾಯೊ ಕೃಷ್ಣ 3 ಆನಂದಮುನಿವರದ ಆನಂದ ಕಂದನೆ ಆನಂದನಿಲಯವಾಸ ಆನಂದರತ್ನಪ್ರಭಾದಿಂದ ರಾಜಿತನೆ ಆನಂದಮೂರ್ತಿ ಕೃಷ್ಣ ಆನಂದಗೋಕುಲದಿ ಆನಂದದಲಿ ಮೆರೆದು ಆನಂದ ಸುಜನಕಿತ್ತೆ ನೀನಿಂದು ಎನ್ನ ಮನಕೆ ಆನಂದವನೆ ಇತ್ತು ಆನಂದರೂಪ ತೋರೊ ಕೃಷ್ಣ 4 ಥರವಲ್ಲ ನಿನಗೆನ್ನ ಕರಕರೆಗೊಳಿಸುವುದು ಪೊರೆವರಿನ್ಯಾರು ಜಗದಿ ಮರೆತು ಗರ್ವದಿ ಎನ್ನ ಮರೆವರೆ ನೀನ್ಹೀಗೆ ಗುರುಗಳಂತರ್ಯಾಮಿಯೆ ಸರ್ವನಿಯಾಮಕ ಸರ್ವವ್ಯಾಪಕನೆಂಬ ಬಿರುದು ಪೊತ್ತಿಲ್ಲವೇನೊ ಕರುಣಾಳು ಗೋಪಾಲಕೃಷ್ಣವಿಠ್ಠಲ ನಿನ್ನ ಪರಿಪರಿಯ ರೂಪ ತೋರೊ ಕೃಷ್ಣ 5
--------------
ಅಂಬಾಬಾಯಿ
ಭರ್ತø ಭವನದಿ ಮಗಳೆ ಚಿರಕಾಲ ಸುಖಿಸೌ ಕರ್ತ ಶ್ರೀಹರಿ ಪದವನರ್ಥಿಯಿಂ ಭಜಿಸೌ ಪ ಪತಿಯೆ ಸಿರಿವರನೆಂದು ಅತಿಶಯದಿ ಭಾವಿಸುತ ಸತತ ಸೇವೆಯ ಮಾಡಿ ಗತಿಯೆ ನೀನೆನುತ ಸತಿಶಿರೋಮಣಿಯಾಗಿ ಮಿಗಿಲು ಮೋದವ ಪಡೆದು ಕ್ಷಿತಿಯೊಳಗೆ ನೀ ಬಾಳು ಮತಿವಂತೆಯಾಗಿ1 ಅತ್ತೆಮಾವಂದಿರನು ತಾಯಿತಂದೆಗಳಂತೆ ಅತ್ತಿಗೆ ನಾದಿನಿಯ ಅಕ್ಕತಂಗಿಯರೋಲ್ ಉತ್ತಮಳೆ ಭಾವನಂ ಮೈದುನನ ಸಹಜರೆಂ ದರ್ಥಿಯಿಂದರಿಯುತ್ತ ಉಪಚರಿಸುತಿರು ನೀಂ 2 ಬಂಧುಗಳ ನೀ ಬಹಳ ಪ್ರೇಮದಿಂ ಕಾಣುತ್ತ ವಂದಿಸುವುದೌ ಪರಮಭಾಗವತರಡಿಗೇ ಇಂದಿರಾದೇವಿಯೆಂದೈದೆಯ ಪೂಜಿಸೌ ಸುಂದರ ವಿದ್ವರ ಸುತರಕೂಡ 3 ಸರ್ವತ್ರದಲಿನೀನು ಹಿತವಚನ ಮಾಡುತ್ತ ನಿತ್ಯ ಪಡೆಯುತ್ತ ಗರ್ವವರ್ಜಿತೆಯಾಗಿ ಗುಣಮುಖಿಯು ಎಂದೆನಿಸಿ ಸರ್ವಕಾಲವು ಗೌರವ ಕೀರ್ತಿಯನು ಬೀರೌ 4 ಜಾಜಿಕೇಶವ ನಿನ್ನ ಸೌಭಾಗ್ಯವತಿಯಾಗಿ ಸಾಜದಿಂ ಸಲಹುವನು ಸುಜನವಂದಿತನು ಪೂಜಿಪರ ಮರೆಯದಿಹ ಶ್ರೀಹರಿಯ ಕರುಣದಿಂ ಈ ಜಗದಿ ರಾಜಿಸೌ ಪರಮಮಂಗಳೆಯೇ 5
--------------
ಶಾಮಶರ್ಮರು
ಸೀತೆಯ ಭೂಮಿಜಾತೆಯ ಜಗ-| ನ್ಮಾತೆಯ ಸ್ಮರಿಸಿ ವಿಖ್ಯಾತೆಯ ಪ ಕ್ಷೀರ ವಾರಿಧಿಯ ಕುಮಾರಿಯ ತನ್ನ | ಸೇರಿದವರ ಭಯಹಾರಿಯ || ತೋರುವಳು ಮುಕ್ತಿಹಾರಿಯ ಸರ್ವ | ಸಾರ ಸುಂದರ ಶ್ರೀನಾರಿಯ 1 ಈಶಕೋಟಿಯೊಳ್ ಗಣನೆಯ ಸ್ವಪ್ರ-| ಕಾಶವಾದ ಗುಣಶ್ರೇಣಿಯ || ಈಶಾದ್ಯರ ಪೆತ್ತ ಕರುಣಿಯ ನಿ-| ರ್ದೋಷ ವಾರಿಧಿಕಲ್ಯಾಣಿಯ2 ವಿಜಯವಿಠ್ಠಲನ್ನ ರಾಣಿಯ ಪಂ-| ಕಜಮಾಲೆ ಪಿಡಿದ ಪಾಣಿಯ || ನಿತ್ಯ | ಸುಜನವಂದಿತೆ ಅಹಿವೇಣಿಯ 3
--------------
ವಿಜಯದಾಸ