ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪವಮಾನ - ಪವಮಾನ - ಪವಮಾನ ಪ ಪ್ರಧಾನ ಮರುತ ನಿ | ನ್ನಾಧೀನವು ಜಗ ನಿನ | ಗೇನು ಬೇಡೆ ಸುಜ್ಞಾನ ವೀವುದೆಂ | ದಾ ನಮಿಸುವೆನೊ |ಗಾನ ಲೋಲ ಹರಿಗಾನಕೆ ಮನ್ಮನ | ಪೋಣಿಸುತನುದಿನ | ಪಾಲಿಸು ಪ್ರಾಣಾ ಅ.ಪ. ಮಣಿ ಭವ ಸಿಂಧು ಇಂದಿರೆ ಲೋಲನಅಂದ ಪದಾಬ್ಜಾನಂದದಿ ತುತಿಪಾನಂದೈಶ್ವರ್ಯವ ಇಂದೆ ಪಾಲಿಸಿ ಪೊರಿಮಂದಜಾಸನ ಸರಿ | ವಂದೇ ಅಸುರಾರಿ 1 ವಜ್ರ ಗರ ಅಧ್ವರ ಕರಿ ಸಿರಿ ಭೃಂಗ ಸಿರಿ ರಂಗನ ತೋರಿಸು ಎಂಬೆನು ಜೀಯಾ | ನಮಿಸುವೆನು ಹರಿಪ್ರಿಯಾ 2 ಕಲಿ ಪ್ರಾಬಲ್ಯ | ದೈತ್ಯರು ಎಲ್ಲ ವೈರಂಗಳೆಲ್ಲಸಾಧಿಸೆ ಬಲ್ಲ | ಮಣಿಮನ ಸೊಲ್ಲ | ಕೇಳುತಲೆಲ್ಲ ಬರುತಿಲ್ಲೆಲ್ಲ | ದುರ್ಮತಗಳ ಬೀರುತ ಬರುತಿರಲು |ಜಗಪುಸಿ ಎನಲು | ದೇವರಿಲ್ಲೆನಲು | ಐಕ್ಯ ಪೇಳಲುಜ್ಞಾನವಳಿಯಲು | ಸಜ್ಜನ ನೋಯಲು | ಮನವು ಕರಗಲುಹರಿಯು ಪೇಳಲು | ನೀ ಬರೊಸೊಲ್ಲು | ಎಲ್ಲೆಲ್ಲು | ಎಲ್ಲೆಲ್ಲು ||ತಪವನು ಮಾಡಲು | ನಡುಮನೆ ದ್ವಿಜನುವರ ಕೊಟ್ಟನು ತಾನನಂತೇಶ್ವರನುಕಂಬದ ಮೇಲೇ ರೋರ್ವ ಪೇಳಿದನುನಿನ್ನವತಾರ ವಿಚಾರವನು |ನೀನರಿದಂದೇ | ನಿನ್ನಿಂದೇ | ನಿನ್ನಿಂದೇ ||ದ್ವಿಜನಲಿ ಬಂದೆ | ಹುರಳಿಯ ತಿಂದೆ | ತಿಂತ್ರಿಣಿಯಿಂದೆ ಋಣ ತೀರಿ ತೆಂದೆ | ಹರಿ ಪ್ರೇಕ್ಷರಿಂದೆ | ಸನ್ಯಾಸ ಪೊಂದೆ ಗಂಗೆಯ ತಂದೆ | ಎನ ತಂದೆ | ಎನ ತಂದೇ ||ವ್ಯಾಸರ ಕಂಡುಪದೇಶವಗೊಂಡೆ | ಹೇ ಸಮೀರ ದು-ರ್ಭಾಷ್ಯವ ಖಂಡಿಸಿ ಶ್ರೀಶ ಸರ್ವೋತ್ತಮಆ ಶಿವ ಮುಖ ಹರಿ | ದಾಸರೆಂದು ಮ |ತೀ ಸಮಸ್ತ ಜಗ ಲೇಸು ಸತ್ಯವೆಂದುಪದೇಶಿಸಿದೆ ಗುರುವರ್ಯ | ಗುರುವರ್ಯ ||ಇಪ್ಪತ್ತು ಒಂದೆ | ಕು ಭಾಷ್ಯವ ಜರಿದೆಮುವತ್ತಾರೊಂದೆ | ಗ್ರಂಥವ ಮಾಡ್ಡೆಶಿಷ್ಯರಿಗ್ಹೇಳ್ದೆ | ಮಾಯವ ಜರಿದೆಉಡುಪಿಗೆ ಬಂದೆ | ಗೋಪಿಯಲಿಂದೆಕೃಷ್ಣನ ತಂದೆ | ಇಲ್ಲೆ ನಿಲಿಸಿದೆಅಷ್ಟ ಯತಿಗಳಿಗೆ | ಪಟ್ಟವಗಟ್ಟುತ | ಕೃಷ್ಣನಪೂಜೆ ನಿರ್ದಿಷ್ಟದಿ ನಡೆಸಿದೆ | ದುಷ್ಟಾದ್ವೈತವಕುಟ್ಟಿ ಸುಜನರುಗ | ಳಟ್ಟುಳಿ ಕಳೆಯೆ ವ |ರಿಷ್ಟರನೆಲ್ಲರ | ಕಟ್ಟಾಳೆನಿಸಿದೆ ||ದಿಟ್ಟ ಮೂರುತಿ ಜಗಜಟ್ಟಿ ಭೀಮಆನಂದತೀರ್ಥ ಗುರು ಗೋವಿಂದ ವಿಠಲನಹೃದದಿಷ್ಟಾನದಿ ತೋರಿಸೆಂದು ತವಪಾದಾಬ್ಜಕೆ ಶಿರ ಇಟ್ಟು ಬೇಡ್ವೆ ಋಜುವರ್ಯಗುರುವರ್ಯ | ಔದಾರ್ಯ | ಔದಾರ್ಯ 3
--------------
ಗುರುಗೋವಿಂದವಿಠಲರು
ಬೇಗ ಪಾಲಿಸೊ ಬ್ರಹ್ಮಣ್ಯತೀರ್ಥ | ಕರುಣಿಸು ಇಷ್ಟಾರ್ಥ ಪ. ಯೋಗಿವರ ಶ್ರೀ ಅಬ್ಬೂರು ನಿಲಯ | ಸದ್ಭಕ್ತರಿಗತಿ ಪ್ರಿಯ ಅ.ಪ. ಸತ್ವಗುಣನೆ ಸರ್ವೋತ್ತಮ ಹರಿ ಪ್ರಿಯ | ಪಾವನ ಶುಭಕಾಯ ಚಿತ್ತದಲಿ ಹರಿ ಚಿಂತನೆ ಮಾಡುತಲಿ | ವರಗಳ ನೀಡುತಲಿ ಆತ್ಯಧಿಕದ ಕಣ್ವ ನದಿಯ ತೀರ ವಾಸ | ನಿನ್ನಲಿ ಹರಿ ವಾಸ ಸುಜನರುಗಳ ಪೊರೆವೆ 1 ಪ್ರೇಮದಿ ನೀ ಕೊಳಲು ಗೋಕ್ಷೀರವನೆರೆದೆ ಆಗಮಗಳ ಕಲಿಸಲು ಮೌಂಜಿಯ ಕಟ್ಟಿ | ಶ್ರೀಪಾದರಲಿ ಬಿಟ್ಟೆ ಯೋಗಿ ವ್ಯಾಸರಾಯರು ಎಂದ್ಹೆಸರಿಟ್ಟು | ಸನ್ಯಾಸವನೆ ಕೊಟ್ಟು 2 ಪಾಪಿ ಜನರ ಪಾವನಗೈಯುತಲಿ | ಶ್ರೀನಿಧಿ ಧ್ಯಾನದಲಿ ಕಾಪಾಡು ಸಧ್ಭøತ್ಯರ ದಯದಿಂದ | ತಪಸಿನ ಶಕ್ತಿಂದ ಶಿಷ್ಟರ ಪೊರೆಯುತಲಿ ಗೋಪಾಲಕೃಷ್ಣವಿಠ್ಠಲನನು ಹೃದಯದಲಿ | ನಿತ್ಯದಿ ಕಾಣುತಲಿ 3
--------------
ಅಂಬಾಬಾಯಿ
ಭಕ್ತವತ್ಸಲ ಹರಿ ಎಂಬ ಬಿರುದು ನಿನ ಗಿತ್ತವರ್ಯಾರಯ್ಯಾ ಹೇ ಜೀಯಾ ಪ ತತ್ತರಿಸುತಲಿಹರು ಈ ಜಗದೊಳು ಅ.ಪ ಪರಿಪರಿಯಲಿ ನಿನ್ನ ಮೊರೆಯ ಹೊಕ್ಕಿರುವ ಪರಮ ಸುಜನರುಗಳು ಈ ಧರೆಯೊಳು ಒರಳಿಗೊಡ್ಡಿರುವ ಶಿರಗಳುಳ್ಳವರಂತೆ ದುರುಳರ ಭಯದಿಂದ ನರಳುತಿರೆ 1 ವಾಸಕೆ ಗೃಹವಿಲ್ಲ ಲೇಶ ಸುಖಕೆ ಅವ ಕಾಶ ಇವರಿಗಿಲ್ಲ ಈ ಭುವಿಯೊಳು ಶ್ರೀಶನಾಗಿರೆ ನಿನ್ನ ದಾಸರೊಳಗೆ ಪರಿ ಹಾಸ ಮಾಡುತಲಿಹೆಯೋ ಜಗದೀಶ 2 ಪರಿ ಘನ್ನಬಿರುದುಗಳು ಇನ್ನು ಉಳಿವುದೆಂತೋ ನಾ ಕಾಣೆ ಸನ್ನುತಿಸುವವರಿಗೆ ಇನ್ನಾದರು ಸುಖ ವನ್ನು ನೀ ದಯಮಾಡೋ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು
ಭಗವಂತನ ಸಂಕೀರ್ತನೆ ಅನುದಿನ ನೆನೆಯಲೊ ಹನುಮನಿಗತಿ ಪ್ರಿಯ ಪರಮ ಪಾವನ ರಾಮನಾಮ ಪ ಇನಕುಲ ಭೂಷಣ ಮುನಿಜನ ತೋಷಣ ಜಾನಕಿರಮಣನ ನಾಮ ಅ.ಪ ಗೌತಮ ಸತಿಯೆ ಪುನೀತಳ ಮಾಡಿ ಪ್ರ- ಖ್ಯಾತಿ ಪೊಂದಿದ ದಿವ್ಯನಾಮ ಶೀತಲ ಕಿರಣ ಭೂಷಣನ ಧನುವ ಮುರಿದು ಸೀತೆಯ ಪೊಂದಿದ ನಾಮ 1 ಜನಕನ ವಚನವನುಳಿಸುವ ನೆವದಲಿ ವನವಾಸ ಮಾಡಿದನ ನಾಮ ವನದಲಿ ಖರದೂಷಣ ಮುಖ ದನುಜರ ಹನನ ಮಾಡಿದ ದಿವ್ಯನಾಮ2 ಶರಭಂಗಮುನಿಗೆ ಪರಮ ಪದವನಿತ್ತ ಪರಮ ಪವಿತ್ರನ ನಾಮ ನಾಸಿಕ ಕರ್ಣ ಮುರಿಸಿದವನ ಶುದ್ಧ ನಾಮ 3 ಭೂಮಿಜೆಯನು ಮೋಸದಿಂದ ಅಗಲಿಸಿದ ಮಾರೀಚನ ಕೊಂದ ನಾಮ ಸ್ವಾಮಿಯ ಪ್ರೇಮಕ್ಕೆ ಮಡಿದ ಜಟಾಯುಗೆ ಅಭಯ ಹಸ್ತವನಿತ್ತ ನಾಮ 4 ಆ ಮಹಾ ಹನುಮನ ಕಾಮಿತದಂತೆ ಮಹೇಂದ್ರ ಸುತನ ಕೊಂದ ನಾಮ ಕಮಲ ಸುಹೃದತನಯನಿಗೆ ಸಾಮ್ರಾಜ್ಯವನಿತ್ತ ನಾಮ 5 ಪರಿಪರಿವಾರದಿಂ ಶರಧಿಯೊಳ್ ಸೇತು ಬಂಧನವ ಮಾಡಿದ ರಾಮನಾಮ ದುರುಳ ರಾವಣ ಮುಖ ರಕ್ಕಸರನೆ ಕೊಂದು ಧರಣಿ ಸುತೆಯ ಕಂಡ ನಾಮ6 ಶರಣವ ಪೊಂದಿದ ಭಕುತ ವಿಭೀಷಣಗೆ ತರುಣಿ ಸೀತೆ ಲಕ್ಷ್ಮಣರಿಂದ ಕೂಡಿ ಪು ಷ್ಪಕವನೇರಿದ ಸಾಧು ನಾಮ 7 ಉರುತರ ತಪದಲಿ ನಿರತನಾದ ತಮ್ಮ ಭರತನ ಉಳಿಸಿದ ನಾಮ ದೊರೆತನವೊಂದಿ ಸಕಲ ಸುಜನರುಗಳಿಗೆ ಪರತರ ಸುಖವಿತ್ತ ನಾಮ 8 ತನ್ನ ಭಕುತರೊಳು ಉನ್ನತನೆನಿಸಿದ ಘನ್ನಮಾರುತಿಗೊಲಿದ ನಾಮ ಪ್ರ ಸನ್ನನಾಗಿ ಸಂತತ ಇವನಿಗೆ ತನ್ನ ಸಹ ಭೋಗ ಸುಖವಿತ್ತ ನಾಮ 9
--------------
ವಿದ್ಯಾಪ್ರಸನ್ನತೀರ್ಥರು
ವಾಸುದೇವ ನಿನ್ನ ದಾಸನಾಗಲು ಬಲು ಆಸೆಯ ಪೊಂದಿ ಸಂತೋಷದಲಿರುವೆನೊ ಪ ಈ ಸಂಸಾರದ ಮೋಸಕೆ ಸಿಲುಕೆ ನಾ ಶ್ರೀಶನ ಚರಣವ ಲೇಶ ಭಜಿಸಲಿಲ್ಲ ಪಾಶಕೆ ಸಿಲುಕದ ಸುಜನರುಗಳ ಸಹ ವಾಸವಿತ್ತು ಅವಕಾಶವ ನೀಡೊ ಅ.ಪ ಸಾರುತಲಿರುವ ಸಮೀರ ಸಮಯಗಳ ಸಾರವನರಿಯದೆ ದೂರಿದೆ ನಿನ್ನನು ಯಾರ ಕರುಣವೊ ತೋರಿತು ಮನದಲಿ ಘೋರತರದ ಅಪರಾಧಗಳೆಲ್ಲವು ಭೂರಿ ದಯದಿ ನಿನ್ನ ಚಾರು ಚರಣದಲಿ ಸೇರಿಸೊ ಮನವ 1 ಪರಿಪರಿ ವಿಧದ ಕುಶಾಸ್ತ್ರಗಳೋದಲು ಬರಿಗಾಳಿಯ ಗುದ್ದಿ ಮುರಿದವು ಕರಗಳು ಸಿರಿರಮಣನೆ ನಿನ್ನ ಪರಿಚಾರಕನೆಂಬೊ ಅರಿವಿನಿಂದಲೆ ಪರತರ ಸುಖವೆಂದು ಪರಿಪರಿಯರುಹುವ ಗುರು ಮಧ್ವರಾಯರ ವರಶಾಸ್ತ್ರಗಳಿಗೆ ಸರಿಯುಂಟೆ ಜಗದೆ 2 ಅನ್ಯಸೇವೆಗಳಲ್ಲಿ ಅನ್ಯಾಯದಿ ಕಾಲ ಮುನ್ನ ಕಳೆದುದನು ಮನ್ನಿಸೆಲೋ ಹರಿ ನಿನ್ನ ಸೇವೆಯ ಸುಖವನ್ನು ಅರಿತೆನೊ ಎನ್ನ ಮನಕೆ ಬಲವನ್ನು ಕರುಣಿಸುತ ಇನ್ನಾದರು ಚ್ಯುತಿಯನ್ನು ಪೊಂದಿಸದೆ ನಿನ್ನ ದಾಸನಲಿ ಪ್ರಸನ್ನನಾಗೆಲೊ 3
--------------
ವಿದ್ಯಾಪ್ರಸನ್ನತೀರ್ಥರು
ಶ್ರೀಪರಿಕಲ್ ನರಸಿಂಹ ಸ್ತೋತ್ರ ನರಸಿಂಹ ಪರಿಕಲ್ ನರಸಿಂಹ | ಗೌರೀಶಾದ್ಯಮರರಿಗೀಶ | ಆಹ | ಅಮಿತ ಪೌರುಷ ಸ್ವಜನತೇಷ್ಟಪ್ರದನೆ ನಮೋ ಅಮಲೂರು ಗುಣಗಣಾರ್ಣವ ಜಯ ಜಯತು ಪ ಸರ್ವೋರು ನಿಜ ಶಕ್ತಿಮಂತ | ಸದಾ ಸರ್ವತ್ರವ್ಯಾಪ್ತ ಅನಂತ | ಜಗತ್ ಸೃಷ್ಟ್ಯಾದಿಗಳಿಗೇ ನೀ ಕರ್ತ | ವಿಷ್ಣು ಸರ್ವತೋಮುಖ ಮೃತ್ಯುಹಂತ || ಆಹ || ಶ್ರೋತವ್ಯಮಂತವ್ಯ ಧ್ಯಾತವ್ಯವಿಭು ನೀನು ವ್ಯಕ್ತನಾದಿಯೋ ಸ್ತಂಭದಲಿ ಭೃತ್ಯಗೋಲಿದು 1 ಮೂಲಾಧಾರಾರಭ್ಯಲೂಧ್ರ್ವ | ವಾಗಿ ತಲೆಯ ಪರ್ಯಂತದಿ ನಿಲುವ | ಬಲು ಸುಲಲಿತಸ್ತಂಭದಂತಿರುವ | ನಾಡಿ ಯಲ್ಲಿ ಉರದೇಶದಿ ಪೊಳೆವ ||ಆಹ|| ಜ್ಯೋತಿರ್ಮಯನೆ ಪಾಪತಿಮಿರಾರ್ಕ ನೀ ಎನ್ನ ಪ್ರತಿಕ್ಷಣ ಪಾಲಿಸೋ ಶ್ರೀಲಕ್ಷ್ಮೀರಮಣ 2 ವಿಧಿ ಭವೇಂದ್ರಾದಿಗಳಿಂದ | ಪ್ರಹ ಲ್ಲಾದ ಶ್ರೀವ್ಯಾಸಮುನೀಂದ್ರ | ಮಂತ್ರಾ ಸದ್ಮಸ್ಥ ಶ್ರೀ ರಾಘವೇಂದ್ರ | ದಾಸ ವೃಂದ ಸುಜನರುಗಳಿಂದ ||ಆಹ || ಸೇವಿತ ಪೂಜಿತ ಸ್ತುತ್ಯ ಸಂಭಾವಿತ ||ಪಾಲಿಸೋ.......... 3
--------------
ಪ್ರಸನ್ನ ಶ್ರೀನಿವಾಸದಾಸರು