ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದ ಆನಂದವು ಈ ಜಗದಿ ಗೋವಿಂದನ ದಯದಿ ಪ ಆನಂದವು ಗೋವಿಂದನ ನಾಮವು ಆನಂದದಿ ಸ್ಮರಿಸುವ ಸುಜನರಿಗೆಅ.ಪ ಬಂಧು ಬಾಂಧವರೆಲ್ಲರು ಕೂಡುತಲಿ ಒಂದೇ ಮನಸಿನಲಿ ಇಂದಿರೇಶನ ಸ್ಮರಣೆಯ ಮಾಡುತಲಿ ನಂದ ಯಶೋದೆಯ ಕಂದನೆ ಪರನೆಂದು ಚಂದದಿ ಕುಣಿದಾಡುತ ಸ್ತುತಿ ಮಾಡಲು ಭವ ಬಂಧನ ಬಿಡಿಸುವ- ನೆಂದು ಮನದಿ ಆನಂದ ಪಡುವರಿಗೆ 1 ಪಕ್ಷಿವಾಹನ ಪುರುಷೋತ್ತಮ ಹರಿಯು ಆನಂದ ವತ್ಸರದಿ ರಕ್ಷಿಸಿ ಪೊರೆವನು ಭಕುತರ ತ್ವರದಿ ಅಕ್ಷರೇಢ್ಯ ಕಮಲಾಕ್ಷನೆ ಪರನೆಂ- ದೀಕ್ಷಿಪ ಭಕುತರ ರಕ್ಷಿಸಿ ಪೊರೆವ ಪ- ರೀಕ್ಷಿತಗೊಲಿದಂದದಿ ಪರಮಾತ್ಮನು ರಕ್ಷ ಶಿಕ್ಷಕನೆಂದೆನುವ ಸುಜನರಿಗೆ2 ಕಮಲಾಪತಿ ಕಾಮನ ಪಿತ ಶ್ರೀಹರಿಯು ಕಾರುಣ್ಯ ನಿಧಿಯು ಕಮಲಾಕ್ಷನು ಕಾಪಾಡುವ ಸುಜನರನು ಕಮಲಭವೇಂದ್ರಾದ್ಯಮರರು ಪೊಗಳಲು ಕಮಲನಾಭ ವಿಠ್ಠಲ ಜಯ ಜಯ ಎಂದು ಸುಮನಸರೊಡೆಯ ಸುಂದರ ಶ್ರೀಹರಿ ತಾ ಶ್ರಮ ಪರಿಹರಿಸುವನೆನುವ ಸುಜನರಿಗೆ3
--------------
ನಿಡಗುರುಕಿ ಜೀವೂಬಾಯಿ
ಸರಸ್ವತಿಗೆ ಭಾರತಿಗೆ ಮಂಗಳವು ಹರಿಗೆ ಪ ವಾರುಣಿ ಸಾಪರಣಿ ಉಮೆಯರಿಗೆ ಅ.ಪ ಸುರಋಷಿಚಿರಪಿತ ರಾಜರಿಗೆ 1 ನರಶ್ರೇಷ್ಠ ವಿಪ್ರಾದಿ ಸುಜನರಿಗೆ2 ವಿಶ್ವವ್ಯಾಪಕ ಗುರುರಾಮವಿಠಲಗೆ 3
--------------
ಗುರುರಾಮವಿಠಲ