ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಮ ಕರುಣಾಳುಗಳು ಈ ಗುರುಗಳು ಶ್ರೀ ವರತಂದೆ ಮುದ್ದುಮೋಹನವಿಠಲಾಖ್ಯರು ಪ. ಶಾಂತರು ದಾಂತರು ಸಂತೋಷ ಸುಖಿಗಳು ಅಂತರಂಗದಿ ಹರಿಯ ಧ್ಯಾನಿಸುವರು ಕಂತುಜನಕನ ಧ್ಯಾನ ಸತ್ಪಾಂಥರಿಗೆ ಬೀರುತಲಿ ಎಂತೆಂತೊ ಸುಜನರಿಂ ಸ್ತುತಿಸಿಕೊಳುತಿಹರು 1 ನಿರಪೇಕ್ಷೆಯಿಂದಲಿ ಪರರಿಗುಪಕಾರವನು ತೆರವಿಲ್ಲದೆಲೆ ಸತತ ಮಾಡುತಿಹರು ಅರಿಯೆನಿವರಾ ಮಹಿಮೆ ಪರದೇಶಿ ನಾನಿನ್ನು ಕರುಣೆಯಿಂದೆನಗೆ ಹರಿ ಅಂಕಿತವನಿತ್ತರು 2 ಸುಪ್ರೀತರಾಗಿನ್ನು ಈ ಶರೀರದ ಒಳಗೆ ಶ್ರೀಪತೀ ತೈಜಸನ ವ್ಯಾಪಾರದಿ ಶ್ರೀ ಪರಮ ಗುರುಗಳೆಂದ್ಹರಿಯ ನಿರ್ಮಾಲ್ಯವನು ಕೃಪಾತಿಶಯದಿ ಕೊಡಿಸಿ ಎನ್ನನುದ್ಧರಿಸಿದರು3 ಎಲ್ಲರೂ ದÉೀವಾಂಶರೆನ್ನುವುದು ಕೇಳುತಲಿ ನಿಲ್ಲದೇ ಮನಸು ಬಹು ತಲ್ಲಣಿಸುತಿರಲು ಪಲ್ಲವಿಸಿ ಎನ್ನ ಮನ ಮಂದಿರದಿ ಅನುಗಾಲ ಪುಲ್ಲಾಕ್ಷನನು ತೋರಿ ಉಲ್ಲಾಸಕೊಡುತಿಹರು 4 ಶ್ರೇಷ್ಠಗುರುಗಳು ಇವರು ಸೃಷ್ಟಿಯೊಳಗೆನಗಿನ್ನು ಎಷ್ಟು ಯೋಚಿಸೆ ಮನವು ಮಹಿಮೆಯರಿಯೆ ವೃಷ್ಟಿವಂಶಜ ರುಕ್ಮಿಣೀರಮಣ ಗೋಪಾಲ- ಕೃಷ್ಣವಿಠಲನ ಬಹು ದಿಟ್ಟಾಗಿ ತೋರುವರು 5
--------------
ಅಂಬಾಬಾಯಿ
ಮಗಟಖಾನ ಹುಬ್ಬಳ್ಳಿ ಶ್ರೀಯಾದವಾರ್ಯರ ಕರಾರ್ಚಿತ ಶ್ರೀನರಸಿಂಹ ಸ್ತೋತ್ರ ಕರುಣವೆಂತುಂಟೋ ನಿನಗೆ | ಶ್ರೀನಾರಸಿಂಹಾ ಪ ವರತಟನಿ ಮಲಪ್ರಭೆಯ | ತೀರಸ್ಥನೆನಿಸೀ ಅ.ಪ. ಪೂರ್ವದಲಿ ಋಷಿ ಚ್ಯವನ | ರಿಂದರ್ಚಿತವು ಎನೆಓರ್ವ ಶಿಲೆಯಲಿ ನಿಂದು ಯಾದವಾರ್ಯಾ |ಪಾರ್ವ ಯೋಗೀಶ ರಚಿ | ತಾಕಾರ ಗಂಧದಲಿಆಹ್ವಾನಿತನು ಆಗಿ ನೀನಿಲ್ಲಿ ಇರುವೇ 1 ಆದಿ ವ್ಯಾಧಿಲಿನೊಂದ | ಬುಧರಿಂದ ಬಹುಸೇವ್ಯಯಾದವಾರ್ಯಾಂತಸ್ಥ | ಶ್ರೀ ನಾರಸಿಂಹಾ |ಬಧಿರ ಮೂಕರು ತಮ್ಮ | ವ್ಯಾಕುಲವ ಕಳೆಯುತ್ತಮುದವಾಂತು ತವ ಮಹಿತಿ ಕೀರ್ತಿಸುತ್ತಿಹರೋ 2 ಮಾಸ ನಿಶಿ ಜೇಷ್ಠದಲಿಮತ್ತೆ ಹರಿದಿನದಲ್ಲಿ | ಮಂದವಾರದಲೀ |ಮತ್ಸರಾದ್ವಿರಹಿತರು | ಸತ್ಸುಜನರಿಂದ ಕೂಡಿಉತ್ಸಹದ ಜಾಗರವ | ನೀ ಮಾಡಿ ಮಾಡಿಸಿದ್ಯೊ 3 ಬೆಟ್ಟದಾಚಾರ್ಯರೆನೆ | ಸುಷ್ಠು ಕೀರ್ತನೆಗೊಂಡಶ್ರೇಷ್ಠ ಹುಚ್ಚಾಚಾರ್ಯ | ರಿಲ್ಲಿ ನೆಲೆಸುತಲೀಇಷ್ಟ ಸಿದ್ಧಿಗಾಗಿ ಶ್ರೇಷ್ಟ | ತಪವನೆ ಗೈದುಇಷ್ಟಾರ್ಥ ಪೊಂದಿತಾ | ಬೆಟ್ಟಕ್ಕೆ ತೆರಳಿದರೋ 4 ಮೋದ ಪಡಿಸುತ ಬುಧರಯಾದವೇಶನ ನೊಲುಮೆ | ಸಂಧಿಸುತ ಮೆರೆದೂ |ಆದರಿಸಿ ಮಂಗಳ ಸು | ಭೋದಗಳ ಬೀರುತಲಿಮೋದ ಬಡಿಸಿದ ಹರಿಯ | ಭೂದೇವ ಆರ್ಯ 5 ಪ್ರೇರ್ಯ ಪ್ರೇರಕರಾಗಿ | ಬೆಳಗಾವ್ಕರು ಎಂಬಪಾರ್ವನಲಿ ನೀ ನಿಂತು | ಅಚ್ಚರಿಯನೆಸಗೀಭಾರ್ಯೆ ತವ ಕೊಲ್ಲಾಪುರ | ಮ್ಮ ಸತ್ಯವ್ರತರಆರ್ಯಗೊಡ ದರ್ಶಿಸುವ | ಯೋಗ ನೀನಿತ್ತೇ 6 ಸೃಷ್ಠ್ಯಾದಿ ಅಷ್ಟಕವ | ದೃಷ್ಟಿ ಮಾತ್ರದಿಗೈವಇಷ್ಟ ಭಕುತಿಗೆ ಮೆಚ್ಚಿ | ಘಟ್ಟಿ ಕಂಬದಿ ಜಿಗಿದೂದುಷ್ಟನ್ನ ಸಂಹರಿಸಿ | ಕಷ್ಟಗಳ ಕಳೆದಂಥಕೃಷ್ಣ ಗುರು ಗೋವಿಂದ ವಿಠಲಾ ಗಾನಮಿಪೇ 7
--------------
ಗುರುಗೋವಿಂದವಿಠಲರು
ಸಾಧಿಸು ಪರಲೋಕ ಮನವೆ ನೀ ಸಾಧಿಸು ಪರಲೋಕ ಪ ಮಾಧವನ ಮಹ ಪಾದದಾಸರಿಂದ ಶೋಧಿಸಿ ನಯದಿ ಸಂಪಾದಿಸಿ ಜ್ಞಾನವ ಅ.ಪ ಭೇದಬುದ್ಧಿ ಬಿಡೋ ಸುಜನರಿಂ ವಾದಿಸಿ ಕೆಡಬೇಡೋ ಆದರದಿಂದಲಿ ಸಾಧು ಸಂತರ ಸು ಬೋಧ ವಾಕ್ಯಗಳ ಮೋದದಿಂ ಕೇಳುತ 1 ರಾಗರಹಿತನಾಗೋ ಸಂಸಾರ ಭೋಗದಾಸೆ ನೀಗೋ ಯೋಗಿಗಳಿಗೆ ತಲೆವಾಗಿ ದಿಟದಿ ನೀ ಹೋಗಲಾಡಿಸಿ ಭವಬೇಗ ಸುಪಥಕ್ಹತ್ತಿ 2 ಕಾಮಿತಂಗಳ ಅಳಿಯೋ ತನುಧನ ಪ್ರೇಮಮೋಹ ಕಳೆಯೋ ಕಾಮಜನಕ ನಮ್ಮ ಭೂಮಿಜೆಪತಿ ಶ್ರೀ ರಾಮನಾಮಬೆಂಬ ವಿಮಾನವೇರಿ 3
--------------
ರಾಮದಾಸರು