ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸಮ್ಮಾ ತಾಯೆ ಕರುಣಿಸಮ್ಮಾ ಪ. ಕರುಣಿಸಮ್ಮಾ ಭರದಿ ವರಪ್ರಸಾದವ ತ್ವರದಿ ವರ ಶಂಕರನ ಜಾಯೆ ತ್ವರಿತದಿ ಕಾಯೆ ಅ.ಪ. ಇಷ್ಟ ಮೂರುತಿ ಶಿವನ ದಿಟ್ಟ ತೊಡೆಯಲಿ ಮೆರೆವ ದಿಟ್ಟ ರೂಪವ ತೋರೆ ದಿಟ್ಟ ಸುಂದರಿಯೆ ಪಾದ ಎನ್ನ ದಿಟ್ಟತನದಲಿ ಭಜಿಪ ಇಷ್ಟಕೊಡು ಮಾತೆ 1 ಭಜಿಪರ ಮನದಾತೆ ಸುಜನರಾಪ್ತೆಯೆ ನಿನ್ನ ಭಜಿಪ ಮನವನು ಇತ್ತು ಕಾಪಾಡು ತಾಯೆ ನಿನ್ನ ಸುಜನ ಸಂಗವನಿತ್ತು ದುರ್ಜನ ಸಂಗವ ಬಿಡಿಸಿ ಪಾದ ಭಜಿಪ ಭಾಗ್ಯವ ನೀಡೆ 2 ಭಾಗ್ಯದೇವತೆ ನೀನು ಸೌಭಾಗ್ಯ ಮಾಂಗಲ್ಯದಾ ಭಾಗ್ಯವನು ಕೊಟ್ಟು ಕಾಪಾಡು ತಾಯೆ ಕಾಯೆ ಯೋಗ ಮೂರುತಿ ಶ್ರೀ ಶ್ರೀನಿವಾಸ ಸಹೋದರಿಯೆ ಅನುರಾಗದಿಂ ಹರಿಪದವ ಭಜಿಪ ಭಾಗ್ಯವನಿತ್ತು 3
--------------
ಸರಸ್ವತಿ ಬಾಯಿ
ಪಾಲಯಮಾಂ ಪಾರ್ವತಿಯೆ ಪಾಪ ವಿನಾಶಿನಿ ತಾಯೆ ಶೀಲ ಮೂರುತಿ ಶಿವೆ ಈ ಜಾಲ ಸಂಸಾರದಿ ಪ. ತ್ರಿಜಗ ಪೂಜಿತೆ ನಿನ್ನ ಭಜಿಸೂವಾಮನವಿತ್ತು ಸುಜನರಾಪ್ತೆಯೆ ಎನ್ನಾ 1 ರಾಗ ರಾಗದಿ ನಿನ್ನ ಅನುರಾಗದಿಂ ಪೂಜಿಪೆ ಭಾಗ್ಯವನು ಕೊಟ್ಟು ನೀ ವೈರಾಗ್ಯ ಭಕ್ತಿಯನು 2 ಅರಿಶಿಣ ಕುಂಕುಮವನ್ನು ವರ ಮಾಂಗಲ್ಯದಾ ಭಾಗ್ಯ ನಿರುತದಿ ನೀಡುತ ಪೊರೆಯೆ ಶ್ರೀ ಶ್ರೀನಿವಾಸ ಸಹೋದರಿಯೆ3
--------------
ಸರಸ್ವತಿ ಬಾಯಿ