ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಪೆಯಿಟ್ಟು ಸಲಹೆನ್ನ ಹರಿಯೆ ನರಹರಿಯೆ ದ್ವಿಪÀವರವರದನೇ ಬಾರಯ್ಯ ದೊರೆಯೆ ಪ ದುರಿತಹರÀ ವರ ಚರಣಕಮಲನೆ ಧರಣಿಧರವನು ಕರಸರೋಜದಿ ಧರಿಸಿ ಸುಜನರ ಪೊರೆದ ಮುರಳೀ- ಧರನೇ ಮೋದವಪಡಿಸಿದಂತೆ ಅ.ಪ ನಂದನಂದನ ನಿನ್ನ ಚರಣ ಒಂದೇ ಶರಣ ಎನಗೆಂದು ನಂಬಿರುವುದೇ ಒಳ್ಳೇ ಆಭರಣ ಇಂದಿರೇಶನೆ ಮಾಡೋ ಕರುಣ ಸಿಂಧುಶಯನ ಸುಂದರೀಮಣಿ ಸಹಿತದಲಿ ನೀ ಬಂದು ಎನ್ನಯ ಮಂದಿರದಲಿ ನಿಂದು ಎನ್ನವನೆಂದು ಭಾವಿಸಿ ನಂದಪಡಿಸೈ ನಂದಬಾಲನೆ 1 ದೀನಪಾಲನೆ ಭೂಮಿಭಾರ ಹಾನಿಕಾರ ಪಂಚ ಸೂನಶರನಪಿತ ವಿಗತವಿಕಾರ ಶ್ರೀನಾಥ ಸುಜನಮಂದಾರ ಮೀನಾಕಾರ ನಾನು ನಿನ್ನವನಯ್ಯ ಎನ್ನಯ ಮಾನ ಮತ್ತಪಮಾನ ನಿನ್ನದು ಹೀನಮತಿ ಇವನೆಂದು ತಿಳಿದುದಾ- ಸೀನಮಾಡದೆ ಸಾನುರಾಗದಿ 2 ಸೋಮ ಕುಲಾಂಬುಧಿಸೋಮರಾರಾಮ ಬಲರಾಮ ಸಹಜನೇ ಸುರರಿಪು ಭೀಮ ವಾಮಲೋಚನೇರಿಗೆ ಕಾಮ ಪ್ರೇಮಧಾಮ ಕಾಮಜನಕನೆ ಸಾಮಗಪ್ರಿಯ ನಾಮಗಿರಿ ಶ್ರೀ ರಾಮ ನರಹರೆ ಕಾಮಿತಾರ್ಥವನೀವ ಸುರತರುಕಾಮಧೇನು ಚಿಂತಾಮಣಿಯೆ ನೀ 3
--------------
ವಿದ್ಯಾರತ್ನಾಕರತೀರ್ಥರು
ನಂಬಿದೆನೊ ರಂಗ ಗೋವಿಂದ ರಂಗ ಪ. ಇಳೆಸೃಷ್ಟಿಗಾಧಾರನೆಂಬ ಬಿರುದುಳ್ಳಡೆ ಜಗನ್ಮಯನೆ ಚಿನ್ಮಯರೂಪ ರಂಗ ನೀನಾದ್ಯಯ್ಯ ರಂಗ 1 ಸುಜನಮಂದಾರ ಸರಸಿಜಭವಪಿತ ನಿನ್ನ ಪ್ರಜೆಗಳು ಪೊಗಳುತ್ತಿಹರೆ ರಂಗ ಮುರಹರನೆ ರಂಗ 2 ಸುಜನರೊಳಗೆನ್ನ ಕುಹಕವ ಮಾಡದೆ ನಿನ್ನ ಭಜಕನೆಂದಿರಲಾಗಿ ರಂಗ ಭುಜಗೇಂದ್ರಶಯನ ಶ್ರೀರಂಗ 3 ಧಾತ್ರಿಗಾಧಾರ ಅನಾಥರಕ್ಷಕನೆ ದಯವ್ಯಾತಕೆನ್ನೊಳಿಲ್ಲ ರಂಗ ಕಡೆಹಾಯಿಸೊ ರಂಗ 4 ನೋಡೆ ಶ್ರೀ ಹರಿಯೆ ನೀನಲ್ಲದನ್ಯತ್ರ ದಾತ್ರರಿಲ್ಲವೊ ರಂಗ ಮಹಿಮ ಶ್ರೀರಂಗ 5 ಕೋಪವನು ಬಿಡು ಎನ್ನ ಕುಂದನೆಣಿಸದಿರಯ್ಯ ಆಪತ್ಬಂಧು ಶ್ರೀರಂಗ ಸಲಹಯ್ಯ ರಂಗ 6
--------------
ಹೆಳವನಕಟ್ಟೆ ಗಿರಿಯಮ್ಮ
ವಂದೇ ಗೋಪಾಲಂ ಕೃಷ್ಣಾನಂದ ಜಲಪಾಲಂ ಮಂದಹಾಸ ಮುನಿವೃಂದ ವಿಶಾಲಂ ಇಂದಿರೇಶ ಯದುನಂದನ ಬಾಲಂ ಪ ಸಾರಿದನು ಸಾರಂ ಕೃಷ್ಣ ಚಾರು ಮೋಹನಾ ಕಾರಂ ಸಾರೋದ್ದಾರಂ ಸುಜನಮಂದಾರಂ ಶ್ರೀರಮಣೀ ಮುಖ ಚಂದ್ರ ಚಕೋರಂ 1 ಕಾಂಚೀ ಮಣಿಹಾರಂ ಕೃಷ್ಣ ವಾಂಛಿತದನುಸಾರಂ ಪಂಚಭೂತ ಪಂಚಸ್ಯಾಕಾರಂ ಪಾಂಚ ಜನ್ಯ ಭೃಗುಲಾಂಛನ ಧಾರಂ 2 ಚಾಪಲ ಗುಣಧಾಮಂ ಕೃಷ್ಣ ಗೋಪೀಜನ ಕಾಮಂ ನೀ ಪರಮಾತ್ಮ ಸ್ವರೂಪ ಸುನಾಮಂ ಶ್ರೀಪತಿ ಯದು ಕುಲದೀಪ ನಿಸ್ಸೀಮಂ 3 ಪಾಂಡವ ಸಾಕಾರಂ ಕೃಷ್ಣ ಪಂಡಿತನುಸಾರಂ ಚಂಡ ಕಿರಣ ಮಣಿಕುಂಡಲ ಧಾರಂ ಮಂಡಲದೊಡೆಯ ಉದ್ದಂಡತಿ ಶೂರಂ 4 ಶರಣರ ಭವದೂರಂ ಕೃಷ್ಣ ಸುರಜನ ಸಾಕಾರಂ ಹರಿಸೂನು ಕೋಣೆ ಲಕ್ಷ್ಮೀಶ ಶೃಂಗಾರಂ ಪರಮಾತ್ಮಕ ಸದ್ಗುರು ಮಂದಾರಂ 5
--------------
ಕವಿ ಪರಮದೇವದಾಸರು