ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭ್ರಷ್ಟನೆಂದಿಸಿದೆಯಾ ಕೃಷ್ಣನೇ ಎನ್ನ ಪ ಭ್ರಷ್ಟನೆಂದಿನಿಸಿದ್ಯಾ ಸೃಷ್ಟಿಗೀಶನೆ ಪರ ಮೇಷ್ಟಿ ಜನಕ ದಿವ್ಯ ದೃಷ್ಟಿ ಕೊಡದಲೆನ್ನ ಅ.ಪ ನರರ ಸಂದಣಿಯಲಿ ವಿರತಿ ಮಾತಾಡಿಸಿ ಮಾರನಾಟದಿ ಮನವೆರಗುವಂದದಿ ಮಾಡಿ 1 ಕಾಷಾಯ ದಂಡಿ ವೇಷವ ಧರಿಸಿ ಮುನ್ನ ಮೋಸಪಡಿಸಿ ಸ್ತ್ರೀಯರಾಸೆ ಬಿಡಿಸಿದೆನ್ನ 2 ಸೀಲರಂದಲಿ ಜಪಮಾಲೆ ಕೈಯಲಿ ಪಿಡಿಸಿ ಕಾಳಿಮರ್ಧನ ದೇವ ಮಲಿನ ಮನವನಿತ್ತು 3 ಕರವಶವನೆ ಮಾಡಿ ಸರಸದಿಂದ ಕಲೆಹಾಕಿ ಮರೆಸಿ ನಿನ್ನನೆ ಕೃಷ್ಣ ನಿರಯಭಾಗಿಯ ಮಾಡಿ4 ಕರುಣವಾರಿಧಿ ಎನ್ನ ಮರುಳುಗೊಳಿಸಿ ವಿಷಯ ಶರಪಂಜರದಿ ಬಿಗಿದು ಚರಣ ತೋರಿಸದೆಲೆ 5 ಮದ ಮತ್ಸರ ಕಾಮ ಕ್ರೋಧ ಲೋಭ ಮೋಹ ಮಾಧವ 6 ಪತಿತಾಗ್ರಣಿಯು ನಾನು ಪತಿತ ಪಾವನ ನೀನು ಸತತ ನಿನ್ನಯ ಸಂಸ್ಮøತಿಯ ನೀಡದಲೆನ್ನ 7 ದ್ವಿಜ ಅಜಮಿಳ ನಿಜನಾಮದಿಂದಲಿ ಸುಜನನೆಂದೆನಿಸಿದ್ದು ನಿಜತೋರದಲೆನ್ನ 8 ಹೀನರೊಳೆನ್ನೆಂಥ ಹೀನ ಜನರ ಕಾಣೆ ಸಾನುರಾಗದಿ ಕಾಯೊ ಶ್ರೀ ನರಹರಿಯೆ 9
--------------
ಪ್ರದ್ಯುಮ್ನತೀರ್ಥರು
ಚಿತ್ತಶುದ್ಧಿಯಿಲ್ಲದವನವ ಜ್ಞಾನಿಯೆ - ಪುಣ್ಯಪಾತಕಗಳನರಿಯದವ ಮನುಜನೆ ಕೃಷ್ಣ ಪ.ಮಾರಿ ಮನೆಯೊಳಗಿರಲು ಸಹಕಾರಿಯೆನಬಹುದೆ ?ಊರೊಳಗಿನಾ ಕಳ್ಳ ಅವ ಸುಜನನೆ ?ಜಾರತನವೆಸಗುವಳು ಕುಲವನಿತೆಯಹುದೆ - ಸಂಸಾರದೆಚ್ಚವಿಲ್ಲದವ ಸುಗಣನೆ ? 1ಶ್ವಾನ ಬೂದಿಯಲಿರಲು ಶಿವಭಕ್ತನನೆಬಹುದೆ ?ಕಾನನದೊಳಿಹ ಕಾಗೆ ವನವಾಸಿಯೇ ?ಗಾಣ ತಿರುಗುವ ಎತ್ತಿಗದು ಪ್ರದಕ್ಷಣೆಯೆ ಬಕಧ್ಯಾನವನು ಮಾಡಲದು ಮೌನವೇ ಕೃಷ್ಣಾ ? 2ತೋಳ ಅಡವಿಯಲಿರಲು ಅದು ದಿಗಂಬರನಹುದೆ ?ಗಾಳಿಯಂಬುವ ಉರುಗ ಉಪವಾಸಿಯೇ ?ಆಲವದು ಜಡೆಬಿಡಲುಪರಮ ಋಷಿಯಹುದೆ - ಬಲುಕಾಲಉಳಿದ ಹದ್ದು ತಾ ಹಿರಿಯದೆ ?3ಬಂಧನದೊಳಿಹ ವ್ಯಾಘ್ರವನು ತಪಸಿಯೆನಬಹುದೆ ?ಸಿಂಧುಜವು ಎನೆ ವಿಷಯ ಶೀತಕರನೆ ?ಅಂಧಕನು ಕಣ್ಮಚ್ಚಲದು ಧ್ಯಾನವೇ, ಗಜವುಮಂದಗತಿಯಾದರದು ಸ್ಮರಣೆಯೆ ಕೃಷ್ಣಾ ? 4ಮರಣಕ ಗಂಟಲನು ಮಾಡಲದು ಮಂತ್ರವೆ ?ಗಂಡು ನೀರಲಿ ಮುಳುಗಲದು ಸ್ನಾನವೇ ?ಪುಂಡರೀಕಾಕ್ಷ ಶ್ರೀ ಪುರಂದರವಿಠಲನತೊಂಡನಾಗದ ನರನ ಬಾಳು ಬಾಳುವೆಯೆ ? 5
--------------
ಪುರಂದರದಾಸರು