ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನೆಲ್ಲಿ ಜ್ಞಾನಿಯು ನಾನೆಲ್ಲಿ ಸುಜನನು ಹೀನ ವಿಷಯಗಳುಂಬ ಶ್ವಾನನಂತಿರುವೆ ಪ ಗಾತ್ರ ಬಳಲಿಸಿ ಮದನಸೂತ್ರ ಬೊಂಬೆಯು ಎನಿಸಿ ನೇತ್ರದಿಂದಪಾತ್ರದವರನು ನೋಡಿ ಸ್ತೋತ್ರಮಾಡುತ ಹಿಗ್ಗಿರಾತ್ರೆ ಹಗಲು ಕೆಟ್ಟ ವಾರ್ತೆಯಲ್ಲಿರುವೆ 1 ಧನದಾಸೆ ಘನವಾಗಿ ಅಣು ಮಹತ್ಕಾರ್ಯದೊಳುತಣಿಸಿ ದಣಿಯಲು ತೃಣವು ದೊರೆಯದಿರಲುಮನೆ ಮನೆಗೆ ಬಾಯ್ದೆರೆದು ಶುನಕನಂತೆ ದಿನಗಳೆವೆಮನುಜ ಪಶುವಿಗೆ ಇನ್ನು ಮುನಿಯೆಂಬಿರೆಂತೋ2 ನಾಲಗೆಯ ರುಚಿಯಿಂದ ಸಾಲದಾಯಿತು ಬಯಕೆಕಾಲ ಕಾಲಕೆ ನೆನಸಿ ಹಾಳಾದರೂಶೀಲಗಳ ಕಳಕೊಂಡು ಚಾಲುವರಿಯುತ ಪರರಆಲಯದ ಉಚ್ಚಿಷ್ಠ ಮೇಲಾದ ಸವಿಯ3 ಸ್ನಾನಧ್ಯಾನವನರಿಯೆ ಸಾನುರಾಗದಿ ಭಕ್ತಿಕೂನ(ಗುರುತು)ವಿಲ್ಲದೆ ಡಂಭ ಮೌನಿಯೆನಿಸಿನಾನಾ ವಿಷಯ ಮನದಿ ನಾ ನೆನೆಸುವೆ ನಿತ್ಯಏನಾದರೂ ಕಷ್ಟ ಕಾಣದಂತಿರುತಿಪ್ಪೆ 4 ಪತಿತರೊಳು ಎನ್ನಂಥ ಪತಿತರೊಬ್ಬರ ಕಾಣೆಗತಿಯು ನೀನಲ್ಲದೆ ಅನ್ಯರಿಲ್ಲಪತಿತ ಪಾವನನೆಂಬೊ ಬಿರುದುಂಟುಮಾಡುವಕ್ಷಿತಿಪತಿ ಶ್ರೀಕೃಷ್ಣರಾಯ ನೀನಹುದೋ5
--------------
ವ್ಯಾಸರಾಯರು
ಲಾಲಿ ಗೌರೀಪ್ರಿಯನೆ ಲಾಲಿ ನಾಲ್ಮೊಗನೆ ಲಾಲಿ ಲಕ್ಷ್ಮೀರಮಣ ಲಾಲಿ ಪರಿಪೂರ್ಣ ಪ ಕಪಟದಾನವಶಿಕ್ಷ ಕರುಣಾ ಕಟಾಕ್ಷ ತಪನಾಗ್ನಿ ಶಿಖಿನೇತ್ರ ಧನನಾಥ ಮಿತ್ರ ಸುಪವಿತ್ರ ಚಾರಿತ್ರ ಸುಜನನುತಿ ಪಾತ್ರ1 ವನಜ ಸಂಭವ ಸೃಷ್ಟಿ ಕರ್ತವಾಣೀಶ ಕನಕ ಗರ್ಭಾಪ್ರತಿಮ ಮಹಿಮ ಜೀವೇಶ ಗಮನ ಸುವಿಲಾಸ ಸನಕಾದಿ ಮುನಿವಿನುತ ಸರ್ವಲೋಕೇಶ2 ಪಕ್ಷಿವಾಹನ ಜಗದ್ರಕ್ಷ ಸಿರಿವರನೆ ಸಾಕ್ಷಿಯಾಗಿಹ ಗುರುರಾಮ ವಿಠ್ಠಲನೆ 3
--------------
ಗುರುರಾಮವಿಠಲ