ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧುಮ್ಮಸಾಲೆನ್ನಿರ್ಯೋ ಶ್ರೀ ಗುರುವಿನ ಬಳಗವೆ ಧುಮ್ಮಸಾಲೆನ್ನಿ ಸದ್ಗುರುವಿನ ಬಳಗವೆ ಧ್ರುವ ಗುರುವಿನ ಬಳಗವೆಂದು ಗುರುತುವಿಟ್ಟು ನೋಡಿರ್ಯೋ ಅರುಹಿನೊಳು ಮುಣಗಿ ಪರಮಸುಖ ಸೂರ್ಯಾಡಿರ್ಯೋ ಗರ್ವಿನಾಹರಿಗೆ ಬಿಟ್ಟು ಹರಿದುಹೋಗ ಬ್ಯಾಡಿರ್ಯೋ ಪರ್ವಣಿದೆ ಗುರುಕರುಣ ಪಡೆದು ಪೂರ್ಣಕೂಡಿರ್ಯೋ 1 ಧುಮ್ಮಸಾಲೆನ್ನಿರ್ಯೋ ಬೆರದು ಬ್ರಹ್ಮ ಸುಖವ ಸಮ್ಯಙÁ್ಞನದಿಂದ ದೂರಮಾಡಿ ಭವದು:ಖವ ನಿಮ್ಮ ನಿಮ್ಮೊಳು ನೋಡಿ ಘನ ಕೌತುಕವ ಹ್ಯಮ್ಮಿಯೊಳಗಾಗಿ ನೀವು ಹೋಗಬ್ಯಾಡಿ ಹೋಕುವ 2 ಕಣ್ಣದ್ಯರದು ನೋಡಿರ್ಯೊ ಚಿನ್ನುಮಯ ರೂಪವ ಭಿನ್ನವೆಲ್ಲದ್ಯದೆ ತನ್ನೊಳು ಸಮೀಪವ ಪುಣ್ಯ ಹಾನಿ ಮಾಡಿಕೊಂಡು ಹಿಡಯಬ್ಯಾಡಿ ಕೋಪವ ಕಣ್ಣ ದ್ಯರಸಿಕುಡುವ ಹಚ್ಚಿ ಗುರು ತಾನ ದೀಪವ 3 ನಮ್ಮ ನಿಮ್ಮ ದ್ಯಾವರೆಂದು ಹೊಯಿದಾಡಬ್ಯಾಡಿರ್ಯೋ ಬೊಮ್ಮನ ಪಡದ ಪರಬ್ರಹ್ಮನೊಬ್ಬ ನೋಡಿರ್ಯೋ ಇಮ್ಮನಕ ಹೋಗದೆ ಒಮ್ಮನವ ಮಾಡಿರ್ಯೋ ಸುಮ್ಮನೆ ಸುವಿದ್ಯದೊಳು ಬೆರದು ನಿಜಗೂಡಿರ್ಯೋ 4 ಸುಗ್ಗಿಯೋ ಸುಗ್ಗಿಯೋ ಸುಙÁ್ಞನದ ಲಗ್ಗಿಯೋ ಭಾಗ್ಯವಿದೆ ನೋಡಿ ಭಕ್ತಿ ಙÁ್ಞನ ವೈರಾಗ್ಯಯೋ ಬಗ್ಗಿ ನಡವ ಸಾಧುಸಂತ ಜನರಿಗಿದು ಯೋಗ್ಯಯೋ ಹಿಗ್ಗಿ ಹರುಷಪಡುವ ಮಹಿಪತಿಯ ನಿಜ ಸ್ರಾಘ್ಯಯೋ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಲೇಸು ಲೇಸಾಯಿತು ಭಾಸ್ಕರ ಗುರು ಕೃಪೆ ಲೇಸು ಲೇಸಾಯಿತು ಮಾ ಧ್ರುವ ಹಸ್ತವಿಡಲು ಎನ್ನ ಮಸ್ತಕದ ಮೇಲೆ ಸ್ವಸ್ತಹೊಂದಿತು ಮನ ನಿಶ್ಚಯಲಿ ವಿಸ್ತಾರದೋರುವ ವಸ್ತು ಇದೆಯೆಂದು ವಿಸ್ತರಿಸೆನಗಿನ್ನು ದೋರಿತು ಮಾ 1 ಸೋಂಕಲು ಶ್ರೀಗುರುಪಾದ ಎನಗಿನ್ನು ಬೇಕಾದ ಸವಿ ಸುಖಗೊಟ್ಟಿತು ಮಾ ಸಕಲೋತ್ತಮನಾದ ಏಕಾಕ್ಷರ ಬ್ರಹ್ಮ ಏಕೋಮಯವಾಗಿದೋರಿತು ಮಾ 2 ನೀಡಲು ನಿಜ ಸುಙÁ್ಞನದ ಭಿಕ್ಷೆಯು ಭವ ದುಷ್ಕಾಳವು ಮಾ ಕೂಡಿತು ಸಮರಸವಾಗಿ ಮಹಿಪತಿ ಜೀವ ಒಡಿಯನ ಚರಣದಂಗುಷ್ಠದಲಿ ಮಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುಗ್ಗಿ ಸುಕಾಲಾಯಿತು ಜಗದೊಳಗೆ ಅಗ್ಗಳತ್ಯಾಯಿತು ಗುರುದಯಲೆನಗೆ ಧ್ರುವ ಭಕ್ತಿ ಭೂಮಿಯು ಕೈಗೊಟ್ಟಿತು ಪೂರ್ಣ ತತ್ವೋಪದೇಶ ತಿಳಿಯಿತು ನಿಧಾನ ಭಕ್ತರಿಗಿದರಿಡುವದು ಅನುದಿನ ಮುಕ್ತಿಯ ಫಲ ಮುನಿಜನರಾಭಣ 1 ಮಳೆಗರಿಯಿತು ಮಹಾಗುರುದಯ ಕರುಣ ಬೆಳೆಬೆಳೆಯಿತು ಮಹಾ ಸುಙÁ್ಞನದ ಸ್ಫುರಣ ತಿಳಿಯಿತು ಬರವಿದು ಭವಬಂಧನ ಕಳೆಯಿತು ಕಾಂಕ್ಷೆ ಹುಟ್ಟುವ ಹೊಂದುಣ2 ಮನೋಹರವಾಯಿತು ಗುರುಕೃಪೆಯಿಂದ ಜನವನದೊಳು ಕಾಣಿಸಿದ ಗೋವಿಂದ ಅನುಭವ ಸುಖವಿದು ಬ್ರಹ್ಮಾನಂದ ಘನಸುಖಪಡೆದ ಮಹಿಪತಿ ಇದರಿಂದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮಿ ಅವಧೂತ ಕಾವ ಕರುಣನೆ ಪೂರ್ಣ ನೀನೆ ಸದೋದಿತ ಧ್ರುವ ಕರುಣ ದಯದ ಹುದಯ್ಯ ನೀಆಧಾರ ಶರಣ ಜನರಿಗಹುದಯ್ಯ ನೀಆಧಾರ ತಾರಿಸುವ ಸ್ವಾಮಿ ಅಹುದಯ್ಯ ನೀ ನಿರ್ಧಾರ ಪರಮ ದಯಾನಿಧಿ ನೀ ಸುಙÁ್ಞನದ ಸಾಗರ 1 ಅನಾಥನಾಥನಹುದೊ ಪೂರ್ಣ ದೀನಾನಾಥ ಸನಾಥ ಮಾಡುತಿಹ್ಯ ಶ್ರೀಸದ್ಗುರು ನೀ ಸಾಕ್ಷಾತ ಅನಾದಿ ನಿಜವಸ್ತು ಅಹುದಯ್ಯ ನೀ ಪ್ರಖ್ಯಾತ ಮುನಿ ಜನರಿಗೆ ನೀ ಆನಂದ ಸುಪಥ 2 ದೇಶಿಕರ ದೇವನಹುದಯ್ಯ ಕೃಪಾಕರ ಲೇಸು ಲೇಸಾಗೆನ್ನ ಪಾಲಿಸುವ ನೀ ದಾತಾರ ಭಾಸುತಿಹ ಭಾನುಕೋಟಿತೇಜ ಮನೋಹರ ದಾಸ ಮಹಿಪತಿ ಗುರು ನೀನೆ ಸಹಕಾರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು