ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೂಸನು ಕಂಡೀರ್ಯಾ ಸುಪ್ರ-ಹ್ಲಾದನ ಕಂಡೀರ್ಯಾ ನಮ್ಮಕೂಸನು ಕಂಡೀರ್ಯಾ ಪ ರಾಕ್ಷಸ ಕುಲದಲಿ ಜನಿಸಿತು ಕೂಸುರಾಧಾಕೃಷ್ಣನ ಭಜಿಸಿತು ಕೂಸುರಾಗ ದ್ವೇಷಗಳ ಬಿಟ್ಟಿತು ಕೂಸುರಾಮ ಪಾದವ ನೆನೆಯುವ ಕೂಸು 1 ಘನ ಹರಿ ಕಂಬದಿ ತೋರಿತು ಕೂಸುಗಳಿಸಿತು ಕೃಷ್ಣನ ಪ್ರೇಮವ ಕೂಸುಘನ ಪಂಪಾಲಯದಿ ವಾಸಿಪ ಕೂಸುಗಣೆ ಗೋಪಾಲನ ಪ್ರೀತಿಯ ಕೂಸು2 ಪ್ರಸಿದ್ಧ ವ್ಯಾಸರಾಯರೆಂಬ ಕೂಸುಪ್ರವೀಣ ವಿದ್ಯೆಯೊಳೆನಿಸಿದ ಕೂಸುಪ್ರಹ್ಲಾದನೆಂಬುವ ಆಹ್ಲಾದ ಕೂಸುಪ್ರಸನ್ನ ಕಾಗಿನೆಲೆಯಾದಿಕೇಶವನ ಕೂಸು3
--------------
ಕನಕದಾಸ
ಜಯದೇವ ಜಯದೇವ ಜಯರಾಮಲಿಂಗಾ ಜಯಜಯವೆಂದು ಬೆಳಗುವೆ ಆರತಿ ಸುರತುಂಗಾ ಪ ಸ್ವಾನಂದದ ನಿಜಕಾಶೀಪುರದಿಂದ ಅತ್ಯರಳಿ ನಾನಾಸ್ಥಳಗಳ ನೋಡುತ ಬಂದು ನೀತೀರ್ಥದಲಿ ದೀನೋದ್ದಾರ ಕಾಪಾಪನಾಶನಿ ಹರಿಸುತಲಿ ಖೂನವ ತೋರಿದೆ ಓಂಕಾರೇಶ್ವರನೆನಿಸುತಲಿ 1 ಕಾಲ ಕೆರಾಘವಸುಖದರುಕ್ಷಣಲೆಂದು ತಳಿಯೊಳುಖ್ಯಾತಿಗೆ ಬಂದು ರಾಮೇಶ್ವರನೆಂದು ನಲಿದರುಗಿರಿಜಾನಂದಿಸರ್ವದೇವರು ಬಂದು ಸಲುಹುವೆ ಭಕ್ಷರಿಗಿಷ್ಟಾರ್ಥವ ನೀಡುತಲಿಂದು 2 ನಿನ್ನಯ ಮಹಿಮೆಯ ಹೊಗಳಲು ಮನುಜರಿಗಳವಲ್ಲಾ ಮುನ್ನಾಭರಣವ ಆಗಿಹಶಶಿನೇತಾಬಲ್ಲಾ ಎನ್ನೊಳು ಬೀರುತರಕ್ಷಿಸುಘನ ತಾರಕನೊಲ್ಲಾ ಸನ್ನುತ ಮಹಿಪತಿ ನರದನ ಪ್ರಭು ಪಾರ್ವತಿನಲ್ಲಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ಧ್ರುವ ತಾನೆ ತಾನಾದ ಖೂನ ತಾನೆ ದೋರುದು ಘನ ತಾನೆ ತಾನಾಗಿ ತಾನೆಂಬುದು ಲೇಸು ನಾನಾ 1 ತಾನಾಗದೆ ಜ್ಞಾನ ನಾನಾ ಎಂಬುದೆ ಹೀನ ಸೂಕರ ನಾನಾ ಜನುಮ ತಾಳ್ದೆಖೂನ 2 ತಾನೆ ತಾನಾದ ಪೂರ್ಣ ಭಾನುಕೋಟಿಸುಘನ ಖೂನ ಮಹಿಪತಿಗಿದೆ ತಾನೆ ತಾನಾದ ತಾನಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪಾಲೊಳಗದ್ದು ನೀರೊಳಗದ್ದು ಹರಿನಾ ನಿನ್ನ ನಂಬಿದೆನೋ ಪ ಜಲಜನಾಭ ನೀನಿಟ್ಟ ತೆರದಲ್ಲಿ ಇರುವೆನಯ್ಯ ಅ.ಪ ಸುಕೃತ ದುಷ್ಕøತ ಮಾಡುನಿಖಿಳ ದುರಿತದೊಳೆನ್ನನೋಲ್ಯಾಡಿಸುಅಖಿಳ ಖಿಳನೆನಿಸು ಅಭಯ ಭಯವ ಸೂಸುಮಕರಕುಂಡಲ ನಿನ್ನ ಮತವೆ ಸನ್ಮತವಯ್ಯ1 ಜ್ಞಾನಾಜ್ಞಾನದೊಳಗಿಡು ಮಾನಾಪಮಾನವೆ ಮಾಡುಅನಾಥ ನಾಥರೊಳೆನ್ನ ಅನವರತಾಗಿರಿಸುದೀನಾದೀನತೆಯೊಳಗೆನ್ನ ನೀನೀಡ್ಯಾಡುಶ್ರೀನಾಥ ನಿನ್ನಯ ಮತ ಮತವೆ ಸನ್ಮತವಯ್ಯ 2 ಪ್ರಾಣಾಪಾನ ವ್ಯಾನೋದಾನ ಸಮಾನಂಗಳ ಭೇದಿಸುಘನ ದಾರಿದ್ಯ್ರದಿ ನೂಕು ಸುಖವೆ ಸುರರೊಳಗ್ಹಾಕುಮುನಿಜನರ ಸಂಗ ಪೊರೆವ ರಂಗವಿಠಲನಿನ್ನಯ ಮತ ಮತವೆ ಸನ್ಮತವಯ್ಯ 3
--------------
ಶ್ರೀಪಾದರಾಜರು
ಹರಿಹರಿ ಎನ್ನಿ ಹರಿವದು ಪಾಪ ಧರೆಯೊಳು ಧರೆಯೊಳು ಕರಮುಗಿದು ಗುರುವಿಗೆ ಕೇಳುವುದು ಬಲುಮೇಲು ಧ್ರುವ ಮೂಢಗೆ ಉಪಾಯ ಹೇಳಿದರೆ ತಿಳುವದೆ ತಿಳುವದೆ ಖೋಡಿಗೆ ಸುಲಕ್ಷಣದ ಮಾತು ಹೊಳೆವದೆ 1 ಬಿಸಲು ಬೀಳುದೆ ಬೀಳುದೆ ಗೂಢ ಗುರುವಿನ ಮಾತಿದು ನಾಡಿಗೆ ತಿಳುವದೆ 2 ವಿಷ ಕಚ್ಚಿದ ಮನಕೆ ಸುಘನ ಭಾಸುದೆ ಭಾಸುದೆ ತುಸು ಝರಿ ಇಲ್ಲದೆ ಬಾವಿಲಿ ನೀರು ಸೂಸುದೆ ಸೂಸುದೆ 3 ಹಸಗೆಟ್ಟಹ್ಯ ಕುಕ್ಕಡಿನೂಲ್ಹಾಸಿಗೆ ಬಾಹುದೆ ಬಾಹುದೆ ಕಸಕಡ್ಡಿಲ್ಲದ ಮುಗಿಲೆಂದಿಗೆ ತಾ ಮಾಸುದೆ 4 ಮೀಸಲ ಮನ ಒಂದಾದರೆ ಸಾಕು ತಿಳಿಕೊಳ್ಳಿ ತಿಳಿಕೊಳ್ಳಿ ಭಾಸ್ಕರ ಗುರುರಾಯನ ಶ್ರೀಪಾದಕೆ ಬಲಗೊಳ್ಳಿ ಬಲಗೊಳ್ಳಿ 5 ಲೇಸಿನ ನಿಜಸುಖ ನೆರೆಗೊಳ್ಳು ಮಹಿಪತಿ ನಿನ್ನಲ್ಲಿ ನಿನ್ನಲ್ಲಿ ಹೇಸಿ ಮುಖದೋರದೆ ಹೋಗುವುದು ಭವದ ತಳ್ಳಿ 6
--------------
ಕಾಖಂಡಕಿ ಶ್ರೀ ಮಹಿಪತಿರಾಯರು