ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬಿದೆನೊ ನಿನ್ನ ಅಂಬುಜನಯನ ಕೃ ಪಾಂಬುಧೆ ದೃಢದಲಿ ಪ ಸಂಭ್ರಮದಲಿ ಕಿವಿ ತುಂಬುತಿರುವ ಆ ಡಂಬರ ವಚನಕೆ ಮುಂಬರಗೊಳ್ಳುತ ಅ.ಪ ನವ ಘನ ನಿಭಕಾಯ ನಿನ್ನಯ ಕರುಣಮಯ ಸಹಾಯ ವಿಲ್ಲದೆ ಬಿಗಿಯುತಿರುವ ಮಾಯಾ ಪಾಶವ ತೊರೆಯಲಳವೆ ಜೀಯಾ ನಿನ್ನಯ ದಯವ ಪಡೆದ ಪರಿಯನರುಹುವ ಯತಿವರೇಣ್ಯ ಗುರುಮಧ್ವರಾಯರ ಪರಮ ಸಮಯ ಸಾರಗಳನು ಸಂತತ ಶ್ರವಣ ಮನನ ಧ್ಯಾನಗಳಿಂದ ಪರಿಚಯ ಪಡೆದು ದು ಷ್ಟ ವಿಷಯಗಳಲಿ ಮತಿಯನು ಮುರಿಯುವಂತೆ ಕರುಣಿಸೋ ಸುಗುಣಾಲಯ 1 ನೀರಜದಳ ನೇತ್ರ ವರ ಸುಖ ಚಿನ್ಮಯೈಕ ಗಾತ್ರ ಸುಜನ ಮಿತ್ರ ಸುರವರ ಸರಸಿಜಭವ ಪುತ್ರ ರುಚಿರರ ಮುಕುಟಾಕ್ಷಪಾತ್ರ ನಿನ್ನಯ ವಿವಿಧ ಲೀಲೆಗಳು ಚಿತ್ರವಿಚಿತ್ರವು ಅರಿತೆನೆಂದು ತಿಳಿದು ಮೆರೆಯುತಲಿರುವ ನರರ ಮದವ ಮುರಿದು ದೈನ್ಯದಿಂದಲಿ ಮರೆತೆನೆಂದು ದಿನದಿನದಲಿ ಭಜಿಪರ ಪೊರೆವ ಪರಮ ಕರುಣಾರಸಮಯನೆ 2 ದೀನಭಕುತರನ್ನು ಪೊರೆಯುವ ದಾಸಿಯೆಂದು ನಿನ್ನ ಪೊಗಳುವ ಮಾನತತಿಗಳನ್ನು ಸಂತತ ಧ್ಯಾನ ಮಾಡಿ ಎನ್ನ ಕ್ಲೇಶವ ಮೌನದಿಂದ ಇನ್ನೂ ಸಹಿಸುತ ಜಾನಕೀಶ ತವ ಪಾದಕಮಲದ ರೇಣುವನ್ನು ಶಿರದಿ ಧರಿಸುತಲಿ ಅನು ಮಾನವನ್ನು ತೊರೆದು ಮುದದಿ ಸುವಿಮಲ ಜ್ಞಾನಮೂರ್ತೆ ಜ್ಞಾನಿವರ ಪ್ರಸನ್ನನೆ ನೀನೆ ಎನ್ನ ರಕ್ಷಕನೆಂದರಿಯುತ 3
--------------
ವಿದ್ಯಾಪ್ರಸನ್ನತೀರ್ಥರು
ನೀ ವೆಂಕಟೇಶ ಪರಿಪಾಲಯ ಸುಗುಣಾಲಯ ಪ ಶಿಖಾಮಣಿ ಸೇವಕ ಸುಚಿಂತಾಮಣಿ ಅ.ಪ ಕಮಲಲೋಚನ ಭಕ್ತ ಕಮಲಲೋಚನ ಶಕ್ತ ವಿಮಲ ಚರಿತಪೂರ ಕಮನೀಯ ಶರೀರ1 ಧೀರ ದಶರಥ ಕುಮಾರ ಬುಧ ಜನವಿಹಾರ ವೀರ ಹಂ ಪರಿವಾರ ಕ್ರೂರಸುರ ವಿಹಾರ 2 ಸರಸಿಜಾಸನನುತ ಸುರಮುನಿಸೇವಿತ ಹರಿಣಾರಿಧಾರಾಗಾರ ವರದ ವಿಠಲಾಕಾರ 3
--------------
ವೆಂಕಟವರದಾರ್ಯರು
ಶ್ರೀ ಭಾರತೀ ದೇವಿಯ ಸ್ತೋತ್ರ ಪಾಲಿಸೆನ್ನನು ಪವಮಾನನ ರಾಣಿ ಪಾಲಿಸೆನ್ನ ಸುಗುಣಾಲಯ ಶ್ರೀಹರಿ ಲೀಲೆ ತಿಳಿಸಿ ಭವಜಾಲವ ಹರಿಸೆ ಪ ಮಾತರಿಶ್ವÀ ಸತಿ, ಪ್ರೀತಿಲಿ ಹರಿಪದ ದೂತನೆನಿಸಿ, ಅನಾಥನ ಪೊರಿಯೆ 1 ವಿದ್ಯುನ್ನಾಮಕೆ ವಿದ್ವಜ್ಜನಪಾ - ದದ್ವಯ ಸೇವಿತ ಬುದ್ಧಿಯ ನೀಡೆ 2 ಲಿಂಗನಿವಾಸಿ ವಿಲಿಂಗಗೈಸಿ ಯನ್ನ ರಂಗನ ಪದದಲಿ ಭೃಂಗನ ಮಾಡಿ3 ಜನನಿಯೆ ನಿನ್ನಯ ತನಯಗೆ ಙÁ್ಞನದ ಸ್ತನವನಿತ್ತು ಪೊರೆ ಹನುಮನರಸಿಯೆ 4 ಶರಣಾಗತಜನ ಪೊರೆಯುವ ಕರುಣಿಯ ವರದೇಶ ವಿಠಲನ ಚರಣವ ತೋರೆ 5
--------------
ವರದೇಶವಿಠಲ
ಶ್ರೀ ವೆಂಕಟೇಶಮಾಂ ಪಾಲಯ ಸುಗುಣಾಲಯ ಪ ಶಿಖಾಮಣಿ ಸೇವಕ ಸುಚಿಂತಾಮಣಿ ಅ.ಪ. ಕಮಲಲೋಚನ ಭಕ್ತ ಶಮಲ ಲೋಚನ ಶಕ್ತ ವಿಮಲ ಚರಿತಪೂರ ಕಮನೀಯಶರೀರ 1 ಧೀರ ದಶರಥಕುಮಾರಾ ಬುಧಜನವಿಹಾರ ವೀರಹರಿ ಪರಿವಾರ ಕ್ರೂರಾಸುರವಿದಾರ 2 ಸರಸಿಜಾಸನನುತ ಸುರಮುನಿಸೇವಿತ ಹರಿಣಾರಿಧರಾಗಾರ ವರದ ವಿಠಲಾಕಾರ 3
--------------
ಸರಗೂರು ವೆಂಕಟವರದಾರ್ಯರು