ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಜಯರಾಘವೇಂದ್ರ ಸಜ್ಜನಪಯೋನಿಧಿಚಂದ್ರ ಜಯದೇವ ಭೂಸುರವೃಂದ ಸುಗುಣಸಾಂದ್ರ ಪ. ದಶಕಂಠ ಕುಲಕಾಲ ದಾನಶೀಲ ಶಶಿಮೌಳಿಧನುರ್ಭಂಗ ಭುವಿಜಾ ಮನೋಹರಾಂಗ [ಋಷಿ] ಮನೋಂಬುಜಭೃಂಗ ಕರುಣಾಂತರಂಗ 1 ಶ್ರೀಕಾಮಿನೀಸದನ ಭೂವೈಕುಂಠ [ಕಾರಣ] ಶ್ರೀ ಕೌಸ್ತುಭಾ ಭರಣ ಶೇಷಗಿರಿರಮಣ 2
--------------
ನಂಜನಗೂಡು ತಿರುಮಲಾಂಬಾ
ಪರಮ ಸುಗುಣಸಾಂದ್ರ ಗುರುರಾಘವೇಂದ್ರ ಪ ಕರುಣಾಳೋ ಮುನಿ | ವಂಶಸುಧಾಕರ | ಗುರುರಾಜ ಪ್ರಭೋ | ಶ್ರೀ ರಾಘವೇಂದ್ರ ಅ.ಪ ಮುರುಕುಮಂಟಪದೊಳು | ಹರಕುಚಿಂದಿಯನ್ಹೊದ್ದು | ಉರಿಯ ಬೆಳಕಿನಲ್ಲಿ | ಪರಿಮಳ ರಚಿಸಿದೆ || ಗುರುಗಳಾಕ್ಷಣ ಕಂಡು | ಪರಮಸಂಭ್ರಮದಿಂದ | ಪರಿಮಳಾಚಾರ್ಯನೆಂಬ | ಬಿರುದಿತ್ತು ಕರೆದರೊ 1 ಜಡಮತಿ ಬ್ರಾಹ್ಮಣ | ಮಿಡುಕಿ ನಿರೂಪಿಸೆ | ವಡನೆ ಗಂಧವ ತೇದೆ | ಅನಲನ ಜಪಿಸುತೆ || ಒಡಲ ಬೇಗೆಯಿಂ ಜನರು | ಬಡಬಡಿಸಿದ ಕಂಡು | ಕಡಲರಸನ ದಯದಿ | ಕಡುಶಾಂತಿ ಇತ್ತೆಯೊ2 ಬಾದರಾಯಣಮುನಿ | ಭೇದಮತವ ಬಿತ್ತೆ | ಮೋದತೀರ್ಥರು ತರುವ | ಸಾದರಗೈದರೊ || ಸ್ವಾದಫಲಂಗಳು | ನಿನ್ನಿಂದ ತೋರ್ದವು | ಸಾಧುಜನಾರ್ಚಿತ | ಶ್ರೀಶಕೇಶವಪ್ರಿಯ 3
--------------
ಶ್ರೀಶ ಕೇಶವದಾಸರು
ಪುರುಷೋತ್ತಮ ರಾಘವೇಂದ್ರ ಕರುಣಾವರ ಸುಗುಣಸಾಂದ್ರ ಪ ಶರಣಾಗತಶರಧಿ ಚಂದ್ರ ಪರಿಪಾಲಯ ರಾಮಚಂದ್ರ ಅ.ಪ ಧಾಮ ಮುನಿಜನಾಶ್ರಯದಾತ ರಾಮ 1 ಸೇವ್ಯ ವೈರಿ ದಿವಿಜಗಣಾರಾಧ ರಾಮ 2 [ಪರಮ ಶಬರಿಗೊಲಿದ ರಾಮ] ವರ ಮಾಂಗಿರಿರಂಗಧಾಮ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಾಘವೇಂದ್ರ ರಾಯರೆಂಬೋ ಮಹಾಯೋಗಿವರರ ನೋಡೈ ಪ ಭಾಗವತರು ಶಿರಬಾಗಿ ಕರೆಯಲತಿವೇಗದಿ ರಥದೊಳು ಸಾಗಿಬರುವ ಶ್ರೀ ಅ.ಪ. ಮಿನಗುವ ಘನವಾಹನಗಳ ರಥ ಶೃಂಗರವೋ ಕರದೊಳುಕನಕಛಡಿ ಕೊಡಿಗಳನುಪಮ ಭಾರವೊಅನಿಳ ನಿಗಮದಿ ನಿಪುಣ ಸುಜನರ ಪರವಾರವೋ ಪರಸ್ಪರಪಣದ ವೇದ ಘೋಷಣ ಸುಸ್ವರ ಗಂಭೀರವೋಘನ ಗುಣ ಗಣಮಣಿ ಮುನಿರಾಯನ ಮನದಣಿಯ ಪಾಡಿ ಕುಣಿಕುಣಿದಾಡಿ ಶಿರವಮಣಿಸುವರೋ ಗುಣವೆಣಿಸುವರೋ ದ-ಕ್ಷಿಣದಿಂ ತೆರಳಿ ವರುಣನ ಬೀದಿಯೊಳು 1 ಧರಣಿ ಸುರವರನಿಕರ ಕುಮುದೋದಯ ಚಂದ್ರನ ಮದ (ನ) ದು-ರ್ಧರ ದ್ವಿರದನ ತೆರಸಿ ಮೆರೆದ ಅಪ್ರತಿಮ ಮುನೀಂದ್ರನಸರಸ ಸುಧಾ ಪರಿಮಳ ಬೆರೆದ ಸುಗುಣಸಾಂದ್ರನ ಧರೆಯೊಳುಸಿರಿ ವಿಜಯೀಂದ್ರರ ಕುವರನೆನಿಪ ಸುಧೀಂದ್ರನಸರಸಿಜ ಸಂಭವ ಶರಣ್ಯ ಸುಂ-ದರ ನಿಜಾಂಘ್ರಿ ಭಜಕರ ಭಾಗ್ಯೋದಯಸುರರ ಸುರಭಿಗೆ ಸಮರೆಂದು ಸಾರಿ ಡಂಗುರ ಹೊಯಿಸುತ್ತ ಉತ್ತರ ಬೀದಿಯೊಳು 2 ವೆಗ್ಗಳ ವಾದ್ಯಗಳ ಸುವಾದ್ಯವೋ ಆರುತಿಯಬೆಳಗುವರು ಹಗಲ ದೀಪಗಳಗಾಧವೋಇಳೆಯೊಳು ಜನುಮ ಸಫಲವೆಂಬುವರ ವಿನೋದವೋ ಹಾಸ್ಯದಲಲಿನೆಯರಡಿ ಘಿಲಘಿಲಕೆಂಬುವ ನಟನ ಭೇದವೋಭಳಿರೆ ಭಳಿರೆ ಭಜಿಸುವರ ಭಕುತಿಬಲಿಗೊಲಿದ ಇಂದಿರೇಶನ ಕರದರಗಿಳಿಯೊ ನಳಿಯೊ ನಳಿನಾಂಘ್ರಿಯುಗದಿನಲಿಯುತ ಸುರರಾಜನ ಬೀದಿಯೊಳು 3
--------------
ಇಂದಿರೇಶರು
ವರ್ಣಿಸಲಳವೆ ಸುಗುಣಸಾಂದ್ರನ ಪ ಕರ್ಣಜನಕಕೋಟಿ ತೇಜಶ್ರೀಶ ಭಜಕ ಜಯ ಮುನೀಂದ್ರನ ಅ.ಪ ಸೂತ್ರ ನೇತ್ರದಿಂದಬದ್ಧಮಾಡಿ ಪಿಡಿದು ಕಡೆದುಶುದ್ಧ ಯುಕುತಿ ಸುಧೆಯ ತೆಗೆದನ ಶಿಷ್ಯ ಜನಕೆಶ್ರದ್ಧೆಯಿಂದಲದನು ಎರೆದನ ಕ್ರೋಧದಿಂದಕೃದ್ಧವಾದಿಗಳನು ಗೆಲಿದನ-ಜಯ ಮುನೀಂದ್ರನ 1 ಮಾನನೀಯ ಶೀಲರಾದಮಾನವರನು ಕರೆದು ಹರಿಯಧ್ಯಾನದಲ್ಲಿ ನಿಲಿಸಿ ಒಲಿಸಿಹಾನಿಯಿಲ್ಲದ ಮುಕುತಿ ಪಡೆದಜ್ಞಾನಮತವ ಜನಕೆ ಸಾರ್ದನ, ಶಿಷ್ಯಜನಕೆಸಾನುರಾಗದಿ ತತ್ವಪೇಳ್ದನಜಯ ಮುನೀಂದ್ರನ2 ಸರಸದಿಂದ ಮೂರ್ಯೋಳುವಿರಸ ದುಷ್ಟ ಭಾಷ್ಯಗಳನುಮುರಿದಕ್ಷೋಭ್ಯ ತೀರ್ಥಯತಿಪಕರಸಂಜಾತ ರಮ್ಯಚರಿತಶರಣ ಜನರ ಪೊರೆವ ಯತಿಪನ, ಶಿಷ್ಯಜನರಮರುಳ ಮೋಹತಿಮಿರ ದಿನಪನ, ನಮ್ಮ ಪರಮಗುರು ಶ್ರೀಕೃಷ್ಣ ಪಾದಭಜಕನಜಯ ಮುನೀಂದ್ರನ3
--------------
ವ್ಯಾಸರಾಯರು
ಸತ್ಕವೀಂದ್ರ ಬಾಬೇಂದ್ರೆ ಸುಗುಣಸಾಂದ್ರ ಪ. ನಮ್ಮ ಮಾನವಿ ಸ್ಥಳದಿ ಅಚ್ಚಗನ್ನಡ ನುಡಿಯ ಸಮ್ಮಿಲನ ಸಾಗಿಸಲು ನಿಶ್ಚಯಿಸಿದೆ ನಿಮ್ಮ ಬರುವಿಗೆ ಬಯಕೆ ಇಮ್ಮಡಿಸಿದೆಮಗೆ ಸಮ್ಮತಿಸಿ ಬಾರಯ್ಯ ಸತ್ಕವೀಂದ್ರ ಶ್ರೀ ಬೇಂದ್ರೆ ಸುಗುಣೇಂದ್ರ 1 ಅಚ್ಚಗನ್ನಡ ತಾಯಿಗಚ್ಭದ ಮನೆಂದು ಹೆಚ್ಚಾಗಿ ನಿಮ್ಮನ್ನು ಮೆಚ್ಚುವೆವೋ ಮುಚ್ಚುಮರಿಯಾಕೆ ಈ ಉತ್ಸವಕೆ ಬರದಿರೆ ವಾಗ್ದೇವಿ ಸತ್ಕವೀಂದ್ರ 2 ದಾತರಾದವರಾರ್ತರಾತುರದಿ ತ್ವರದಿಂದ ಪ್ರೀತಿಯಲಿ ಪೂರ್ತಿಸಲು ಒಪ್ಪಿರೆಂಬಾ ನೀತಿ ಮಾತನು ನೀ ತಿಳಿಯದಾತನೆ ಹಾತೊರೆಯುತಿದೆ ಮನವು ಸತ್ಕವೀಂದ್ರ 3 ಕನ್ನಡದ ನುಡಿ ಸುಧೆಯ ಕನ್ನಡಿಗರಿಗೆ ಬೀರಿ ಕನ್ನಡ ನಾಡೆಂಬ ಪಾಲ್ಗಡಲಕೆ ಜೇನ್ನೊಡಲನೆಂದೆನಿಸಿ ಕನ್ನಡಿಗರಿಂ ಮನ್ನಣೆಯ ಪಡೆದಂಥ ಸತ್ಕವೀಂದ್ರ 4 ಉಸಿರಲೆನ್ನಯ ಮತಿಗೆ ವಶವಲ್ಲವೈನಿನ್ನ ರಸವತ್ಕವಿತಾ ಪ್ರತಿಭಾಚಾರ್ತುರ್ಯವಾ ಹೊಸಗನ್ನಡ ನುಡಿ ರಸದ ಮಾಧುರ್ಯಮಂ ರಸಿಕರಿಗೆ ನೀ ನೀಡು ಸತ್ಕವೀಂದ್ರಾ 5 ಕನ್ನಡ ನುಡಿ ಸಾರಿ ಕನ್ನಡಕುಪಕಾರಿ ಕನ್ನಡದ ಜಯಭೇರಿ ಹೊಡೆದ ನಗಾರಿ ಕನ್ನಡದ ಹೊಸ ಸಿರಿಯು ಕನ್ನಡ ರಸಝರಿಯು ನಿನ್ನಿಂದ ಲಭಿಸಿತೈಸತ್ಕವೀಂದ್ರಾ6 ನಿನ್ನಿಂದ ಕನ್ನಡದ ಮ್ಲಾನತೆಯು ದೂರಾಯಿತು ನಿನ್ನಿಂದ ನಮಕವನ ಕವಲೊಡೆದು ಸರ್ವತ್ರ ಉನ್ನತೆಯ ನೈದಿತೈ ಸತ್ಕವೀಂದ್ರಾ 7 ವೃತ್ತಪತ್ರಿಕೆಗಳಲಿ ಮತ್ತೆ ಸಮ್ಮೇಳನದಿ ನಿತ್ಯ ಓದುವ ಮನೆ ಶಾಲೆಯಲ್ಲಿ ಚಿತ್ತಪೂರ್ವಕ ನಿನ್ನ ಉತ್ತಮೋತ್ತಮ ಕವನ ಮತ್ತೆ ಪೇಳುವರು ಸತ್ಕವೀಂದ್ರಾ8 ನುಡಿಯಣ್ಣನೊಲುಮೆಯೋ | ನುಡಿಯೊಡೆಯನನುಗ್ರಹವೋ ಪಡೆದ ಮಾತೆಯ ಜೀತನೋಪಿ ಫಲವೋ ಕಡು ಸರಳ ಬಿಡಿವೃತ್ತ ಸಡಗರದಿ ರಚಿಸುತ್ತ ಪೊಡೆವಿಯೊಳು ಪಸರಿಸಿದ ಸತ್ಕವೀಂದ್ರಾ 9 ಪ್ರೇಮದಿಂದಲಿ ನಿನ್ನ ಪ್ರೇಮಿತಾರ್ಥವಗರೆದು ಶಾಮಸುಂದರವಿಠಲ ಸಲಹೋ ಎಂದು ನಾ ಮುದದಿ ಪ್ರಾರ್ಥಿಸುವೆ ನೀಮಾಡ್ವ ಉಪಕಾರ 10
--------------
ಶಾಮಸುಂದರ ವಿಠಲ