ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿಗ್ಹೋಗಿ ತಡಮಾಡಿದ್ಯೋ ಫುಲ್ಲಲೋಚನ ಕೃಷ್ಣ ನೀ ಎಲ್ಲಡಗಿದ್ಯೊ ಧ್ರುವ ಬಲ್ಲವರಿಗೆ ಬಲ್ಲತನದೋರ ಹೋಗಿದ್ಯೊ ಅಲ್ಲಿ ಅವರ ಸಹಕಾರ ನೀನಾದ್ಯೊ ಸುಲ್ಲಭವಾಗಿ ಜ್ಞಾನಕೆ ನೀ ಸಿಲುಕಿದ್ಯೋ ಒಲ್ಲದ್ಹಾಂಗ್ಹೋಗಿ ಎಲ್ಲರಿಗಾಗಿದ್ಯೊ 1 ಙÁ್ಞನಿಗಳಿಗೆ ಙÁ್ಞನಸಮುದ್ರ ನಾಗಿದ್ಯೊ ಧ್ಯಾನಮಾಡುವರ ಧ್ಯಾನವೆ ಅಗಿದ್ಯೊ ಮುನಿಜನರೊಡನೆ ಮಾನಸ ಹಂಸನಾಗಿದ್ಯೊ ಖೂನದೋರಲು ಹೋಗಿ ನೀನೆ ಆಗಿದ್ಯೊ 2 ಧೃಢಭಕ್ತರೊಡನೆ ಭಿಡಿಯೊಳಗಾಗಿದ್ಯೊ ಕಡಿಗಾಗದ್ಹಾಂಗ ಕೈಯೊಳಗಾಗಿದ್ಯೊ ಎಡಬಲಕವರೆಂದು ಬಿಡದ್ಹಾಂಗಾಗಿದ್ಯೊ ಒಡಲ ಹೊಕ್ಕವರ ಒಡಿಯನಾಗಿದ್ಯೊ 3 ಪ್ರೇಮ ಉಳ್ಳವರ ಪ್ರೀತಿಯೊಳಗಾಗಿದ್ಯೊ ಸ್ವಾಮಿತನದಲಿ ಸಮೀಪನಾಗಿದ್ಯೊ ಕಾಮ ಪೂರಿಸಲಿಕೆ ನೇಮವ ಪಿಡಿದ್ಯೊ ಮಾಮನೋಹರ ನೀ ಸುಗಮವಾಗಿದ್ಯೊ 4 ಇಂದು ನೆನಪಾಯಿತೆಂದು ಓಡಿ ನೀ ಬಂದ್ಯೊ ಚಂಚವಾಗೆನ್ನೊಳಗಾದ್ಯೊ ನೀ ಬಂದ್ಯೊ ಕಂದಮಹಿಪತಿಗನುಭವದೋರ ನೀ ಬಂದ್ಯೊ ತಂದೆ ಸದ್ಗುರು ಅನಂದವ ತಂದ್ಯೊ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುರಾಯಾ | ಶರಣಾಶ್ರಯಾ | ಪರಮಾ ನಂದೋದಯಾ | ಗರಿಯೋ ನಿಮ್ಮದಯಾ | ಚರಣಕ ನಂಬಿಹೆನಯ್ಯಾ | ತರಳನು ನಾನತಿ ಜೀಯಾ | ಅರಿಯೆನು ಅನ್ಯೋಪಾಯಾ | ಪಾವನ ಕಾಯಾ 1 ಅಘಹಾರಿ | ಭಕುತಿಯ ದೋರಿ | ಸುಗಮವ ತೋರಿ | ನಿಗಮಾರ್ಥ ಸಾರಿ | ಉಗಮದ ಬೋಧವ ಬೀರಿ | ಪರಿ | ಬಗೆವದು ದೀನೋದ್ಧಾರಿ | ಭಕುತರ ನಿಜ ಸಹಕಾರಿ2 ನಿನ್ನವನಾ | ಮುನ್ನಗಾಯ್ದನಾ | ಎನ್ನೊಳಿಹನ್ಯೂನಾ | ಇನ್ನಾರಿಸುದೇನಾ | ಬೆನ್ನವ ಬಿದ್ದಿಹದೀನಾ | ಬನ್ನ ಬಡಿಸದನುದಿನಾ | ಚನ್ನಾಗಿ ಕಾಣಿಸಿ ಖೂನಾ | ಮನ್ನಿಸು ಹಿಡಿದಭಿಮಾನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾರೆಲೋ ಬೇಗನೆ ಭಾರತೀಪತಿ ಪ್ರಿಯ ಸಾರುತ ಬೇಗ ಶ್ರೀ ನಾರಾಯಣ ಪ. ನಾರದಾದಿ ವಂದ್ಯ ಪಾರುಗಾಣಿಸೆ ಭವ ಗಾರು ಮಾಡದೆ ಶ್ರೀಶ ಸರ್ವೇಶ ಅ.ಪ. ಸುಮನಸರೊಡೆಯನೆ ನೀನಾಗಮಿಸಲು ಸಕಲವು ಸುಗಮವಹುದೆ ಕಮಲೆಯ ಪ್ರೀಯನೆ ನಿನ್ನಾಗಮನವನೆ ಬಯಸುವೆ 1 ಭಕ್ತರ ಕಾಯುವ ಯುಕ್ತಿ ನಿನಗೆ ಸರಿ ಭಕ್ತವತ್ಸಲನೆಂಬೊ ಬಿರುದಿನ ದೇವ ಶಕ್ತಿ ಸ್ವರೂಪನೆ ಅಶಕ್ತರ ಪೊರೆವಾ ಸಕ್ತಿಯ ತೋರಿಸೆ ಭಕ್ತರಿದ್ದೆಡೆಗೆ 2 ಎನ್ನಪರಾಧ ಎಣಿಸಲೆನ್ನಳವೆ ಪನ್ನಗಾದ್ರಿನಿವಾಸ ಕೃಪೆತೋರೊ ಸನ್ನುತಚರಿತ ನಿನ್ನ ಪೊರತು ಎನ ಗನ್ಯರ ಕಾಣೆನಾ ಶ್ರೀ ಶ್ರೀನಿವಾಸ ದೊರೆ 3
--------------
ಸರಸ್ವತಿ ಬಾಯಿ