ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇವನ ಕಂಡಿರ್ಯಾ ಕಾವಕರುಣನ ಭಾವ ಭಾವಿಸುವ ಪರಿಯಾಗುವ ದೇವನ ಧ್ರುವ ಸಗುಣಲೀಹ್ಯನಾ ಭಕುತಿಗೊಲಿವನಾ ಸುಗಮದಿಂದ ನಿಗಮನುಳುಹಿ ನಗವ ನೆಗೆದನಾ 1 ಸಿರಿಯ ಲೋಲನಾ ವರಕೃಪಾಲನಾ ಧರಿಯನುಳುಹಿ ತರಳಗೊಲಿದು ಪ್ರಿಯವಾದನಾ2 ವರವ ಬಲಿಗೆ ಇತ್ತು ದೋರಿದ ಭಾರ್ಗವರೂಪನಾ 3 ಪರಮ ಆತ್ಮನಾ ಹರಿಸರ್ವೋತ್ತಮನಾ ಸುರರ ನೆರೆಯ ಬಿಡಿಸಿ ಹೊರಟ ಪಾಂಡವಪ್ರಿಯನಾ 4 ಹೊಳೆವ ತೇಜನಾ ಮೂಲೋಕ ಪಾವನಾ ಹಳಿದು ವ್ರತವ ನೋಡಿ ಹಯವನೇರಿ ಸುಳಿದನಾ 5 ಘನ ಮಹಿಮನಾ ದಯಾ ನಿಸ್ಸೀಮನಾ ದೀನ ಮಹಿಪತಿಸ್ವಾಮಿ ಭಾನುಕೋಟೆ ದೀಪ್ತನಾ 6
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಫುಗಡಿ ಹಾಕಿ ಹೀಂಗ ಸುಗಮದಿಂದ ಬ್ಯಾಗ ತ್ರಿಗುಣ ತಿಗಡತನ ಬಿಟ್ಟು ಮಿಗಿಲಮಿರುವ್ಹಾಂಗ ಧ್ರುವ ಬಿಗಿದ ಗಚ್ಚಿಕಟ್ಟಿ ಜಗದೊಳ್ಹಾಕಿ ಫುಗಡಿ ಬಗೆದು ಸಾಧುಸಂಗದೊಳಾಡಿದಾಕಿ ಸುಗಡಿ ಇಗಡತನ ಬಿಟ್ಟು ನೀಗಿ ನಿಜಗೂಡಿ ದುಗುಡ ಭಾವೆಲ್ಲ ಬಿಟ್ಟು ಫುಗಡಿ ಫೂಯೆಂದಾಡಿ 1 ದೇಹ ಭಾವಮರೆದು ಫುಗಡಿ ಹಾಕಿ ಬ್ಯಾಗೆ ಗುಹ್ಯಗೂಢವಿದೆ ನೋಡಿ ರಾಜಯೋಗ ಸೋಹ್ಯದೋರಿಗೊಡುವ ಸದ್ಗುರು ನಿನ್ನೊಳೀಗ ಬಾಹ್ಯಾಂತ್ರದೊಳು ಭಾಸುತಿಹ್ಯ ಬ್ರಹ್ಮಭೋಗ 2 ಫುಗಡಿ ಇದೇ ನೋಡಿ ಯೋಗಸಾಧನ ಮಾಡಿ ಹುಗುವರಿಯನೇ ಹೋಕು ಜಗದ್ಗುರುವಿನ ಕೂಡಿ ಜಗದೀಶನ ಮಹಿಮೆ ಬಗೆಬಗೆಯ ಕೊಂಡಾಡಿ ಸುಗಮಸಾಧನವೆಂದು ಮಹಿಪತಿ ಬೆರೆದ ಕೂಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಹಾಲಕ್ಷ್ಮಿ ಇಂದಿರೇ ಪಾಲಿಸು ಕಮಲಮಂದಿರೆ ಪ ಇಂದಿರೆ ಇಂದುನಿಭಾಸ್ಯೆ - ಗುಣ - ವೃಂದ ಶೋಭಿತೆ ಶುಭಗಾತ್ರೆ - ಆಹಾ ಇಂದು ಶೇಖರಸುರವಂದಿತಪಾದ ದ್ವಂದಾರವಿಂದಳೆ ಮಂದಸ್ಮಿತಾನನೆ ಅ.ಪ ಅರುಣದಿಂದೊಪ್ಪುವ ಚರಣ ಯುಗಳಾ - ಭರಣ ಭೂಷಿತ ಯೋಗಿಶರಣಾ ನಿಜ ಶರಣರ್ಗೆ ರನ್ನದರ್ಪಣಾಭವ - ಅರಣತಾರಣಕಾರಣ - ಆಹಾ ಶರಣು ಪೊಕ್ಕೆನು ದೇವಿ ಚರಣಕಮಲಯುಗ ವರಣಿಸಲಳವಲ್ಲ ಕರುಣಿಸು ನೀ ಎನ್ನ 1 ಶ್ರುತಿನುತವಿತತಸÀಚ್ಚರಿಯೆ ಸದಾ- ನತÀರ ಸಂತೈಪೊದಾಶ್ಚರಿಯೆ ನಿನ್ನ ಸ್ತುತಿಸಿದವಗೆ ಮಹಾ ಶಿರಿಯೆ ಮತ್ತೆ ನಿರಯ ಅಹಾ ಸತತ ನಿನ್ನಲಿ ಮನೋರತಿನಿತ್ತು ಶೋಕದ ವ್ರತತಿ ಖಂಡಿಸಿ ಸುಖತತಿಯ ಪಾಲಿಸು ದೇವೀ 2 ಜಗಕೆ ಸೃಷ್ಟಿಸ್ಥಿತಿನಾಶಕಾರಿ ಬಗೆ ಬಗೆ ಭವನದಲ್ಲಿ ಕ್ಲೇಶ-ಹರಸಿ ಸುಗಮದಿಂದ ಪರಿತೋಷ-ಬಡಿಸಿ ನಗಿಸುವಿ ಎನ್ನಭಿಲಾಷಾ ಅಹಾ ನಗೆಮುಖದಲಿ ಗುರು ಜಗನ್ನಾಥ ವಿಠಲನ್ನ ನಿತ್ಯ ಸೊಗಸಾಗಿ ಇರುತಿಪ್ಪಿ 3
--------------
ಗುರುಜಗನ್ನಾಥದಾಸರು
ಶ್ರೀವಧು ನಯನಾಬ್ಜ ವಿಲೋಚನಾ ದಾವನಾಗಿಹ ಪಂಕಜಲೋಚನಾ ದೇವನಂಘ್ರಿಯ ಚರಿತದ ಸೂಚನಾ ಪಾತಕ ಮೋಚನಾ 1 ಮತಿ ಮಂತಾಂಭುನಿಧಿ ದ್ವಿಜರಾಜ ದಿತಿ ಸುತಾಹಿ ಕುಲದ್ವಿಜರಾಜಾ ಸುತ ಮುನಿಹೃದಯಾಬ್ಜದಿನೇಶಾ ಸತತ ದುಷ್ಕøತ ತರುರದನೇಶಾ2 ಆವನೀಭುವ ನತ್ರಯವ ಪಾಲಕಾ ದೇವಕೀತಪದಲಾದನು ಬಾಲಕಾ ದೇವನಾಡಿದ ಮನಿಲಿಯ ಶೋದಾ ಭಾವಿಸಲ್ಕವಗ ಗತಿ ಶ್ರೀಯಶೋದಾ3 ಪರಮ ಸುಂದರ ನಂದ ಕುಮಾರಾ ಅರಿತು ಬಂದನುಗರ್ಭದಿ ಮಾರಾ ಧರಿಯೊಳಾವನ ಮನಿ ಕಾಪುರದ್ವಾಶಕಾ ಸ್ಮರಸಲೀ ಜಗದ ಪಾವಿದಾರಕಾ4 ಮಾನವ ತಂದಿಯಾ ಸುಗಮದಿಂದರಿದ ಬಂಧನ ತಂದಿಯಾ ಮಗನ ಕಾಯಿದಾ ಶಿಕ್ಷಿಸಿ ತಂದಿಯಾ ಮಗನ ಶಿಕ್ಷಿಸಿ ಕಾಯಿದಾತಂದಿಯಾ5 ವನಧಿ ವಂಧಿಸಿ ತೇಲಿಸಿ ಪರ್ವತಾ ಜನಪದಾಟಿಸಿ ವಾನರ ಪರ್ವತಾ ಘನಮಹಿಮನು ಜಾನಕಿ ಕಾಂತಾ ನೆನಹುತಿಹನು ಸಹಶಿವಕಾಂತಾ 6 ಸೇವಿಗಂಡೊಲಿದು ರಾಘವ ತಮ್ಮನಾ ರೇವತೀರಮಣಗೆಂಬನುತಮ್ಮನಾ ಜೀವಗಾಯಿದಾ ಭೀಮನತಮ್ಮನಾ ಪಾವನಂಘ್ರಿಯ ನೆನಿಸತತಂಮನಾ7 ಕುದಿಪುತಿರ್ಪುದು ಮಡು ಪವನಾಶನಾ ವಿದಿತೆ ಘಾಳಿಗೆ ಜೀವನ ನಾಶನಾ ಅದರೊಳಗಡಲು ತಾಜಗ ಜೀವನಾ ಸುಧಿಯ ರೂಪವ ಆಯಿತು ಜೀವನಾ8 ಜಲದಲೀ ನೆನಿಯಲು ಮದವಾರಣಾ ವಲಿದು ಮಾಡಿದ ಬಂಧ ನಿವಾರಣಾ ಸತಿಸ್ವರೂಪದ ನೀಡಿದ ಮುಕ್ತಿಯಾ ನಲಿದು ಮಾಡಲಿ ಶ್ರೀ ಹರಿ ಭಕ್ತಿಯಾ9 ದಾವ ತೇಲಿಸಿದ ನಚ್ಚಿಲಿ ಗೋಕುಲಾ ದೇವ ಕಾವನು ನೋಡಿರಿ ಗೋಕುಲಾ ಜೀವಜಾಲದ ಬೇಡಿ ಪ ಗೋಕುಲಾ ತಾವಿಹರಿಸುತಿಹನು ಗೋಕುಲಾ 10 ಸ್ಮರಿಸಿ ಗೋಕುಲಲ್ಯಾಕಳ ಕಾವನಾ ಧರೆಯೊಳೊಪ್ಪುವ ಕಾಟಿಯ ಕಾವಳಾ ಚರಣ ಗೋಚರ ಮುನಿಮನ ಕಾವನಾ ಶರಣ ಹೋಗದು ಸಕಲಿ ಕಾವನಾ11 ಅವನಂಘಿಯ ಸೇರೆ ವನೌಕಸಾ ಜೀವರಾದರು ಸಾಮದಿವೌಕಸಾ ಭಾವಿಸಲ್ಕಾರಿಯದಾದಳು ಶ್ರೀರಮಾ ದೇವನಾಸ್ತುತಿಸಿ ಬಣ್ಣಿಪ ರಾರಮಾ12 ಮುನಿ ಬಂದನೆಂದು ಸ್ಮರಿಸಲು ಕೃಷ್ಣಾ ಮನಸ್ನೇ ಹದಿಂದೋಡಿ ಬಂದನು ಕೃಷ್ಣ ಅನೇಕ ಪದಾರ್ಥದಿಂ ದುಣಿಸುತಾ ಘನಾನಂದ ನೀಡಿದ ಪಾರ್ಥನ ಸೂತಾ13 ಸುರಗಂಗಿಯ ಪಡದ ದಾವನ ಚರಣ ಅರಿಮರ್ದನಾಗಿಹ ದಾಪಾಣಿ ಚರಣಾ ಸರಿಜಾರ ನಖದಾ ತೇಜಕ್ಕ ತರಣೀ ಇಂದಿರೆ ತರುಣಿ14 ಚರಣಧ್ಯಾಯಿಪದಾವನು ಮಾಧವಾ ಸುರನರೋರಗ ಪೂಜಿ ಮಾಧವಾ ಧರಿಯೊಳಾದನು ಬಾಲಕ ನಂದನಾ ಚರಿತ ಪಾಡಿದ ಮಹಿಪತಿ ನಂದನಾ15
--------------
ಕಾಖಂಡಕಿ ಶ್ರೀ ಕೃಷ್ಣದಾಸರು