ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋಪಿ ನೋಡಮ್ಮಾ ಪ ಗೋಪಿ ನೋಡಮ್ಮಾ ದೇವ ದೇವೋತ್ತಮನಾದ ಕೇವಲ ಪರಬ್ರಹ್ಮ| ದೇವಿಮಗನಾಗಿ ಬಂದಿಹನೆ ನರರಂದದಿ ನಮ್ಮಾ ಭಾವಿಸಿ ಬ್ರಹ್ಮನ ಜನಕನ ಶಿಶುವೆಂದು ಮುದ್ದಾಡಿಸುವಾ ಸಂಭ್ರಮಾ1 ಮುಖಸಾರಭೋಕ್ತನಿಗೆ ಮೊಲೆ ಹಾಲನುಣಿಸಿ| ಮಜ್ಜನ ಗೈಸಿ| ಪ್ರಕಟಿದಿ ಶೇಷಶಾಯಿಗೆ ತೊಟ್ಟಿಲದಿ ಮಲಗಿಸಿ| ಸುಖಯೋಗ ನಿದ್ರೆಯುಳ್ಳಂಗೆ ಮಲಗೆಂದು ಜೋ ಜೋ ಎಂಬಳಾಕೆ 2 ಆವ ಯೋಗ ಮಾಯದಲಿ ಮೂಜಗವಾಡಿಸುವ| ಆವ ಮುಂಜರಗ ಸಿಡಿದು ಬೆಣ್ಣೆ ಬೇಡುತ ಕುಣಿವಾ| ಗೋಪಿ ಕೈಯೊಳಾಡುವಾ| ಆವನಲಿ ಮಹಿಪತಿ-ಸುತ ಪ್ರಭು ಲೀಲೆಯ ಕಣ್ಣಲಿ ನೋಡಿ ಸುಖಿಸುವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಾಮ ರಸಾಯನವಾ ಬನ್ನಿರಯ್ಯ ಸೇವಿಸುವಾಪ ಅವನಿಲಿ ನಾನಾವಿಪತ್ತದ ಪಡುವಾ | ಭವರೋಗ ಮೂಲ ಛೇದಿಸುವಾ 1 ಭ್ರಮೆಗೊಂಡು ಮತ್ತೆ ಜನ್ಮಕ ಬಾರದಿರುವಾ | ಅಮರತ್ವವನು ಬ್ಯಾಗ ಪಡೆವಾ 2 ಗುರು ಮಹಿಪತೀ ಪ್ರಭು ದಾಸರು ಮೆರೆವಾ | ವರಸಂಗದಲಿ ಸುಖಿಸುವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಲ್ಲದು ಪುನರ್ಜನ್ಮ ಸಲ್ಲದು ಯೋಗಿಗೆಪರದವಲ್ಲಭತಾನಾಗಿನಿತ್ಯಸುಖಿಸುವಾತಾಂಗೆಪಬೀಜವದು ಹೋಗಿ ಅನ್ಯ ತೇಜದೊಳು ಬಿದ್ದ ಬಳಿಕಬೀಜವೆಂದು ಬಿತ್ತಲದು ಫಲಿತವಾಗುವುದೋಸಾಜಕರ್ಮಿಗಳು ಗುರುಕೃಪೆಯ ಪಡೆಯಲುಮುಕುತಿ ತಾನಲ್ಲದೆ ಪುನರ್ಜನ್ಮವೆಲ್ಲಿಯದೋ1ಕಾಷ್ಠವದು ಹೋಗಿ ಅಗ್ನಿ ಕುಂಡದಲಿ ಸುಟ್ಟ ಬಳಿಕಕಾಷ್ಠವೆಂದು ಕರೆಯಲದು ಕಾಷ್ಠವಹುದೇಶ್ರೇಷ್ಠವಾದ ಬ್ರಹ್ಮದೊಳು ವೇಷ್ಠಿತಾನಾದ ಬಳಿಕನಷ್ಟಮಾತಲ್ಲದೇ ಪುನರ್ಜನ್ಮವೆಲ್ಲಿಹುದು2ಕೀಟವದು ಹೋಗಿ ಭೃಮರದಾಟದೊಳು ಬಿದ್ದು ತನ್ನಕೀಟತನವಳಿದ ಮೇಲೆ ಕೀಟವಾಗುವುದೇಪಾಡಿ ಚಿದಾನಂದನೊಳು ಕೂಟವು ತಾನಾದ ಮೇಲೆಮುಕುತಿ ತಾನಲ್ಲದೆ ಪುನರ್ಜನ್ಮವೆಲ್ಲಿಯದು3
--------------
ಚಿದಾನಂದ ಅವಧೂತರು