ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವಧನ್ಯರೋ ಸುಖಿಸುವರು ಗೋಕುಲದವರು | ಗೋವಿಂದನೊಳು ಕ್ರೀಡಿಸುವರು ಗೋಗೋವಳರು ಧ್ರುವ ಭಾವಿಸೆ ಮಖದಲ್ಲಿದಾವ ಸಾರಾಯ ಕೊಂಬಾ | ದೇವಗೋಪಾಲಕರ ಕರಿಸಿ | ಬುತ್ತಿಯ ತರಿಸಿ | ಸವಿಸವಿದುಂಬುವರ ವೆರಸಿ | ಕೈಯೊಳಿರಿಸಿ | ಅವರತನ್ನಂಜಲೆಂಬ ದೂರಿಸಿ ನಲುವಾದರಿಸಿ 1 ಸಿರಿರಮಣಿಯ ಕೂಡ ಸರಸದಿ ಕುಚವಿಡಿದಾ | ಕರದಿನವೀನ ತೃಣವಾ ಕಡಿದು ಕವಳವಿಡಿದು | ಕರೆದು ಆವಿನ ಪೆಸರಾ ನುಡಿದು ಕುಡವಾವಿ ನಡೆದು | ಕರುಣದಿ ಚಪ್ಪರಿಸುವಾ ಜಡಿದು ಮೈಯನಡದು 2 ಅನಂದಿನ ಧ್ಯಾಯಿಸುವಾ ಮುನಿಮನದಲ್ಲಿ ಹೊಳೆಯಾ | ಚಿನುಮಯ ಗೋಪಿಯರಾವಳಿಯಾ ಯೋದ್ಧುಳಿಯಾ | ಅನುವಾಗಿದೋವರ್ತನಕಳಿಯಾ ವರ ಬಳಿಯಾ | ಘನಮಹಿಪತಿ ಸ್ವಾಮಿ ನೆಲಿಯಾ ಬೊಮ್ಮತಾ ತಿಳಿಯಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀನು ಸರ್ವಜ್ಞನಾಗಿರಲು ನಿನ್ನಲಿ ಜನರು ಜಾಣತನ ತೋರಲಾಗುವುದೆ ಪವಮಾನ ಪ ಪ್ರಾಣಪತೇ ನಿನ್ನೊಲುಮೆ ಪಡೆದು ಸುಜನರು ದಿವ್ಯ ಸ್ಥಾನಗಳ ಪೊಂದಿ ಇಹಪರದಿ ಸುಖಿಸುವರು ಅ.ಪ ಧರ್ಮಯೋನಿಯ ಶಾಸನಗಳ ಸಂರಕ್ಷಣೆಯ ಕರ್ಮ ನಿನಗಲ್ಲದನ್ಯರಿಗೆ ತರವೆ ಕಿಮ್ಮೀರ ಕೀಚಕ ಜರಾಸಂಧ ಮೊದಲಾದ ಧರ್ಮಘಾತಕರ ಸದೆ ಬಡಿದ ಬಲಭೀಮ 1 ಜ್ಯೇóಷ್ಠನೆಂಬುವ ಮಮತೆ ತೊರೆದು ಧೈರ್ಯದಲಿ ಧೃತ ರಾಷ್ಟ್ರನಿಗೆ ಕಿಲುಬು ಕಾಸನು ಕೊಡದೆಲೆ ಭಾಗವತ ಧರ್ಮಗಳ ಹಂಚುವ ಹರಿಗೆ ಪ್ರೇಷ್ಟತಮ ನೀನಲ್ಲದನ್ಯರಾರಿಹರೊ 2 ನಿನ್ನ ಮತವೇ ಸಿರಿಯರಮಣನಿಗೆ ಸಮ್ಮತವು ನಿನ್ನ ದಯವೇ ಸಾಧು ಜನಕೆ ಅಭಯ ನಿನ್ನ ಮಾರ್ಗವ ನಂಬಿ ಧನ್ಯರಾಗುವರಲಿ ಪ್ರ ಸನ್ನನಾಗುವ ಹನುಮ ಭೀಮ ಮಧ್ವೇಶ 3
--------------
ವಿದ್ಯಾಪ್ರಸನ್ನತೀರ್ಥರು
ಸುಳಾದಿ ತಾಳ-ಝಂಪೆ ನೋಡುವರೆ ನೀರದಶ್ಯಾಮಸುಂದರ ಮೂರ್ತಿ ಪಾಡುವರ ಪರಮಪಾವನ್ನ ಕೀರ್ತಿ ಕೂಡುವರೆ ಕೇವಲಾನಂದ ಚಿನ್ಮಯಗಾತ್ರ ನೀಡುವರೆ ನಿಖಿಳಲೋಕೈಕಪಾತ್ರ ನೋಡಿ ನಮಿಸುವರುಂಟು ಪಾಡಿಹಿಗ್ಗುವರೂಟ ಕೂಡಿ ಸುಖಿಸುವರುಂಟು ನೀಡಿ ನಲಿವವರುಂಟು ನೋಡಿಸುತ ಪಾಡಿಸುತ ಕೂಡಿಸುತ ಬೇಡಿಸುತ ನಾಡದೈವಂಗಳ ಕೊಂಡಾಡಿಸದಲೆ ಬೇಡಿದಿಷ್ಟವ ಕೊಡುತ ಶ್ರೀದವಿಠಲ ದಯ - ಮಾಡಿ ನಮ್ಮನು ಪೊರೆವ ರೂಢಿಗೊಡೆಯ ನಾಡದೈವಂಗಳ ಕೊಂಡಾಡಿಸದಲೆ 1 ತಾಳ-ಮಟ್ಟ ಸಕಲ ಶ್ರುತಿನಿಕರಸಾರಹೋ ಶುಕಮಹಾಮುನೀಂದ್ರ ಸನ್ನುತ ಪ್ರಕಟ ಮಾಡಲ್ಯಾಕೆ ನಿನ್ನನು ಪರಮಪುರುಷ ಪ್ರಕಟಮಾಡಲ್ಯಾಕೆ ನಿನ್ನನು ಭಕ್ತವತ್ಸಲನೆಂಬೆನಲ್ಲದೆ ಮುಕುತವಂದ್ಯ ಶ್ರೀದವಿಠಲ ಯುಕುತಾಯುಕುತವೊಂದನರಿಯದೆ ಪ್ರಕಟಮಾಡಲ್ಯಾಕೆ ನಿನ್ನನು 2 ತಾಳ-ತ್ರಿವಿಡಿ ಆಯನುಭವ ಭಯ ಲಯವರ್ಜಿತ ನಯನೋತ್ಸಹಕಾರಕ ತಾರಕ ಜಯಮಂಗಳ ಮಂಗಳ ಮಂಗಳ ಮಾಯಾ ಮಾಮರ ದೇವರಾÀಟ ಸಯವೇ ಸೈ ಶ್ರೀದವಿಠಲ ನಿ ನ್ನಯ ಚರಣಕೆ ನಮಿಸುವೆ ನಮಿಸುವೆ ಜಯ ಮಂಗಳ ಮಂಗಳ ಮಂಗಳ ಮಾಯಾ ಮಾಮರ ದೇವರಾಟ 3 ತಾಳ-ಅಟ ಬಾರೋ ಬಾರೋ ಭವದೂರ ದೀನಜನ ಭಾರ ನಿನ್ನದಯ್ಯಾ ಅಯ್ಯಯ್ಯಾ ಸಾರಿದೆನೊ ನಾ ನಿನ್ನ ಸಾರಿದೆನೊ ನಿನ್ನ 4 ತಾಳ-ಆದಿ ಶ್ರೀರಮಣ ಶ್ರೀದವಿಠಲ ಸಂ - ಚಾರು ಚರಣಗಳ ಸಾರಿದೆನೊ ನಿನ್ನ ಶಿರಿಗುರವಿತ್ತೆ ಪರಮನ ಪೆತ್ತೆ ಗಿರಿಜೇಶಗೆ ನಿನ್ನ ಮೈ ಇತ್ತೆ ಶರಣಾಗತವತ್ಸಲ ಕರುಣಾಕರ ಶ್ರೀದವಿಠಲ ಸರಿಬಂದರೆ ಸಾಕುವದೆಮ್ಮನು ಶರಣಾಗತವತ್ಸಲ 5 ಜತೆ ಸೋಲು ಶ್ರೀದವಿಠಲ ಸೋಲು ಗೆಲುವು ನಿನ್ನ
--------------
ಶ್ರೀದವಿಠಲರು