ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸರಾಯ ಪುರಂದರದಾಸರಾಯ ಪ. ಘಾಸಿಗೊಳಿಸದೆ ಇತ್ತು ಕರುಣಿಸಿ ವಾಸುದೇವನ ಕೃಪೆಗೈಸಿರಿ ಅ.ಪ. ದಾಸಕೂಟಕೆ ಮೊದಲನೆ ಗುರು ದೊಷವರ್ಜಿತ ಭಕ್ತರೆನಿಸಿ ಆಶಪಾಶವೆ ತೊರೆದು ಹರಿಯ ದಾಸತನವನು ತೋಷದಲಿ ಕೊಂಡು ಕೇಶವನು ಸರ್ವೋತ್ತಮನು ಎನ್ನುತ ಶ್ರೀಶನ ಗುಣಗಳನೆ ಪೊಗಳುತ ಭೂಸುರರ ರಕ್ಷಿಸುತ ಭಕ್ತರ ಕ್ಲೇಶಗಳೆÉದಂಥ ಗುರುವರ 1 ವೀಣೆ ಕರದಲಿ ಗಾನಮಾಡುತ ಜಾಣತನದಲಿ ಕೃಷ್ಣನೊಲಿಸುತ ಆನಂದದಲಿ ನರ್ತಿಸುತ್ತ ಧ್ಯಾನದಲಿ ಶ್ರೀ ಹರಿಯ ನೋಡುತ ಆನನವ ತೂಗುತ್ತ ವೇದ ವಿ- ಧಾನದಲಿ ಪದಗಳನೆ ರಚಿಸುತ ಮೌನಿವ್ಯಾಸರ ಶಿಕ್ಷೆಯಿಂದಲಿ ದಾನವಾಂತಕ ಹರಿಯನೊಲಿಸಿದ 2 ಪಾಪಿಗಳ ಪಾವನಗೈಸುತ ಶ್ರೀ ಪತಿಯ ಅಂಕಿತವ ನೀಡುತ ಈ ಪರಿಯಲಿ ಮೆರೆದ ಮಹಿಮೆಯ ನಾ ಪೇಳಲಳವಲ್ಲವಿನ್ನು ನಾ ಪಿರಿಯರಿಂ ಕೇಳಿದುದರಿಂ ದೀಪರಿ ನುಡಿದಿರುವೆನಲ್ಲದೆ ಗೋಪಾಲಕೃಷ್ಣವಿಠ್ಠಲನ ರೂಪ ನೋಡುತ ಸುಖಿಸುವಂಥ 3
--------------
ಅಂಬಾಬಾಯಿ
ಭಾರತೀ ದೇವಿ ಜಗದುದರನ ಸೊಸೆಯೆ ಶ್ರೀ ವಾಯು ಸತಿಯೆ ಜಗದುದರನ ಸೊಸೆಯೆ ಪ. ಸುಗುಣಿ ನಿನ್ನ ನಾ ಬಗೆ ಬಗೆ ವರ್ಣಿಸೆ ಜಗದೊಳು ಖ್ಯಾತೆಯೆ ನಗಧರ ಪ್ರೀತೆಯೆ ಅ.ಪ. ಸಾರಿ ಬಂದೆ ನಿನ್ನ ನಾರಿಮಣಿಯಳೆ ಭೂರಿ ಕರುಣದಿ ನೀ ಸತಿ ಪದಕೆ ಪತಿ ಸಹ ಭಾರತಿ ನಿನ್ನಯ ವಾರಿಜಪದವನು ಸೇರಿ ಸುಖಿಸುವಂಥ ದಯ ತೋರೆ ನೀ 1 ದಾರಿ ತೋರಿ ನೀ ಪಾರುಗಾಣಿಸೆ ತಾರತಮ್ಯದಿ ವಾರಿಜಾಂಬಕಿಯೆ ಆರು ಅರಿಯದ ಹರಿಯ ಮಹಿಮೆಯ ಸಾರತತ್ವ ನೀ ಪತಿಯಿಂದರಿತಿಹೆ ಬಾರದು ಅಜ್ಞತೆ ನಿನಗೆ ಪ್ರಳಯದಿ ನಾರಿ ರನ್ನೆ ಸರ್ವ ಬುದ್ಯಭಿಮಾನಿಯೆ 2 ಹಾರಪದಕವು ದೋರೆ ಕಂಕಣ ನಾರಿ ನಿನ್ನನು ಯಾರು ವರ್ಣಿಪರೆ ನಾರಿ ನಿನ್ನ ಪತಿದ್ವಾರದಿ ಎನ್ನ ಶ- ರೀರದಿ ಸರ್ವನಿಯಾಮಕರೊಡನೆ ತೋರೆ ಗೋಪಾಲಕೃಷ್ಣವಿಠ್ಠಲನ ನೀರಜನಾಭನ ಶ್ರೀ ರಮೇಶನ 3
--------------
ಅಂಬಾಬಾಯಿ