ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತ್ರಾಣಿ ಶ್ರೀ ಕೃಷ್ಣವೇಣಿ ಪ್ರಾಣಪತಿ ಪದಕಮಲ ಕಾಣಿಸು ಹೃದಯದಿ ತ್ರಾಣಿ ಶ್ರೀ ಕೃಷ್ಣ ವೇಣಿ ಪ ಯಮಧರ್ಮತನಯೆ ಶ್ರೀ ಕೃಷ್ಣ ಸಂಗದಿ ಜನಿಸಿ ಕಮಲ ಸಂಭವನ ಲೋಕದಲಿ ಮೆರೆದೆ ಸುಮನಸರ ನುಡಿಗೇಳಿ ಲೋಕಗಳ ದುರಿತೋಪ ಶಮನ ಗೊಳಿಸಲು ಬಂದೆ ತುಮಲ ಹರುಷದಲಿ 1 ಭೂತನಾಥನ ಜಟಾಜೂಟದಿಂದುದ್ಭವಿಸಿ ಶ್ವೇತಪಿಂಗಳ ಶೈಲಶಿಖರಕಿಳಿದೇ ಭೂತಳಕೆ ಭೂಷಣಳೆನಿಸಿ ಪೂರ್ವವನಧಿ ನಿ ಕೇತನವನೈದಿ ಸುಖಿಸಿದಿ ನಿನ್ನ ಪತಿಯೊಡನೇ 2 ಪ್ರಾಣಿಗಳು ನಿನ್ನ ಜಲಪಾನವನು ಗೈಯೆ ನಿ ತ್ರಾಣ ಸಂಹಾರ ವ್ಯಾಧಿಗೆ ಭೇಷಜಾ ಪ್ರಾಣ ಪ್ರಯಾಣ ಪಾಥೇಯವೆಂದರಿಯೆ ನಿ ರ್ವಾಣಪದವಿತ್ತು ಕಲ್ಯಾಣವಂತರ ಮಾಳ್ಪೆ 3 ಜನಪದಗಳಾಗಿ ಕಾನನವಾಗಿ ಮನ್ವಾದಿ ದಿನಗಳಲ್ಲಾಗಿ ಮತ್ತೇನಾಗಲೀ ಮನುಜ ಮಜನಗೈಯೆ ವಾಜಪೇಯಾದಿ ಮಖ ವನುಸರಿಸಿದಕೆ ಫಲವೇನು ತತ್ಪಲವೀವೆ 4 ಅರವತ್ತು ಸಹಸ್ರ ವರುಷಂಗಳಲ್ಲಿ ನಿ ರ್ಜರ ತರಂಗಿಣಿಯ ಮಜ್ಜನದ ಫಲವು ಗುರುವು ಕನ್ಯಸ್ಥನಾಗಿರಲು ಒಂದಿನ ಮಿಂದ ನರರಿಗಾ ಪುಣ್ಯಸಮನೆನಿಸಿ ತತ್ಫಲವೀವೇ 5 ಮನನಶೀಲ ಸುಯೋಗಿಗಳಿಗಾವ ಗತಿಯು ಇಹ ವನುದಿನದಿ ನಿನ್ನ ತೀರದಲಿ ಇಪ್ಪಾ ಮನುಜೋತ್ತಮರಿಗೆ ಆ ಗತಿಯಿತ್ತು ಪಾಲಿಸುವೆ ಅನುಪಮ ಸುಕಾರುಣ್ಯಕೆಣೆಗಾಣಿ ಜಗದೊಳಗೆ 6 ತಾಯೆ ಎನ್ನನುದಿನದಿ ಹೇಯ ಸಂಸಾರದೊಳ ಗಾಯಾಸ ಗೊಳಿಸದಲೆ ಕಾಯಬೇಕೊ ವಾಯುಪಿತ ಶ್ರೀ ಜಗನ್ನಾಥ ವಿಠ್ಠಲ ಹೃ ತ್ತೋಯಜದೊಳಗೆ ಕಾಂಬುಪಾಯ ಮಾರ್ಗವ ತೋರೆ 7
--------------
ಜಗನ್ನಾಥದಾಸರು
ಗಂಭೀರೆಯರ ನಿಲ್ಲಿಸಿದಿಪೋರಬುದ್ಧಿಯ ಬಾಲೆನೀರೆಮನಕೆ ತಾರೆ ಪ.ನೀರಜಾಕ್ಷೆಯರ ನಿನ್ನದ್ವಾರದಿ ನಿಲ್ಲಿಸಿದಿಪೋರಬುದ್ಧಿಯನೆಲ್ಲತೋರಿಸಿದೆ ಈಗ 1ನೋಡಿ ನಮ್ಮನು ಕರೆಯದೆಓಡಿದೆ ಒಳಗಿನ್ನುಮಾಡಿದ ಕಪಟದ ಸೇಡುತೆಗೆಯುವೆ ನೀಗ 2ಮೂಡಲಗಿರಿವಾಸನೋಡುವಂತೆಮಾರಿಬಾಡಿಸಿ ಕಳಿಸುವೆನೋಡಿಕೊ ರುಕ್ಮಿಣಿ 3ಹೀನಗುಣದ ಬಾಲೆಮಾನವು ನಿನಗಿಲ್ಲಶ್ರೀನಿವಾಸನು ನಿನ್ನಏನೆಂದು ಮದುವೆಯಾದ 4ರಜವೆಂಬೊಗುಣಸೇರಿರಾಜ್ಯ ಭೋಗವಬಟ್ಟೆತ್ರಿಜಗವಂದನ ಕೂಡಭುಜಗಾಲಿಂಗನೆಯಾಕೆ 5ಸತ್ವಗುಣವ ಸೇರಿಅತ್ಯಂತ ಸುಖಿಸಿದಿಚಿತ್ತಜನಯ್ಯಗೆಪತ್ನಿ ತಕ್ಕವಳಲ್ಲ 6ತಮವೆಂಬೊ ಗುಣಗಳಸುಮ್ಮನೆ ಗುತ್ತಿಗೆ ಹೊತ್ತಿರಮಿ ಅರಸನ ಕೂಡರಮಿಸೋದು ತರವಲ್ಲ 7
--------------
ಗಲಗಲಿಅವ್ವನವರು