ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಕು ನರಹರಿ ಭವದ ಬವಣಿಂ ದ್ಯಾಕÉ ಬಳಲಿಸುವೆ ಹರಿ ಹರಿ ಶ್ರೀಕಮಲಾಪತಿ ಶರಣ ಜನರೊಳ- ಗ್ಹಾಕಿ ಪೊರೆಯೆನ್ನ್ಹರಿ ಹರಿ ಪ ದೊರೆಯೆ ನೀನಿರಲನ್ಯರಿಗೆ ಬಾಯಿ ತೆರೆಯಲ್ಯಾಕಿನ್ನ ್ಹರಿ ಹರಿ ಪರಮ ಆಪ್ತ ನೀನಿರಲು ಕಾಣದೆ ಪÀರರಿಗೆ ಆಲ್ಪರಿದ್ದರಿಹರಿ1 ಪುತ್ಥಳಿ ಮನೆಯಲೆ ಇರಲು ಹಿತ್ತಾಳೆ ಬಯಸುವೆನ್ಹರಿಹರಿ ಬಿಟ್ಟು ನಿನ್ನೀಗನ್ಯ ವಿಷಯದಿಂ ದ್ದುಟ್ಟುವುದೆ ಸುಖ ಹರಿಹರಿ 2 ಬೇಡಿದ್ವರಗಳ ಕೊಡುವೊ ಭೀ- ಮೇಶ ಕೃಷ್ಣ ನೀನಿರಲ್ಹರಿಹರಿ ನೋಡಿ ಸುಖಿಸದೆ ಬಿಟ್ಟು ಕನ್ನಡಿ ಗೋಡೆಗಡರುವೆನ್ಹರಿಹರಿ 3
--------------
ಹರಪನಹಳ್ಳಿಭೀಮವ್ವ
ಅದು ನಿರಾಲಂಬ ಅದು ನಿರಾಲಂಬಅದು ನಿರಾಲಂಬ ಕೇಳದು ನಿರಾಲಂಬ ಪ ತನು ಹಂಗು ಇಲ್ಲದೆ ಮನ ಹಂಗು ಇಲ್ಲದೆತನಗೆ ತಾನಿಹುದದು ನಿರಾಲಂಬ 1 ಬುದ್ಧೀಂದ್ರಿಯಕೆ ಅತ್ತ ಅಹಂಕಾರಕೆ ಅತ್ತಸುದ್ದಿಲ್ಲದಹುದದು ನಿರಾಲಂಬ 2 ಇಂದ್ರಿಯಕೆ ನಿಲುಕದೆ ಇಂದ್ರಿಯಕೆ ಸುಖಿಸದೆಇಂದ್ರಿಯಗಳರಿಯದುದು ನಿರಾಲಂಬ3 ಅರಿವುದು ಕಾಣದೆ ಮರೆವುದುತೋರದೆ ಅದು ಚಿದಾನಂದ ಅದು ನಿರಾಲಂಬ 4 ಬಹಿರಂತಲ್ಲದೆ ಬೇರೆಂಬುದಿಲ್ಲದೆಮಹಾ ಬೆಳುದಿಂಗಳದೆ ನಿರಾಲಂಬ 5
--------------
ಚಿದಾನಂದ ಅವಧೂತರು
ದಾಸದಾಸ್ಯವ ದಯಮಾಡಿ ಸಲಹೋ ಕರುಣಾ ಸಮುದ್ರ ಹರಿಯೆ ಸುಳಿ ಘಾಸಿಮಾಡದ ಮುನ್ನ ಪ. ಅಂತಪಾರಗಳಿಲ್ಲವಿದಕಿನ್ನು ಪ್ರತಿ ಕ್ಷಣ ಚಿಂತನೆಯಿಂದಲಿ ಬಾಧೆಗೊಳಿಸುವುದು ಕಂತುಜನಕ ನೀನಿತ್ತದನುಂಡು ಸುಖಿಸದೆ ಭ್ರಾಂತಿ ಬಡಿಸುವದನೆಂತು ವರ್ಣಿಸಲಿನ್ನು 1 ತನ್ನಿಂದಧಿಕ ಕಷ್ಟ ಪಡುವ ಜನರ ಕಂಡು ಭಂಡಾಗಿರದಿ ಪರರ ಹೊನ್ನು ಹೆಣ್ಣುಗಳಲಿ ಕಣ್ಣಿಟ್ಟು ಹಗಲಿರು- ಳುಂಣಲೀಯದು ನಿದ್ರೆ ಕಣ್ಣಿಗೆ ಬಾರದಿನ್ನು 2 ಭವರೋಗ ವೈದ್ಯ ನೀನೆಂದು ಸಕಲ ಶ್ರುತಿ ನಿವಹವು ನಿನ್ನ ಕೊಂಡಾಡುವುದು ನವವಿಧ ಭಕುತಿ ಮಧ್ವ ತವಕದೊಳೆನಗಿತ್ತು ಭುವನ ಪಾವನ ಶೇಷಗಿರೀಶಾ ನೀ ದಯದೋರು 3
--------------
ತುಪಾಕಿ ವೆಂಕಟರಮಣಾಚಾರ್ಯ
ಸರ್ಪಶಯನನೆಂಬೊ ದಿವ್ಯಕಲ್ಪತರು ಸೇರಿದ ದರ್ಪವೆಷ್ಷನಿಮ್ಮಿಬ್ಬರ ಧಿಮಾಕುಭಾಳೆ ನಾರಿ ಪ. ನಿರತ ದಾಸಿ ನಾನೆಂಬೋದು ಸರಸಿಜಾಕ್ಷತಾನೆ ಬಲ್ಲಅರಸು ಅರಸನ ಹುಡುಕುತಅರಸು ಅರಸರನ ಹುಡುಕುತಲೆ ಹೋಗುವದುಸರಸ ತೋರುವುದೆ ಐವರಿಗೆ ಕೇಳನಾರಿ1 ಒಬ್ಬ ರುಕ್ಮಿಣಿ ನಿನ್ನ ಮುಂದೆ ಗುಬ್ಬಿಕಾಗೆ ಹಿಂಡುಕಬ್ಬೆಕ್ಕು ಕೋಳಿ ನೆರೆದಾವಕಬ್ಬೆಕ್ಕು ಕೋಳಿ ನೆರೆದಾವ ಶ್ರೀಕೃಷ್ಣತಬ್ಬಿಬ್ಬುಕೊಂಡು ನಗುತಾನ ಕೇಳ ನಾರಿ 2 ಅತ್ತಿಗೆ ನಿನ್ನ ಮೈಗೆ ಹತ್ಯಾವ ರುದ್ರಾಕ್ಷಿನೆತ್ತಿಯ ಮ್ಯಾ¯ ಜಡದಾವ ನೆತ್ತಿಯ ಮ್ಯಾ¯ ಜಡದಾವ ಅತ್ತಿಗೆ ನಿನ್ನಹತ್ತಿಲಿದ್ದವರು ನಗುತಾರೆ ಕೇಳನಾರಿ3 ಜಾಣೆ ನಿನ್ನಂಥವಳ ಕಾಣೆ ನಾ ಜಗದೊಳುಕೋಣನ ಹೊಡೆವ ಕೌಶಲ್ಯಕೋಣನ ಹೊಡೆವೊÀ ಕೌಶಲ್ಯಕ್ಕೆ ಬೆರಗಾಗಿಸುರನಾರಿಯರು ಬಹಳೆ ನಗುತಾರೆ ಕೇಳ ನಾರಿ4 ನಿತ್ಯ ಪ್ರಕಾಶನ ಉತ್ತಮೋತ್ತಮ ಗುಣವಅತ್ಯಂತ ನೋಡಿ ಸುಖಿಸದೆಅತ್ಯಂತ ನೋಡಿ ಸುಖಿಸದೆ ಎಲೆಭಾವೆಕತ್ತಲೆಗೈದ ಬಗಿಹೇಳ ಕೇಳನಾರಿ5 ಕತ್ತಲೆಂಬುದು ನಿನ್ನ ಸುತ್ತುಮುತ್ತಲಾಗಿರೆಎತ್ತನೋಡಿದರು ಜನರಿಲ್ಲಎತ್ತನೋಡಿದರು ಜನರಿಲ್ಲ ಅವರೊಳು ಚಿತ್ತ ಸ್ವಾಸ್ಥ್ಯದ ಬಗಿ ಹೇಳ ಕೇಳನಾರಿ6 ಹರಿ ಬಲು ಪ್ರೀತಿಯಿಂದ ಉರದೊಳು ಸ್ಥಳಕೊಟ್ಟಇರಬಾರದೇನೆ ವಿನಯದಿಇರಬಾರದೇನೆ ವಿನಯದಿ ಜಗಳಾಡಿಉರಿಯ ಹೊಗುವರೆ ಉನ್ಮತ್ತೆ ಕೇಳನಾರಿ 7 ಮೂಡಲಗಿರಿಪತಿಗೆ ಜೋಡೆಂದು ನೀವಿಬ್ಬರುಮಾಡಿ ಸಹವಾಸ ಎಡಬಲಮಾಡಿ ಸಹವಾಸ ಎಡಬಲ ಹಿಡಿದಿರಿ ನೋಡಿದವರೆಲ್ಲ ನಗುವಂತೆ ಕೇಳನಾರಿ8 ಕರಿ ಮಣಿಯು ಹೋಲುವುದೆಹರಿಯ ಚಲ್ವಿಕೆಗೆ ಹವಣಿಸಿಹರಿಯ ಚಲ್ವಿಕೆಗೆ ಹವಣಿಸಿ ರಾಮೇಶಗೆಸರಿಯಾಗುವೆ ಏನೆ ಬಿಡು ಬಿಡು ಕೇಳ ನಾರಿ 9
--------------
ಗಲಗಲಿಅವ್ವನವರು