ಒಟ್ಟು 8 ಕಡೆಗಳಲ್ಲಿ , 8 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಘನತರ ದೂರದೊಳು ಸಮಮತದೊಳು ವನಜನಾಭನತಿ ಮನಸಿಜಾನ್ವಿತನಾದ ವನಿತೆ ನೀ ದಾರೆಂದಾ ನಿನ್ನೊಳು ಮನಸೋತೆ ಕೇಳೆಂದಾ ಪ ಮತ್ಸ್ಯಗಂಗಳಲಿ ಸ್ವಚ್ಛ ಜಲವು ಯಾಕೆ ಮತ್ಸ್ಯಾವತಾರದ ಉತ್ಸವ ತೋರುವಿ ವನಿತೆ ನೀ ಬಾರೆಂದಾ 1 ಕೂರ್ಮ ಕಠೋರದ ಹೆರಳು ಭಂಗಾರವು ಕೂರ್ಮಾವತಾರದ ಮರ್ಮವ ತೋರುವಿ2 ಸರಸ ಮೌಕ್ತಿಕದ ಮುರವು ನಾಸದೊಳು ವರಹವತಾರದ ಕುರುಹು ತೋರುವಿ 3 ಹರಿಯ ಹಿಡಿಯ ತಂತಿ ಭರದಿ ಬಳುಕುತೆ ನರಸಿಂಹರೂಪದೆ ಸ್ಮರಣೆ ತೋರುವಿ 4 ವಾಮನ ಬಾಲೆ ನೀ ಸಾಮಜೆ ಗಮನೆ ವಾಮನ ರೂಪದ ಸೀಮಾ ತೋರುವಿ 5 ತಾಮಸಗಿಡಗಳ ಕಾಮಿಸಿ ತವಿಸುವಿ ರಾಮನ ಕಾಲದ ನೇಮವ ತೋರುವಿ 6 ಸ್ಮರಶರದಂದದಿ ಕರದಿ ಕೇತಕಿ ಪುಷ್ಪ ಪರಶುರಾಮನ ಅರುಹ ತೋರುವಿ 7 ಎದೆಯೊಳಚಲಸ್ತನ ಮುದದಿ ಧರಿಸಿರುವೆ ಮಾಧವ ತಾರದ ಸದವು ತೋರುವಿ 8 ಅಂಗಜ ಬಾಣದಿಂದಂಗದ ಪರವಿಲ್ಲ ಮಂಗಲ ಬೌದ್ಧನ ರಂಗವ ತೋರುವಿ 9 ಮನಸಿಜಾಶ್ವವೇರಿ ವನಿತೆ ಕಂಗೊಳಿಸುವಿ ಪರಿ ವನಪು ತೋರುವಿ 10 ಕುರುಹು ಅರಿದೆ ನಿನ್ನ ಬೆರದು ಸುಖಿಪರನ್ನೆ ನರಸಿಂಹವಿಠಲನರಸಿ ಬಂದಿರುವೇ 11
--------------
ನರಸಿಂಹವಿಠಲರು
ದಂಡವ್ಯಾತಕಯ್ಯ ಹರಿ ಹರಿ ದಂಡವ್ಯಾತಕಯ್ಯ ಪ ದಂಡವ್ಯಾತಕಯ್ಯ ಪಾಂಡುಪಕ್ಷ ಮಹ ಪಾದ ಮರೆಯ ಬಿದ್ದವರಿಗೆ ಅ.ಪ ಭಾರನಿನ್ನದೆಂಬ ಭಕ್ತರ ಭಾರವಹಿಸಿಕೊಂಬ ಪಾರಕರುಣಾನಿಧಿ ಧೀರ ನಿನ್ನ ಪಾದ ಸೇರೆ ಭಜಕರಿಗೆ ಧಾರುಣಿ ಜನರ 1 ಅಜಾಮಿಳನಂತ್ಯದಿ ತವನಾಮ ನಿಜವಾದೊಂದಕ್ಷರದಿ ಮಜೆದು ಗೆಲಿದು ಕಷ್ಟ ನಿಜಪದ ಪಡೆದದ್ದು ನಿಜವನರಿತು ನಿಮ್ಮ ಭಜಿಸುವ ಜನರಿಗೆ 2 ಸಿಂಧುಶಯನನೆನಲು ಅನ್ಯರ ಬಂಧುವೆ ಕರುಣಾಳು ಮಂದರಪರ್ವತ ಮಂದಿರ ಶ್ರೀರಾಮ ಪಾದ ವಂದಿಸಿ ಸುಖಿಪರಿಗೆ 3
--------------
ರಾಮದಾಸರು
ನಮೋ ನಮೋ ಶ್ರೀ ಮಧ್ವಾಚಾರ್ಯ ಆರ್ಯಾ ಪ ಭೃಗು ಕುಲೋತ್ತಮ ರಾಮ ಭೂಸುರರಿಗೆ ಸರ್ವ ಜಗವೆಲ್ಲ ಧಾರಿಯನು ಯೆರದು ಸಂಹ್ಯಾ ನಗದಲ್ಲಿ ನಿಂದು ಸಮುದ್ರನ್ನ ಹಿಂದಕ್ಕೆ ತೆಗಿಸಿ ಈ ಭೂಮಿಯನು ಸಾಧಿಸಿದನು1 ಮೂರ್ತಿ ಅಲ್ಲಿಗಲ್ಲಿಗೆ ಕ್ಷೇತ್ರ ಗತಿ ತಪ್ಪಿದಂತೆ ನಿರ್ಮಾಣ ಮಾಡಿ ಸತಿಪತಿಯ ಉದ್ಧರಿಸಿ ಬರುತ ಕಂಡನು ಉ ನ್ನತವಾದ ಪರ್ವತವು ಯೋಜನವಿರೆ 2 ಬೆರಗಾಗಿ ಪರಶುರಾಮನು ಬಂದು ಈ ಗಿರಿಯಲ್ಲಿ ನಿಂದು ಅಗ್ರಭಾಗವೈದೆ ತರಹರಿಸಲಾರದೇ ಭೂಮಿಗಿಳಿಯಿತು ಅದ್ರಿ ನಿರೀಕ್ಷಿಸಿ ಸುಜನರು ಇದ್ದನಿತು3 ಸಿರಿರೂಪ ದುರ್ಗಾನಾಮಕಳಾದ ದೇವಿಯನು ಕರದು ಈ ಸ್ಥಾನದಲಿ ಇರ ಹೇಳಿದಾ ಅರವು ಮಾಡದೆ ಮುಂದೆ ಕಲಿಯುಗದಲಿ ನೆರದು ದುರುಳರಾತಿಯರ ಸಂಹರಿಸುಯೆಂದು 4 ಅನಿತರೊಳಾಕಾಶದಲಿ ಜಯ ಜಯವೆಂದು ಅನಿಮಿಷರು ಕೊಂಡಾಡಿ ನಗುತ ದಿವ್ಯ ಮಣಿಮಯ ವಿಮಾನದಿಂದಾ ಗಿರಿಗೆ ವೇಗದಿ ಸು ಮ್ಮನರಾಗಿ ಬಂದು ತುತಿಸಿದರು ಹರಿಯಾ 5 ಅಂದಿನಾರಭ್ಯವಾಗಿ ಇದೇ ವಿಮಾನಗಿರಿ ಯೆಂದು ಕರೆಸಿತು ಶ್ರುತಿ ಯುಕ್ತಿಯಲ್ಲಿ ಎಂದೆಂದಿಗೆ ಇದನೆ ನೋಡಿದವರಿಗೆ ದೋಷ ಗಂಧವಾದರು ಇಲ್ಲಾ ಇಲ್ಲ ಇಲ್ಲಾ6 ಈ ಮಹಿಮೆಯನು ಕೇಳಿ ಧರ್ಮ ತಪವನು ಮಾಡಿ ಸೋಮಾರ್ಕ ಪ್ರಭಯಂತೆ ಕೀರ್ತಿಯನು ಪಸರಿಸಿ ಪಾಮರರ ಉದ್ಧರಿಸಬೇಕು ಯೆಂದು7 ಪರಿ ಶ್ರೀಹರಿಯ ಧ್ಯಾನವನು ಮಾಡಲು ಶ್ರೀಪತಿ ವರವಿತ್ತ ಮುಂದೆ ಮಹ ಪಾಪಿ ಪುಟ್ಟುವನು ಅವನಗೋಸುಗ ವಾಯು ತಾ ಪರಮ ಪ್ರೀತಿಯಲಿ ಜನಿಸುವನು 8 ಅಂದ ಮಾತಿಗೆ ಯಮನು ಬಹುಕಾಲದಲಿದ್ದ ಛಂದದಿಂದದಿ ಪೋದ ತನ್ನ ಪುರಕೆ ಇಂದಿರಾಪತಿ ನೇಮಿಸಿದ ಪರಿಯಂತೆ ಆ ನಂದತೀರ್ಥರಾಗಿ ಜನಿಸಿದರು 9 ಏನು ಪೇಳಲಿ ಪುಣ್ಯ ಚರಿತಯನು ಚನ್ನಾಗಿ ಜ್ಞಾನದಲಿ ಅಧಿಕಾರಾಗಿ ಇಷ್ಟಾನಿಷ್ಟ ಪುಣ್ಯ ಮಾನದಲಿ ಕೊಂಡಾಡಿ ಸುಖಿಪರಲ್ಲಿ10 ಹುರಳಿ ಗುಗ್ಗರಿ ಮೆದ್ದ ಅದ್ಧುತವ ಕೇಳಿದರೆ ಉರಳಿ ಹೋಗುವದು ಜನ್ಮಾಂತರದ ದುಷ್ಕರ್ಮ ಮರಳಿ ಬಲಿ ಬಾಲವನು ಪಿಡಿದದು ನೆನಸಿದರೆ ಸುರರು ಮುಕ್ತಿಯಿನಿತ್ತು 11 ಧರಣಿಧರದಿಂದ ಧುಮುಕಿದ ಪಾದಯುಗ ನೋಡೆ ಎರಡೊಂದು ಏಳು ಕುಲತೃಪ್ತರಹರೊ ಅರೆ ಮ್ಯಾಲೆ ಸಾಲವನು ತಿದ್ದಿದಾ ವಾರ್ತಿ ಕೇಳಿ ಎರಡೊಂದು ಋಣದಿಂದ ಕಡೆಗಾಗುವ 12 ತಲೆಕೆಳಕಾಗಿ ಬೆಳೆದಾ ವೃಕ್ಷವನು ನೋಡಿ ಬಲಿವನು ಸುರದ್ರುಮದಂತೆ ರಂಗ ಛಲದಿಂದ ಸರ್ಪನ ವರಸಿದ ಸ್ಥಳ ಕಾಣೆ ಬಲು ವಿಷಗಳು ಪೋಗಿ ನಿರ್ಮಲಹರೋ 13 ಧೂಳಿ ಅಕ್ಷರ ಬರೆದ ಪ್ರದೇಶ ನೋಡಲು ವಾಲಯಾ ಶುಭವಿದ್ಯ ಫಲಿಸುವದು ಲೀಲೆಯಿಂದ ಗ್ರಂಥ ಅಭ್ಯಾಸಕೆ ಪೋಗಿ ಬರುವ ಶೀಲತೆಯು ಕೇಳೆ ಮನೋ ವಾಯುವೇಗ 14 ಬುತ್ತಿಯ ಉಂಡ ಸ್ಥಳವನ್ನು ಕೊಂಡಾಡಲು ತೃಪ್ತನಾಗುವ ಮನುಜ ಮೃಷ್ಟಾನ್ನದಿ ನಿತ್ಯ ಬಾಲಕ್ರೀಡೆ ಆಡಿದ್ದು ಪಾಡಲು ಪುತ್ರೋತ್ಸವಗಳಿಂದ ಬಾಳುತಿಪ್ಪ15 ಚಾಪ ಗದ ಪದುಮ ಎರಡೊಂದು ತೀರ್ಥಗಳು ಇರುತಿಪ್ಪ ವಾಸುದೇವನೆಂಬೊ ನಾಮಾ ಸರೋವರದಲಿ ಮಿಂದು ಸ್ತೋತ್ರ ಮಾಡಿದ ನರಗೆ ವಿರಜೆಯಲಿ ಸ್ನಾನ ಸಂದೇಹವಿಲ್ಲ 16 ಜನಿಸಿ ಮೊದಲು ಮಹಾ ಬದರಿಗೆ ಪೋದಾರಭ್ಯ ಎಣಿಕೆ ಇಲ್ಲದೆ ಚರಿತೆ ಅನುದಿನದಲಿ ಗುಣಿಸಿ ಗುಣದಲಿ ತಿಳಿದು ಕೀರ್ತನೆಯನೆಸಗಿದಾ ಮನುಜರಿಗೆ ಸತ್ಕೀರ್ತಿ ಬರುವುದಯ್ಯಾ 17 ಮಧ್ವ ಮಧ್ವ ಎಂಬೋ ನಾಮವನು ನುಡಿದರೆ ಬದ್ಧವಾಗಿದ್ದ ಭವಾಬ್ಧಿಯಿಂದ ಎದ್ದು ಕಡಿಗೆ ಬಿದ್ದು ಸಂಚಿತಾಗಾಮಿಯಿಂದ ಗೆದ್ದು ಚರ್ಮ ದೇಹದಿಂದ ನಲಿವ 18 ಶ್ರೀ ಪೂರ್ಣಬೋಧ ಗುರುಶೇಖರ ಸುಗುಣಧಾಮ ಆಪನ್ನ ಪರಿಪಾಲ ಅಮೃತಫಲದ ವ್ಯಾಪುತ ನಾನಾ ಸ್ಥಾನ ಹನುಮ ಭೀಮ ಸರ್ವ ರೂಪಾತ್ಮಕ ಪ್ರಾಣ ಭಾರತೀಶ19 ಕೇಳಿ ಹರುಷಿತನಾಗಿ ಬಂದ ವೈಭವದಂತೆ ಕಾಲ ಹಿಂಗಳಿಯದೇ ನಿತ್ಯದಲ್ಲಿ ಲೀಲೆಯಲಿ ವಾಸವಾಗಿರಲೆಂದು ಅಂದು ಪೇಳಲಾ ಮೌಳಿಯನು ತೂಗಿ ಸರ್ವರು ನಿಂತರು20 ಪುಂಜಕಾಸ್ಥಳ ಬಂದು ತಪವು ಮಾಡಲು ಕ್ಷೇತ್ರ ರಂಜನವಾಯಿತು ಇದೇ ನಾಮದಲ್ಲಿ ಕುಂಜರ ವರದ ನಮ್ಮ ವಿಜಯವಿಠ್ಠಲನಂಘ್ರಿ ಕಂಜವನು ಭಜಿತ ಗುರುರಾಜ ಜಯತು 21
--------------
ವಿಜಯದಾಸ
ನೀನ್ಯಾಕೊ ನಿನ್ನ ಗೊಡಿವ್ಯಾಕೊ ಹನುಮೇಶ ಪ ಅನ್ಯಮತಿ ಪೊಂದಿ ಮಿಥ್ಯಾಜ್ಞಾನಿಯಾಗದೆ ಪಾದ ಪೊಂದಿದ್ದರೆ ಸಾಕೊ ಅ.ಪ ಜೀವೋತ್ತಮರ ಭಾವವನನುಸರಿಸಿ ನೋವಾಗುವ ಮಾರ್ಗವ ಜರಿದು ಭಾವಜನಯ್ಯ ನಿನ್ನ ಭಾವವ ಕಂಡು ಆವಾಗಲು ಸುಖಿಪರ ಗೃಹ ಕಾವನಾದರೆ ಸಾಕು 1 ದೇಹಸ್ಥಿರವಲ್ಲ ದಹನಶೀಲಭವ ಇಹಸುಖ ಹೇಯವೆಂದು ಮೋಹಪಾಶಕೆ ಸಿಗಿಸದೆ ನಿನ್ನನುಪಮ ಮಹಿಮೆಗಳ ಕೇಳುತ ಆನಂದವಾದರೆ ಸಾಕು 2 ಮೋದತೀರ್ಥರೆ ಸದ್ಗುರು ಭೇದ ಜ್ಞಾನವೆ ಗತಿಪ್ರದ ವೇದ ಸಚ್ಛಾಸ್ತ್ರಂಗಳೆ ಸತ್ಯ ತಿಳಿದು ಆದಿ ವಿಜಯ ರಾಮಚಂದ್ರವಿಠಲನೆ ಅಗಾಧಮಹಿಮ ಮಮ ಪ್ರೀಯನೆಂಬ ಭಕ್ತಿ ಇತ್ತರೆ ಸಾಕೊ3
--------------
ವಿಜಯ ರಾಮಚಂದ್ರವಿಠಲ
ಬಹುದೂರ ಮುಕ್ತಿಪಥದಿ ನಡೆದು ನೀವುಹೋಗಲದನಳವಡಿಸಿಕೊಳ್ಳಿರೊ ಪ. ಸಂಸಾರವೆಂಬಡವಿಯ ಸುತ್ತ ಸುಳಿವಸಂಕಟವ ಕಳೆವರೆಕಂಸಾರಿ ತ್ರಿವಿಕ್ರಮನಿಗೆ ಸೇವೆಯಅಂಶುಪ್ರದಕ್ಷಿಣವ ಮಾಡಿರೊ 1 ಏಕಂ ವಿನಾಯಕೇ ಕುರ್ಯಾದ್ವೇ ಸೂರ್ಯೇನತ್ರೀಣೆ ಶಂಕರೆಚತ್ವಾರಿ ಕೇಶವೇ ಕುರ್ಯಾತ್ ಸಪ್ತಶ್ವತ್ಥಪ್ರದಕ್ಷಿಣವ ಮಾಡಿರೊ 2 ಬ್ರಹ್ಮತ್ಯವೆಂಬ ಪಾಪವ ಕಳೆವರೆಬ್ರಹ್ಮಪಿತನ ಪಟ್ಟದರಸಿಗೆಒಮ್ಮನದಲೊಮ್ಮೆ ಪ್ರದಕ್ಷಿಣವಮಾಡಿನಿರ್ಮಲ ಸುಖವ ಪಡೆಯಿರೊ3 ತೀರ್ಥಯಾತ್ರೆಗಳು ಬೇಡ ನೀವು ಗಳಿಸಿದರ್ಥವ್ಯರ್ಥವ ಕೆಡಿಸಬೇಡಚಿತ್ತದಲ್ಲಿ ಹರಿಯ ಚರಣವನು ಕೂಡಿಸತ್ಸುಖವನುಂಬುದು ಕಾಣಿರೊ4 ಅಸ್ವಸ್ಥರಾದ ಜನರು ಬಿಡದೆ ನಮ್ಮ-ಶ್ವತ್ಥ ನಾರಾಯಣನಿಗೆದಾಸ್ಯಮಂ ಪಡೆದು ಭಕ್ತಿಯಿಂತುತತ್ಸುಖವನುಂಬುದು ಕಾಣಿರೊ 5 ಇಂತು ಪ್ರದಕ್ಷಿಣವ ಮಾಡಿ ಲಕ್ಷ್ಮೀಕಾಂತನ ಕೃಪೆಯ ಪಡೆವರೆಚಿಂತೆಗಳ ಕಳೆದಮೇಲೆ ಮುಕ್ತಿಯಲಿಸಂತೋಷದಲಿ ಸುಖಿಪರು6 ಹಯವದನನೆಂಬ ಗುರುಕೊಟ್ಟಮಂತ್ರದಿಭಯವೆಂಬ ಭುಜಂಗನ ಜಯಿಸಿ ಮೂರು ಬಾರಿ ಸುತ್ತಿ ಹÀರಿಯ ಪದದಣಿಯ ಕಟ್ಟಿ ನಡೆಯಿರೊ 7
--------------
ವಾದಿರಾಜ
ಸ್ಮರಿಸುವ ನರನೇ ಧನ್ಯ ಸನ್ಮಾನ್ಯ ಪ ಸ್ಮರಿಸುವರಿಗೆ ಸುರತರುಕಲ್ಪ ವಿಭರಾಮ ಪುರದಿ ಶ್ರೀಹರಿ ಧ್ಯಾನಪರ ಶ್ರೀ ಕೃಷ್ಣಾಚಾರ್ಯರ ಅ.ಪ ಭರತ ಭೂಮಿಯೊಳವತರಿಸಿ ದೇವಾಂಶದಿ ಪುರುಹೂತನಂತೆ ಗಜಾಂತ ವೈಭವದಿಂದ ಮೆರೆಯುತ ತಮ್ಮಯ ಚರಣಾರಾಧಕರನು- ದ್ದರಿಸಲೋಸುಗದಿ ಸಂಚರಿಸುತ ಮುದದಿ ಸಂದರುಶನದಿಂಧಾಘವ ಕಳೆದು ಬಲು ಕರುಣದಲಿಷ್ಟಾರ್ಥವ ಗರಿದು ಬಹು ಶರಣು ಜ- ನರ ಪೊರೆವ ಭೂಸುರರೊಳು ಮರುತ ಮತಾಬ್ಧಿ ಚಂದಿರನೆನಿಸಿದವರ 1 ವರ್ಣಿಸಲೊಶವಲ್ಲ ಚರಣಯುಗ್ಮಾರಭ್ಯ ಶಿರಪರಿಯಂತರ ಗುರುಗಳಾಕೃತಿಯನ್ನು ನಿರುತ ಧ್ಯಾನಿಪರಿಗೆ ಪರಮ ಮಂಗಳವೀವ ಪರಿಶೋಭಿಸುವ ರತ್ನಾಭರಣದಿಂದೋಪ್ಪುವ ಸ್ವರ್ಣತುಲಸಿ ಮುಕ್ತಹಾರ ಭೂಷಿತ ಕಂಧರ ಸುಂದರವಾದ ಮುಖದೊಳು ಮಂದಸ್ಮಿರ ಕಸ್ತೂರಿಯಂತೆ ಪರಿಮಳಾನ್ವಿತ ಶರೀರ ಮಂತ್ರಾಲಯ ಗುರುರಾಘವೇಂದ್ರರ ಕರುಣಾಸುಪಾತ್ರರ2 ಚಿರಕಾಲ ಶೇವಿಪ ಪರಮ ವಂಧ್ಯರಿಗೆಲ್ಲ ವರಪುತ್ರ ಸೌಖ್ಯವ ಕರುಣಿಸುವರು ಸತ್ಯ ಅಪರಿಮಿತ ಮಹಿಮರೆಂದರಿಯದೆ ಇವರನ್ನು ಜರಿಯಲಾಕ್ಷಣದಲಿ ಅರಿತು ಭೀಕರವಾದ ಉರಗರೂಪವ ತೋರುತ ತ್ಯಜಿಸಿ ಮತ್ತೆ ನಿಜರೂಪದಿಂದಿರುತ ನೋಳ್ಪರಿಗತ್ಯಾಶ್ಚರ್ಯ ಸದ್ಗುಣ ಭರಿತ ಕಾರ್ಪರ ನರಹರಿಯ ಪರೋಕ್ಷದಿ ನಿರುತ ಸುಖಿಪರಂಘ್ರಿ 3
--------------
ಕಾರ್ಪರ ನರಹರಿದಾಸರು
ಉಡುಪಿಕೃಷ್ಣನ ನೋಡಿರಿ ಶ್ರೀಹರಿ ಚರಿತಸಡಗರವನು ಕೇಳಿರಿ ಪಪೊಡವಿಯೊಳು ಸಮರಿಲ್ಲ ಈತನಉಡುಪ ಮುಖ ಶ್ರೀ ಕೃಷ್ಟರಾಯನಕಡಲತಡಿಯಲಿ ನೆಲಸಿದಾತನಮೃಡಪುರಂದರೊಡೆಯ ದೇವನ 1ಮಧ್ವಸರೋವರ ಸ್ನಾನವ ಮಾಡುತ ಮನಶುದ್ದಭಾವದಿ ನಲಿದುಮಧ್ವಶಾಸ್ತ್ರÀವ ಸಾಧು ಸಜ್ಜನರಿಗೆ ಪೇಳ್ದಪದ್ಧತಿ ಮೀರದೆ ಶ್ರದ್ಧಾಭಕುತಿಯಿಂದ 2ಮಧ್ಯದಲ್ಲಿಹ ಅನಂತೇಶ್ವರನನುಶುದ್ಧ ಭಕುತಿಲಿ ನಮಿಸಿ ಸ್ತುತಿಸುತಮುದ್ದು ಕೃಷ್ಣನ ಹೆಜ್ಜೆ ಪಂಙ್ತಯಶ್ರದೆÀ್ಧ ಸಡಗರ ನೋಳ್ಪಸುಜನರು 3ಕಾಲಲಂದುಗೆ ಗೆಜ್ಜೆಯು ಕಯ್ಯೊಳು ಕಡ-ಗೋಲನೇಣನೆ ಪಿಡಿದುಬಾಲನಂದದಿ ಗೋಪಾಲರೂಪವ ತೋರ್ದಶ್ರೀ ಲಲಾಮನ ದಿವ್ಯ ಬಾಲಕೃಷ್ಣನರೂಪ4ಬಾಲಯತಿಗಳು ವೇಳೆ ವೇಳೆಗೆಬಾಲಕೃಷ್ಣನ ಪೂಜೆ ಮಾಡುತಬಾಲರೂಪವ ನೋಡಿ ಸುಖಿಪರುಶೀಲಗುಣಸುರವರನ ಸ್ತುತಿಪರು5ಮಧ್ವರಾಯರಿಗೊಲಿದು ಉಡುಪಿಯ ಮಣ್ಣ-ಗೆಡ್ಡೆಯೊಳಗೆ ಪೊಳೆದುಅದ್ವೈತಮತದ ಸದ್ದಡಗಿಸಿ ಮೆರೆದಂಥಮುದ್ದು ಸರ್ವಜÕರ ಆಜ್ಞಾಧಾರಕರೆಲ್ಲ 6ಶುದ್ಧ ತತ್ವಜÕರು ರಚಿಸಿದಪದ್ಧತಿಯ ಸಾಧಿಸುತ ಸಂತತಶ್ರದ್ಧೆಯೊಳು ಹರಿಕಾರ್ಯ ನಡೆಸುವಶುದ್ಧಯತಿಗಳ ಸೇವೆಗೊಲಿಯುವ 7ಪರಿಯಾಯದಿನ ಬರಲು ಶ್ರೀ ಹರಿಯನ್ನುಪರಿಪರಿವಿಧ ಪೂಜಿಸಿಪರಮವೈಭವದಿಂದ ಹರಿಯನ್ನುಕರತಂದುವರರಥÀವೇರಿ ಕುಳ್ಳಿರಿಸುವ ಭಕುತಿಯಲಿ 8ಪರಿಪರಿಯ ವಾದ್ಯಗಳು ಮೊಳಗಲುಸರುವ ಯತಿಗಳು ನೆರೆದು ಹರುಷದಿಪರಮಮಂಗಳಮೂರ್ತಿಕೃಷ್ಣನಹರುಷದಲಿ ಕೊಂಡಾಡಿ ಸುತ್ತಿಪರು 9ಕೊರಳಕೌಸ್ತುಭಮಾಲೆಯು ವೈಜಯಂತಿಯುಮುರುಡಿ ಸರಪಣಿ ಗೆಜ್ಜೆಯುಪರಿಪರಿ ರತ್ನಾಭರಣಗಳ್ಹೊಳೆಯುತಜರದ ಪೀತಾಂ¨Àರದಿಂದ ಶೋಭಿಪ ದಿವ್ಯ 10ಕನಕಕಸ್ತೂರಿ ತಿಲಕ ಫಣೆಯಲಿಮಿನುಗುತಿಹ ಸ್ತ್ರೀರೂಪಧರಿಸಿದಕನಕಪೀಠದಿ ಮೆರೆದ ಕಮಲ-ನಾಭವಿಠ್ಠಲನ ಸೇವಿಸುವ ಜನ11
--------------
ನಿಡಗುರುಕಿ ಜೀವೂಬಾಯಿ
ಎಷ್ಟು ಸುಖಿಗಳೊ ಗೋವು ಗೊಲ್ಲತಿ ಗೋಪರು ಶ್ರೀಕೃಷ್ಣನೊಡನೆ ಹಗಲಿರುಳು ಕ್ರೀಡೆಯಲಿ ಕಾಲವ ಕಳೆವರು ಪ.ಕೋಹೋ ಕೋಹೋ ತೃವ್ವೆ ತೃವ್ವೆ ಅಂಬೆ ಅಂಬೆ ಬಾರೆ ಎಂದುಮೋಹದಿಂದ ಕರೆಸಿಕೊಂಡು ಓಡಿ ಓಡಿ ಬಂದುಶ್ರೀಹರಿಯ ಹೆಗಲ ಮೇಲೆ ಗಳಗಳಿಟ್ಟುಕದಪುಕಂಠಲೇಹಿಸಿ ಮೊಗದಿರುದಿರುಹಿ ಸಿರಿನಖದಿಂ ತುರಿಸಿಕೊಂಬರು 1ತುಡುಗನೆಂದು ತುಡುವಿಡಿದು ಅಡಿಗಡಿಗೆ ಅಪ್ಪಿ ಚುಂಬಿಸಿಪಿಡಿಪಿಡಿದು ಗೋಪಿಯಡಿಗೆ ಒಪ್ಪಿಸಿ ಒಪ್ಪಿಸಿಮಡದೆರೆಲ್ಲ ಮಧುವೈರಿಯ ಸಂಗ ಸೊಬಗಿಲೋಲಾಡುತಲಿಒಡನೊಡನೆ ಗೋಪಾಲ ಮೂರುತಿಯ ಕಣ್ಣುಮನದಲಿಟ್ಟು ಸುಖಿಪರು 2ಸಣ್ಣವರಾಡಲೊಲ್ಲೆನೆನಲು ಗದ್ದವಿಡಿದು ಮುದ್ದಿಸಿ ನಮ್ಮಣ್ಣ ತಮ್ಮಗಳಿರಾ ಗೆಳೆಯರಿರಾ ಬನ್ನಿರೆಂದುಅಣ್ಣೆಕಲ್ಲೊಡ್ಡಿ ಗಜಗವಾಡಿ ಸೋಲಿಸಿಕೊಂಡಳುವಚಿಣ್ಣರ ಮನ್ನಿಪ ಪ್ರಸನ್ವೆಂಕಟೇಶನ ಉಣ್ಣುವೆಂಜಲಸೆಳೆದುಂಬುವರು 3
--------------
ಪ್ರಸನ್ನವೆಂಕಟದಾಸರು