ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವರ ಹರಿ ವಿಠಲ | ಪೊರೆಯ ಬೇಕಿವಳಾ ಪ ಪಾದ | ಸ್ಮರಿಸಿ ಭಜಿಸುವಳಾ ಅ.ಪ. ಪರಿ ಪರಿಯ ಸಂತಸದಿಇರುವ ಈ ಪತಿವ್ರತೆಯ | ದುರಿತಗಳ ಕಳೆದೂ |ಹರಿಯೆ ನಿನ್ನಲಿ ಭಕ್ತಿ | ವರಜ್ಞಾನ ವೃದ್ಧಿಸುತಜರುಗಿಸೋ ಸಾಧನವ | ಕರುಣ ಸಂಪನ್ನಾ 1 ಅಚ್ಯುತ ಮೂರ್ತಿ | ಪ್ರತಿ ರಹಿತ ದೇವಾ 2 ದೇಶ ಕಾಲಾ ತೀತ | ವಾಸುದೇವನೆ ಇವಳಆಶೆ ಪೂರೈಸುತಲಿ | ಹೃದ್ಗುಹದಿ ತೋರೀಮೇಶ ಗುರು ಗೋವಿಂದ | ವಿಠಲ ಪದ ಆನಂದರಾಶಿಯೊಳು ಸುಖಿಪಂತೆ | ಪೋಷಿಸೊ ಇವಳಾ 3
--------------
ಗುರುಗೋವಿಂದವಿಠಲರು
ನಾ ಬೇಡುವೆನೋ ನಿನ್ನ ಸೌಭಾಗ್ಯಸಾಗರ ಶ್ರೀ ಭೂ ನೀಳಾವರ ಭಾಗವತೋದ್ಧಾರ ಪ ಯಾವಾಗಲು ನಿನ್ನ ಬಳಿಯೊಳು ನಾನಿದ್ದು ಭಾವಿಸಿ ಕುಶಲದ ಮಾತನಾಡೀ ದೇವ ನಿನ್ನಯ ಪಾದಯುಗಳವನೊತ್ತುತೆ ಸೇವಿಸಿ ಸುಖಿಪಂತೆ ಕರುಣಿಸು ಮುರಹರ1 ಮುಂಗಡೆ ಕುಣಿ ಕುಣಿದಾಡಿ ಸ್ತೋತ್ರವ ಮಾಡಿ ಕಂಗಳೊಳಾನಂದಭಾಷ್ಪಗೂಡೀ ಅಂಗವ ಮರೆತೆನ್ನ ಕಂಠಗದ್ಗದವಪ್ಪ ಮಂಗಳಕರ ಭಕ್ತಿ ಕೃಪೆ ಮಾಡು ಶ್ರೀರಂಗ 2 ಹೆಜ್ಜಾಜಿಯ ಚೆನ್ನಕೇಶವ ಮಾಧವ ಹೆಜ್ಜೆ ಹೆಜ್ಜೆಗೆ ನಿನ್ನ ಸ್ಮರಣಿಯಿತ್ತು ಸಜ್ಜುಗೊಳಿಸಿ ಎನ್ನ ಹೃದಯಪೀಠದಿ ಕೂಡೊ ಅರ್ಜುನಸಾರಥಿ ಶ್ರೀಕೃಷ್ಣ ಪರಮಾತ್ಮ 3
--------------
ಶಾಮಶರ್ಮರು