ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ನಮ್ಮ ಮನಿಲಿ ಬ್ರಹ್ಮಾನಂದ ಬಂದು ಭಾವ ಪೂರಿಸಿದ ಮುಕುಂದ ಧ್ರುವ ಎನ್ನಮನಕೆ ಮಾಡಿದ ಮನೋಹರ ಚೆನ್ನಾಗೊಲಿದು ದೋರಿದ ಸಹಕಾರ ಮನ್ನಿಸೆನಗೆ ಬೀರಿದ ನಿಜಸಾರ ಇನ್ನೊಬ್ಬರಿಗ್ಹೇಳುದಲ್ಲೀ ವಿಚಾರ 1 ದಯದಿಂದ ಪಿಡಿದು ಎನ್ನ ಕೈಯ ಶ್ರೇಯ ಸುಖ ನೀಡಿದ ಪ್ರಾಣಪ್ರಿಯ ತ್ರಯ ಗುಣಾತೀತದ ಸುಖಾಶ್ರಯ ತ್ರೈಲೋಕದೊಳೆನಗೆ ವಿಜಯ 2 ಕಣ್ಣು ಪಾರಣಗೈಸಿದೆನ್ನ ನೋಡಿ ಎನ್ನೊಳನುಭವಾಮೃತಸಾರ ನೀಡಿ ಚಿಣ್ಣಮಹಿಪತಿ ಕೈವಶಗೂಡಿ ಧನ್ಯಧನ್ಯಗೈಸಿದ ದಯಮಾಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ನಮ್ಮನಿಲಿ ಬ್ರಹ್ಮಾನಂದ ತಂದೆ ಸದ್ಗುರು ಸ್ವಾಮಿ ಕೃಪೆಯಿಂದ ಧ್ರುವ ವಸ್ತುದಯ ಬೀರುವಾನಂದ ಪ್ರಸ್ತ ಹಸ್ತ ಬಂದವರಿಗೆ ಸಾಧ್ಯಸ್ತ ಪ್ರಸ್ತ ಉಂಟಾಗಿದೆ ನೋಡಿ ಸಮಸ್ತ ಸ್ವಸ್ತ ಚಿತ್ತಲುಣಬೇಕು ಪ್ರಶಸ್ತ 1 ಉಂಬುದಕನುಮಾನ ಮಾಡಬ್ಯಾಡಿ ಕೊಂಬುದೆಲ್ಲ ಬಾಯಿದೆರೆದು ಬೇಡಿ ತುಂಬಿತುಳುಕುತಲ್ಯಾನಂದ ನೋಡಿ ಅಂಬುಜಾಕ್ಷನ ಸುಖಾಶ್ರಯ ಮಾಡಿ 2 ಸ್ವಾನುಭವದ ಪ್ರಸ್ತ ಸರ್ವಕಾಲ ತಾನೆ ತಾನಾಗಿ ದೋರುತದಚಲ ದೀನಮಹಿಪತಿಗಾನಂದ ಸುಕಾಲ ಭಾನುಕೋಟಿತೇಜ ದಾಸಾನುಕೂಲ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಎಂತು ಮರೆಯಬಹುದು ನಿಮ್ಮ ಹೇಳು ಗುರುರಾಯ | ಅಂತರಂಗದೀ ನೆನೆದು ಪಡೆಯಬೇಕು ಸುಖಾಶ್ರಯಾ ಪ ತಂದೆ ನೀನೇ ತಾಯಿ ನೀನೇ ಬಂಧು ಬಳಗ ನೀನೇ | ಹೊಂದಿ ಹರುಷಬಡುವಗತಿಯ ಗುರು ದೈವ ನೀನೇ 1 ತಂದು ಜಠರದಲ್ಲಿ ಜನುಮ ಉಣಿಸಿ ಉಡಿಸಿ ಬೆಳೆಸೀ | ಛಂದದಿಂದಲಿ ಹೊರೆವೆಯಿನ್ನು ಬೇಡಿದನು ಸಲಿಸಿ 2 ಮರೆಯಲಿಕ್ಕೆ ದೇಶಗ್ರಾಮ ವೃತ್ತಿಗೃಹಗಳಲ್ಲಾ | ಕಾಯ ಸುಖದ ದ್ರವ್ಯ ಧನವಲ್ಲಾ3 ಮರಹು ಮರಸಿ ಅರವ್ಹಿಲಿರಿಸಿ ಇರಹು ಘನವನರಸಿ | ಗುರು ಮಹಿಪತಿ ಸ್ವಾಮಿ ಕಾಯಿದೇ ಕಂದನುದ್ಧರಿಸಿ4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಂಡೆನು ಕೌತುಕ ಮಂಡಲದೊಳಗೊಂದು ಹೊಯ್ಯಂದ ಡಂಗುರವ ಮಂಡಿಯ ಮಸಿಯಲಖಂಡಿತವಾಗ್ಯದೆ ಧ್ರುವ ಖೋಯೆಂದು ಕೂಗುತ ಕಾಯದೊಳಗದೆ ಮಾಯದ ಮರೆಯಲುಪಾಯ ಮುಚ್ಚಿದ ನೋಡಿ 1 ಝೇಂ ಝೇಂ ಝೇಂ ಝೇಂ ಝೇಂಕರಿಸುತದೆ ಕಂಜನಾಭನ ಕರುಣಾನಂದನೋಡಿರ್ಯೊ 2 ಘೇಳೆನಿಸುತದÀ ತಾಳಮೃದಂಗವು ಒಳಹೊರಗಿದು ಧಿಮಿಗುಡುತದ 3 ಅನುಹಾತ ಧ್ವನಿಅನುಭವ ನೋಡಿರೋ ಅನುದಿನ ಸಾಧಿಸಿ ಘನ ಬೆರದಾಡಿರೊ 4 ಆನಂದೊಬ್ರಹ್ಮದ ಆಟವಿದುನೋಡಿ ಏನೆಂದ್ಹೇಳಲಿ ಸ್ವಾನುಭವದ ಸುಖ 5 ತುಂಬಿತುಳುಕುತದೆ ಅಂಬುಜಾಕ್ಷನ ಮಹಿಮೆ ಕುಂಭಿನಿಯೊಳು ನಿಜ ಗಂಭಗುರುತ ನೋಡಿ 6 ಸಾಧಿಸಿ ನೋಡಿರೊ ಶ್ರೀ ಸದ್ಗುರು ಶ್ರೀಪಾದ ಗಾದಿಯ ಮಾತಲ್ಲ ಭೇದಿಸಿ ನೋಡದು 7 ಶುಕಾದಿ ಮುನಿಗಳ ಸುಖಾಶ್ರಯವಿದು ಏಕಾಕ್ಷರ ಬ್ರಹ್ಮ ಏಕೋಚಿತ್ತದಿ 8 ಮೊತ್ತರಾಗಿ ತನ್ನ ನೆತ್ತಿಯೊಳಗಿದೆ ಉತ್ತಮರ ಸುತ್ತ ಮುತ್ತ ಸೂಸುತದ9 ಗುರು ಕೃಪೆಯಿಲ್ಲದೆ ಗುರುತವಾಗದಿದು ಬರೆ ಮಾತಿನ ಮಾಲೆಗೆ ಸೆರಗ ಸಿಲುಕದಿದು 10 ಗುರುತವಿಟ್ಟು ಗುರುವಿನ ಮಹಿಮೆಯ ತರಳ ಮಹಿಪತಿ ನಿನ್ನೊಳು ನೋಡೆಂದು 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀಕರ ಅಷ್ಟಾಕ್ಷರ ಮಂತ್ರ ಗುಣವಾರಿನಿಧಿ ಅನಘ ಉತ್ತಮಮಹಾ ಪ್ರಭುವೆ ನಿನಗೆ ನಮೋ ಶ್ರೀಕರ ನಾರಾಯಣನೆ ಶರಣು ಪ ಉತ್ತಮೋತ್ತಮಗುತ್ತ ಮೋತ್ತ ಮೋದೀತ ಚೇತನಾಚೇತನರಿಗುತ್ತಮಾಶ್ರಯನು ಉತ್ತಮ ಉಮೇಶಾದಿ ಭಾರತಿಗುತ್ತಮ ವಾಯು ಆತಗುತ್ತಮೆ ಸಿರಿಗೆ ಉತ್ತಮೋತ್ತಿಷ್ಠ 1 ಶ್ರೀ ಎಂದರೆ ಜ್ಞಾನಸುಖಪೂರ್ಣೆ ಲಕ್ಷ್ಮಿಸ್ಥ ಕ ಎಂದರಾನಂದಶತ ಸುಖಾಂತಸ್ಥ ರ ಎಂದರೆ ಸ್ವರತ ಸುಖಪ್ರದ ಸುಖಾಶ್ರಯನು ಇಂದಿರೇಶನೆ ಎನಗೆ ಸೌಭಾಗ್ಯವೀಯೊ 2 ಸ್ವಾಹಾ ಆತ್ಮನು ಸ್ವವಶ ಸರ್ವವಶಿ ಶ್ರೀಪನು ಹರಿ ಹಂಸ ನಿರ್ದೋಷ ಬ್ರಹ್ಮ ನಾರಾಯಣ ಅಹರ್ನಿಶಿ ಈ ರೀತಿ ನಿನ್ನ ಸ್ಮರಿಸುವ ಜನಕೆ ನಿಖಿಳ ಐಶ್ವರ್ಯವೀವೆ 3 ಕಂಬು ಅರಿ ಶಂಖನಿಧಿ ಪದ್ಮನಿಧಿ ದಿವ್ಯ ಹಸ್ತಗಳಲಿ ಶೋಭಿತವಾಗುಂಟು ದ್ರವ್ಯ ಹಾಟಕ ರತ್ನ ಧನ ಕೊಡುವ ಕರಗಳು ದೇವಿ ಶ್ರೀ ಹ್ರೀ ಸಹ ಗರುಡಾಂಶಸಂಸ್ಥ 4 ಮೀನಾದಿರೂಪ ತ್ವದ್ ಮಸ್ತಕಾದ್ಯಂಗದಿ ಇನಗಮಿತದೀಪ್ತ ಆಭರಣ ಜ್ವಲಿಸುತಿವೆ ಶ್ರೀನಿವಾಸನೆ ಸ್ವರ್ಣವರ್ಣ ನಮೋ ಶರಣು 5
--------------
ಪ್ರಸನ್ನ ಶ್ರೀನಿವಾಸದಾಸರು